Ranganayaka: ರಂಗನಾಯಕನಿಗಾಗಿ ಒಂದಾದ ಜಗ್ಗೇಶ್-ಗುರುಪ್ರಸಾದ್ !

Ranganayaka: ಗುರುಪ್ರಸಾದ್ ಹಾಗೂ ಜಗ್ಗೇಶ್ ಮತ್ತೆ ಒಂದಾಗಿದ್ದಾರೆ. ಮತ್ತೆ ಎಂದೂ ಒಂದಾಗಲ್ಲ ಎನ್ನುವಂತಿದ್ದವರು ಜೊತೆಯಾಗಿ ಸಿನಿಮಾ ಮಾಡ್ತಿದ್ದಾರೆ. ರಂಗನಾಯಕ ಎಂಬ ಮತ್ತೊಂದು ಅದ್ಭುತ ಸಿನಿಮಾವನ್ನ ಕೊಡೋಕೆ ಮುಂದಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು.

Anitha E | news18-kannada
Updated:October 10, 2019, 12:22 PM IST
Ranganayaka: ರಂಗನಾಯಕನಿಗಾಗಿ ಒಂದಾದ ಜಗ್ಗೇಶ್-ಗುರುಪ್ರಸಾದ್ !
ರಂಗನಾಯಕ ಸಿನಿಮಾದಲ್ಲಿ ಜಗ್ಗೇಶ್​ ಹಾಗೂ ಗುರುಪ್ರಸಾದ್​
Anitha E | news18-kannada
Updated: October 10, 2019, 12:22 PM IST
ಗುರುಪ್ರಸಾದ್-ಜಗ್ಗೇಶ್ ಸ್ಯಾಂಡಲ್‍ವುಡ್‍ನ ಹಿಟ್ ಜೋಡಿ. 'ಮಠ', ಹಾಗೂ 'ಎದ್ದೇಳು ಮಂಜುನಾಥ' ಮೂಲಕ ಇವರಿಬ್ಬರು ಮಾಡಿದ್ದ ಮೋಡಿ ಅಷ್ಟಿಷ್ಟಲ್ಲ. ಇಂತಹ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ? ದೋಸ್ತಿಗಳಾಗಿದ್ದವರು, ವೈರಿಗಳಂತಾಗಿದ್ದರು. ಆದರೆ ಈಗ ಇಬ್ಬರು ಮತ್ತೆ ಜೊತೆಯಾಗಿ ಸಿನಿಮಾ ಮಾಡ್ತಿದ್ದಾರೆ.

ಗುರುಪ್ರಸಾದ್ ಹಾಗೂ ಜಗ್ಗೇಶ್ ಮತ್ತೆ ಒಂದಾಗಿದ್ದಾರೆ. ಮತ್ತೆ ಎಂದೂ ಒಂದಾಗಲ್ಲ ಎನ್ನುವಂತಿದ್ದವರು ಜೊತೆಯಾಗಿ ಸಿನಿಮಾ ಮಾಡ್ತಿದ್ದಾರೆ. 'ರಂಗನಾಯಕ' ಎಂಬ ಮತ್ತೊಂದು ಅದ್ಭುತ ಸಿನಿಮಾವನ್ನ ಕೊಡೋಕೆ ಮುಂದಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು.



ಜಗ್ಗೇಶ್-ಗುರುಪ್ರಸಾದ್ ಬಗ್ಗೆ ನಿಮಗೆ ಹೇಳಲೇಬೇಕಿಲ್ಲ. ಇವರಿಬ್ಬರ ಸಿನಿಮಾಗಳನ್ನ ನೋಡಿ ನೀವು ಸಿಕ್ಕಾಪಟ್ಟೆ ಎಂಜಾಯ್ ಮಾಡಿರುತ್ತೀರಿ. ಆ ಮಟ್ಟಿಗೆ 'ಮಠ', 'ಎದ್ದೇಳು ಮಂಜುನಾಥ' ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಜೋಡಿ ಗುರುಪ್ರಸಾದ್-ಜಗ್ಗೇಶ್.

ನವರಸ ನಾಯಕ ಜಗ್ಗೇಶ್ ಮಾತಿಗೆ ನಿಂತರೆ ಮುಗಿದೇ ಹೋಯಿತು. ವೇದಿಕೆಯನ್ನೇ ತುಂಬಿಕೊಂಡು ಬಿಡುತ್ತಾರೆ. ಮೈಕ್ ಹಿಡಿದಿರೋ ಅಷ್ಟು ಹೊತ್ತು ಎದುರಿಗಿದ್ದವರನ್ನ ನಗೆಗಡಲಲ್ಲಿ ತೇಲಿಸಿಬಿಡ್ತಾರೆ. ಅದ್ರಂತೆ ತಮ್ಮ ಹಾಗೂ ಗುರುಪ್ರಸಾದ್ ನಡುವಿನ ವೈಷಮ್ಯ, ವಿರಸವನ್ನ ಗಂಡ ಹೆಂಡತಿ ಜಗಳಕ್ಕೆ ಹೋಲಿಸಿ. ಅದನ್ನ ಮಾತುಗಳಲ್ಲಿ ಕಟ್ಟಿಕೊಟ್ಟ ಬಗೆಯೇ ಅದ್ಭುತ.

ಇದನ್ನೂ ಓದಿ: ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್​ ನಟನ ಹೆಂಡತಿ ಮೀನು ಮಾರುತ್ತಿದ್ದರಂತೆ..!

ಇಂತಹ ಜಗ್ಗೇಶ್-ಗುರುಪ್ರಸಾದ್ ಈಗ ರಂಗನಾಯಕ ಸಿನಿಮಾ ಮೂಲಕ ಒಂದಾಗ್ತಿದ್ದಾರೆ. ಇಲ್ಲಿ ಜಗ್ಗೇಶ್ ಕೇವಲ ದುಡ್ಡಿಗಾಗಿನೋ? ಅಥವಾ ಗುರುಪ್ರಸಾದ್ ಒಂದು ಸಿನಿಮಾ ಸಿಕ್ತು ಅಂತ್ಲೋ ಒಂದಾಗಿಲ್ವಂತೆ. ಬದಲಿಗೆ ಕನ್ನಡಿಗರಿಗೆ ಖುಷಿ ಕೊಡುವ ಸಲುವಾಗಿ ಒಂದಾಗಿದ್ದೇವೆ ಅನ್ನೋದು ಜಗ್ಗೇಶ್ ಅವರ ಉವಾಚ.
Loading...

ಈ ಟೀಸರ್ ನೋಡಿ ಸ್ಯಾಂಡಲ್​ವುಡ್​ ಮಂದಿ ಸಹ ಮೆಚ್ಚಿಕೊಂಡು ಹೊಗಳಿಕೆಯ ಮಹಾಪೂರವನ್ನೇ ಹರಿಸಿದ್ದಾರೆ. ನಟ ಧನಂಜಯ್​ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಟ್ವೀಟ್​ ಮಾಡಿರುವುದು ಹೀಗೆ.





'ರಂಗನಾಯಕ' ಸಿನಿಮಾದ ಬಗ್ಗೆ ಹೇಳೋದಾದರೆ, ಗುರುಪ್ರಸಾದ್-ಜಗ್ಗೇಶ್ ಮತ್ತೆ ಒಂದಾಗಿದ್ದಾರೆ ಅನ್ನೋದೆ ಈ ಸಿನಿಮಾನೇ ಹೈಲೈಟ್​. ಇದರ ಟೀಸರ್ ಸದ್ಯ ರಿವೀಲಾಗಿದ್ದು ಮತ್ತೊಂದು ಬಂಪರ್ ಕಾಮಿಡಿ ಕಿಕ್ ಕೊಡೋ ಸಿನಿಮಾ ಆಗೋ ಎಲ್ಲ ಲಕ್ಷಣವನ್ನೂ ಈ ಸಿನಿಮಾದ ಟೀಸರ್​ ಕೊಡ್ತಿದೆ. ವಿಖ್ಯಾತ್ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ಅನೂಪ್ ಸೀಳಿನ್ ಸಂಗೀತ ಕೊಡಲಿದ್ದಾರೆ. ಒಟ್ಟಾರೆ ಈಗಷ್ಟೇ ಈ ಸಿನಿಮಾ ಕಾರ್ಯ ಆರಂಭಿಸಿದ್ದು, ಮುಂದಿನ ವರ್ಷ ನಗೆಯ ಕಚಗುಳಿ ಕೊಡೋದು ಪಕ್ಕಾ ಎನ್ನಲಾಗ್ತಿದೆ.

Akanksha Singh: ಮಾಲ್ಡೀವ್ಸ್​ನಲ್ಲಿ ಮುತ್ತಿನ ಮಳೆ ಸುರಿಸುತ್ತಿದ್ದಾರೆ ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​..!


 

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...