• Home
  • »
  • News
  • »
  • entertainment
  • »
  • Jacqueline Fernandez: 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ಲಿನ್, ರಕ್ಕಮ್ಮ ಟೆಂಪಲ್ ರನ್

Jacqueline Fernandez: 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ಲಿನ್, ರಕ್ಕಮ್ಮ ಟೆಂಪಲ್ ರನ್

ಜಾಕ್ಲಿನ್ ಫರ್ನಾಂಡಿಸ್

ಜಾಕ್ಲಿನ್ ಫರ್ನಾಂಡಿಸ್

200 ಕೋಟಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರ ಹೆಸರು ಕೇಳಿ ಬಂದ ನಂತರ ನಟಿ ಮೊದಲ ಬಾರಿ ಹೊರಗೆ ಕಾಣಿಸಿಕೊಂಡಿದ್ದಾರೆ. ಚಾರ್ಜ್​ಶೀಟ್​ನಲ್ಲಿ ನಟಿಯ ಹೆಸರು ಇರುವ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದ್ದು ರಕ್ಕಮ್ಮ ಟೆಂಪಲ್ ರನ್ ಶುರು ಮಾಡಿದ್ದಾರೆ.

  • Share this:

ಬಾಲಿವುಡ್ ನಟಿ, ವಿಕ್ರಾಂತ್ ರೋಣ ಬೆಡಗಿ ಜಾಕ್ಲಿನ್ ಫರ್ನಾಂಡಿಸ್ (Jacqueline Fernandez) ಅವರು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸುಕೇಶ್ ಚಂದ್ರಶೇಖರ್ (Sukesh Chandrashekhar) ಮುಖ್ಯ ಆರೋಪಿಯಾಗಿರುವ ಪ್ರಕರಣದಲ್ಲಿ ಇಡಿ ಚಾರ್ಜ್​ ಶೀಟ್​ನಲ್ಲಿ (ED Chargesheet) ನಟಿ ಜಾಕ್ಲಿನ್ ಫರ್ನಾಂಡಿಸ್ ಹೆಸರು ಇದೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟ ನಂತರ ಜಾಕ್ಲಿನ್ ಫರ್ನಾಂಡಿಸ್ ಮೊದಲ ಬಾರಿಗೆ ಸೋಮವಾರ ಮುಂಬೈನಲ್ಲಿ ಕಾಣಿಸಿಕೊಂಡರು. ನಟಿ ಜುಹುವಿನಲ್ಲಿರುವ (Juhu) ಮುಕ್ತೇಶ್ವರ ದೇವಸ್ಥಾನಕ್ಕೆ (Temple) ಭೇಟಿ ನೀಡಿದರು. ಕಳೆದ ವಾರ, ಸುಕೇಶ್ ಚಂದ್ರಶೇಖರ್ ಅವರಿಗೆ ಸಂಬಂಧಿಸಿದ ₹ 200 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಜಾಕ್ಲಿನ್ ಫರ್ನಾಂಡಿಸ್ ಹೆಸರಿತ್ತು. 


ಸೋಮವಾರ ಪಾಪರಾಜಿ ಖಾತೆಯಿಂದ ಹಂಚಿಕೊಂಡ ವೀಡಿಯೊದಲ್ಲಿ, ಜಾಕ್ಲಿನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಮಾಸ್ಕ್ ಹಾಕಿಕೊಂಡು ನೀಲಿ ಬಣ್ಣದ ಅನಾರ್ಕಲಿ ಸೂಟ್ ಧರಿಸಿದ್ದ ನಟಿ ನಂತರ ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಿಡಿದು ದೇವಸ್ಥಾನದಿಂದ ಹೊರ ನಡೆದಿದ್ದಾರೆ. ದೇವಸ್ಥಾನದ ಹೊರಗೆ ಮಾಧ್ಯಮದವರು ಆಕೆಗಾಗಿ ಕಾಯುತ್ತಿದ್ದರೂ ಸಹ, ನಟಿ ತಕ್ಷಣವೇ ನಿರ್ಗಮಿಸಿ ತನ್ನ ಕಾರಿನಲ್ಲಿ ಕುಳಿತರು.


ಯಾವುದೇ ಹೇಳಿಕೆ ಕೊಡದ ನಟಿ


ಜಾಕ್ಲಿನ್ ತಾವು ಎದುರಿಸುತ್ತಿರುವ ಕಾನೂನು ತೊಂದರೆಗಳ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಮಾತನಾಡಿಲ್ಲ. ಆದರೂ ಹೈ-ಪ್ರೊಫೈಲ್ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೆಲವೇ ಗಂಟೆಗಳ ನಂತರ ಅವರು ಸೋಷಿಯಲ್ ಮಿಡಿಯಾ ಪೋಸ್ಟ್ ಹಾಕಿ 'ಎಲ್ಲವೂ ಸರಿಯಾಗಲಿದೆ' ಎಂದು ಬರೆದಿರುವ ನೋಟ್ ಹಂಚಿಕೊಂಡಿದ್ದರು.
ಸುಕೇಶ್ ಜೊತೆ ಕ್ಲೋಸಪ್ ಫೊಟೋಗಳು


ಆಕೆಯ ಮತ್ತು ಸುಕೇಶ್ ನಡುವಿನ ಸಂಬಂಧ ಬಯಲಾದ ನಂತರ ಈ ವರ್ಷದ ಆರಂಭದಲ್ಲಿ ಇಡಿ ನಟಿಯನ್ನು ಪ್ರಶ್ನಿಸಿತ್ತು. ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆಂದು ಹೇಳಲಾಗಿತ್ತು. ಜಾಕ್ಲಿನ್ ಫರ್ನಾಂಡಿಸ್ ಆರಂಭದಲ್ಲಿ ಇದನ್ನು ನಿರಾಕರಿಸಿದರು. ಆದರೆ ವರದಿಗಳ ಪ್ರಕಾರ, ಇಬ್ಬರೂ ನಿಜವಾಗಿಯೂ ಸಂಬಂಧದಲ್ಲಿದ್ದಾರೆ ಎಂದು ಸಂಸ್ಥೆಯ ಮುಂದೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Jacqueline Fernandez: ವಂಚಕನಿಂದ 36 ಲಕ್ಷ ಮೌಲ್ಯದ ಬೆಕ್ಕು ಉಡುಗೊರೆ ಪಡೆದಿದ್ದ ಜಾಕ್ವೆಲಿನ್..!


ಈ ಪ್ರಕರಣದಲ್ಲಿ ಜಾಕ್ಲಿನ್ ಫರ್ನಾಂಡಿಸ್ ಅವರನ್ನು ಸಂಸ್ಥೆಯು ಹಲವು ಬಾರಿ ವಿಚಾರಣೆಗೆ ಕರೆದಿದೆ. ಕೊನೆಯದಾಗಿ ಜೂನ್‌ನಲ್ಲಿ ನಟಿ ಇಡಿ ವಿಚಾರಣೆ ಎದುರಿಸಿದ್ದರು. ಈ ಹಿಂದೆ ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಉನ್ನತ ವ್ಯಕ್ತಿಗಳನ್ನು ವಂಚಿಸುವ ಮೂಲಕ ಚಂದ್ರಶೇಖರ್ ಹಣ ವಸೂಲಿ ಮಾಡಿ ಜಾಕ್ಲಿನ್​ಗೆ ಉಡುಗೊರೆಗಳನ್ನು ಖರೀದಿಸಿ ಕೊಟ್ಟಿದ್ದಾರೆ.


ಸುಕೇಶ್ ಚಂದ್ರಶೇಖರ್ ಅವರು ಜಾಕ್ಲಿನ್ ಫರ್ನಾಂಡೀಸ್ ಅವರಿಗೆ ವಂಚನೆ ಆದಾಯದಿಂದ ₹ 5.71 ಕೋಟಿ ಮೌಲ್ಯದ ವಿವಿಧ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: Jacqueline Fernandez: ವಿವಾದಗಳು ಏನೇ ಇರಲಿ, ಜಾಕಿ ಸಖತ್ ಸುಂದರಿ ಅನ್ನೋದನ್ನ ಎಲ್ರೂ ಒಪ್ಪಿಕೊಳ್ತಾರೆ ಬಿಡಿ!


ಬೆಂಗಳೂರು ಮೂಲದ ಆರೋಪಿ


27 ವರ್ಷದ ಸುಕೇಶ್ ಚಂದ್ರಶೇಖರ್ ಬೆಂಗಳೂರು ಮೂಲದವನಾಗಿದ್ದು, ತನ್ನ 17ನೇ ವರ್ಷಕ್ಕೆ ನಕಲಿ ಸಹಿ ಕೇಸಿನಲ್ಲಿ ಪೊಲೀಸರ ಅತಿಥಿಯಾಗಿದ್ದ. ಆ ಬಳಿಕ ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಸೆಲೆಬ್ರೆಟಿಗಳಿಗೆ ನಂಬಿಕೆ ಹುಟ್ಟಿಸಿ ಕೋಟಿ ಕೋಟಿ ಹಣ ಲೂಟಿ ಮಾಡುವುದೇ ಈತನ ಕಾಯಕವಾಗಿತ್ತು. ಐಷಾರಾಮಿ ಜೀವನ ನಡೆಸಲು ಈತ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು