HOME » NEWS » Entertainment » JAGGESH REACTION ON WHO CRITICIZED HIM REGARDING HIS PAN INDIA MOVIE STATEMENT AE 2

Jaggesh: ಕನ್ನಡಕ್ಕೆ ಚಟ್ಟ ತಯಾರು ಎಂದ ಜಗ್ಗೇಶ್; ಸಲಾರ್ ಚಿತ್ರಕ್ಕೆ ಪ್ರಭಾಸ್ ಆಯ್ಕೆಯಾಗಿದ್ದಕ್ಕೆ ಬೇಸರವೇ?

Salaar: ಪ್ಯಾನ್​ ಇಂಡಿಯಾ ಸಿನಿಮಾ ಕುರಿತಾಗಿ ಈ ಹಿಂದೆ ಜಗ್ಗೇಶ್​ ಹೇಳಿದ್ದ ಮಾತು ನಿಜವಾಗಿದೆ ಎನ್ನುತ್ತಿರುವ ಅಭಿಮಾನಿಗಳು ಟ್ವೀಟ್​ ಮಾಡುತ್ತಿದ್ದಾರೆ. ಅಭಿಮಾನಿಗಳ ಟ್ವೀಟ್​ಗಳಿಗೆ ಉತ್ತರಿಸಿರುವ ನಟ ಜಗ್ಗೇಶ್, ಮುಂದೈತೆ ಕನ್ನಡಿಗರೆ ಊರಬ್ಬ. ಆಗ ಅಯ್ಯೋ ಜಗ್ಗೇಶ ಅಂದೆ ಹೇಳಿದ, ನಾವು ಅಣಿಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ..! ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು ಎಂದು ಎಚ್ಚರಿಕೆ ನೀಡಿದ್ದಾರೆ.

Anitha E | news18-kannada
Updated:December 3, 2020, 12:11 PM IST
Jaggesh: ಕನ್ನಡಕ್ಕೆ ಚಟ್ಟ ತಯಾರು ಎಂದ ಜಗ್ಗೇಶ್; ಸಲಾರ್ ಚಿತ್ರಕ್ಕೆ ಪ್ರಭಾಸ್ ಆಯ್ಕೆಯಾಗಿದ್ದಕ್ಕೆ ಬೇಸರವೇ?
ನಟ ಜಗ್ಗೇಶ್​
  • Share this:
ಕನ್ನಡದಲ್ಲಿ ಪ್ಯಾನ್​ ಇಂಡಿಯಾ ಸಿನಿಮಾಗಳು ನಿರ್ಮಾಣಗೊಂಡು ಹಿಟ್​ ಆದರೆ ಐಆರಿಗೆ ತಾನೇ ಖುಷಿ ಆಗುವುದಿಲ್ಲ ಹೇಳಿ. ಹೊಂಬಾಳೆ ಫಿಲಂಸ್​ ಕೆಜಿಎಫ್​ ಸಿನಿಮಾವನ್ನು ನಿರ್ಮಿಸಿದಾಗ ಕನ್ನಡಿಗರು ಅಪ್ಪಿ ಮುದ್ದಾಡಿದ್ದರು. ಪ್ರಶಾಂತ್​ ನೀಲ್​ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈಗ ಇದೇ ಹೊಂಬಾಳೆ ಫಿಲಂಸ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾ ಸಲಾರ್​ಗೆ ಟಾಲಿವುಡ್​ ನಟ ಪ್ರಭಾಸ್​ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗ ಇದೇ ಕೆಲವು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಹೌದು, ನಿನ್ನೆಯಷ್ಟೆ ಹೊಂಬಾಳೆ ಫಿಲಂಸ್​ ರಿಲೀಸ್​ ಮಾಡಿರುವ ಸಲಾರ್ ಸಿನಿಮಾದ ಪೋಸ್ಟರ್​ ಈಗ ಕೆಲ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಈ ಸಿನಿಮಾ ಮಾಡಲು ಯೋಗ್ಯ ನಟರೇ ಇಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಒಂದು ವಾರದ ಹಿಂದೆ ಜಗ್ಗೇಶ್ ಅವರು ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಹೇಳಿದ್ದ ಮಾತು ಈಗ ನಿಜವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. 

ಹೌದು, 'ಪ್ಯಾನ್​ ಇಂಡಿಯಾ ಸಿನಿಮಾ ನಮ್ಮನ್ನು ಉದ್ಧಾರ ಮಾಡಲ್ಲ. ಪ್ಯಾನ್​ ಇಂಡಿಯಾದಿಂದ ನಮ್ಮ ಕನ್ನಡಿಗರಿಗೆ ಕೆಲಸ ಇಲ್ಲ. ಇದರಿಂದ ನಮ್ಮ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ. ಯಾರನ್ನೊ ಮೆಚ್ಚಿಸಲು ಪ್ಯಾನ್​ ಇಂಡಿಯಾ ಸಿನಿಮಾ ಮಾಡುವ ಹಾಗಿದೆ' ಎಂದು ಚಿತ್ರಂಗದಲ್ಲಿ 40 ವರ್ಷ ಪೂರೈಸಿದ ನಟ ಜಗ್ಗೇಶ್​ ಹೇಳಿಕೆ ನೀಡಿದ್ದರು.

Shocked!


ಆದರೆ, ಜಗ್ಗೇಶ್​ ಆಡಿದ್ದ ಈ ಮಾತಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಸಿನಿಮಾ ಮತ್ತೊಂದು ಹಂತಕ್ಕೆ ಹೋಗುವುದನ್ನು ವಿರೋಧಿಸಿ ನಟ ಜಗ್ಗೇಶ್​ ಮಾತನಾಡುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು. ಈಗ ಇದೇ ನೆಟ್ಟಿಗರು ಜಗ್ಗೇಶ್​ ಅವರ ಮಾತು ಸತ್ಯವಾಗಿದೆ ಎಂದು ಟ್ವೀಟ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

@Jaggesh2 sir, nivu pan india cinema bagge mathanadidu nija sir..





ಅಭಿಮಾನಿಗಳು ಮಾಡುತ್ತಿರುವ ಟ್ವೀಟ್​ಗಳಿಗೆ ಉತ್ತರಿಸಿರುವ ಜಗ್ಗೇಶ್​, ರಾಯರ ನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯನುಡಿದೆ! ಅರಿವಾಗದ ಬಹುತೇಕರು ನೆಗೆಟಿವ್​ ಆಗಿ ತೆಗೆದುಕೊಂಡು ಉತ್ತಮ ಮಾಹಿತಿ ಅಣಕ ಚರ್ಚೆಗೆ ಬಳಸಿಕೊಂಡು, ತಮ್ಮ ಬೇಳೆ ಬೇಯಿಸಿಕೊಂಡರು. ಮುಂದೈತೆ ಕನ್ನಡಿಗರೆ ಊರಬ್ಬ. ಆಗ ಅಯ್ಯೋ ಜಗ್ಗೇಶ ಅಂದೆ ಹೇಳಿದ ನಾವು ಅಣಿಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ..!ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಯರನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯನುಡಿದೆ! ಅರಿವಾಗದ ಬಹುತೇಕರು negitiveತೆಗೆದುಕೊಂಡು ಉತ್ತಮಮಾಹಿತಿ ಅಣಕಚರ್ಚೆಗೆ ಬಳಸಿಕೊಂಡು ತಮ್ಮಬೇಳೆ ಬೇಯಿಸಿಕೊಂಡರು!ಮುಂದೈತೆ ಕನ್ನಡಿಗರೆ ಊರಬ್ಬ!ಆಗ ಅಯ್ಯೋ ಜಗ್ಗೇಶ ಅಂದೆ ಹೇಳಿದ ನಾವುಅಣಿಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ!ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು.! https://t.co/P1KYMPvLNR



ಜಗ್ಗೇಶ್ ಅವರ ಟ್ವೀಟ್​ ನೋಡಿದರೆ, ಟೀಕಿಸಿದವರಿಗೆ ಒಂದು ಕಡೆ ಎಚ್ಚರಿಕೆ ಆದರೆ, ಮತ್ತೊಂದು ಕಡೆ ಪರಭಾಷೆಯ ನಟನನ್ನು ಸಲಾರ್ ಸಿನಿಮಾಗೆ ತೆಗೆದುಕೊಂಡಿದ್ದಕ್ಕೆ ಬೇಸರವೂ ಇದ್ದಂತೆ ಅನಿಸುತ್ತದೆ.

ಇದನ್ನೂ ಓದಿ: ರಿವೀಲ್​​ ಆಯ್ತು ರಾಬರ್ಟ್​ ಚಿತ್ರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್​​ ಲುಕ್

ಇನ್ನು ಸಲಾರ್​ ಸಿನಿಮಾದ ಪೋಸ್ಟರ್​ ಅನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರು ಪುನೀತ್​, ಶ್ರೀಮುರಳಿ ಅವರ ಬಗ್ಗೆಯೂ ಸಾಕಷ್ಟು ಮಂದಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಶ್ರೀಮುರಳಿ ಸಲಾರ್ ಚಿತ್ರದ ಪೋಸ್ಟರ್​ ರಿಲೀಸ್ ಆದ ಕೂಡಲೇ ಪ್ರಶಾಂತ್​ ನೀಲ್​ ಹಾಗೂ ಹೊಂಬಾಳೆ ಫಿಲಂಸ್ ಅನ್ನು ಟ್ಯಾಗ್​ ಮಾಡಿ, ಪೋಸ್ಟ್​ ಮಾಡಿದ್ದ ಟ್ವೀಟ್​ ಡಿಲೀಟ್​ ಮಾಡಿದ್ದಾರೆ. ನಂತರ ಪ್ರಶಾಂತ್ ನೀಲ್​ ಅವರಿಗೆ ಟ್ಯಾಗ್​ ಮಾಡದಂತೆ ಹೊಂಬಾಳೆ ಫಿಲಂಸ್​ ಮಾಡಿರುವ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿದ್ದಾರೆ.
Published by: Anitha E
First published: December 3, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories