Jacqueline Fernandez: ಈ ಸಲ ಮುತ್ತು ಕೊಟ್ಟಿರೋದು ನಟಿ ಜಾಕಲಿನ್ ! ಏನು ಇವರ ಕತೆ?

ಕನ್ನಡಿಯ ಮುಂದೆ ನಿಂತು ಜಾಕಲಿನ್ ಸುಕೇಶ್‌ಗೆ ಮುತ್ತು ಕೊಟ್ಟಿರುವ ಹೊಸ ಫೋಟೋ ಹಲ್‌ಚಲ್‌ ಎಬ್ಬಿಸಿದೆ. ಚಿತ್ರದಲ್ಲಿ ಸುಕೇಶ್‌ ನನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾರೆ.

ಜಾಕಲಿನ್ ಚುಂಬನದ ದೃಶ್ಯ

ಜಾಕಲಿನ್ ಚುಂಬನದ ದೃಶ್ಯ

 • Share this:
  ಬಾಲಿವುಡ್‌ ನಟಿ ಜಾಕಲಿನ್​​ ಫರ್ನಾಂಡೀಸ್ (Jacqueline Fernandez) ಚುಂಬನದ (Kisses)ಕಥೆ ಯಾಕೋ ಮುಗಿಯುವಂತೆ ಕಾಣುತ್ತಿಲ್ಲ ಬಿಡಿ. ಇತ್ತೀಚೆಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸುಕೇಶ್ ಚಂದ್ರಶೇಖರ್ (Sukesh Chandrasekhar) ರನ್ನು ಜಾಕಲಿನ್ ಫರ್ನಾಂಡೀಸ್ ಚುಂಬಿಸಿದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ( social media) ಇದೀಗ ಫುಲ್‌ ವೈರಲ್ ಆಗಿದೆ. ಕಳೆದ ಮೂರು ದಿನದ ಹಿಂದೆ ತಾನೇ ಸುಕೇಶ್ ಚಂದ್ರಶೇಖರ್ ಜಾಕಲಿನ್ ಅವರ ಕೆನ್ನೆಗೆ ಚುಂಬಿಸುತ್ತಿರುವ ಪೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ರಾರಾಜಿಸಿದ್ದವು. ಸುಕೇಶ್ ಏಪ್ರಿಲ್-ಜೂನ್‍ನಲ್ಲಿ ಮಧ್ಯಂತರ ಜಾಮೀನಿನ ಆಧಾರದ ಮೇಲೆ ತಿಹಾರ್ ಜೈಲಿನಿಂದ(interim bail )ಹೊರ ಬಂದ ನಂತರ ಈ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲಾಗಿದ್ದು, ಶ್ರೀಲಂಕಾ ಸುಂದರಿಗೆ (srilanka beauty)ಚುಂಬಿಸಿದ ಪೋಟೋಗಳನ್ನು ಹರಿಬಿಡಲಾಗಿತ್ತು.

   ಇದನ್ನು ಓದಿ: Jacqueline Fernandez: ವಿವಾದಗಳು ಏನೇ ಇರಲಿ, ಜಾಕಿ ಸಖತ್ ಸುಂದರಿ ಅನ್ನೋದನ್ನ ಎಲ್ರೂ ಒಪ್ಪಿಕೊಳ್ತಾರೆ ಬಿಡಿ!

  ಚುಂಬನದ ಸ್ಟೋರಿ
  ಈ ಪೋಟೋಗಳು ಇನ್ನು ಕಣ್ಮುಂದೆ ಹರಿದಾಡುತ್ತಿರುವ ಬೆನ್ನಲೇ ಇದೀಗ ಸುಕೇಶ್ ಚಂದ್ರಶೇಖರ್ ಗೆ ವಿಕ್ರಾಂತ್‌ ರೋಣ ನಟಿ ಜಾಕಲಿನ್ ಚುಂಬಿಸಿರುವ ಪೋಟೋ ಮತ್ತೆ ಹವಾ ಎಬ್ಬಿಸಿವೆ. ಹಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಸುಕೇಶ್ ಚಂದ್ರಶೇಖರ್, ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ. ಅಲ್ಲದೇ ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ. ಆದರೂ ಆತನ ಆರೋಪದ ಕಥೆಗಳು ಇದೀಗ ಸದ್ಯಕ್ಕೆ ಮಾಯವಾಗಿ, ಚುಂಬನದ ಸ್ಟೋರಿ ಜೋರಾಗಿ ಓಡ್ತಾ ಇದೆ ಎಂದರೆ ತಪ್ಪಾಗಲಾರದು.

  ಮೊದಲಿಗೆ ಜಾಕಲಿನ್ ಫರ್ನಾಂಡೀಸ್ ಸುಕೇಶ್ ಜೊತೆ ಡೇಟಿಂಗ್ ಮಾಡುವುದನ್ನು ನಿರಾಕರಿಸಿದ್ದರು. ಆಗ ಆರೋಪಿ ಜೈಲಿನೊಳಗಿದ್ದುಕೊಂಡೇ ಜಾಕ್ವೆಲಿನ್‍ಗೆ ಕರೆ ಮಾಡಿ ಐಷಾರಾಮಿ ಉಡುಗೊರೆಗಳನ್ನು ಕಳುಹಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ, ಸುಕೇಶ್ ಜಾಕ್ವೆಲಿನ್‍ನಿಂದ ತನ್ನ ನೈಜ ಗುರುತನ್ನು ಮರೆಮಾಚಿದ್ದು, ಜಾಕ್ವೆಲಿನ್ ಜೊತೆ ಮಾತನಾಡುವಾಗ ದೊಡ್ಡ ವ್ಯಕ್ತಿತ್ವ ಹೊಂದಿರುವವನಂತೆ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ.

  ಕನ್ನಡಿಯಲ್ಲಿ ಎರಡು ಸೆಲ್ಫಿ
  ಸದ್ಯ ವೈರಲ್‌ ಆಗಿರುವ ಪೋಟೋದಲ್ಲಿ ಜಾಕಲಿನ್ ಫರ್ನಾಂಡೀಸ್ ಮತ್ತು ಸುಕೇಶ್ ಚಂದ್ರಶೇಖರ್ ಕನ್ನಡಿ ಮುಂದೆ ನಿಂತು ಸೆಲ್ಪಿ ಕ್ಲಿಕ್ಕಿಸಿದ್ದಾರೆ. ಇದರಲ್ಲಿ ಕನ್ನಡಿಯ ಮುಂದೆ ನಿಂತು ಜಾಕ್ವೆಲಿನ್ ಸುಕೇಶ್‌ಗೆ ಮುತ್ತು ಕೊಟ್ಟಿರುವ ಹೊಸ ಚಿತ್ರಣವೊಂದು ಹಲ್‌ಚಲ್‌ ಎಬ್ಬಿಸಿದೆ. ಚಿತ್ರದಲ್ಲಿ ಸುಕೇಶ್‌ ನನ್ನು  ಜಾಕಲಿನ್ ಬಿಗಿಯಾಗಿ ಅಪ್ಪಿಕೊಂಡಿದ್ದಾರೆ. ಇದು ಮತ್ತೆ ಈ ಇಬ್ಬರ ಮಧ್ಯೆ ಡೇಟಿಂಗ್ ಊಹಾಪೋಹಗಳನ್ನು ಹುಟ್ಟುಹಾಕಿವೆ.

  ಈಗ ಈ ಎರಡು ಪೋಟೋಗಳು ಭಾರಿ ವಿವಾದಕ್ಕೆ ಕಾರಣವಾಗಿದೆ. ಎರಡು ಪೋಟೋದಲ್ಲಿ ಜಾಕ್ವೆಲಿನ್‌ ಕೆನ್ನೆಯ ಮೇಲೆ ಸುಕೇಶ್‌, ಹಾಗೂ ಸುಕೇಶ್‌ ಕೆನ್ನೆಯ ಮೇಲೆ ಜಾಕ್ವೆಲಿನ್ ಚುಂಬಿಸಲು ಕನ್ನಡಿ ಮುಂದೆ ಸೆಲ್ಫಿ ಪಡೆದಿರುವುದು ಯಾಕೆ ಎಂಬುದು ನೆಟ್ಟಿಗರ ಕುತುಹಲವಾಗಿದೆ.‌ ಇನ್ನು ಕೆಲವರು ಈ ಸಲ ಮುತ್ತುಕೊಟ್ಟಿರೋದು ಜಾಕಲಿನ್ ! ಏನು ಇವರ ಕತೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  ಜಾಕಲಿನ್ ಗೆ ಸಮನ್ಸ್
  ಬೆಂಗಳೂರು ಮೂಲದ 27 ವರ್ಷದ ಸುಕೇಶ್‌ ಚಂದ್ರಶೇಖರ್ ವಿರುದ್ಧ 15 ಎಫ್‌ಐಆರ್‌ ದಾಖಲಾಗಿವೆ. ಅದ್ದೂರಿ ಜೀವನಶೈಲಿಯನ್ನು ನಡೆಸಲು, ಅವರು ಬೆಂಗಳೂರು ಮತ್ತು ಚೆನ್ನೈನಲ್ಲಿ ಹಲವಾರು ಕೋಟಿ ವಂಚಿಸಿದ್ದಾರೆ. ಆಗಸ್ಟ್ 23 ರಂದು, ಸುಕೇಶ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಚೆನ್ನೈನಲ್ಲಿರುವ ಐಷಾರಾಮಿ ಸಮುದ್ರಾಭಿಮುಖ ಬಂಗಲೆ, 82.5 ಲಕ್ಷ ನಗದು ಮತ್ತು ಹನ್ನೆರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ. ತಿಹಾರ್ ಜೈಲಿನೊಳಗಿಂದ 200 ಕೋಟಿ ರೂಪಾಯಿ ಸುಲಿಗೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

  ಇದನ್ನು ಓದಿ:ತಿಳಿ ನೀಲಿ ಬಣ್ಣದ ವಿನ್ಯಾಸಿತ ಸೀರೆಯಲ್ಲಿ ವಿಕ್ರಾಂತ್​ ರೋಣ ನಟಿ Jacqueline Fernandez

  ಅಕ್ಟೋಬರ್‌ನಲ್ಲಿ, ಸುಕೇಶ್ ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದ ನಂತರ ಜಾಕಲಿನ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಈ ಪ್ರಕರಣ ಕುರಿತಂತೆ ಕೊನೆಯದಾಗಿ ಅಕ್ಟೋಬರ್ 20ರಂದು ಜಾಕ್ವೆಲಿನ್ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್‍ಗೆ ಇಡಿ ಸಮನ್ಸ್ ನೀಡಿದೆ.
  Published by:vanithasanjevani vanithasanjevani
  First published: