Jacqueline Fernandes: ಜಾಕಲಿನ್ ಕೆನ್ನೆಗೆ ಮುತ್ತುಕೊಟ್ಟ ಕರ್ನಾಟಕದ ಕಳ್ಳನ Photo Viral..!

Jacqueline Fernandes: ನಟಿ ತನ್ನೊಂದಿಗೆ ಡೇಟಿಂಗ್(Dating) ಮಾಡುತ್ತಿದ್ದಾಳೆ ಎಂದು ಆರೋಪಿಯ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಾಕಲಿನ್ ಅವರ ವಕ್ತಾರರು ಸಹ, ಅವರೊಂದಿಗೆ ಅಥವಾ ಅವರ ಪತ್ನಿ ನಟಿ ಲೀನಾ ಮರಿಯಾ ಪಾಲ್ ಜೊತೆಗಿನ ಸಂಬಂಧವಿರುವುದನ್ನು ನಿರಾಕರಿಸಿದ್ದರು.

ವೈರಲ್​ ಆದ ಜಾಕಲಿನ್​ ಕಿಸ್ಸಿಂಗ್​ ಫೋಟೋ

ವೈರಲ್​ ಆದ ಜಾಕಲಿನ್​ ಕಿಸ್ಸಿಂಗ್​ ಫೋಟೋ

  • Share this:

ಸುಕೇಶ್ ಚಂದ್ರಶೇಖರ್(Sukesh Chandrashekar) ಜೊತೆಗಿನ ಜಾಕಲಿನ್ ಫರ್ನಾಂಡಿಸ್(Jacqueline Fernandes) ಅವರ ಫೋಟೋ(Photo) ವಿವಾದಗಳನ್ನು ಹುಟ್ಟುಹಾಕಿದೆ. ಬಾಲಿವುಡ್ ನಟಿ ಕೆಲವು ವಾರಗಳ ನಂತರ ಸುಕೇಶ್ ಚಂದ್ರಶೇಖರ್ ಒಟ್ಟಿಗಿನ ಯಾವುದೇ ಸಂಬಂಧ(Relationship)ವನ್ನು ನಿರಾಕರಿಸಿದ್ದರು. ಇಂಡಿಯಾ ಟುಡೇ ಶೇರ್ ಮಾಡಿರುವ ಫೋಟೋದಲ್ಲಿ ಸುಕೇಶ್ ಜಾಕಲಿನ್ ಕೆನ್ನೆಗೆ ಮುತ್ತು(Kiss) ನೀಡಿದ್ದು, ಇಬ್ಬರೂ ಮಿರರ್ ಸೆಲ್ಫಿ(Mirror Selfie)ಗೆ ಫೋಸ್ ನೀಡಿದ್ದಾರೆ. ಪ್ರಕಟಣೆಯ ಪ್ರಕಾರ, ಈ ವರ್ಷದ ಏಪ್ರಿಲ್-ಜೂನ್ ನಡುವೆ ಅವರು ಮಧ್ಯಂತರ ಜಾಮೀನಿನ ಮೇಲೆ ಹೊರಬಂದಾಗ ಫೋಟೋವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಫೋಟೋದಲ್ಲಿ ಕಾಣುತ್ತಿರುವ ಫೋನ್‍ನಲ್ಲಿಯೇ ಅವರು ವಂಚನೆ ನಡೆಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಅಕ್ಟೋಬರ್‌ನಲ್ಲಿ, ಸುಕೇಶ್ ಒಳಗೊಂಡ ಮನಿ ಲಾಂಡರಿಂಗ್(Money Laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್(Summons) ಪಡೆದ ನಂತರ ಜಾಕಲಿನ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ನಟಿ ತನ್ನೊಂದಿಗೆ ಡೇಟಿಂಗ್(Dating) ಮಾಡುತ್ತಿದ್ದಾಳೆ ಎಂದು ಆರೋಪಿಯ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಾಕಲಿನ್ ಅವರ ವಕ್ತಾರರು ಸಹ, ಅವರೊಂದಿಗೆ ಅಥವಾ ಅವರ ಪತ್ನಿ ನಟಿ ಲೀನಾ ಮರಿಯಾ ಪಾಲ್ ಜೊತೆಗಿನ ಸಂಬಂಧವಿರುವುದನ್ನು ನಿರಾಕರಿಸಿದ್ದರು.


ಚಂದ್ರಶೇಖರ್​ ಜೊತೆ ಜಾಕಲಿನ್​ ಡೇಟಿಂಗ್​?

ಜಾಕ್ವೆಲಿನ್ ಅವರ ವಕ್ತಾರರು ಹೇಳಿಕೆಯಲ್ಲಿ, “ಜಾಕಲಿನ್​ ಫರ್ನಾಂಡಿಸ್ ಅವರನ್ನು ಸಾಕ್ಷಿ ಹೇಳಲು ಜಾರಿನಿರ್ದೇಶನಾಲಯ ಕರೆ ಮಾಡುತ್ತಿದೆ. ಅವರು ತನ್ನ ಹೇಳಿಕೆಗಳನ್ನು ಸಮರ್ಪಕವಾಗಿ ದಾಖಲಿಸಿದ್ದಾರೆ ಮತ್ತು ಭವಿಷ್ಯದಲ್ಲಿ ತನಿಖೆಯಲ್ಲಿ ಏಜೆನ್ಸಿಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ದಂಪತಿಗಳೊಂದಿಗಿನ ಸಂಬಂಧದ ಬಗ್ಗೆ ಮಾಡಿದ ಆರೋಪದ ಹೇಳಿಕೆಗಳನ್ನು ಜಾಕಲಿನ್ ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಚಂದ್ರಶೇಖರ್ ಪರ ವಕೀಲ ಅನಂತ್ ಮಲಿಕ್ ಅವರು, "ಜಾಕಲಿನ್ ಮತ್ತು ಸುಕೇಶ್ ಡೇಟಿಂಗ್ ಮಾಡುತ್ತಿದ್ದರು,ಎಂದು ಹೇಳಿದ್ದರು.ಬಾಲಾಜಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಚಂದ್ರಶೇಖರ್ ಸಾಕಷ್ಟು ಮಂದಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದರು.


ಇದನ್ನು ಓದಿ : ಮೇಕಪ್​ ಇಲ್ಲದಿದ್ರೂ ಎಷ್ಟು ಚೆಂದ ಅನುಷ್ಕಾ ಶರ್ಮಾ: ಈಕೆಯ ಸೌಂದರ್ಯಕ್ಕೆ ಸೂರ್ಯನೂ ಶರಣಾದ..!

75 ಕೋಟಿ ವಂಚಿಸಿರುವ ಜಾಕಲಿನ್​ ಜೊತೆ ಇದ್ದ ವ್ಯಕ್ತಿ!

ರಾಜಕಾರಣಿಯೊಬ್ಬರ ಸಂಬಂಧಿ ಎಂದು ಬಿಂಬಿಸಿಕೊಂಡು 100ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿ 75 ಕೋಟಿ ರೂಪಾಯಿ ವಂಚಿಸಿದ್ದಾರೆ. ಏಷ್ಯಾನೆಟ್ ನ್ಯೂಸ್ ಪ್ರಕಾರ, ಚಂದ್ರಶೇಖರ್ ಮತ್ತು ಗೆಳತಿ ಲೀನಾ ಮರಿಯಾ ಪಾಲ್ ಅವರನ್ನು 2011 ರಲ್ಲಿ ಚೆನ್ನೈ ಮೂಲದ ಕೆನರಾ ಬ್ಯಾಂಕ್ ವಂಚಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಬಳಿಕ ಇಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೇ ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ ಆದರೆ ಚಂದ್ರಶೇಖರ್ ತಮ್ಮ ವಂಚನೆಯ ದಾರಿಯಲ್ಲೇ ಮುಂದುವರೆದಿದ್ದರು.

ಇದನ್ನು ಓದಿ : ಪಡ್ಡೆ ಹೈಕ್ಳ ನಿದ್ದೆಗೆಡಿಸಿದ ಬಾಲಿವುಡ್​ ಬಿಕಿನಿ ಬ್ಯೂಟಿ ದಿಶಾ ಪಾಟ್ನಿ!

ಲಂಚ ಪ್ರಕರಣದಲ್ಲಿ ಅಂದರ್​ ಆಗಿದ್ದ ಚಂದ್ರಶೇಖರ್​

ಚುನಾವಣಾ ಆಯೋಗದ (ಇಸಿ) ಲಂಚ ಪ್ರಕರಣದಲ್ಲಿ ಚಂದ್ರಶೇಖರ್ ಅವರನ್ನು ಏಪ್ರಿಲ್ 2017 ರಲ್ಲಿ ಹೋಟೆಲ್‍ನಿಂದ ಬಂಧಿಸಿದ ನಂತರ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಎಐಎಡಿಎಂಕೆ "ಎರಡು ಎಲೆ" ಚುನಾವಣಾ ಚಿಹ್ನೆಯ ವಿವಾದಕ್ಕೆ ಸಂಬಂಧಿಸಿದಂತೆ ಇಸಿ ಅಧಿಕಾರಿಗಳಿಗೆ ಲಂಚ ನೀಡಲು ಅವರು ಎಐಎಡಿಎಂಕೆ (ಅಮ್ಮ) ನಾಯಕ ಟಿಟಿವಿ ದಿನಕರನ್ ಅವರಿಂದ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕಲಿನ್ಅವರು ಕೊನೆಯದಾಗಿ ಅಕ್ಟೋಬರ್ 20ರಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.


Published by:Vasudeva M
First published: