Jacqueline Fernandez: 200 ಕೋಟಿ ವಂಚನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಜಾಕಿ! ನಟಿ ಹೇಳಿದ್ದೇನು?

200 crore extortion case: 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಜಾಕ್ಲಿನ್ ಫರ್ನಾಂಡಿಸ್ ಈಗ ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಟಿ ಹೇಳಿದ್ದೇನು?

ಜಾಕ್ಲಿನ್ ಫರ್ನಾಂಡಿಸ್

ಜಾಕ್ಲಿನ್ ಫರ್ನಾಂಡಿಸ್

  • Share this:
ಬಾಲಿವುಡ್​ ನಟಿಗೆ ಕಂಟಕವಾಗಿರೋ 200 ಕೋಟಿ ರೂಪಾಯಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ವಂಚಕ ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ ಸುಲಿಗೆ ಪ್ರಕರಣದಲ್ಲಿ ಜಾಕ್ಲಿನ್ ಫರ್ನಾಂಡಿಸ್ (Jacqueline Fernandez) ಅವರನ್ನು ಆರೋಪಿಯನ್ನಾಗಿ ಜಾರಿ ನಿರ್ದೇಶನಾಲಯ (ED) ಹೆಸರಿಸಲಿದೆ ಎಂದು ವರದಿಗಳು ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ನಟಿ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಣ್ಣ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಇಡಿ ಸಜ್ಜಾಗಿದೆ. ಜಾಕ್ಲಿನ್ ಅವರನ್ನು ಆರೋಪಿಗಳಲ್ಲಿ ಒಬ್ಬರನ್ನಾಗಿ ಹೆಸರಿಸಲಾಗುತ್ತದೆ ಎನ್ನಲಾಗಿದೆ. ನಟಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಈ ಬಗ್ಗೆ ಹಂಚಿಕೊಂಡು ಎಲ್ಲವೂ ಸರಿಯಾಗುತ್ತದೆ ಎಂಬ ಪಾಸಿಟಿವ್ (Positive) ಸಂದೇಶ ಕೊಟ್ಟಿದ್ದಾರೆ.

ನಟಿ ತನ್ನ Instagram ಸ್ಟೋರಿಯಲ್ಲಿ ಶೆರಾಕ್ಸ್‌ವರ್ಲ್ಡ್ ಪುಟದಿಂದ ಪೋಸ್ಟ್ ಅನ್ನು ರೀ ಶೇರ್ ಮಾಡಿದ್ದಾರೆ. ನಾನು ಎಲ್ಲಾ ಒಳ್ಳೆಯ ವಿಷಯಗಳಿಗೆ ಅರ್ಹಳಾಗಿದ್ದೇನೆ, ನಾನು ಶಕ್ತಿಶಾಲಿ, ನಾನು ನನ್ನನ್ನು ಒಪ್ಪಿಕೊಳ್ಳುತ್ತೇನೆ. ಇದು ಎಲ್ಲಾ ಸರಿಯಾಗುತ್ತದೆ. ನಾನು ಬಲಶಾಲಿಯಾಗಿದ್ದೇನೆ, ನನ್ನ ಗುರಿ ಮತ್ತು ಕನಸುಗಳನ್ನು ಸಾಧಿಸುತ್ತೇನೆ. ನಾನು ಅದನ್ನು ಮಾಡಬಹುದು ಎಂದು ನಟಿ ಸೆಲ್ಫ್ ಮೋಟಿವೇಟಿಂಗ್ ಪೋಸ್ಟ್ ಹಾಕಿದ್ದಾರೆ. ಆದರೆ ಈ ವಂಚನೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ಹೇಳಿಲ್ಲ. ಈ ವಿಷಯದ ಬಗ್ಗೆ ದೀರ್ಘಕಾಲದವರೆಗೆ ಮೌನ ವಹಿಸಿದ್ದಾರೆ.

ಖಾಸಗಿ ಫೋಟೋಗಳೂ ಲೀಕ್

ನಟಿ ಮತ್ತು ಸುಕೇಶ್ ನಡುವಿನ ಸಂಬಂಧವನ್ನು ತನಿಖೆಗಳು ಬಹಿರಂಗಪಡಿಸಿದ ನಂತರ ಈ ವರ್ಷದ ಆರಂಭದಲ್ಲಿ ಇಡಿ ಜಾಕಿಯನ್ನು ವಿಚಾರಣೆ ಮಾಡಿತ್ತು. ಇವರಿಬ್ಬರ ಚಿತ್ರಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆಂಬ ವಿಚಾರ ವೈರಲ್ ಆಗಿತ್ತು.

ಇದನ್ನೂ ಓದಿ: Samantha Slapped A Fan: ಅಭಿಮಾನಿಗೆ ಸಿಟ್ಟಲ್ಲಿ ಹೊಡೆದೇ ಬಿಟ್ಟಿದ್ದರು ಸಮಂತಾ! ಕಾರಣ?

ಜಾಕ್ಲಿನ್ ಆರಂಭದಲ್ಲಿ ಇದನ್ನು ನಿರಾಕರಿಸಿದರು. ವರದಿಗಳ ಪ್ರಕಾರ, ಇಬ್ಬರೂ ನಿಜವಾಗಿಯೂ ಸಂಬಂಧದಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Bollywood actress
ಜಾಕ್ವೆಲಿನ್ ಫರ್ನಾಂಡಿಸ್-ಸುಕೇಶ್ ಚಂದ್ರಶೇಖರ್


ನಟಿಗೆ ಗಿಫ್ಟ್ ಕೊಡಲು ವಂಚನೆ ಹಣ ಬಳಕೆ

ಈ ಪ್ರಕರಣದಲ್ಲಿ ಜಾಕ್ಲಿನ್ ಅವರನ್ನು ಸಂಸ್ಥೆಯು ಹಲವು ಬಾರಿ ಪ್ರಶ್ನಿಸಿದೆ. ಕೊನೆಯದಾಗಿ ಜೂನ್‌ನಲ್ಲಿ ನಟಿ ವಿಚಾರಣೆಗೊಳಪಟ್ಟಿದ್ದರು. ಈ ಹಿಂದೆ, ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಉನ್ನತ ವ್ಯಕ್ತಿಗಳನ್ನು ವಂಚಿಸುವ ಮೂಲಕ ಚಂದ್ರಶೇಖರ್ ಜಾಕ್ಲಿನ್ ಉಡುಗೊರೆಗಳನ್ನು ಖರೀದಿಸಲು ಹಣವನ್ನು ಬಳಸಿದ್ದಾರೆ ಎಂದು ಇಡಿ ಆರೋಪಿಸಿತ್ತು.

ಇದನ್ನೂ ಓದಿ: ಬೆಕ್ಕು, ಕುದುರೆ ಕೊಟ್ಟು ಜಾಕ್ಲಿನ್ ಮನಸು ಕದ್ದ! 5 ಕೋಟಿಯ ಉಡುಗೊರೆಗಳು

ಸುಕೇಶ್ ಚಂದ್ರಶೇಖರ್ ಅವರು ಜಾಕ್ಲಿನ್ ಫರ್ನಾಂಡೀಸ್ ಅವರಿಗೆ ಸುಲಿಗೆ ಸೇರಿದಂತೆ ಅಪರಾಧ ಚಟುವಟಿಕೆಗಳಿಂದ ಗಳಿಸಿದ ಆದಾಯದಿಂದ ₹ 5.71 ಕೋಟಿ ಮೌಲ್ಯದ ವಿವಿಧ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಜಾಕ್ಲಿನ್​ ಫರ್ನಾಂಡಿಸ್​ ಈ ಹಿಂದೆ ನನಗೂ ಸುಕೇಶ್​ಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದರು. ಆದರೂ , ಇಡಿ ಇವರನ್ನು ಕರೆಸಿ ವಿಚಾರಣೆ ಕೂಡ ಮಾಡಿ ಕಳುಹಿಸಿತ್ತು. ಇಡಿ ಅನುಮತಿ ಇಲ್ಲದೇ ಬೇರೆ ದೇಶಕ್ಕೆ ಜಾಕ್ಲಿನ್​ ಫರ್ನಾಂಡಿಸ್​ ಪ್ರಯಾಣಿಸುವಂತಿರಲಿಲ್ಲ. ಇದೀಗ ಈ ಪ್ರಕರಣದ ಆರೋಪ ಪಟ್ಟಿಯನ್ನು ಇಡಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲ ಜಾಕ್ಲಿನ್​ ಹೆಸರು ಮತ್ತುಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಜಾಕ್ಲಿನ್​ ಹಾಗೂ ಸುಕೇಶ್​ ಇಬ್ಬರೂ ಸಂಬಂಧ ಹೊಂದಿದ್ದರು ಎಂಬುದು ಸ್ಪಷ್ಟಪಡಿಸುತ್ತಿದೆ. ಯಾವುದೇ ಸಮಯದಲ್ಲಿ ಜಾಕ್ಲಿನ್​ ಅವರನ್ನು ಇಡಿ ಅಧಿಕಾರಿಗಳು ಬಂಧಿಸಬಹುದು.

ಜಾಕ್ಲಿನ್​ ಆಸ್ತಿ ಜಪ್ತಿ ಮಾಡಿದ್ದ ಇಡಿ!

ಸುಕೇಶ್ ಚಂದ್ರಶೇಖರ್ (Conman Sukesh Chandrashekhar) ಅವರ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬಾಲಿವುಡ್ ನಟಿ ಜಾಕ್ಲಿನ್​​ ಫರ್ನಾಂಡಿಸ್ (Actor Jacqueline Fernandez) ಅವರ ಆಸ್ತಿಯನ್ನು ಜಪ್ತಿ ಮಾಡಿದೆ. ಮೂಲಗಳ ಪ್ರಕಾರ, 7.27 ಕೋಟಿ ಮೌಲ್ಯದ ಸ್ಥಿರ ಠೇವಣಿ ಮೌಲ್ಯದ ವಸ್ತುಗಳು ಮತ್ತು ಆಸ್ತಿಯನ್ನು ತನಿಖಾ ಸಂಸ್ಥೆ ಜಪ್ತಿ ಮಾಡಿತ್ತು.
Published by:Divya D
First published: