Jaggesh: ನಮ್ಮ ಭಾಷೆಯನ್ನು ಆಕ್ರಮಿಸಿ ನಾವು ಗುಲಾಮರಂತೆ ಆಗ್ತೀವಿ: ನವರಸ ನಾಯಕ ಜಗ್ಗೇಶ್ ಎಚ್ಚರಿಕೆ..!

Jaggesh: ಸಿನಿಮಾಗಾಗಿಯೇ ಬಾಳಿದ ಬಾಳುತ್ತಿರುವ ಹಿರಿಯರು ಒಗ್ಗಟ್ಟಾಗಿ ಒಂದು ವೇದಿಕೆ ರಚಿಸಿ ನಿಸ್ವಾರ್ಥ ಯತ್ನ ಮಾಡಿದರೆ ಉದ್ಯಮ ಎಲ್ಲಾ ವೇದಿಕೆಯಲ್ಲು ನಿಲ್ಲತ್ತದೆ ಉಳಿಯುತ್ತದೆ.

news18-kannada
Updated:May 18, 2020, 12:22 PM IST
Jaggesh: ನಮ್ಮ ಭಾಷೆಯನ್ನು ಆಕ್ರಮಿಸಿ ನಾವು ಗುಲಾಮರಂತೆ ಆಗ್ತೀವಿ: ನವರಸ ನಾಯಕ ಜಗ್ಗೇಶ್ ಎಚ್ಚರಿಕೆ..!
ನವರಸ ನಾಯಕ ಜಗ್ಗೇಶ್
  • Share this:
ಕನ್ನಡ ಚಿತ್ರರಂಗದಲ್ಲಿ ನಾಡಿನ ಪರ ನೇರ ನಡೆ ನುಡಿಗಳ ಮೂಲಕ ಸದಾ ಸುದ್ದಿಯಲ್ಲಿರುವ ನವರಸ ನಾಯಕ ಜಗ್ಗೇಶ್ ಇದೀಗ ಮತ್ತೊಮ್ಮೆ ಗುಡುಗಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮೂಲಕ ವಿಷಯ ಮಂಡಿಸಿರುವ ಅವರು, ಪರಭಾಷೆ ನಿರ್ಮಾಪಕರಿಗೆ, ನಿರ್ದೇಶಕರಿಗೆ ಬಿಲ್ಡಪ್ ಕೊಟ್ಟು ಕನ್ನಡಿಗರೆಂದರೆ ಇಷ್ಟೇ ಜನ ಎಂದು ಮುದ್ರೆ ಒತ್ತಲು ಹೊರಟಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ನೋಡುವ ಕಲಾಭಿಮಾನಿಗಳ ಚಪ್ಪಾಳೆ ನಟ-ನಟಿಯನ್ನು ಶ್ರೀಮಂತರಾಗಿ ಮಾಡುತ್ತದೆ. ನಮ್ಮ ಬೆಳೆಸಿದ ನಿರ್ಮಾಪಕ ಎಲ್ಲರ ಬಳಿ ಥಿಯೇಟರ್ ಟಿವಿ ಮುಂದೆ ಒಟಿಟಿ ಮುಂದೆ ಭಿಕ್ಷುಕನ ಮಾಡಬೇಡಿ. ನಾನು 29 ಚಿತ್ರ ನಿರ್ಮಿಸಿದ ನಿರ್ಮಾಪಕನಾಗಿ ಬೇಡಿಕೆ! 145 ಸಿನಿಮಾ ನಟಿಸಿದ ನಟನಾಗಿ ಅಲ್ಲಾ. ನನ್ನ ಮಾತು ಮುಟ್ಟಬೇಕಾದ ಜಾಗ ಮುಟ್ಟಿ ಬದಲಾಗಲಿ ವ್ಯವಸ್ಥೆ ಎನ್ನುವ ಕಾಳಜಿ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.


ಇನ್ನೊಂದು ಟ್ವೀಟ್​ನಲ್ಲಿ, ಪರಭಾಷೆ ನಿರ್ಮಾಪಕರು ನಿರ್ದೇಶಕರಿಗೆ ಬಿಲ್ಡಪ್​ ಕೊಟ್ಟು ಕರ್ನಾಟಕ ಎಂದರೆ ಇಷ್ಟೆಜನ ಅಂತ ಮುದ್ರೆ ಒತ್ತಿಸಿ. ಡಬ್ಬಿಂಗ್ ಸಿನಿಮಾ, ಡಬ್ಬಿಂಗ್ ರೈಟ್ಸ್, ನೂರಾರು ಪಡೆದು ಉದ್ಯಮ ಕಬಳಿಸಿ ಬಲಿಷ್ಟರಾಗಿದ್ದಾರೆ. ಅಂತವರ ಕಪಿಮುಷ್ಟಿಯಿಂದ ಉದ್ಯಮ ಹೊರಬಂದರೆ, ಹೊಸ ನಿರ್ಮಾಪಕರು ನಿರ್ದೇಶಕರ ನಟ-ನಟಿ ಹೇರಳವಾಗಿ ಬೆಳವಣಿಗೆ ಆಗಿ ಕನ್ನಡದ ಮುಂದಿನ ಆಸ್ತಿ ಅಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.



ಹಾಗೆಯೇ ಈಗಲಾದರು ಸಿನಿಮಾಗಾಗಿಯೇ ಬಾಳಿದ ಬಾಳುತ್ತಿರುವ ಹಿರಿಯರು ಒಗ್ಗಟ್ಟಾಗಿ ಒಂದು ವೇದಿಕೆ ರಚಿಸಿ ನಿಸ್ವಾರ್ಥ ಯತ್ನ ಮಾಡಿದರೆ ಉದ್ಯಮ ಎಲ್ಲಾ ವೇದಿಕೆಯಲ್ಲು ನಿಲ್ಲತ್ತದೆ ಉಳಿಯುತ್ತದೆ. ಇಲ್ಲದಿದ್ದರೆ ಪರಭಾಷೆಯ ಚಿತ್ರಗಳು ರಾಜರಂತೆ ನಮ್ಮ ಭಾಷೆ ಆಕ್ರಮಿಸಿ ನಮ್ಮ ಭಾಷೆ ಗುಲಾಮರಂತೆ ಆಗುವುದು ನಿಶ್ಚಿತ. ನಮ್ಮ ಚಿತ್ರರಂಗಕ್ಕೆ ನಮ್ಮವರೆ ಶತ್ರುಗಳು ಎಂದು ನವರಸ ನಾಯಕ ತಿಳಿಸಿದ್ದಾರೆ.



ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳು ಹೆಚ್ಚಾಗುತ್ತಿದ್ದು, ಹಾಗೆಯೇ ಥಿಯೇಟರ್ ಸಮಸ್ಯೆ ನಡುವೆ ಪರಬಾಷೆ ಚಿತ್ರಗಳಿಗೆ ಮಣೆ ಹಾಕಲಾಗುತ್ತಿದೆ. ಇನ್ನು ಒಟಿಟಿ ಪ್ಲಾಟ್​ಫಾರ್ಮ್​ನಲ್ಲೂ ಕನ್ನಡ ಡಬ್ಬಿಂಗ್ ಚಿತ್ರಗಳಿಗೆ ಆಕ್ರಮಿಸಲಿದ್ದು, ಇದರ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡ ಚಿತ್ರರಂಗಕ್ಕೆ ಭಾರೀ ನಷ್ಟ ಅನುಭವಿಸಲಿದೆ ಎಂಬ ಅಭಿಪ್ರಾಯಗಳು ಕಳೆದ ಕೆಲ ದಿನಗಳಿಂದ ಚಿತ್ರರಂಗದಿಂದ ಕೇಳಿ ಬರುತ್ತಿವೆ.
First published: May 18, 2020, 10:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading