ಜಗ್ಗಣ್ಣ ಅಲಿಯಾಸ್ ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ರಿಲೀಸ್ ಆಗಿದೆ. ಈಗಾಗಲೇ ಟ್ರೇಲರ್ (trailer) ನೋಡಿದವರಿಗೆ ಅನ್ನಿಸಿದ್ದು ಚಿತ್ರದಲ್ಲಿ ಹೊಟೇಲ್, ಮದುವೆ ಸಮಾಚಾರವಿರುತ್ತೆ ಅಂತ. ಆದ್ರೆ ಈ ಸ್ಟೋರ್‌ಗೆ ಎಂಟ್ರಿ ಕೊಟ್ಟಾಗಲೇ ಗೊತ್ತಾಗೋದು ಸಮಾಜಕ್ಕೆ ಸಂದೇಶ ಸಾರುವ ಅಂಶಗಳು ಎಷ್ಟಿವೆ ಅನ್ನೋದು. ಈಗಿನ ಜನರೇಷನ್‌ಗೆ (generation) ಹೇಳಿ ಮಾಡಿಸಿದ ಸಿನಿಮಾ ರಾಘವೇಂದ್ರ ಸ್ಟೋರ್ಸ್ ಅನ್ನೋದರಲ್ಲಿ ಎರಡು ಮಾತೇ ಇಲ್ಲ.
ನವರಸದ ಜೊತೆ ತೂಕಭರಿತ ಪಾತ್ರವರ್ಗ
ರಾಘವೇಂದ್ರ ಸ್ಟೋರ್ಸ್‌ನಲ್ಲಿ ನವರಸಗಳ ಆಸ್ವಾದಿಸಿರೋ ನಾಯಕ ಜಗ್ಗೇಶ್ ಇದ್ಧಾರೆ ಅಂದ್ರೆ ಅಲ್ಲಿ ನವರಸಗಳಿಗೇ ಕೊರತೆ ಆಗೋದಿಲ್ಲ. ಆ ಹೊಟೇಲ್‌ನಲ್ಲಿ ರುಚಿಯಾದ ಊಟವೂ ಸಿಗುತ್ತೆ, ಮನಸ್ಸಿಗೆ ಹತ್ತಿರವಾಗುವ ಪಾತ್ರವರ್ಗವೂ ಇರುತ್ತೆ.
ಜಗ್ಗಣ್ಣ-ದತ್ತಣ್ಣ ಜುಗಲ್‌ಬಂದಿ!
40 ವರ್ಷದ ಬ್ರಹ್ಮಚಾರಿಯಾಗಿ ಜಗ್ಗೇಶ್ ರಸದೌತಣ ನೀಡ್ತಾರೆ. ಕಾಮಿಡಿ, ಪಂಚಿಂಗ್ ಡೈಲಾಗ್ ಮೂಲಕ ಸೀಟಿನ ತುದಿಯಲ್ಲಿ ಪ್ರೇಕ್ಷಕರು ಕೂರುವ ಹಾಗೆ ಮಾಡ್ತಾರೆ. ಇನ್ನು ಜಗ್ಗೇಶ್ ಅಪ್ಪನ ಪಾತ್ರದಲ್ಲಿರುವ ದತ್ತಣ್ಣರ ಕಾಮಿಡಿಗೆ ನಗೋದ್ರ ಜೊತೆಗೆ ಕೆಲವು ಸನ್ನಿವೇಶದಲ್ಲಿ ಕಣ್ಣುಗಳು ಒದ್ದೆಯಾಗುವುದು ಗ್ಯಾರಂಟಿ.
ಇದನ್ನೂ ಓದಿ: Shivaji Surathkal-2: ರಮೇಶ್ ಪೊಲೀಸ್ ಪಾತ್ರ ಮೆಚ್ಚಿದ IPS ರೂಪಾ ಏನಂದ್ರು?
ಡಿ-ಗ್ಲಾಮರ್ ಪಾತ್ರದಲ್ಲಿ ಶ್ವೇತಾ
ನಾಯಕಿ ಶ್ವೇತಾ ಶ್ರೀವಾತ್ಸವ್‌ಗೆ ಹೇಳಿ ಮಾಡಿಸಿದ ಪಾತ್ರ. ಇಲ್ಲಿ ಶ್ವೇತಾ ವೈಜಯಂತಿ ಆಗಿದ್ದಾರೆ ಮಗು ಬೇಕು ಅನ್ನೋ ಕನವರಿಕೆಯ ತಾಯಿಯಾಗಿದ್ದಾರೆ. ಈ ಹಿಂದೆ ‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾದಲ್ಲಿ ಡಿ-ಗ್ಲಾಮರ್ ಪಾತ್ರ ಮಾಡಿದ್ದ ಶ್ವೇತಾ, ಇಲ್ಲೂ ಡಿ-ಗ್ಲಾಮರ್ ಆಗಿ ಮಾದರಿಯಾಗೋ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ರವಿಶಂಕರ್, ಮಿತ್ರಾ ಅವರವರ ಪಾತ್ರಕ್ಕೆ ತೃಪ್ತಿ ನೀಡುವಷ್ಟು ನಗಿಸಿದ್ದಾರೆ.
ಸಮಾಜಕ್ಕೆ ಹೇಳಿ ಮಾಡಿಸಿದ ಕತೆ ಕೊಟ್ಟ ಸಂತೋಷ್
ಇಂದಿನ ಸಮಾಜದಲ್ಲಿ ಲೇಟ್ ಮ್ಯಾರೇಜ್ ಕಾಮನ್ ಆಗಿಹೋಗಿದೆ. ಮದುವೆ ಆಗೋದೇನೋ ಸುಲಭವಾಗಬಹುದು, ಅದ್ರೆ ಮಗುವಿನ ವಿಚಾರದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆಗಳು ಕಾಡುತ್ತವೆ, ಮನೆಯವರ ಮನಸ್ಸನ್ನು ಘಾಸಿಗೊಳಿಸ್ತುತ್ವೆ ಅನ್ನೋದನ್ನ ಹೇಳಿದ್ದಾರೆ ನಿರ್ದೇಶಕ ಸಂತೋಷ್ ಆನಂದ್‌ರಾಮ್. ಇಲ್ಲಿ ಯಾರ ಭಾವನೆಗೂ ದಕ್ಕೆ ಬರದ ಹಾಗೆ ಚಿತ್ರಿಸಿದ್ದಾರೆ.
ಅನಾಥ ಮಕ್ಕಳ ‘ಆನಂದ’ ನಿಲಯ!
ಇನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ರಾಜಕುಮಾರ’ದಲ್ಲಿ ವೃದ್ದಾಶ್ರಮದ ಕತೆಯನ್ನ ಹೇಳಿ, ಅಪ್ಪ ಅಮ್ಮಂದಿರನ ಬಗ್ಗೆ ಗೌರವ ತರಿಸಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಇಲ್ಲಿ ಅನಾಥ ಮಕ್ಕಳ ಪರವಾಗಿ ರಾಘವೇಂದ್ರ ಸ್ಟೋರ್ನ ರೂವಾರಿಯಾಗಿದ್ಧಾರೆ.
ಕಾಂತಾರದಂತೆ ಮತ್ತೊಂದು ಯಶಸ್ಸು ನೀಡುತ್ತಾನಾ ರಾಘವೇಂದ್ರ?
ಕೆಜಿಎಫ್, ಕಾಂತಾರದಂತಹ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಹೊಂಬಾಳೆ ಬ್ಯಾನರ್ ಮತ್ತೊಂದು ಸುಂದರ ಕತೆಯ ಮೂಲಕ ಸಮಾಜಕ್ಕೆ ಹತ್ತಿರವಾಗಿದೆ. ಜಗ್ಗೇಶ್‌ರನ್ನ ನಗಿಸೋದ್ರ ಜೊತೆಗೆ ಅಳಿಸೋದ್ರ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಯತ್ನಿಸಿದೆ. ಚುನಾವಣೆಯ ಕಾವು ಇರುವ ಟೈಮಲ್ಲೂ ರಾಘವೇಂದ್ರ ಸ್ಟೋರ್ಸ್‌ಗೆ ಜನರು ಬರಲು ಯಾವುದೇ ಕೊರತೆಯಾಗದ ರೀತಿಯಲ್ಲಿ ನಿಗಾ ವಹಿಸಿ ಬಂಡವಾಳ ಹೂಡಿದ್ದು, ಮತ್ತೊಮ್ಮೆ ಗೆಲುವಿನ ನಗೆ ಬೀರೋದು ಪಕ್ಕಾ ಅನ್ನುವ ಲಕ್ಷಣ ಕಾಣ್ತಿದೆ.
‘ಸಿಂಗಲ್ ಸುಂದರ’ ಅಜನೀಶ್ ಮ್ಯೂಸಿಕ್ ಸಖತ್ತಾಗಿದೆ
ಕಾಂತಾರದಲ್ಲಿ ‘ಸಿಂಗಾರ ಸಿರಿಯೇ’ ಹಾಡಿನ ಜೊತೆಗೆ ಬಿಜಿಎಂನಿಂದ ಸೌಂಡ್ ಮಾಡಿದ್ದ ಅಜನೀಶ್ ಲೋಕನಾಥ್, ಇಲ್ಲಿ ‘ಸಿಂಗಲ್ ಸುಂದರ ಯಾವಾಗ ಹಾಕ್ತಿಯ ಉಂಗುರ’ ಅಂತ ಕೇಳುವಲ್ಲಿ ಗೆದ್ದಿದ್ಧಾರೆ. ಮ್ಯೂಸಿಕ್ ಕೂಡ ಚಿತ್ರಮಂದಿರದಿಂದ ಹೊರ ಬರುವವರು ಗುನುಗುವಷ್ಟು ಹತ್ತಿರವಾಗಿದೆ.
ಇದನ್ನೂ ಓದಿ: Shivarajkumar Movie: ಅಯ್ಯೋ ಮುಹೂರ್ತದ ದಿನವೇ 45 ಚಿತ್ರದ ಎಲ್ಲಾ ಸೀಕ್ರೆಟ್ ರಿವೀಲ್ ಮಾಡಿದ್ರಾ ಶಿವಣ್ಣ?
‘ನವರಸ’ಗಳಲ್ಲಿ ತೇಲಿ ಬನ್ನಿ
ಒಟ್ಟಾರೆ ಹೇಳೋದಾದ್ರೆ ಈ ವಾರದ ವೀಕೆಂಡ್ ಫ್ಯಾಮಿಲಿ ಜೊತೆಗೆ ಸಿಂಗಲ್ ಸುಂದರನನ್ನ ನೋಡೋಕೆ ರಾಘವೇಂದ್ರ ಸ್ಟೋರ್ಸ್ ಗೆ ಯಾವುದೇ ಮುಜುಗರವಿಲ್ಲದೆ ಫ್ಯಾಮಿಲಿ ಸಮೇತ ಹೋಗಿ ಬರಬಹುದು. ನವರಸಗಳಲ್ಲಿ ತೇಲುತ್ತಾ, ಎಂಜಾಯ್ ಮಾಡಬಹುದು.
(ವರದಿ: ಗೀತಾಶ್ರೀ ಹಾಸನ್, ನ್ಯೂಸ್ 18 ಕನ್ನಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ