Jacqueline Fernandez: ಅಕ್ಕಿನೇನಿ ನಾಗಾರ್ಜುನ ಚಿತ್ರದಿಂದ ಜಾಕಲಿನ್​​​ ಔಟ್​.. ಕಾರಣ ಕೇಳಿದ್ರೆ ಶಾಕ್​ ಆಗ್ತಿರಾ..!

200 ಕೋಟಿ ರೂಪಾಯಿ ವಂಚನೆ ಪ್ರಕರಣದ ಕಿಂಗ್​ಪಿನ್​ ಜತೆ ಅವರಿಗೆ ನಂಟಿದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಚಿತ್ರತಂಡಕ್ಕೆ ಆಯ್ಕೆ ಮಾಡಿಕೊಂಡರೆ ಸಿನಿಮಾಗೆ ಹಿನ್ನಡೆ ಆಗಬಹುದು ಎಂದು ಚಿತ್ರತಂಡ, ಜಾಕಲಿನ್​ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಜಾಕಲಿನ್​, ನಾಗಾರ್ಜುನ

ಜಾಕಲಿನ್​, ನಾಗಾರ್ಜುನ

  • Share this:
ರಾಜಕಾರಣಿಯ (Politician) ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ (Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು (Bengaluru) ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekar) ಜತೆ ಶ್ರೀಲಂಕಾ (Sri Lanka) ಮೂಲದ ಬಾಲಿವುಡ್‌ (Bollywood) ನಟಿ ಜಾಕಲಿನ್​ ಫರ್ನಾಂಡಿಸ್‌ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲಾಗಿತ್ತು. ಇತ್ತೀಚೆಗೆ ಇವರ ಮತ್ತೊಂದು ಫೋಟೋ ಸಖತ್​ ವೈರಲ್ ಆಗಿತ್ತು.  ಸುಕೇಶ್​ ಚಂದ್ರಶೇಖರ್​ ಜಾಕಲಿನ್​ ಫರ್ನಾಂಡಿಸ್​ ಮೇಲೆ ಮಲಗಿ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತು. ಇದೆಲ್ಲಾ ಸುಳ್ಳು ಎಂದು ಹೇಳಿಕೊಂಡು ಬಂದಿದ್ದ ಜಾಕಲಿನ್​ ಫರ್ನಾಂಡಿಸ್​, ಈ ಫೋಟೋ (Photo) ವೈರಲ್​ ಆದ ಬಳಿಕ ಗಪ್​ಚುಪ್​ ಆಗಿದ್ದರು. ಇದೀಗ ಈ ಪ್ರಕರಣ ಇವರ ಕೆರಿಯರ್​ಗೆ ಹೊಡೆತ ಕೊಟ್ಟಿದೆ. ಹೌದು, ಜಾಕಲಿನ್ ಅವರನ್ನು ಈಗಾಗಲೇ ಬಾಲಿವುಡ್​ ದೂರ ಮಾಡಿದೆ. ಯಾರು ಜಾಕಲಿನ್ ಸಹಾಯಕ್ಕೆ ಬಂದಿಲ್ಲ. ಅದರಲ್ಲೂ ಸಲ್ಮಾನ್ ಖಾನ್(Salman Khan)​ ಈಕೆಯನ್ನೂ ದೂರ ಮಾಡಿದ್ಧಾರೆ. ಇದೇ ಪ್ರಕರಣಕ್ಕೆ ಈಕೆ ಒಪ್ಪಿಕೊಂಡಿದ್ದ ಸಿನಿಮಾಗಳು ಜಾಕಲಿನ್​ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಟಾಲಿವುಡ್​(Tollywood)ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾದಿಂದ ಜಾಕಲಿನ್ ಔಟ್​ ಆಗಿದ್ದಾರೆ.

‘ದಿ ಘೋಸ್ಟ್​’ ಸಿನಿಮಾದಿಂದ ಜಾಕಲಿನ್​ ಔಟ್​! 

ನಾಗಾರ್ಜುನ ಅಕ್ಕಿನೇನಿ ‘ದಿ ಘೋಸ್ಟ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆರಂಭದಲ್ಲಿ ನಾಯಕಿಯಾಗಿ ಕಾಜಲ್​ ಅಗರ್​​ವಾಲ್​​​ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ, ಅವರು ಪ್ರೆಗ್ನೆನ್ಸಿ ಕಾರಣ ನೀಡಿ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಕಾರಣಕ್ಕೆ ಈಗ ಜಾಕ್ವೆಲಿನ್​ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿತ್ತು. ಆದರೆ, 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಕಿಂಗ್​ಪಿನ್​ ಜತೆ ಅವರಿಗೆ ನಂಟಿದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಚಿತ್ರತಂಡಕ್ಕೆ ಆಯ್ಕೆ ಮಾಡಿಕೊಂಡರೆ ಸಿನಿಮಾಗೆ ಹಿನ್ನಡೆ ಆಗಬಹುದು ಎಂದು ಚಿತ್ರತಂಡ, ಜಾಕಲಿನ್​ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಅಯ್ಯೋ.. ಇದ್ದಕಿದ್ದ ಹಾಗೇ ಏನಾಯ್ತು ಈ ನಟಿಗೆ? ನೆಮ್ಮದಿಗಾಗಿ ಜಾಕಲಿನ್​ ಏನ್​ ಮಾಡ್ತಿದ್ದಾರೆ ನೋಡಿ..!

ಅಧ್ಯಾತ್ಮದ ಮೊರೆಹೋದ್ರಾ ಜಾಕಲಿನ್​ ಫರ್ನಾಂಡಿಸ್​!

ಸುಕೇಶ್​ ಚಂದ್ರಶೇಖರ್​ ಹಾಗೂ ಜಾಕಲಿನ್​ ಫರ್ನಾಂಡಿಸ್​ ಅವರ ಖಾಸಗಿ ಫೋಟೋಗಳು ವೈರಲ್​ ಆದ ಬಳಿಕ , ಜಾಕಲಿನ್​ ನೆಮ್ಮದಿಗಾಗಿ ಹೊದ ಮಾರ್ಗವೊಂದನ್ನು ಹುಡುಕಿಕೊಂಡಿದ್ದಾರೆ. ಹೌದು, ಜಾಕಲಿನ್ ಈಗ ಮನಸ್ಸಿಗೆ ನೆಮ್ಮದಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅದಕ್ಕಾಗಿ ಅವರು ಅಧ್ಯಾತ್ಮದ ಹಾದಿ ಹಿಡಿದ್ದಾರೆ ಎನ್ನುತ್ತಿವೆ ಮೂಲಗಳು. ಶ್ರೀಲಂಕಾ ಮೂಲದ ಈ ಚೆಲುವೆಗೆ ಸುಕೇಶ್​ ಚಂದ್ರಶೇಖರ್​ ಜೊತೆಗಿನ ಸಹವಾಸವೇ ಮುಳುವಾಗಿದೆ. ಒಟ್ಟಾರೆ ಪ್ರಕರಣದಿಂದ ಅವರು ಮಾನಸಿಕವಾಗಿ ವಿಚಲಿತರಾಗಿದ್ದಾರೆ. ಹಾಗಾಗಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅವರು ಓದಲು ಪ್ರಾರಂಭಿಸಿದ್ದಾರೆ. ಧ್ಯಾನಕ್ಕೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇದನ್ನು ಓದಿ: ಕಿಸ್ಸಿಂಗ್​ ಫೋಟೋ ಬಗ್ಗೆ ಮನವಿ ಮಾಡಿದ ನಟಿ.. ಪ್ಲೀಸ್​ ಪೋಸ್ಟ್​​ ಮಾಡ್ಬೇಡಿ ಅಂದಿದ್ಯಾಕೆ ಜಾಕಲಿನ್​?

ಜಾಕಲಿನ್​ ಜೊತೆ ಅಫೇರ್​ ಇದ್ದಿದ್ದು ನಿಜ ಎಂದ ಸುಕೇಶ್​!

ಇನ್ನೂ ಈ ಹಿಂದೆಯೆ ಜಾಕಲಿನ್​ ಜೊತೆ ಸಂಬಂಧ ಇರುವುದಾಗಿ ಸುಕೇಶ್​ ಹೇಳಿದ್ದ. ಈ ಬಗ್ಗೆ ಜಾಕಲಿನ್​ ಮಾತ್ರ ತುಟಿ ಬಿಚ್ಚಿರಲಿಲ್ಲ. ಆತ ನನಗೆ ಪರಿಚಯ ಅಷ್ಟೆ. ನಮ್ಮ ನಡುವೆ ಯಾವುದೇ ಅಫೇರ್​ ಇರಲಿಲ್ಲ. ಇದರಿಂದ ಆತ ವಂಚಕ ಎಂದು ನನಗೆ ಗೊತ್ತಾಗಿದೆ. ಆತನ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಮತ್ತೆ ಸುಕೇಶ್​ ಆಕೆ ನನ್ನ ಜೊತೆ ಸಂಬಂಧ ಹೊಂದಿದ್ದಳು. ಈಗ ಸುಳ್ಳು ಹೇಳುತ್ತಿದ್ದಾಳೆ. ನಾನು ಕಳ್ಳ ಅಲ್ಲ. ನನ್ನನ್ನು ನಂಬಿ ಎಂದು ಹೇಳಿದ್ದಾನಂತೆ. ಇತ್ತೀಚೆಗೆ ಜಾಕಲಿನ್​ಗೆ ಈತ ಕೊಟ್ಟಿದ್ದ ಗಿಫ್ಟ್​ ಬಗ್ಗೆಯೂ ಸುಕೇಶ್​ ಚಂದ್ರಶೇಖರ್​ ಮಾಹಿತಿ ನೀಡಿದ್ದ.
Published by:Vasudeva M
First published: