ನಟ ಜಗ್ಗೇಶ್​ಗೆ 2 ಲಕ್ಷ ರೂ. ದಂಡ, ತೀರ್ಪಿನ ವಿರುದ್ಧ ಕೋರ್ಟ್ ಮೆಟ್ಟಿಲೇರಲಿರುವ ನವರಸ ನಾಯಕ

news18
Updated:September 6, 2018, 2:55 PM IST
ನಟ ಜಗ್ಗೇಶ್​ಗೆ 2 ಲಕ್ಷ ರೂ. ದಂಡ, ತೀರ್ಪಿನ ವಿರುದ್ಧ ಕೋರ್ಟ್ ಮೆಟ್ಟಿಲೇರಲಿರುವ ನವರಸ ನಾಯಕ
ಜಗ್ಗೇಶ್
news18
Updated: September 6, 2018, 2:55 PM IST
-ನ್ಯೂಸ್ 18 ಕನ್ನಡ

ರಾಜ್ಯದಲ್ಲಿ ಡಬ್ಬಿಂಗ್ ಚಿತ್ರಗಳ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದಕ್ಕೆ ಸ್ಯಾಂಡಲ್​ವುಡ್ ನಟ ನವರಸ ನಾಯಕ ಜಗ್ಗೇಶ್ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಿಗೆ ಭಾರತದ ಸ್ಪರ್ಧಾತ್ಮಕ ಆಯೋಗ ದಂಡ ವಿಧಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಜಗ್ಗೇಶ್ ತನ್ನ ಸ್ವ ಹಿತಾಸಕ್ತಿಗಾಗಿ ಡಬ್ಬಿಂಗ್ ಚಿತ್ರವನ್ನು ವಿರೋಧಿಸಿರಲಿಲ್ಲ. ಕನ್ನಡ ಚಿತ್ರರಂಗದ ಕಾರ್ಮಿಕರ ಮತ್ತು ಕಲಾವಿದರಿಗಾಗಿ ನಾನು ಡಬ್ಬಿಂಗ್ ಚಿತ್ರ ತೆರೆ ಕಾಣಬಾರದೆಂದು ಪ್ರತಿಭಟಿಸಿರುವುದಾಗಿ ತಿಳಿಸಿದ್ದಾರೆ.

ಇನ್ನೂ ಡಬ್ಬಿಂಗ್ ಸಿನಿಮಾವನ್ನು ವೀಕ್ಷಿಸುವುದು ಬಿಡುವುದು ಕನ್ನಡಿಗರಿಗೆ ಬಿಟ್ಟ ವಿಚಾರ. ಡಬ್ಬಿಂಗ್ ಚಿತ್ರವನ್ನು ಒಪ್ಪುವವರು ನೋಡಲಿ. ಇಷ್ಟ ಇಲ್ಲದವರು ನೋಡಬೇಡಿ. ಆದರೆ ನನಗೆ ದಂಡ ವಿಧಿಸಿರುವ ಭಾರತದ ಸ್ಪರ್ಧಾತ್ಮಕ ಆಯೋಗ(ಸಿಸಿಐ) ತೀರ್ಪಿನ ವಿರುದ್ಧ ನಾನು ಕೋರ್ಟ್​ ಮೊರೆ ಹೋಗುತ್ತೇನೆ ಎಂದು ಹೇಳಿದರು.

ಡಬ್ಬಿಂಗ್ ಚಿತ್ರಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್​ ತೀರ್ಪಿಗಿಂತ ಮುಂಚೆ ನಾನು ಡಬ್ಬಿಂಗ್ ಚಿತ್ರಗಳನ್ನು ವಿರೋಧಿಸಿರುವುದು. ಹೀಗಾಗಿ ನಾನು ಕೋರ್ಟಿನ ತೀರ್ಪಿಗೆ ಅಗೌರವ ತೋರಿರಲಿಲ್ಲ. ನನ್ನ ಹೇಳಿಕೆ ಮತ್ತು ಹೋರಾಟದಲ್ಲಿ ಯಾವುದೇ ತಪ್ಪುಗಳು ಇರದ ಕಾರಣ ದಂಡ ಏಕೆ ಕಟ್ಟಬೇಕು. ಇದೇ ಅಂಶವನ್ನು ಮುಂದಿಟ್ಟು ಸಿಸಿಐ ನೀಡಿದ ತೀರ್ಪನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಜಗ್ಗೇಶ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ವಿರುದ್ಧ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದ ಜಗ್ಗೇಶ್ ಅವರಿಗೆ ಇತ್ತೀಚೆಗೆ ಸಿಸಿಐ ನ್ಯಾಯಾಲಯ 2,71,286 ರೂಪಾಯಿ ದಂಡವನ್ನು ವಿಧಿಸಿತ್ತು. ಪರ ವಿರೋಧದ ನಡುವೆ ತಮಿಳು 'ವಿವೇಗಂ' ಚಿತ್ರ ಕನ್ನಡದಲ್ಲಿ 'ಕಮಾಂಡೊ' ಹೆಸರಿನಲ್ಲಿ ಡಬ್​ ಆಗಿ ತೆರೆ ಕಂಡಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...