Jacqueline Fernandez: ವಂಚಕನಿಂದ 36 ಲಕ್ಷ ಮೌಲ್ಯದ ಬೆಕ್ಕು ಉಡುಗೊರೆ ಪಡೆದಿದ್ದ ಜಾಕ್ವೆಲಿನ್..!

Sukesh Chandra shekar: ಅಚ್ಚರಿ ಎಂದರೆ ಜಾಕ್ವೆಲಿನ್​ ಫರ್ನಾಂಡಿಸ್ ಅವರಿಗೆ 52 ಲಕ್ಷ ರೂ. ಮೌಲ್ಯದ ಕುದುರೆ ಮತ್ತು 36 ಲಕ್ಷ ರೂ. ಬೆಲೆಯ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸುಕೇಶ್​ ಮಾಹಿತಿ ನೀಡಿದ್ದಾರೆ

Sukesh Chandra shekar: ಅಚ್ಚರಿ ಎಂದರೆ ಜಾಕ್ವೆಲಿನ್​ ಫರ್ನಾಂಡಿಸ್ ಅವರಿಗೆ 52 ಲಕ್ಷ ರೂ. ಮೌಲ್ಯದ ಕುದುರೆ ಮತ್ತು 36 ಲಕ್ಷ ರೂ. ಬೆಲೆಯ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸುಕೇಶ್​ ಮಾಹಿತಿ ನೀಡಿದ್ದಾರೆ

Sukesh Chandra shekar: ಅಚ್ಚರಿ ಎಂದರೆ ಜಾಕ್ವೆಲಿನ್​ ಫರ್ನಾಂಡಿಸ್ ಅವರಿಗೆ 52 ಲಕ್ಷ ರೂ. ಮೌಲ್ಯದ ಕುದುರೆ ಮತ್ತು 36 ಲಕ್ಷ ರೂ. ಬೆಲೆಯ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸುಕೇಶ್​ ಮಾಹಿತಿ ನೀಡಿದ್ದಾರೆ

  • Share this:
    ರಾಜಕಾರಣಿಯ(Politician) ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ(Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು(Bengaluru) ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekar) ಜತೆ ಶ್ರೀಲಂಕಾ(Sri Lanka) ಮೂಲದ ಬಾಲಿವುಡ್‌(Bollywood) ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲು ಮಾಡಿತ್ತು.. ಆ ಫೋಟೋದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್(Jacqueline Fernandez) ಕನ್ನಡಿ ಮುಂದೆ ವಂಚಕ ಸುಕೇಶ್ ಚಂದ್ರಶೇಖರ್ ಕೆನ್ನೆಗೆ ಕಿಸ್(Kiss) ಮಾಡಿದ್ದಾಳೆ. ಅಲ್ಲದೆ ಆ ಫೋಟೋವನ್ನ ಕಳ್ಳ ಸುಕೇಶ್ ಮಿರರ್ ಮುಂದೆ ತನ್ನದೇ ಮೊಬೈಲ್‌ನಲ್ಲಿ ಸೆಲ್ಫಿ ಹಿಡಿದಿದ್ದಾನೆ. ಜಾಕ್ವೆಲಿನ್ ಹಾಗೂ ಸುಕೇಶ್ ಇಬ್ಬರ ಈ ಫೋಟೊ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಮತ್ತೆ ಚರ್ಚೆಯ ವಿಷಯವಾಗಿದ್ದು ಈಗ ಹಳೆ ವಿಚಾರ..ಹೊಸ ವಿಚಾರ ಏನಪ್ಪಾ ಅಂದ್ರೆ ಸುಕೇಶ್ ಜಾಕ್ವೆಲಿನ್ ಗೆ ಉಡುಗೊರೆಯಾಗಿ ನೀಡಿರುವ ಬೆಕ್ಕಿನದ್ದು..

    ಜಾಕ್ವೆಲಿನ್ ಗೆ 36 ಲಕ್ಷ ಬೆಲೆಯ ಬೆಕ್ಕು ಉಡುಗೊರೆ ನೀಡಿದ್ದ ಸುಕೇಶ್

    ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಂಚಕ ಸುಕೇಶ್ ವಿಚಾರಣೆ ಮಾಡುತ್ತಿದ್ದು ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಈ ವಿಚಾರಣೆ ವೇಳೆ ಸುಕೇಶ್​ ಚಂದ್ರಶೇಖರ್​ ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಅಚ್ಚರಿ ಎಂದರೆ ಜಾಕ್ವೆಲಿನ್​ ಫರ್ನಾಂಡಿಸ್ ಅವರಿಗೆ 52 ಲಕ್ಷ ರೂ. ಮೌಲ್ಯದ ಕುದುರೆ ಮತ್ತು 36 ಲಕ್ಷ ರೂ. ಬೆಲೆಯ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸುಕೇಶ್​ ಮಾಹಿತಿ ನೀಡಿದ್ದಾರೆ

    ಇದನ್ನೂ ಓದಿ: ಈ ಸಲ ಮುತ್ತು ಕೊಟ್ಟಿರೋದು ನಟಿ ಜಾಕಲಿನ್ ! ಏನು ಇವರ ಕತೆ?

    ಸುಕೇಶ್ ನಿಂದ ದುಬಾರಿ ಉಡುಗೊರೆ ಪಡೆದಿದ್ದ ಜಾಕ್ವೆಲಿನ್

    2021ರ ಜನವರಿಯಲ್ಲಿ ಸುಕೇಶ್​ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಅವರು ನಿರಂತರ ಸಂಪರ್ಕದಲ್ಲಿ ಇದ್ದರು. ಅಲ್ಲಿಂದೀಚೆಗೆ ಅಂದಾಜು 10 ಕೋಟಿ ರೂ. ಬೆಲೆ ಬಾಳುವ ಉಡುಗೊರೆಗಳನ್ನು ಸುಕೇಶ್​ನಿಂದ ಜಾಕ್ವೆಲಿನ್​ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಚಿನ್ನಾಭರಣಗಳು, ಡೈಮಂಡ್​ ಒಡವೆಗಳು, ತಲಾ 9 ಲಕ್ಷ ರೂ. ಬೆಲೆಯ 4 ಪರ್ಷಿಯನ್​ ಬೆಕ್ಕುಗಳು, 52 ಲಕ್ಷ ರೂ. ಬೆಲೆ ಕುದುರೆಯನ್ನು ಜಾಕ್ವೆಲಿನ್​ಗೆ ಸುಕೇಶ್​ ಗಿಫ್ಟ್​ ಆಗಿ ನೀಡಿದ್ದರು ಎಂಬುದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

    ವಂಚಕನ ಮೇಲಿದೆ 15ಕ್ಕೂ ಹೆಚ್ಚು FIR

    ಸುಕೇಶ್ ಚಂದ್ರಶೇಖರ್ ಸದ್ಯ 200 ಕೋಟಿ ವಂಚನೆ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. 27 ವರ್ಷದ ಸುಕೇಶ್ ಚಂದ್ರಶೇಖರ್ ಬೆಂಗಳೂರು ಮೂಲದವನಾಗಿದ್ದು, ತನ್ನ 17ನೇ ವರ್ಷಕ್ಕೆ ನಕಲಿ ಸಹಿ ಕೇಸಿನಲ್ಲಿ ಪೊಲೀಸರ ಅತಿಥಿಯಾಗಿದ್ದ.

    ಆ ಬಳಿಕ ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಸೆಲೆಬ್ರೆಟಿಗಳಿಗೆ ನಂಬಿಕೆ ಹುಟ್ಟಿಸಿ ಕೋಟಿ ಕೋಟಿ ಹಣ ಲೂಟಿ ಮಾಡುವುದೇ ಈತನ ಕಾಯಕವಾಗಿತ್ತು. ಐಷಾರಾಮಿ ಜೀವನ ನಡೆಸಲು ಈತ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದ. ಇನ್ನು ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಿಂದ ಏಪ್ರಿಲ್-ಜೂನ್‍ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದ. ಈ ವೇಳೆ ಜಾಕ್ವಲಿನ್‌ ಅನ್ನು ಚೆನ್ನೈಗೆ ಕರೆಸಿಕೊಂಡಿದ್ದ ಎನ್ನಲಾಗಿದೆ. ಆ ವೇಳೆನೇ ಈ ಮುತ್ತಿನ ಪ್ರಕರಣ ನಡೆದಿದೆ ಎನ್ನಲಾಗಿದೆ.

    ಇದನ್ನೂ ಓದಿ: ವಿವಾದಗಳು ಏನೇ ಇರಲಿ, ಜಾಕಿ ಸಖತ್ ಸುಂದರಿ ಅನ್ನೋದನ್ನ ಎಲ್ರೂ ಒಪ್ಪಿಕೊಳ್ತಾರೆ ಬಿಡಿ!

    ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾಕ್ವಲಿನ್

    ಇನ್ನು ಕಿಚ್ಚ ಸುದೀಪ್​ ನಟನೆಯ, ಅನೂಪ್​ ಭಂಡಾರಿ ನಿರ್ದೇಶನದ ‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಒಂದು ವಿಶೇಷ ಪಾತ್ರ ಮಾಡಿದ್ದಾರೆ. ಗಡಂಗ್​ ರಕ್ಕಮ್ಮ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ
    Published by:ranjumbkgowda1 ranjumbkgowda1
    First published: