Breaking: ರಾ ರಾ ರಕ್ಕಮ್ಮನಿಗೆ ಮತ್ತೆ ಡವ ಡವ ಶುರು! ಚಾರ್ಜ್​ಶೀಟ್​ ಫೈಲ್​, ಅರೆಸ್ಟ್​ ಆಗ್ತಾರಾ ಜಾಕ್ಲಿನ್​?

ಜಾಕ್ಲಿನ್​ ಫರ್ನಾಂಡೀಸ್(Jacqueline Fernandez) ಕನ್ನಡಿ ಮುಂದೆ ವಂಚಕ ಸುಕೇಶ್ ಚಂದ್ರಶೇಖರ್ ಕೆನ್ನೆಗೆ ಕಿಸ್(Kiss) ಮಾಡಿದ್ದಳು. ಅಲ್ಲದೆ ಆ ಫೋಟೋವನ್ನ ಕಳ್ಳ ಸುಕೇಶ್ ಮಿರರ್ ಮುಂದೆ ತನ್ನದೇ ಮೊಬೈಲ್‌ನಲ್ಲಿ ಸೆಲ್ಫಿ ಹಿಡಿದಿದ್ದ ಫೋಟೋ ವೈರಲ್​ ಆಗಿತ್ತು. ಇದೀಗ ಇದೇ ಪ್ರಕರಣದ ಆರೋಪ ಪಟ್ಟಿಯಲ್ಲಿ  ಜಾಕ್ಲಿನ್​ ಫರ್ನಾಂಡಿಸ್​ ಹೆಸರು ಉಲ್ಲೇಖವಾಗಿದೆ.

 ನಟಿ ಜಾಕ್ವೆಲಿನ್ ಫರ್ನಾಂಡಿಸ್

ನಟಿ ಜಾಕ್ವೆಲಿನ್ ಫರ್ನಾಂಡಿಸ್

  • Share this:
ರಾಜಕಾರಣಿಯ(Politician) ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ(Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು(Bengaluru) ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekar) ಜತೆ ಶ್ರೀಲಂಕಾ(Sri Lanka) ಮೂಲದ ಬಾಲಿವುಡ್‌(Bollywood) ನಟಿ ಜಾಕ್ಲಿನ್​ ಫರ್ನಾಂಡಿಸ್‌ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲು ಮಾಡಿತ್ತು. ಆ ಫೋಟೋದಲ್ಲಿ ಜಾಕ್ಲಿನ್​ ಫರ್ನಾಂಡೀಸ್(Jacqueline Fernandez) ಕನ್ನಡಿ ಮುಂದೆ ವಂಚಕ ಸುಕೇಶ್ ಚಂದ್ರಶೇಖರ್ ಕೆನ್ನೆಗೆ ಕಿಸ್(Kiss) ಮಾಡಿದ್ದಳು. ಅಲ್ಲದೆ ಆ ಫೋಟೋವನ್ನ ಕಳ್ಳ ಸುಕೇಶ್ ಮಿರರ್ ಮುಂದೆ ತನ್ನದೇ ಮೊಬೈಲ್‌ನಲ್ಲಿ ಸೆಲ್ಫಿ ಹಿಡಿದಿದ್ದ ಫೋಟೋ ವೈರಲ್​ ಆಗಿತ್ತು. ಇದೀಗ ಇದೇ ಪ್ರಕರಣದ ಆರೋಪ ಪಟ್ಟಿಯಲ್ಲಿ  ಜಾಕ್ಲಿನ್​ ಫರ್ನಾಂಡಿಸ್​ ಹೆಸರು ಉಲ್ಲೇಖವಾಗಿದೆ.

ಆರೋದಪ ಪಟ್ಟಿಯಲ್ಲಿ ಜಾಕ್ಲಿನ್​ ಹೆಸರು!

ಜಾಕ್ಲಿನ್​ ಫರ್ನಾಂಡಿಸ್​ ಈ ಹಿಂದೆ ನನಗೂ ಸುಕೇಶ್​ಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದರು. ಆದರೂ , ಇಡಿ ಇವರನ್ನು ಕರೆಸಿ ವಿಚಾರಣೆ ಕೂಡ ಮಾಡಿ ಕಳುಹಿಸಿತ್ತು. ಇಡಿ ಅನುಮತಿ ಇಲ್ಲದೇ ಬೇರೆ ದೇಶಕ್ಕೆ ಜಾಕಲಿನ್​ ಫರ್ನಾಂಡಿಸ್​ ಪ್ರಯಾಣಿಸುವಂತಿರಲಿಲ್ಲ. ಇದೀಗ ಈ ಪ್ರಕರಣದ ಆರೋಪ ಪಟ್ಟಿಯನ್ನು ಇಡಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲ ಜಾಕ್ಲಿನ್​  ಹೆಸರು ಮತ್ತುಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಜಾಕ್ಲಿನ್​ ಹಾಗೂ ಸುಕೇಶ್​ ಇಬ್ಬರೂ ಸಂಬಂಧ ಹೊಂದಿದ್ದರು ಎಂಬುದು ಸ್ಪಷ್ಟಪಡಿಸುತ್ತಿದೆ. ಯಾವುದೇ ಸಮಯದಲ್ಲಿ  ಜಾಕ್ಲಿನ್​ ಅವರನ್ನು ಇಡಿ ಅಧಿಕಾರಿಗಳು ಬಂಧಿಸಬಹುದು.

ಜಾಕ್ಲಿನ್​ ಆಸ್ತಿ ಜಪ್ತಿ ಮಾಡಿದ್ದ ಇಡಿ!

ಸುಕೇಶ್ ಚಂದ್ರಶೇಖರ್ (Conman Sukesh Chandrashekhar) ಅವರ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬಾಲಿವುಡ್ ನಟಿ ಜಾಕ್ಲಿನ್​​ ಫರ್ನಾಂಡಿಸ್ (Actor Jacqueline Fernandez) ಅವರ ಆಸ್ತಿಯನ್ನು ಜಪ್ತಿ ಮಾಡಿದೆ. ಮೂಲಗಳ ಪ್ರಕಾರ, 7.27 ಕೋಟಿ ಮೌಲ್ಯದ ಸ್ಥಿರ ಠೇವಣಿ ಮೌಲ್ಯದ ವಸ್ತುಗಳು ಮತ್ತು ಆಸ್ತಿಯನ್ನು ತನಿಖಾ ಸಂಸ್ಥೆ ಜಪ್ತಿ ಮಾಡಿತ್ತು.

ಇದನ್ನೂ ಓದಿ: ರಾ ರಾ ರಕ್ಕಮ್ಮನಿಗೆ ಮತ್ತೆ ಡವ ಡವ ಶುರು! ಚಾರ್ಜ್​ಶೀಟ್​ ಫೈಲ್​, ಅರೆಸ್ಟ್​ ಆಗ್ತಾರಾ ಜಾಕ್ಲಿನ್​?

ಕಾನ್‌ಮ್ಯಾನ್ ಚಂದ್ರಶೇಖರ್ ನಟಿಗೆ ಸಾಕಷ್ಟು ಐಷಾರಾಮಿ ಉಡುಗೊರೆಗಳನ್ನು ನೀಡಿದ್ದರು. ಇದರಲ್ಲಿ ಜಿಮ್ ಉಡುಗೆಗಾಗಿ ಗುಚಿ ಬಟ್ಟೆಗಳು, ಶೂಗಳು, ರೋಲೆಕ್ಸ್ ವಾಚ್, 15 ಜೋಡಿ ಕಿವಿಯೋಲೆಗಳು, 5 ದುಬಾರಿ ಬ್ಯಾಗ್‌ಗಳು, ಹರ್ಮ್ಸ್ ಬಳೆಗಳು ಮತ್ತು ಎಲ್‌ವಿ ಬ್ಯಾಗ್‌ಗಳು ಸೇರಿವೆ. ಸುಕೇಶ್​ ಚಂದ್ರಶೇಖರ್​ ಸಹವಾಸ ಮಾಡಿ ಪೇಚಿಗೆ ಸಿಲುಕಿದ್ದಾರೆ ಜಾಕಲಿನ್​ ಫರ್ನಾಂಡಿಸ್​.

ಇದನ್ನೂ ಓದಿ: ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್​ ಆಗ್ತಿತ್ತೋ..!

ತಿಹಾರ್​ ಜೈಲಿಗೆ ಬರ್ತಿದ್ರಂತೆ 12 ಸ್ಟಾರ್​ ನಟಿಯರು!

ಸುಕೇಶ್​ ಚಂದ್ರಶೇಖರ್​ ಅವರು ತಿಹಾರ್​ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಐಷಾರಾಮಿ ಸವಲತ್ತು ಪಡೆಯಲು, ಭೇಟಿಗೆ ಬರುವ ಹೀರೋಯಿನ್​ಗಳನ್ನು ಮುಕ್ತವಾಗಿ ಒಳಗೆ ಬಿಡೋಕೆ ಅಲ್ಲಿನ ಸಿಬ್ಬಂದಿಗೆ ಪ್ರತಿ ತಿಂಗಳು ಸುಕೇಶ್​ 1 ಕೋಟಿ ರೂಪಾಯಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಮಾಹಿತಿ ನೀಡಿವೆ ಎಂದು ತಿಳಿದು ಬಂದಿದೆ. ಈತನನ್ನು ನೋಡಲು ಸ್ಟಾರ್​ ನಟಿಯರು ಬರುತ್ತಿದ್ದರಂತೆ. ಅವರನ್ನು ಈತನ ಇದ್ದ ಸೆಲ್​ ಒಳಗೆ ಕಳಿಸುತ್ತಿದ್ದರಂತೆ. ಆದರೆ ಆ ನಟಿಯರಲ್ಲಿ ಇಬ್ಬರ ಹೆಸರು ಮಾತ್ರ ಹೊರಬಂದಿದೆ. ಜಾಕಲಿನ್​ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ ಎಂಬುದು ತಿಳಿದುಬಂದಿದೆ.
Published by:Vasudeva M
First published: