• Home
  • »
  • News
  • »
  • entertainment
  • »
  • Totapuri Film Review: ಎಂಥಹ ಕಲ್ಲು ಮನಸನ್ನೂ ನಗಿಸುತ್ತೆ ಈ ಸಿನಿಮಾ! ತೋತಾಪುರಿ ಹೆಂಗಿದೆ?

Totapuri Film Review: ಎಂಥಹ ಕಲ್ಲು ಮನಸನ್ನೂ ನಗಿಸುತ್ತೆ ಈ ಸಿನಿಮಾ! ತೋತಾಪುರಿ ಹೆಂಗಿದೆ?

ತೋತಾಪುರಿ ಸಿನಿಮಾ ಹೆಂಗಿದೆ? ಇಲ್ಲಿದೆ ನೋಡಿ ಚಿತ್ರದ  ವಿಮರ್ಶೆ

ತೋತಾಪುರಿ ಸಿನಿಮಾ ಹೆಂಗಿದೆ? ಇಲ್ಲಿದೆ ನೋಡಿ ಚಿತ್ರದ ವಿಮರ್ಶೆ

ಜಾತಿ-ಧರ್ಮ-ಮತ ಎಲ್ಲವನ್ನೂ ಬಿಟ್ಟು ಬಿಡಿ ಅನ್ನೋದನ್ನ ಇಲ್ಲಿ ಸಾರಿ ಸಾರಿ ಹೇಳಲಾಗಿದೆ. ಈ ಹಾಸ್ಯಮಯ ಸಿನಿಮಾ ಸೀರಿಯಸ್ ವಿಷಯದ ಬಗ್ಗೆ ನಿಮಗೊಂದಷ್ಟು ಬುದ್ದಿ ಮಾತನ್ನೂ ಹೇಳುತ್ತದೆ. ಕೇಳಿ ನೋಡಿ ಎಂಜಾಯ್ ಮಾಡಿ.

  • Share this:

ಹಾಸ್ಯ ನಮ್ಮ (Comedy) ನಮ್ಮ ಮನಸ್ಸಿಗೆ ನೇರವಾಗಿಯೇ ಹೋಗಿ ಬಿಡುತ್ತದೆ. ಎಂತಹ ಕಲ್ಲು ಮನಸ್ಸು ಇದ್ರೂ ಸರಿಯೇ. ಒಮ್ಮೆ ನಗು ಆ ಮನಸ್ಸಿನಲ್ಲೂ ಬರುತ್ತದೆ. ಹಾಸ್ಯಕ್ಕೆ ಇರೋ ಶಕ್ತಿನೇ ಅದು. ತೋತಾಪುರಿ (Totapuri) ಚಿತ್ರದ ಡೈರೆಕ್ಟರ್ ವಿಜಯ್ ಪ್ರಸಾದ್ (Vijay Prasad) ತಾವು ಬಾಲ್ಯದಲ್ಲಿ ಕಂಡ ಕೆಲವೊಂದು ಸತ್ಯಗಳನ್ನ ತೋತಾಪುರಿ ಚಿತ್ರದಲ್ಲಿ ಹಾಸ್ಯದ ಚೌಕಟ್ಟಿನಲ್ಲಿಯೇ ಹೇಳಿದ್ದಾರೆ. ಹಾಸ್ಯ ಮಾಡೋದು ಮತ್ತು ಹಾಸ್ಯ ಬರೆಯೋದು ಅಷ್ಟು ಸುಲಭದ ಕೆಲಸ ಅಲ್ಲವೇ ಅಲ್ಲ. ಈ ವಿಷಯದಲ್ಲಿ ಡೈರೆಕ್ಟರ್ ವಿಜಯ್ ಪ್ರಸಾದ್ ತೋತಾಪುರಿ ಮೂಲಕ ಸಕ್ಸಸ್ ಆಗಿದ್ದಾರೆ. ನೀರ್ ದೋಸೆ ಚಿತ್ರದಲ್ಲಿ ಸಂಬಂಧಗಳ ನಡುವಿನ (Real Facts) ಸತ್ಯಗಳನ್ನ ಹೇಳಿರೋದು ಜನಕ್ಕೆ ತುಂಬಾ ಇಷ್ಟ ಆಗಿತ್ತು. ತೋತಾಪುರಿ ಸಿನಿಮಾದಲ್ಲಿ ಬೇರೆ ವಿಷಯವನ್ನೇ ಹಾಸ್ಯದ ಚೌಕಟ್ಟಿನಲ್ಲಿ ಹೇಳಿದ್ದಾರೆ. ಇದರ ವಿಶ್ಲೇಷಣೆ ಮತ್ತು ವಿಮರ್ಶೆ ಇಲ್ಲಿದೆ.

ಹಾಸ್ಯದ ಚೌಕಟ್ಟಿನಲ್ಲಿ ಜಾತಿ-ಮತ-ಧರ್ಮದ ಅಸಲಿ ವಿಡಂಬನೆ
ತೋತಾಪುರಿ ಹಾಸ್ಯಮಯ ಸಿನಿಮಾನೆ ಆಗಿದೆ. ಇದರಲ್ಲಿ ಬರೋ ವಿಷಯ ಜಾತಿಗಳನ್ನೇ ಆಧರಿಸಿದೆ. ಸೀರಿಯಲ್ ವಿಷಯವನ್ನ ಹಾಸ್ಯದ ಮೂಲಕ ಹೇಳಿರೋದು ವಿಶೇಷ.


ಬದುಕಿನ ಸತ್ಯ ಬಿಚ್ಚಿಡೋ ಈರೇಗೌಡ-ರಂಗಮ್ಮ-ನಂಜಮ್ಮ
ಈ ಚಿತ್ರದಲ್ಲಿ ಮೂರು ಕ್ಯಾರೆಕ್ಟರ್ ಬರುತ್ತವೆ. ಈರೇಗೌಡ (ಜಗ್ಗೇಶ್) ರಂಗಮ್ಮ (ವೀಣಾ ಸುಂದರ್) ನಂಜಮ್ಮ (ಹೇಮಾ ದತ್ತ್) ಈ ಮೂರು ಪಾತ್ರಗಳು ನಿಮನ್ನ ನಗಿಸುತ್ತವೆ. ಡಬಲ್,ಟ್ರಿಪಲ್ ಮೀನಿಂಗ್ ಅನಿಸೋ ಹಾಗೆ ಹಾಸ್ಯ ಕಿಕ್ ಕೊಡುತ್ತವೆ.


ಈ ಮೂರು ಪಾತ್ರಗಳ ಪರಿಚಯ ವಿಶೇಷವಾಗಿಯೇ ಪಾರ್ಟ್-1 ನಲ್ಲಿ ಆಗಿದೆ. ಮೂರು ಪಾತ್ರಕ್ಕೂ ಒಂದೊಂದು ಕಥೆ ಇದೆ. ಅವುಗಳನ್ನ ನಿರ್ದೇಶಕರು ಇಲ್ಲಿ ಇನ್ನೂ ಮೂರು ಪಾತ್ರಗಳ ಮೂಲಕ ಹೇಳಿಸುತ್ತಾರೆ.


ಇದನ್ನೂ ಓದಿ: Kireeti Janardhan Reddy: ಹೀರೋನೇ ಇಲ್ಲಿ "ಜೂನಿಯರ್" ಇದು ಜನಾರ್ಧನ್ ರೆಡ್ಡಿ ಪುತ್ರನ ಸಿನಿಮಾ ಟೈಟಲ್


ಒಂದು ರೀತಿ ಪಾತ್ರಗಳನ್ನ ನಿರೂಪಿಸೋಕೆ ಒಬ್ಬರಲ್ಲ, ಮೂರು ಜನ ಇದ್ದಾರೆ ಅನ್ನೋದೇ ಈ ಚಿತ್ರದ ಹೊಸತನ ಅನಿಸುತ್ತದೆ. ಆ ಪಾತ್ರಗಳು ಒಂದು ರೀತಿ ಮೂರು ಜಾತಿಗಳನ್ನ ಬಿಂಬಿಸೋ ಕೆಲಸನವನ್ನೂ ಮಾಡುತ್ತವೆ.


3 ಪಾತ್ರಗಳು-3 ಜಾತಿಗಳು-ಮೂರು ಮೂರು ನಿರೂಪಣೆಗಳು
ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಈ ಮೂರು ಪಾತ್ರಗಳು ಇಡೀ ಚಿತ್ರದ ಎಲ್ಲ ಪಾತ್ರಗಳ ಕಥೆಯನ್ನ ಹೇಳುತ್ತವೆ. ಸಮಾಜದಲ್ಲಿ ನಡೆಯುತ್ತಿರೋ ಜಾತಿ-ಮತಗಳ ತಿಕ್ಕಾಟವನ್ನ ಇಲ್ಲಿ ನೇರವಾಗಿಯೇ ಹೇಳಿ ಬಿಡುತ್ತವೆ.


ತೋತಾಪುರಿ ಚಿತ್ರದಲ್ಲಿ ಜಗ್ಗೇಶ್ ಅವರ ಟೈಲರಿಂಗ್ ಅಂಗಡಿ ಹೆಸರು ಮಜವಾಗಿದೆ. ತೋತಾಪುರಿ ಲೇಡೀಸ್ ಟೇಲರ್ ಅಂತಲೇ ಇದು ಗಮನ ಸೆಳೆಯುತ್ತದೆ.
ತೋತಾಪುರಿ ಮಾವಿನ ಹಣ್ಣು ಇಟ್ಟುಕೊಂಡು ಇಡೀ ಸಿನಿಮಾ ಹೇಳಿರೋದು ತುಂಬಾ ವಿಶೇಷ ಅನಿಸುತ್ತದೆ.


Jaggesh Comedy Film Totapuri Film Review Story
ತೋತಾಪುರಿ ಸಿನಿಮಾ ಹೇಗಿದೆ ಗೊತ್ತೇ?


ತೋತಾಪುರಿ ಹಣ್ಣು ಅದಕ್ಕಿರೋ ತೊಟ್ಟು ಮತ್ತು ಡಬಲ್ ಮೀನಿಂಗ್ ಡೈಲಾಗ್​ಗಳು ಎಲ್ಲವೂ ಈ ತೋತಾಪುರಿಯ ಪ್ಲಸ್ ಕೂಡ ಹೌದು, ಮೈನಸ್ ಕೂಡ ಹೌದು ಅಂತಲೇ ಹೇಳಬಹುದು.


ತೋತಾಪುರಿ ಹಣ್ಣು-ಲೇಡೀಸ್ ಬ್ಲೌಸು-ಡಬಲ್ ಮೀನಿಂಗ್ ಕಿಕ್ಕು
ತೋತಾಪುರಿ ಸಿನಿಮಾದಲ್ಲಿ ತೋತಾಪುರಿ ಮಾವಿನ ಹಣ್ಣು ಒಂದು ಕ್ಯಾರೆಕ್ಟರ್ ಆಗಿಯೂ ಪ್ಲೇ ಆಗಿದೆ. ತೋತಾಪುರಿ ಕಟ್ ಹೆಸರಿನ ಬ್ಲೌಸ್ ಆಗಿಯೂ ಹಾಸ್ಯ-ಹಾಟ್-ಡಬಲ್​ ಮೀನಿಂಗ್​ನ ಕಿಕ್ ಕೊಡುವ ಕೆಲಸವನ್ನೂ ಮಾಡುತ್ತದೆ.


ತೋತಾಪುರಿ ಸಿನಿಮಾವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ನಮ್ಮಲ್ಲಿರೋ ಜಾತಿ-ಧರ್ಮ ಅನ್ನೋ ಅಂಧಕಾರವನ್ನ ಹೋಗಲಾಡಿಸೋ ಕೆಲಸವನ್ನೂ ಮಾಡುತ್ತದೆ ಅನಿಸಿ ಬಿಡುತ್ತದೆ. ಆದರೆ ಅದನ್ನ ಹೇಳಿದ ರೀತಿ ಮಾತ್ರ ಹಾಸ್ಯಯವಾಗಿಯೂ ಕಾಣಿಸುತ್ತದೆ. ಡಬಲ್ ಮೀನಿಂಗ್ ಚಿತ್ರವೂ ಅನಿಸಿ ಬಿಡುತ್ತದೆ.


ತೋತಾಪುರಿ ಚಿತ್ರದ ಮೈನಸ್ ಏನು?
ತೋತಾಪುರಿ ಸಿನಿಮಾದ ಮೈನಸ್​ಗಳಲ್ಲಿ ಮೂರು ಮೂರು ಪಾತ್ರಗಳು ಮಧ್ಯ ಮಧ್ಯ ಬಂದು ಪಾತ್ರಗಳನ್ನ ಪರಿಚಯಿಸೋದು ಎಲ್ಲೋ ಒಂದು ಕಡೆ ಕಥೆಯ ಓಟಕ್ಕೆ ಅಡ್ಡಿಯುಂಟು ಮಾಡ್ತಿವೆ ಅನಿಸುತ್ತದೆ.


Jaggesh Comedy Film Totapuri Film Review Story
ತೋತಾಪುರಿ ಸಿನಿಮಾ ರಿವ್ಯೂ


ಇನ್ನೂ ಬ್ಲೌಸ್ ಮಾತು-ತೋತಾಪುರಿ ತೊಟ್ಟು ಅನ್ನೋದು ಇಲ್ಲಿ ಹೇರಳವಾಗಿಯೇ ಉಪಯೋಗವಾಗಿದೆ. ಚಿತ್ರದ ಮೊದಲಾರ್ಧ ಪಾತ್ರಗಳ ಪರಿಚಯದಲ್ಲಿಯೇ ಕಳೆದು ಹೋಗುತ್ತದೆ. ಇನ್ನೇನು ಸಿನಿಮಾ ಶುರು ಅಂತ ಅಂದುಕೊಂಡು ದ್ವಿತೀಯಾರ್ಧ ನೋಡಲು ಕುಳಿತ್ರೆ ಮುಗಿತು.


ತೋತಾಪುರಿ ರುಚಿ ಕೆಡಸಿದ ಆ ಮೂರು ಪಾತ್ರಗಳು
ಆಗಲೂ ಆ ಹಿಂದೂ, ಕ್ರೈಸ್ತ, ಮುಸ್ಲಿಂ ಪಾತ್ರಗಳು ಬಂದೇ ಬಿಡುತ್ತವೆ. ಅಲ್ಲಿಗೆ ಮತ್ತೆ ಈ ಮೂರು ಪಾತ್ರಗಳ ನರೇಷನ್ ಶುರು ಹಂಚಿಕೊಂಡು ಬಿಡುತ್ತವೆ. ಇಂತಹ ಮೈನಸ್​ಗಳ ಜೊತೆಗೆ ಸಿನಿಮಾ ಪಾತ್ರಗಳು ಜಾತಿ-ಮತಗಳ ಬಗ್ಗೆ ಸತ್ಯವಾದ ಮಾತುಗಳನ್ನೂ ಆಡುತ್ತವೆ. ಥಿಯೇಟರ್​ನಲ್ಲಿ ಕುಳಿತ ಪ್ರೇಕ್ಷಕ ಕೂಡ ಚಪ್ಪಾಳೆ ಹೊಡೆಯುತ್ತಾನೆ.


ತೋತಾಪುರಿ ಸಿನಿಮಾದ ಭಾಗ 1 ಪಾತ್ರಗಳ ಪರಿಚಯದಲ್ಲಿಯೇ ಮುಗಿದು ಬಿಡುತ್ತದೆ. ಇಡೀ ಚಿತ್ರದ ಕಥೆ ತೋತಾಪುರಿ ಅಸಲಿ ಕಥೆ ಪಾರ್ಟ್​-2 ದಲ್ಲಿಯೇ ಶುರು ಆಗುವಂತಿದೆ.


ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ಕಳಪೆ ಜಗಳ, ಮೈಕ್ ತೆಗೆದು ನಡೆದ ರೂಪೇಶ್ ರಾಜಣ್ಣ


ಅದಕ್ಕಾಗಿಯೇ ಚಿತ್ರದ ಕೊನೆಯಲ್ಲಿ ಒಂದು ಪಾತ್ರದ ಪರಿಚಯವೂ ಇದೆ. ಅದನ್ನ ಕ್ರೈಸ್ತ ಧರ್ಮದ ಪ್ರತಿನಿಧಿಯಂತೆ ಕಾಣೋ ಪಾತ್ರವೇ ಇಲ್ಲಿ ಹೇಳಿ ಸಿನಿಮಾ ಪಾರ್ಟ್-1 ಮುಗಿತು ಅಂತಲೇ ಹೇಳುತ್ತದೆ.


ತೋತಾಪುರಿ ಸಿನಿಮಾದಲ್ಲಿ ಹಾಸ್ಯ ಇದೆ. ಬದುಕಿನ ಸತ್ಯವೂ ಹೇಳಲಾಗಿದೆ. ಜಾತಿ-ಧರ್ಮ-ಮತ ಎಲ್ಲವನ್ನೂ ಬಿಟ್ಟು ಬಿಡಿ ಅನ್ನೋದನ್ನ ಇಲ್ಲಿ ಸಾರಿ ಸಾರಿ ಹೇಳಲಾಗಿದೆ. ಈ ಹಾಸ್ಯಮಯ ಸಿನಿಮಾ ಸೀರಿಯಸ್ ವಿಷಯದ ಬಗ್ಗೆ ನಿಮಗೊಂದಷ್ಟು ಬುದ್ದಿ ಮಾತನ್ನೂ ಹೇಳುತ್ತದೆ. ಕೇಳಿ ನೋಡಿ ಎಂಜಾಯ್ ಮಾಡಿ.

First published: