ಕೊರೋನಾ 2.0 ಬಳಿಕ Kaage Motte ತೆರೆಗೆ: ಚಂದ್ರಹಾಸಗೆ ಸಿಗುತ್ತಾ ಪ್ರೇಕ್ಷಕರ ಮಂದಹಾಸ..!

Kaage Motte Review: ಗುರುರಾಜ್ ಜಗ್ಗೇಶ್ ನಾಯಕನಾಗಿ ನಟಿಸಿರುವ ಚಿತ್ರ ಕಾಗೆ ಮೊಟ್ಟೆ. ಪಿಳ್ಳ ಗೋವಿ ಕೃಷ್ಣನ್ ಕಥೆ ಚಿತ್ರದ ಟ್ಯಾಗ್‍ಲೈನ್. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಬಿಕೆ ಚಂದ್ರಹಾಸ್ ನಿರ್ದೇಶನದಲ್ಲಿ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದಿದೆ.

ಕಾಗೆ ಮೊಟ್ಟೆ ಸಿನಿಮಾದ ಪೋಸ್ಟರ್​

ಕಾಗೆ ಮೊಟ್ಟೆ ಸಿನಿಮಾದ ಪೋಸ್ಟರ್​

  • Share this:
ಕಳೆದ ಒಂದೂವರೆ ವರ್ಷದಿಂದ ಕೊರೋನಾ ಕಾಟದಿಂದ (Covid 19) ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಕ್ಷೇತ್ರ ಅಂದರೆ  ಅದು ಚಿತ್ರರಂಗ. ಯಾಕೆ ಅಂದರೆ ಕೊರೋನಾ ಮೊದಲನೇ ಅಲೆಯ ಸಮಯದಲ್ಲೂ ಮೊದಲು ಲಾಕ್ ಆಗಿದ್ದು ಹಾಗೂ ಕೊನೆಯಲ್ಲಿ ಅನ್‍ಲಾಕ್ ಆಗಿದ್ದು ಥಿಯೇಟರ್​ಗಳು ಮತ್ತು ಮಲ್ಟಿಪ್ಲೆಕ್ಸ್​ಗಳು. ಶೇಕಡಾ 50ರಷ್ಟು ನಿರ್ಬಂಧದಿಂದ ಇನ್ನೇ ಶೇಕಡಾ 100ರಷ್ಟು ಪ್ರದರ್ಶನಕ್ಕೆ ಅವಕಾಶ ದೊರೆಯಿತು. ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಸುವರ್ಣ ಕಾಲ ಶುರುವಾಯಿತು ಎನ್ನುತ್ತಿರುವಾಗಲೇ ಕೇವಲ ಒಂದೂವರೆ ತಿಂಗಳಲ್ಲಿ ಮತ್ತೆ ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ (Corona Second Wave) ಮತ್ತೊಮ್ಮೆ ಲಾಕ್‍ಡೌನ್ (Lockdown) ಎದುರಿಸಬೇಕಾಯಿತು.

ಈಗ ಎರಡನೇ ಅಲೆ ಇಳಿಮುಖವಾಗಿದೆ. ಕೊರೋನಾ ಪ್ರಕರಣಗಳೂ ಕಡಿಮೆಯಾಗಿವೆ. ಹೀಗಾಗಿ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ನಿರ್ಬಂಧ ತೆಗೆದಿದ್ದು, ಶೇಕಡಾ 100ರಷ್ಟು ಕಾರ್ಯ ನಿರ್ವಹಿಸುತ್ತಿವೆ. ಆದರೆ ಚಿತ್ರರಂಗಕ್ಕೆ ಮಾತ್ರ ಆ ಅವಕಾಶ ಇರಲಿಲ್ಲ. ಶೂಟಿಂಗ್, ಸುದ್ದಿಗೋಷ್ಠಿ, ಡಬ್ಬಿಂಗ್ ಸೇರಿದಂತೆ ಎಲ್ಲ ಕೆಲಸಗಳಿಗೂ ಅನುಮತಿ ದೊರೆತಿದ್ದರೂ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಶೇಕಡಾ 50ರಷ್ಟು ನಿರ್ಬಂಧ ಹೇರಲಾಗಿತ್ತು. ಹೀಗಾಗಿಯೇ ಕಳೆದ ಎರಡು ತಿಂಗಳಿನಿಂದ ಅಂತಹ ಸಿನಿಮಾಗಳೇನೂ ತೆರೆಗೆ ಬಂದಿರಲಿಲ್ಲ. 'ಕಲಿವೀರ', 'ಗ್ರೂಫಿ', 'ಲಂಕೆ', 'ಓಶೋ', 'ಚಡ್ಡಿ ದೋಸ್ತ್ ಕಡ್ಡಿ ಅಳ್ಳಾಡಿಸ್ಬಿಟ್ಟ', 'ಜಿಗ್ರಿ ದೋಸ್ತ್' ತೆರೆಗೆ ಬಂದಿವೆ. ಕಳೆದ ಶುಕ್ರವಾರ ತೆರೆಗೆ ಬಂದ ಸಂಚಾರಿ ವಿಜಯ್ ನಟಿಸಿರುವ 'ಪುಕ್ಸಟ್ಟೆ ಲೈಫ್' ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.

Jaggesh Son Gururaj Jaggesh starrer Kaage Motte movie released today ae
ಕಾಗೆ ಮೊಟ್ಟೆ ಸಿನಿಮಾದ ನಿರ್ದೇಶಕ ಚಂದ್ರಹಾಸ ಹಾಗೂ ನಾಯಕ ಗುರುರಾಜ ಜಗ್ಗೇಶ್​


ಇದರ ನಡುವೆಯೇ ಕಳೆದ ವಾರ ರಾಜ್ಯ ಸರ್ಕಾರ ಅಕ್ಟೋಬರ್ 1ರಿಂದ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಶೇಕಡಾ 100ರಷ್ಟು ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಅದಕ್ಕಾಗಿಯೇ ಕಾಯುತ್ತಿದ್ದ ಬಿಗ್ ಬಜೆಟ್ ಸಿನಿಮಾ ತಂಡಗಳು ಈಗಾಗಲೇ ರಿಲೀಸ್ ಡೇಟ್‍ ಅನ್ನೂ ಅನೌನ್ಸ್ ಮಾಡಿವೆ.

ಇದನ್ನೂ ಓದಿ: Puneeth Rajkumar-Santhosh Ananddram ಜೊತೆ ಸಹ ಭೋಜನ ಸವಿದ ಜಗ್ಗೇಶ್​

'ನಿನ್ನ ಸನಿಹಕೆ', 'ಸಲಗ', 'ಕೋಟಿಗೊಬ್ಬ 3', 'ಭಜರಂಗಿ 2' ಸೇರಿದಂತೆ ಹಲವು ಚಿತ್ರಗಳು ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿವೆ. ಆದರೆ ಶೇಕಡಾ ನೂರರಷ್ಟು ಅವಕಾಶ ದೊರಕಿದ ಕೇವಲ 5 ದಿನಗಳಲ್ಲೇ ಚಿತ್ರವೊಂದು ಧೈರ್ಯ ಮಾಡಿ ತೆರೆಗೆ ಬರಲು ರೆಡಿಯಾಗಿದೆ. ಅದೇ ಕಾಗೆಮೊಟ್ಟೆ.ಹೌದು, ಜಗ್ಗೇಶ್ ಅವರ ಮಗ ಗುರುರಾಜ್ ಜಗ್ಗೇಶ್ ನಾಯಕನಾಗಿ ನಟಿಸಿರುವ ಚಿತ್ರ 'ಕಾಗೆ ಮೊಟ್ಟೆ'. ಪಿಳ್ಳ ಗೋವಿ ಕೃಷ್ಣನ್ ಕಥೆ ಚಿತ್ರದ ಟ್ಯಾಗ್‍ಲೈನ್. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಬಿಕೆ ಚಂದ್ರಹಾಸ್ ನಿರ್ದೇಶನದಲ್ಲಿ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದಿದೆ. ಗುರುರಾಜ್ ಜಗ್ಗೇಶ್ ಜತೆಗೆ ಮಾದೇಶ್, ಹೇಮಂತ್, ತನುಜಾ, ಸರ್ದಾರ್ ಸತ್ಯ, ವಿ. ನಾಗೇಂದ್ರ ಪ್ರಸಾದ್, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ, ಸೌಜನ್ಯ, ಸತ್ಯಜಿತ್ ಹಾಗೂ ಪೊನ್ನಾಂಬಳಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಶ್ರೀವತ್ಸ ಸಂಗೀತ ನೀಡಿದ್ದು, ರವಿ ಛಾಯಾಗ್ರಹಣವಿದೆ. ಸದ್ಯ ಕೊರೊನಾ 2.0 ಬಳಿಕ ಶೇಕಡಾ 100ರಷ್ಟು ಹೌಸ್‍ಫುಲ್ ಪ್ರದರ್ಶನಕ್ಕೆ ಅವಕಾಶ ಸಿಕ್ಕ ಮೊದಲ ದಿನವೇ ರಿಲೀಸ್ ಆಗಿ ಹೌಸ್‍ಫುಲ್ ಪ್ರದರ್ಶನಕ್ಕೆ ರೆಡಿಯಾಗಿದೆ ಕಾಗೆಮೊಟ್ಟೆ.

ಇದನ್ನೂ ಓದಿ: Darshan-Jaggesh: ಜಗ್ಗೇಶ್​ರನ್ನು ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು: ಕ್ಷಮೆ ಕೇಳುವಂತೆ ಆಗ್ರಹ

ಗುರುರಾಜ್ ಸಹ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಹೆಚ್ಚಿನ ಯಶಸ್ಸು ಸಿಗದೆ ಕಾರಣ ಚಿತ್ರರಂಗದಿಂದ ಹೊರಗುಳಿದಿದ್ದರು. ಇತ್ತೀಚೆಗೆ ನಡೆದ ಕಾಗೆ ಮೊಟ್ಟೆ ಟ್ರೇಲರ್​ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಜಗ್ಗೇಶ್ ಅವರು ತಮ್ಮ ಮಗನ ಸಿನಿ ಭವಿಷ್ಯದ ಕುರಿತಾಗಿ ಕೆಲವು ಮಾತುಗಳನ್ನಾಡಿದ್ದರು. ನನ್ನ ಮಗನಿಗೆ ಬೇರೆ ಭಾಷೆಗಳಿಂದ ಒಳ್ಳೆಯ ಸಿನಿಮಾ ಆಫರ್‌ಗಳು ಬರುತ್ತಿದ್ದವು, ಆದರೆ ನಾನು ಅವುಗಳನ್ನು ಒಪ್ಪಿಕೊಳ್ಳದಂತೆ ತಡೆದೆ. ಆದರೆ ಈಗ ಅನಿಸುತ್ತಿದೆ. ಹಾಗೆ ಮಾಡಬಾರದಿತ್ತು, ನಾನು ಆಗ ಒಪ್ಪಿಗೆ ನೀಡಿದ್ದರೆ, ಇಂದು ನನ್ನ ಮಗ ದೊಡ್ಡ ಸ್ಟಾರ್ ಆಗಿರುತ್ತಿದ್ದ. ಆ ಅವಕಾಶಗಳಿಗೆಲ್ಲ ನಾನೇ ಮಣ್ಣು ಎರಚಿದೆ. ನನ್ನ ಜೀವನದ ಬಹಳ ದೊಡ್ಡ ತಪ್ಪು ಎಂದು ಜಗ್ಗೇಶ್ ಬಹಳ ಬೇಸರ ವ್ಯಕ್ತಪಡಿಸಿದ್ದರು.
Published by:Anitha E
First published: