ಮತ್ತೆ ಒಂದಾದ ಜಗ್ಗೇಶ್​-ಗುರುಪ್ರಸಾದ್​: ಶೀಘ್ರದಲ್ಲೇ ತೆರೆಗೆ ಬರಲಿದೆ ಇವರಿಬ್ಬರ ಸಿನಿಮಾ..!

news18
Updated:August 24, 2018, 12:14 PM IST
ಮತ್ತೆ ಒಂದಾದ ಜಗ್ಗೇಶ್​-ಗುರುಪ್ರಸಾದ್​: ಶೀಘ್ರದಲ್ಲೇ ತೆರೆಗೆ ಬರಲಿದೆ ಇವರಿಬ್ಬರ ಸಿನಿಮಾ..!
news18
Updated: August 24, 2018, 12:14 PM IST
ಆನಂದ್ ಸಾಲುಂಡಿ, ನ್ಯೂ ಸ್ 18 ಕನ್ನಡ

ಜಗ್ಗೇಶ್-ಗುರುಪ್ರಸಾದ್ ಜೋಡಿ ಸೇರಿ ಮಾಡಿರೋದು ಎರಡೇ ಸಿನಿಮಾವಾದರೂ ಆ ಎರಡು ಸಿನಿಮಾಗಳಲ್ಲೇ ಸಾಕಷ್ಟು ನಗಿಸಿದ್ದಾರೆ. ಇವರಿಬ್ಬರು ಮತ್ತೆ ಮತ್ತೆ ಒಂದಾಗಿ ಸಿನಿಮಾ ಮಾಡ್ತಾ ಇರಲಪ್ಪ ಅನ್ನುವಷ್ಟು ಖುಷಿಕೊಟ್ಟಿದ್ದಾರೆ. ಇಂತಹ ಜೋಡಿ ಮಧ್ಯೆ ಅದ್ಯಾವುದೋ ಕಾರಣಕ್ಕೆ ವಿರಸ ಮೂಡಿತ್ತು. ಇನ್ನು ಮುಂದೆ ಇವರಿಬ್ಬರು ಒಂದೇ ಆಗುವುದಿಲ್ಲವೇನೋ ಅನ್ನೋ ಆತಂಕ ಉಂಟಾಗುವಷ್ಟು ಇಬ್ಬರ ನಡುವೆ ಅಂತರ ಮೂಡಿತ್ತು. ಆದರೆ ಈಗ ಜಗ್ಗೇಶ್-ಗುರು ಫ್ರೆಂಡ್‍ಶಿಪ್ ರಿ ಕನೆಕ್ಟ್ ಆಗಿದೆಯಂತೆ. ಇಬ್ಬರು ಮತ್ತೆ ಒಂದಾಗಿ ಸಿನಿಮಾ ಮಾಡೋಕೆ ತಯಾರಿ ನಡೆಸಿದ್ದಾರೆ.

ಗುರು ಪ್ರಸಾದ್, ಕನ್ನಡ ಚಿತ್ರರಂಗ ಕಂಡ ಸೃಜನಶೀಲ ನಿರ್ದೇಶಕ. ಇವರು ಆಯ್ಕೆ ಮಾಡಿಕೊಳ್ಳುವ ವಿಷಯ, ಅದನ್ನ ತೆರೆಮೇಲೆ ತರೋ ರೀತಿ ಕನ್ನಡ ಚಿತ್ರಪ್ರೇಮಿಗಳನ್ನ ಬೆರಗುಗೊಳಿಸಿದೆ. ಇವರ 'ಮಠ' ಹಾಗೂ 'ಎದ್ದೇಳು ಮಂಜುನಾಥ' ಚಿತ್ರವನ್ನ ಸಿನಿರಸಿಕರು ಅದೆಷ್ಟು ಬಾರಿ ನೋಡಿದ್ದಾರೋ ಗೊತ್ತಿಲ್ಲ.

ಅದ್ರಲ್ಲೂ 'ಮಠ' ಚಿತ್ರ ಜಗೇಶ್ ಅವರ ಸಿನಿ ಜೀವನವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದ ಸಿನಿಮಾ ಎಂದೇ ಹೇಳಬಹುದು. ನವರಸ ನಾಯಕನ ನೂರನೇ ಚಿತ್ರವಾಗಿದ್ದ ಮಠದಲ್ಲಿ ಜಗ್ಗೇಶ್ ಪಾತ್ರ ಸಂಪೂರ್ಣ ಭಿನ್ನವಾಗಿತ್ತು. ಜಗ್ಗೇಶ್ ಅವರನ್ನ ಹೀಗೂ ತೋರಿಸಬಹುದು ಅಂತ ಮಠ ಸಿನಿಮಾ ತೋರಿಸಿಕೊಟ್ಟಿತ್ತು

ಇನ್ನು 'ಎದ್ದೇಳು ಮಂಜುನಾಥ' ಚಿತ್ರದಲ್ಲಿ ಸೋಮಾರಿ ಮಂಜನಾಗಿ ಜಗ್ಗೇಶ್‍ರನ್ನ ಗುರುಪ್ರಸಾದ್ ತೋರಿಸಿದ್ದರು. ಕೇವಲ ಎರಡೇ ಪಾತ್ರಗಳ ನಡುವೆ ಸುತ್ತೋ ಕಥೆ, ಕೆಲವೇ ಕೆಲವು ಲೊಕೇಷನ್‍ನಲ್ಲಿ ಚಿತ್ರಿತವಾದ ದೃಶ್ಯಗಳು ನಗುವಿನ ಔತಣ ಬಡಿಸಿದ್ದವು.

ಈ ಎರಡು ಚಿತ್ರಗಳನ್ನ ನೋಡಿದ್ಮೇಲೆ ಚಿತ್ರರಸಿಕರು ಜಗ್ಗೇಶ್-ಗುರುಪ್ರಸಾದ್ ಜೋಡಿ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡು ಬಿಟ್ಟರು. ಮತ್ತೆ ಮತ್ತೆ ಈ ಜೋಡಿ ಒಂದಾಗಿ, ನಮ್ಮನ್ನ ಸದಾಕಾಲ ನಗಿಸುತ್ತಾ ಇರಲ್ಲಪ್ಪ ಎಂದು ಆಸೆ ಪಡಲಾರಂಭಿಸಿದ್ದರು. ಆದರೆ ಇಬ್ಬರ ನಡುವೆ ಅದ್ಯಾವ ಕಾರಣಕ್ಕೆ ವಿರಸ ಉಂಟಾಯ್ತೋ ಗೊತ್ತಿಲ್ಲ. ಇಬ್ಬರು ಇನ್ಮುಂದೆ ಒಟ್ಟಾಗಿ ಸಿನಿಮಾ ಮಾಡೋದೆ ಇಲ್ಲ ಅನ್ನುವಷ್ಟು ಆಗಿ ಹೋಗಿತ್ತು.
Loading...

ಆದರೆ ಈಗ ಎಲ್ಲ ಸರಿ ಹೋಗಿದೆ. ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್‍ರನ್ನ ಮತ್ತೆ ತೆರೆಮೇಲೆ ನೋಡೋದು ಪಕ್ಕಾ ಆಗಿದೆ. ಈ ವಿಷಯ ಕೇಳಿನೇ ಸಿನಿರಸಿಕರಿಗೆ ವರಲಕ್ಷ್ಮಿ ಹಬ್ಬದ ದಿನ ಲಕ್ಷ್ಮೀಯೇ ವರ ಕೊಟ್ಟಷ್ಟು ಖುಷಿಯಾಗಿರೋದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಆದಷ್ಟು ಬೇಗ ಇವರಿಬ್ಬರ ಸಿನಿಮಾ ಆರಂಭವಾಗಿ, ಚಿತ್ರೀಕರಣ ಮುಗಿಸಿ, ಥಿಯೇಟರ್​ಗೆ ಬರುವಂತಾಗಲಿ ಅಂತ ಕಾಯೋಣ.

 

 

 
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...