Jacqueline Fernandez: ಅಯ್ಯೋ.. ಇದ್ದಕಿದ್ದ ಹಾಗೇ ಏನಾಯ್ತು ಈ ನಟಿಗೆ? ನೆಮ್ಮದಿಗಾಗಿ ಜಾಕಲಿನ್​ ಏನ್​ ಮಾಡ್ತಿದ್ದಾರೆ ನೋಡಿ..!

ಜಾಕಲಿನ್ ಈಗ ಮನಸ್ಸಿಗೆ ನೆಮ್ಮದಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅದಕ್ಕಾಗಿ ಅವರು ಅಧ್ಯಾತ್ಮದ ಹಾದಿ ಹಿಡಿದ್ದಾರೆ ಎನ್ನುತ್ತಿವೆ ಮೂಲಗಳು. ಶ್ರೀಲಂಕಾ ಮೂಲದ ಈ ಚೆಲುವೆಗೆ ಸುಕೇಶ್​ ಚಂದ್ರಶೇಖರ್​ ಜೊತೆಗಿನ ಸಹವಾಸವೇ ಮುಳುವಾಗಿದೆ.

ಜಾಕಲಿನ್​ ಫರ್ನಾಂಡಿಸ್​

ಜಾಕಲಿನ್​ ಫರ್ನಾಂಡಿಸ್​

  • Share this:
ರಾಜಕಾರಣಿಯ (Politician) ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ (Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು (Bengaluru) ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekar) ಜತೆ ಶ್ರೀಲಂಕಾ (Sri Lanka) ಮೂಲದ ಬಾಲಿವುಡ್‌ (Bollywood) ನಟಿ ಜಾಕಲಿನ್​ ಫರ್ನಾಂಡಿಸ್‌ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲಾಗಿತ್ತು. ಇತ್ತೀಚೆಗೆ ಇವರ ಮತ್ತೊಂದು ಫೋಟೋ ಸಖತ್​ ವೈರಲ್ ಆಗಿತ್ತು.  ಸುಕೇಶ್​ ಚಂದ್ರಶೇಖರ್​ ಜಾಕಲಿನ್​ ಫರ್ನಾಂಡಿಸ್​ ಮೇಲೆ ಮಲಗಿ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತು. ಇದೆಲ್ಲಾ ಸುಳ್ಳು ಎಂದು ಹೇಳಿಕೊಂಡು ಬಂದಿದ್ದ ಜಾಕಲಿನ್​ ಫರ್ನಾಂಡಿಸ್​, ಈ ಫೋಟೋ (Photo) ವೈರಲ್​ ಆದ ಬಳಿಕ ಗಪ್​ಚುಪ್​ ಆಗಿದ್ದರು. ಈ ಫೋಟೋ ವೈರಲ್​ ಆದ ಬಳಿಕ ಜಾಕಲಿನ್​ ಫರ್ನಾಂಡಿಸ್​ ಪೋಸ್ಟ್​ವೊಂದನ್ನು ಮಾಡಿದ್ದರು. ತನ್ನ ಫೋಟೋವನ್ನು ಶೇರ್​ ಮಾಡದಂತೆ ಮನವಿ ಮಾಡಿಕೊಂಡಿದ್ದರು. ಇದೆಲ್ಲ ಆದ ಬಳಿಕ ಜಾಕಲಿನ್​ ಫರ್ನಾಂಡಿಸ್​ ಶಾಂತಿ ಹುಡುಕಲು ಏನು ಮಾಡಿದ್ದಾರೆ ಗೊತ್ತಾ? ನೆಮ್ಮದಿಗಾಗಿ ಅವರು ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ, ನಿಮಗೆ ಶಾಕ್​ ಆಗುತ್ತೆ.

ಅಧ್ಯಾತ್ಮದ ಮೊರೆಹೋದ್ರಾ ಜಾಕಲಿನ್​ ಫರ್ನಾಂಡಿಸ್​!

ಸುಕೇಶ್​ ಚಂದ್ರಶೇಖರ್​ ಹಾಗೂ ಜಾಕಲಿನ್​ ಫರ್ನಾಂಡಿಸ್​ ಅವರ ಖಾಸಗಿ ಫೋಟೋಗಳು ವೈರಲ್​ ಆದ ಬಳಿಕ , ಜಾಕಲಿನ್​ ನೆಮ್ಮದಿಗಾಗಿ ಹೊದ ಮಾರ್ಗವೊಂದನ್ನು ಹುಡುಕಿಕೊಂಡಿದ್ದಾರೆ. ಹೌದು, ಜಾಕಲಿನ್ ಈಗ ಮನಸ್ಸಿಗೆ ನೆಮ್ಮದಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅದಕ್ಕಾಗಿ ಅವರು ಅಧ್ಯಾತ್ಮದ ಹಾದಿ ಹಿಡಿದ್ದಾರೆ ಎನ್ನುತ್ತಿವೆ ಮೂಲಗಳು. ಶ್ರೀಲಂಕಾ ಮೂಲದ ಈ ಚೆಲುವೆಗೆ ಸುಕೇಶ್​ ಚಂದ್ರಶೇಖರ್​ ಜೊತೆಗಿನ ಸಹವಾಸವೇ ಮುಳುವಾಗಿದೆ. ಒಟ್ಟಾರೆ ಪ್ರಕರಣದಿಂದ ಅವರು ಮಾನಸಿಕವಾಗಿ ವಿಚಲಿತರಾಗಿದ್ದಾರೆ. ಹಾಗಾಗಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅವರು ಓದಲು ಪ್ರಾರಂಭಿಸಿದ್ದಾರೆ. ಧ್ಯಾನಕ್ಕೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇದನ್ನು ಓದಿ: ಕಿಸ್ಸಿಂಗ್​ ಫೋಟೋ ಬಗ್ಗೆ ಮನವಿ ಮಾಡಿದ ನಟಿ.. ಪ್ಲೀಸ್​ ಪೋಸ್ಟ್​​ ಮಾಡ್ಬೇಡಿ ಅಂದಿದ್ಯಾಕೆ ಜಾಕಲಿನ್​?

ಫೋಟೋ ಪೋಸ್ಟ್​ ಮಾಡ್ಬೇಡಿ ಎಂದಿದ್ದ ಜಾಕಲಿನ್!

‘ಈ ದೇಶ ಮತ್ತು ಇಲ್ಲಿನ ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಇಲ್ಲಿ ನನಗೆ ಹಲವಾರು ಸ್ನೇಹಿತರು ಇದ್ದಾರೆ. ಅದರಲ್ಲಿ ಮಾಧ್ಯಮದ ಸ್ನೇಹಿತರೂ ಸೇರಿದ್ದಾರೆ. ಅವರಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಪ್ರಸ್ತುತ ಕಷ್ಟದ ದಿನಗಳನ್ನು ನೋಡುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಇದು ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳನ್ನು ಪ್ರಸಾರ ಮಾಡದಂತೆ ನಾನು ಕೋರುತ್ತಿದ್ದೇನೆ. ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಮಾಡುವುದಿಲ್ಲ, ಅದೇ ರೀತಿ ನನಗೂ ಈ ರೀತಿ ಮಾಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ಆಶಿಸುತ್ತೇನೆ ಧನ್ಯವಾದಗಳು’ ಎಂದು ಜಾಕಲಿನ್ ಬರೆದುಕೊಂಡಿದ್ದಾರೆ.

ಇದನ್ನು ಓದಿ: ಸೋಶಿಯಲ್ ಮೀಡಿಯಾದಲ್ಲಿ ಜನ ಅತೀ ಹೆಚ್ಚು ಫಾಲೊ ಮಾಡೋ ತಾರೆಯರು ಇವ್ರೇ, ನೀವೂ ಫಾಲೋ ಮಾಡ್ತಿದೀರಾ?

ಜಾಕಲಿನ್​ ಜೊತೆ ಅಫೇರ್​ ಇದ್ದಿದ್ದು ನಿಜ ಎಂದ ಸುಕೇಶ್​!

ಇನ್ನೂ ಈ ಹಿಂದೆಯೆ ಜಾಕಲಿನ್​ ಜೊತೆ ಸಂಬಂಧ ಇರುವುದಾಗಿ ಸುಕೇಶ್​ ಹೇಳಿದ್ದ. ಈ ಬಗ್ಗೆ ಜಾಕಲಿನ್​ ಮಾತ್ರ ತುಟಿ ಬಿಚ್ಚಿರಲಿಲ್ಲ. ಆತ ನನಗೆ ಪರಿಚಯ ಅಷ್ಟೆ. ನಮ್ಮ ನಡುವೆ ಯಾವುದೇ ಅಫೇರ್​ ಇರಲಿಲ್ಲ. ಇದರಿಂದ ಆತ ವಂಚಕ ಎಂದು ನನಗೆ ಗೊತ್ತಾಗಿದೆ. ಆತನ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಮತ್ತೆ ಸುಕೇಶ್​ ಆಕೆ ನನ್ನ ಜೊತೆ ಸಂಬಂಧ ಹೊಂದಿದ್ದಳು. ಈಗ ಸುಳ್ಳು ಹೇಳುತ್ತಿದ್ದಾಳೆ. ನಾನು ಕಳ್ಳ ಅಲ್ಲ. ನನ್ನನ್ನು ನಂಬಿ ಎಂದು ಹೇಳಿದ್ದಾನಂತೆ. ಇತ್ತೀಚೆಗೆ ಜಾಕಲಿನ್​ಗೆ ಈತ ಕೊಟ್ಟಿದ್ದ ಗಿಫ್ಟ್​ ಬಗ್ಗೆಯೂ ಸುಕೇಶ್​ ಚಂದ್ರಶೇಖರ್​ ಮಾಹಿತಿ ನೀಡಿದ್ದ.
Published by:Vasudeva M
First published: