ಈ ನಿರ್ದೇಶಕನ ಸಿನಿಮಾಗಳೇ ಹಾಗೇ. ಡಬಲ್ ಮಿನಿಂಗ್ ಡೈಲಾಗ್ಸ್ (Double Meaning Dialogues), ಮಿನಿಂಗ್ಫುಲ್ ಸ್ಟೋರಿ (Meaning Full Story). ನಗು ನಗುತ್ತಲೇ ಜೀವನಕ್ಕೆ ಒಂದೊಳ್ಳೆ ಮೆಸೇಜ್ ನೀಡುವ ನಿರ್ದೇಶಕ ಅಂದರೆ, ಅದು ವಿಜಯ್ ಪ್ರಸಾದ್ (Vjay Prasad). ಕನ್ನಡ ಚಿತ್ರರಂಗದ ಅಂಡರ್ ರೇಟೆಡ್ ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ ವಿಜಯ್ ಪ್ರಕಾಶ್. 'ಸಿದ್ಲಿಂಗು' (Sidlingu), 'ನೀರ್ ದೋಸೆ' (Neer Dose) ಯಂತಹ ಡಿಫ್ರೆಂಟ್ ಜಾನರ್ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದಾದ ಬಳಿಕ ನವರಸ ನಾಯಕ ಜಗ್ಗೇಶ್ (Jaggesh) ಜೊತೆಗೂಡಿ 'ತೋತಾಪುರಿ' (Totapuri) ಎಂಬ ಸಿನಿಮಾ ಅನೌನ್ಸ್ ಮಾಡಿದ್ದರು. ಟೈಟಲ್ನಲ್ಲೇ ಜನರ ನಿರೀಕ್ಷೆ ಹೆಚ್ಚು ಮಾಡಿದ್ದ ವಿಜಯ್ ಪ್ರಸಾದ್ ಅವರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. 'ತೋತಾಪುರಿ' ಸಿನಿಮಾದ ಟ್ರೈಲರ್ ಅನ್ನು ಸ್ಯಾಂಡಲ್ವುಡ್ ಬಾದ್ಶಾ ಕಿಚ್ಚ ಸುದೀಪ್ (Kiccha Sudeep) ಬಿಡುಗಡೆ ಮಾಡಿದ್ದಾರೆ. ಟ್ರೈಲರ್ ಈಗಾಗಲೇ ಯೂಟ್ಯೂಬ್ನಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಆದರೆ, ಟ್ರೈಲರ್ ನೋಡಿದ ಕೆಲವು ಮಂದಿ ಇದಕ್ಕೆ ವಿರೋಧಿಸುತ್ತಿದ್ದಾರೆ. ಯಾಕೆ ಅಂತೀರಾ? ಮುಂದೆ ನೋಡಿ.
ಟ್ರೈಲರ್ ಬಿಡುಗಡೆ ಮಾಡಿ ಕಿಚ್ಚ ಹೇಳಿದ್ದೇನು?
ಬೆಂಗಳೂರಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಸುದೀಪ್, ''ಈ ಸಿನಿಮಾದ ಡೈಲಾಗ್ಗಳನ್ನು ನಟರು ಹೇಳಿರುವ ರೀತಿಯಿಂದಾಗಿ ಅವು ಕಚಗುಳಿ ಇಡುತ್ತಿವೆ, ಅಸಭ್ಯ ಎನಿಸುತ್ತಿಲ್ಲ. ಸಿನಿಮಾದಲ್ಲಿ ಜಗ್ಗೇಶ್ ಹೇಳಿರುವ ಡೈಲಾಗ್ಗಳನ್ನು ನಾವು ಹೇಳಿದರೆ ಸರಿಯಾಗಿ ಟ್ರೋಲ್ ಆಗುತ್ತೇವೆ'' ಎಂದರು. ಹೌದು, ಈ ಸಿನಿಮಾ ಟ್ರೈಲರ್ ಸೂಪರ್ ಆಗಿದೆ. ಅದರಲ್ಲಿ ಎರಡು ಮಾತಿಲ್ಲ. ಜಗ್ಗೇಶ್ ಅಭಿನಯದ 100ನೇ ಸಿನಿಮಾ ಮಠ ಕೂಡ ಡಬಲ್ ಮಿನಿಂಗ್ ಡೈಲಾಗ್ಗಳಿಂದ ತುಂಬಿತ್ತು. ಇದಾದ ಬಳಿಕ ಎದ್ದೇಳು ಮಂಜುನಾಥ ಕೂಡ ಈ ರೀತಿಯ ಸಿನಿಮಾನೇ. ಇದೀಗ ತೋತಾಪುರಿ ಸಿನಿಮಾ ಕೂಡ ಡಬಲ್ ಮಿನಿಂಗ್ ಡೈಲಾಗ್ಗಳಿಂದಳೇ ತುಂಬಿ ಹೋಗಿದೆ.
ಡೈಲಾಗ್ಸ್ ಸ್ವಲ್ಪ ಓವರ್ ಆಯ್ತ ಎಂದ ಫ್ಯಾನ್ಸ್!
ನವರಸ ನಾಯಕ ಜಗ್ಗೇಶ್ ಸಿನಿಮಾಗಳಲ್ಲಿ ತುಸು ಹೆಚ್ಚು ಡಬಲ್ ಮಿನಿಂಗ್ ಡೈಲಾಗ್ಗಳು ಇರುವುದು ಸಹಜ. ಇವರ ಜೊತೆ ವಿಜಯ್ ಪ್ರಸಾದ್ ಜೊತೆಯಾಗುತ್ತಿದ್ದಾರೆ ಅಂದರೆ ಕೇಳಬೇಕಾ? ತೋತಾಪುರಿ ಸಿನಿಮಾದಲ್ಲಿ ಸೀರಿಯಸ್ ವಿಚಾರ ಇರುವುದು ಪಕ್ಕಾ. ಆದರೆ, ಈ ಟ್ರೈಲರ್ನಲ್ಲೇ ಕೆಲ ಡೈಲಾಗ್ಗಳು ಫ್ಯಾಮಿಲಿ ಆಡಿಯನ್ಸ್ಗೆ ಮುಜುಗರ ಉಂಟು ಮಾಡುವಂತಿದೆ. ತುಂಬಾ ಡಬಲ್ ಮಿನಿಂಗ್ ಡೈಲಾಗ್ಗಳು ಈ ಟ್ರೈಲರ್ನಲ್ಲಿದೆ. ನೋಡುಗರಲ್ಲಿ ಒಂದು ರೀತಿಯ ಬೇರೆ ಭಾವನೆ ಬರಲಿದೆ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆ ಮಗು ಛತ್ರಿ ತಂದಿದ್ದು ಏಕೆ? ಭಾವನಾತ್ಮಕ ಕಥೆ ಹೇಳಿ ಧನ್ಯವಾದ ಅರ್ಪಿಸಿದ ಯಶ್
ಮನಸ್ಸಿಗೆ ಮುಟ್ಟುವ ಡೈಲಾಗ್ ಸಹ ಇವೆ!
ವಿಜಯ್ ಪ್ರಸಾದ್ ಟ್ರೇಡ್ ಮಾರ್ಕ್ ಆಗಿರುವ ದ್ವಂದ್ವಾರ್ಥದ ಸಂಭಾಷಣೆ ಈ ಸಿನಿಮಾದಲ್ಲೂ ಇದೆ. ಟ್ರೇಲರ್ನಲ್ಲಿಯೇ ಅವುಗಳ ಝಲಕ್ ಅನ್ನು ನಿರ್ದೇಶಕರು ನೀಡಿದ್ದಾರೆ. ಜೊತೆಗೆ ಕೆಲವು ಮನಸ್ಸಿಗೆ ತಾಗುವ ಸಾಲುಗಳು ಸಹ ಇವೆ. ಜಗ್ಗೇಶ್, ಡಾಲಿ ಧನಂಜಯ್, ಸುಮನಾ ರಂಗನಾಥ್, ಹೇಮಾ ದತ್, ಅದಿತಿ ಪ್ರಭುದೇವಾ, ದತ್ತಣ್ಣ ಪ್ರತಿಭಾವಂತ ಹಿರಿ-ಕಿರಿ ನಟ-ನಟಿಯರು ಪೈಪೋಟಿಗೆ ಬಿದ್ದಂತೆ ನಟಿಸಿರುವುದು ಸಹ ಟ್ರೇಲರ್ನಲ್ಲಿಯೇ ಗೊತ್ತಾಗುತ್ತಿದೆ.
ಇದನ್ನೂ ಓದಿ: 3 ದಿನ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೆ, ಹೆರಿಗೆ ನಂತರ ಕಾಜಲ್ ಭಾವನಾತ್ಮಕ ಪೋಸ್ಟ್..!
ರಿಲೀಸ್ಗೆ ರೆಡಿಯಾಗಿದೆ ಪೆಟ್ರೊಮ್ಯಾಕ್ಸ್!
'ತೋತಾಪುರಿ' ಸಿನಿಮಾದ ಜೊತೆಗೆ ವಿಜಯ ಪ್ರಸಾದ್ ನಿರ್ದೇಶನದ 'ಪೆಟ್ರೊಮ್ಯಾಕ್ಸ್' ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ. ಆ ಸಿನಿಮಾದಲ್ಲಿ ನೀನಾಸಂ ಸತೀಶ್, ಹರಿಪ್ರಿಯ ಇನ್ನಿತರರು ನಟಿಸಿದ್ದಾರೆ. ಬಳಿಕ 'ಪರಿಮಳ ಲಾಡ್ಜ್' ಸಿನಿಮಾ ಸಹ ಬಿಡುಗಡೆ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ