ರಾಜಕಾರಣಿಯ(Politician) ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ(Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು(Bengaluru) ಮೂಲದ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekar) ಜತೆ ಶ್ರೀಲಂಕಾ(Sri Lanka) ಮೂಲದ ಬಾಲಿವುಡ್(Bollywood) ನಟಿ ಜಾಕಲಿನ್ ಫರ್ನಾಂಡಿಸ್ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲಾಗಿತ್ತು. ನಿನ್ನೆಯಷ್ಟೆ ಇವರ ಮತ್ತೊಂದು ಫೋಟೋ ಸಖತ್ ವೈರಲ್ ಆಗಿತ್ತು. ಸುಕೇಶ್ ಚಂದ್ರಶೇಖರ್ ಜಾಕಲಿನ್ ಫರ್ನಾಂಡಿಸ್ ಮೇಲೆ ಮಲಗಿ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.ಹಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಸುಕೇಶ್ ಚಂದ್ರಶೇಖರ್, ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ. ಅಲ್ಲದೇ ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ. ಇದೀಗ ಈ ಬಗ್ಗೆ ಜಾಕಲಿನ್ ಫರ್ನಾಂಡಿಸ್ ಮನವಿ(Request)ಯೊಂದನ್ನು ಮಾಡಿಕೊಂಡಿದ್ದಾರೆ. ಇಷ್ಟು ದಿನ ಏನೇ ಗಾಸಿಪ್ ಬಂದರೂ ಸುಮ್ಮನೆ ಇದ್ದ ಜಾಕಲಿನ್, ಇದೀಗ ಈ ಫೋಟೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ(social Media)ದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಗಿದ್ರೆ ನಟಿ ಈ ಬಗ್ಗೆ ಹೇಳಿದ್ದೇನು ಎಂಬುದನ್ನು ನೀವೇ ನೋಡಿ..
ಫೋಟೋ ಪೋಸ್ಟ್ ಮಾಡ್ಬೇಡಿ ಎಂದ ಜಾಕಲಿನ್!
‘ಈ ದೇಶ ಮತ್ತು ಇಲ್ಲಿನ ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಇಲ್ಲಿ ನನಗೆ ಹಲವಾರು ಸ್ನೇಹಿತರು ಇದ್ದಾರೆ. ಅದರಲ್ಲಿ ಮಾಧ್ಯಮದ ಸ್ನೇಹಿತರೂ ಸೇರಿದ್ದಾರೆ. ಅವರಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಪ್ರಸ್ತುತ ಕಷ್ಟದ ದಿನಗಳನ್ನು ನೋಡುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಇದು ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳನ್ನು ಪ್ರಸಾರ ಮಾಡದಂತೆ ನಾನು ಕೋರುತ್ತಿದ್ದೇನೆ. ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಮಾಡುವುದಿಲ್ಲ, ಅದೇ ರೀತಿ ನನಗೂ ಈ ರೀತಿ ಮಾಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ಆಶಿಸುತ್ತೇನೆ. ಧನ್ಯವಾದಗಳು’ ಎಂದು ಜಾಕಲಿನ್ ಬರೆದುಕೊಂಡಿದ್ದಾರೆ
ಇದನ್ನು ಓದಿ : ಸೋಶಿಯಲ್ ಮೀಡಿಯಾದಲ್ಲಿ ಜನ ಅತೀ ಹೆಚ್ಚು ಫಾಲೊ ಮಾಡೋ ತಾರೆಯರು ಇವ್ರೇ, ನೀವೂ ಫಾಲೋ ಮಾಡ್ತಿದೀರಾ?
‘ಕಿಸ್ಸಿಂಗ್ ಫೋಟೋ ಪ್ರಸಾರ ಮಾಡದಂತೆ ಮನವಿ’
ತಮ್ಮ ವೈಯಕ್ತಿಕ ಫೋಟೊಗಳನ್ನು ಪ್ರಸಾರ ಮಾಡದಂತೆ ಜಾಕ್ವೆಲಿನ್ ಕೇಳಿಕೊಂಡಿದ್ದಾರೆ. ಈ ಬಾರಿ ಹೊರ ಬಂದಿರುವ ಫೋಟೊ ಜಾಕಲಿನ್ ಮತ್ತು ಸುಕೇಶ್ ಎಷ್ಟು ಆಪ್ತವಾಗಿ ಇದ್ದರು ಎನ್ನುವ ಬಗ್ಗೆ ಹೇಳುತ್ತಿದೆ.ಈ ಫೋಟೋದಲ್ಲಿ ಜಾಕಲಿನ್ ಫರ್ನಾಂಡಿಸ್ ಕತ್ತಿನ ಮೇಲೆ ಕಚ್ಚಿರುವ ಗುರುತು ಕೂಡ ಇದೆ. ಇದು ಲವ್ ಬೈಟ್ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ: ಅಯ್ಯೋ ಇದೇನ್ ಹಿಂಗಿದೆ.. ರಸ್ಮಿಕಾ ಮಾಡೋಣ ಅಂತೆ.. ಒಂದ್ ಹೆಸ್ರು ಬರೆಯೋಕೂ ಬರಲ್ವಾ?
ಜಾಕಲಿನ್ ಜೊತೆ ಅಫೇರ್ ಇದ್ದಿದ್ದು ನಿಜ ಎಂದ ಸುಕೇಶ್!
ಇನ್ನೂ ಈ ಹಿಂದೆಯೆ ಜಾಕಲಿನ್ ಜೊತೆ ಸಂಬಂಧ ಇರುವುದಾಗಿ ಸುಕೇಶ್ ಹೇಳಿದ್ದ. ಈ ಬಗ್ಗೆ ಜಾಕಲಿನ್ ಮಾತ್ರ ತುಟಿ ಬಿಚ್ಚಿರಲಿಲ್ಲ. ಆತ ನನಗೆ ಪರಿಚಯ ಅಷ್ಟೆ. ನಮ್ಮ ನಡುವೆ ಯಾವುದೇ ಅಫೇರ್ ಇರಲಿಲ್ಲ. ಇದರಿಂದ ಆತ ವಂಚಕ ಎಂದು ನನಗೆ ಗೊತ್ತಾಗಿದೆ. ಆತನ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಮತ್ತೆ ಸುಕೇಶ್ ಆಕೆ ನನ್ನ ಜೊತೆ ಸಂಬಂಧ ಹೊಂದಿದ್ದಳು. ಈಗ ಸುಳ್ಳು ಹೇಳುತ್ತಿದ್ದಾಳೆ. ನಾನು ಕಳ್ಳ ಅಲ್ಲ. ನನ್ನನ್ನು ನಂಬಿ ಎಂದು ಹೇಳಿದ್ದಾನಂತೆ. ಇತ್ತೀಚೆಗೆ ಜಾಕಲಿನ್ಗೆ ಈತ ಕೊಟ್ಟಿದ್ದ ಗಿಫ್ಟ್ ಬಗ್ಗೆಯೂ ಸುಕೇಶ್ ಚಂದ್ರಶೇಖರ್ ಮಾಹಿತಿ ನೀಡಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ