Jacqueline Fernandez: ಜನ್ಮದಿನದಂದು ದೇವಿ ಆಶೀರ್ವಾದ ಪಡೆದ ಜಾಕ್ವೆಲಿನ್; ಬಾಲಿವುಡ್ ಬೆಡಗಿ ನೋಡಲು ಅಭಿಮಾನಿಗಳ ದಂಡು

ಈ ಬಾರಿ  ಜಾಕ್ವೆಲಿನ್ ಫರ್ನಾಂಡಿಸ್  ಅಸ್ಸಾಂನಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಾಕ್ವೆಲಿನ್ ತನ್ನ ಜನ್ಮದಿನದಂದು ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಕ್ಯಾ ದೇವಿ ದೇಗುಲಕ್ಕೆ ಭೇಟಿ ನೀಡಿದ್ದರು.

ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಫರ್ನಾಂಡಿಸ್

  • Share this:
ಬಾಲಿವುಡ್‌ನ ಬ್ಯುಟಿಫುಲ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez), ತನ್ನ ಸೌಂದರ್ಯ ಹಾಗೂ ನಟನೆಯಿಂದ ಜನ ಮೆಚ್ಚುಗೆ ಗಳಿಸಿದ್ದಾರೆ. ಅಷ್ಟೇ ಅಲ್ಲದೇ ಈಕೆ ತನ್ನ ಹಾಟ್ ಲುಕ್ ನಿಂದಲೇ ಪಡ್ಡೆ ಹುಡುಗರ ಮನಗೆದ್ದಿದ್ದಾಳೆ. ಕಡಿಮೆ ಅವಧಿಯಲ್ಲಿ ಬಾಲಿವುಡ್‌ನಲ್ಲಿ (Bollywood) ಭಾರೀ ಹೆಸರು ಮಾಡಿದ್ದಾರೆ. ಮೂಲತಃ ಶ್ರೀಲಂಕಾದವರಾದ (Sri Lanka) ಜಾಕ್ವೆಲಿನ್ ನಿನ್ನೆ ಆಗಸ್ಟ್​ 11 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ್ರು. ಸಾಮಾನ್ಯವಾಗಿ ಬಾಲಿವುಡ್ ನಟಿಯರು ಹುಟ್ಟುಹಬ್ಬವನ್ನು (Birthday) ಅದ್ಧೂರಿಯಾಗಿ ಆಚರಿಸಿಕೊಳ್ತಾರೆ. ದೊಡ್ಡ ದೊಡ್ಡ ನಟರೊಂದಿಗೆ ಪಾರ್ಟಿ ಮಾಡಿ ಎಂಜಾಯ್​ ಮಾಡ್ತಾರೆ. ಆದರೆ ಜಾಕ್ವೆಲಿನ್ ನಿನ್ನೆ ತನ್ನ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

ಕಾಮಾಕ್ಯಾ ದೇವಿ ದೇಗುಲಕ್ಕೆ ಭೇಟಿ

ಈ ಬಾರಿ  ಜಾಕ್ವೆಲಿನ್ ಫರ್ನಾಂಡೀಸ್ ಅಸ್ಸಾಂನಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಾಕ್ವೆಲಿನ್ ತನ್ನ ಜನ್ಮದಿನದಂದು ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಕ್ಯಾ ದೇವಿ ದೇಗುಲಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅವರು ಮೊದಲ ಬಾರಿಗೆ ಈ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದೇನೆ. ಈ ದೇವಾಲಯಕ್ಕೆ ಭೇಟಿ ನೀಡಿದ್ದು ನನಗೆ ಸಂತಸವಾಗಿದೆ. ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದ್ರು.ಜಾಕ್ವೆಲಿನ್ ಫರ್ನಾಂಡೀಸ್ ನೋಡಲು ಅಭಿಮಾನಿಗಳ ದಂಡು

ಜಾಕ್ವೆಲಿನ್ ಫರ್ನಾಂಡೀಸ್ ತನ್ನ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿರುವುದನ್ನು ನೋಡಿದ ಜಾಕ್ವೆಲಿನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ನೋಡಲು ಕಾಮಾಕ್ಯಾದೇವಿ ದೇವಸ್ಥಾನಕ್ಕೆ ಅಭಿಮಾನಿಗಳು ಜಮಾಯಿಸಿದ್ರು. ಇದೇ ವೇಳೆ ನೆಚ್ಚಿನ ನಟಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ವಿಭಿನ್ನವಾಗಿ ಬರ್ತಡೇ ಆಚರಣೆ

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಜನ್ಮದಿನದಂದು ಅವರು ಮತ್ತೊಂದು ವಿಶೇಷವಾದ ಕೆಲಸವನ್ನು ಮಾಡಿದ್ದಾರೆ. ಆಕೆ ಈ ವರ್ಷ ತನ್ನ ಹುಟ್ಟುಹಬ್ಬವನ್ನು ಅತ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ದನದ ಕೊಟ್ಟಿಗೆಯಲ್ಲಿ ಹಸುಗಳ ಜೊತೆ ಕಾಲಕಳೆದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡಿಗರ ಮನಗೆದ್ದ 'ರಾ ರಾ ರಕ್ಕಮ್ಮ'

'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿರೋದು ಎಲ್ಲರಿಗೂ ಗೊತ್ತೇ ಇದೆ. 'ರಾ ರಾ ರಕ್ಕಮ್ಮ' ಎಂಬ ಕನ್ನಡದ ಹಾಡಿನಲ್ಲಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಜಾಕ್ವೆಲಿನ್ ಕುಣಿತಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಮಾತನಾಡುವ ಪ್ರಯತ್ನವನ್ನು ಈ ಹಿಂದೆಯೇ ಅವರು ಮಾಡಿದ್ದರು.

ಇದನ್ನೂ ಓದಿ: Jacqueline Fernandez: ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ರಕ್ಕಮ್ಮ, ಶ್ರೀಲಂಕಾದ ಸುಂದರಿ ನೋಟಕ್ಕೆ ಸುಸ್ತಾದ ಫ್ಯಾನ್ಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’. ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28 ರಂದು ಬಿಡುಗಡೆಯಾಗಿದೆ. ಈ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಆ ವೇಳೆ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಭಾಗಿಯಾಗಿದ್ದರು.

ಕೋಟ್ಯಂತರ ರೂಪಾಯಿ ಸಂಭಾವನೆ

ಜಾಕ್ವೆಲಿನ್ ಫರ್ನಾಂಡೀಸ್ ಅವರ ಈ ಮನೆಯ ಬೆಲೆ 7 ಕೋಟಿ ಮತ್ತು ಸಮುದ್ರ ತಟದಲ್ಲಿರುವ ಈ ಬಂಗಲೆ ನಿಜವಾಗಿಯೂ ಸುಂದರವಾಗಿದೆ. ವಿಶೇಷವೆಂದರೆ ನಿಕ್ ಜೋನಾಸ್ ಅವರನ್ನು ಮದುವೆಯಾಗುವ ಮುನ್ನ ಪ್ರಿಯಾಂಕಾ ಚೋಪ್ರಾ ಇದೇ ಮನೆಯಲ್ಲಿ ವಾಸವಾಗಿದ್ದರು. ಈ ಮನೆ ಮುಂಬೈನ ಜುಹುದಲ್ಲಿದೆ, ಇದು ಮುಂಬೈನ ಐಷಾರಾಮಿ ಪ್ರದೇಶವಾಗಿದೆ.

ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರವೊಂದಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಅವರು ಜಾಹೀರಾತುಗಳ ಮೂಲಕ ಸಾಕಷ್ಟು ಗಳಿಸುತ್ತಾರೆ. ಇದಲ್ಲದೇ ಜಾಕ್ವೆಲಿನ್ 2 ರೆಸ್ಟೋರೆಂಟ್ ಗಳ ಒಡತಿಯೂ ಹೌದು. ಅವರು ಮುಂಬೈನಲ್ಲಿ ಒಂದು ರೆಸ್ಟೋರೆಂಟ್ ಅನ್ನು ಹೊಂದಿದ್ದಾರೆ, ಆದರೆ ಮಾಧ್ಯಮ ವರದಿಗಳ ಪ್ರಕಾರ, ಅವರ ಎರಡನೇ ರೆಸ್ಟೋರೆಂಟ್ ಶ್ರೀಲಂಕಾದಲ್ಲಿದೆ.
Published by:Pavana HS
First published: