• Home
  • »
  • News
  • »
  • entertainment
  • »
  • Jacqueline Fernandez: ಕಾಸ್ಮೆಟಿಕ್‌ ಸರ್ಜರಿ ಬಗ್ಗೆ ಮಾತನಾಡಿ ಟ್ರೋಲ್ ಆದ ಜಾಕ್ಲಿನ್

Jacqueline Fernandez: ಕಾಸ್ಮೆಟಿಕ್‌ ಸರ್ಜರಿ ಬಗ್ಗೆ ಮಾತನಾಡಿ ಟ್ರೋಲ್ ಆದ ಜಾಕ್ಲಿನ್

ಜಾಕಿ ಕೂಡ ಸೌಂದರ್ಯದ ವಿಚಾರವಾಗಿ ನೀಡಿದ್ದ ಹಳೆಯ ಹೇಳಿಕೆಯೊಂದಕ್ಕೆ ಟ್ರೋಲ್‌ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಜಾಕಿ ಏನ್‌ ಹೇಳಿಕೆ ಕೊಟ್ಟಿದ್ರು ಗೊತ್ತೇ?

ಜಾಕಿ ಕೂಡ ಸೌಂದರ್ಯದ ವಿಚಾರವಾಗಿ ನೀಡಿದ್ದ ಹಳೆಯ ಹೇಳಿಕೆಯೊಂದಕ್ಕೆ ಟ್ರೋಲ್‌ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಜಾಕಿ ಏನ್‌ ಹೇಳಿಕೆ ಕೊಟ್ಟಿದ್ರು ಗೊತ್ತೇ?

ಜಾಕಿ ಕೂಡ ಸೌಂದರ್ಯದ ವಿಚಾರವಾಗಿ ನೀಡಿದ್ದ ಹಳೆಯ ಹೇಳಿಕೆಯೊಂದಕ್ಕೆ ಟ್ರೋಲ್‌ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಜಾಕಿ ಏನ್‌ ಹೇಳಿಕೆ ಕೊಟ್ಟಿದ್ರು ಗೊತ್ತೇ?

  • Share this:

ಬಾಲಿವುಡ್‌ ನಟಿ ಜಾಕ್ಲಿನ್ ಫರ್ನಾಂಡಿಸ್‌ (Jacqueline Fernandez) ಬಗ್ಗೆ ಯಾರಿಗೆ ಗೊತ್ತಿಲ್ಲ. ಹಿಂದಿಯ ಕೆಲವು ಚಿತ್ರಗಳಲ್ಲಿ ನಟಿಸಿದರೂ ಹೆಚ್ಚಾಗಿ ಐಟಂ ಡಾನ್ಸ್‌ ಗಳಲ್ಲಿ ಕಾಣಿಸಿಕೊಳ್ಳುವ ಈ ನಟಿ ಪಡ್ಡೆ ಹುಡುಗರ ಹಾಟ್‌ ಫೇವರಿಟ್.‌ ಸದ್ಯ ರಾರಾ ರಕ್ಕಮ್ಮ ಸಾಂಗ್‌ ನಿಂದ ಕನ್ನಡದಲ್ಲೂ ಮನೆ ಮಾತಾಗಿರುವ ಜಾಕ್ಲಿನ್ ಅವರು ಹಳೆಯ ವಿಡಿಯೋವೊಂದು (Video) ಮತ್ತೆ ಪಾಪ್ಯುಲರ್‌ ಆಗಿದೆ. ನಟ ನಟಿಯರು ಅಂದಮೇಲೆ ಕೆಲವಷ್ಟು ವಿಷಯಗಳಗಳಿಗೆ ಟ್ರೋಲ್‌ (Troll) ಆಗೋದು ಕಾಮನ್.‌ ಅದರಲ್ಲೂ ನಟೀಮಣಿಯರು ಅವರ ಮೇಕಪ್‌, ಹೇರ್‌ ಸ್ಟೈಲ್‌, ಕಾಸ್ಟ್ಯೂಮ್‌, ಕೆಲವೊಮ್ಮೆ ಪೆದ್ದುತನದ ಹೇಳಿಕೆಗಳಿಂದಾಗಿ ಆಗಾಗ ಟ್ರೋಲ್‌ ಆಗ್ತಿರ್ತಾರೆ.


ಇದೀಗ ಜಾಕಿ ಕೂಡ ಸೌಂದರ್ಯದ ವಿಚಾರವಾಗಿ ನೀಡಿದ್ದ ಹಳೆಯ ಹೇಳಿಕೆಯೊಂದಕ್ಕೆ ಟ್ರೋಲ್‌ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಜಾಕಿ ಏನ್‌ ಹೇಳಿಕೆ ಕೊಟ್ಟಿದ್ರು ಅನ್ನೋದನ್ನು ನೋಡೋಣ ಬನ್ನಿ.


ನಟಿ ಜಾಕ್ಲಿನ್ ಫರ್ನಾಂಡಿಸ್‌ ಮೂಲತಃ ಶ್ರೀಲಂಕಾದ ನಟಿ. ಜೊತೆಗೆ ರೂಪದರ್ಶಿ ಕೂಡ. ಇವರು ಮಿಸ್‌ ಯುನಿವರ್ಸ್‌ ಶ್ರೀಲಂಕಾ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡವರು. ಅಲ್ಲದೇ ಮಿಸ್‌ ಯುನಿವರ್ಸ್‌ 2006 ರಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿದ ಮಾಡೆಲ್‌ ಕೂಡ ಹೌದು.


ಕಾಸ್ಮೆಟಿಕ್‌ ಸರ್ಜರಿ ಸರಿಯಲ್ಲ ಎಂದಿದ್ದ ಜಾಕ್ಲಿನ್ ಫರ್ನಾಂಡಿಸ್‌!‌


ಸದ್ಯದ ವಿಷ್ಯ ಏನಪ್ಪಾ ಅಂದ್ರೆ, ಮಿಸ್ ಶ್ರೀಲಂಕಾ 2006 ರ ಪ್ರಶ್ನೋತ್ತರ ಸುತ್ತಿನಲ್ಲಿ, ಜಾಕ್ವೆಲಿನ್ ಕಾಸ್ಮೆಟಿಕ್ ಸರ್ಜರಿ ಬಗ್ಗೆ ಮಾತನಾಡಿದ್ದು, ಅದನ್ನು ಅನ್‌ ಫೇರ್‌ ಅಡ್ವಾಂಟೇಜ್‌ ಅಥವಾ 'ನ್ಯಾಯಸಮ್ಮತವಲ್ಲದ ಪ್ರಯೋಜನ' ಎಂದು ಹೇಳಿದ್ದರು.
ಅಲ್ಲದೇ ಇದು ಸೌಂದರ್ಯ ಸ್ಪರ್ಧೆಗಳ ಸಂಪೂರ್ಣ ಪರಿಕಲ್ಪನೆಗೆ ವಿರುದ್ಧವಾಗಿದೆ. ಅದು ಮಹಿಳೆಯರ ನಿಜವಾದ ಸೌಂದರ್ಯವನ್ನು ಮರೆಮಾಚುತ್ತದೆ.


ಜೊತೆಗೆ, ಕಾಸ್ಮೆಟಿಕ್ ಸರ್ಜರಿಯನ್ನು ಪ್ರೋತ್ಸಾಹಿಸುವ ವಿಷಯಕ್ಕೆ ಬಂದರೆ, ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಯಾರು ಭರಿಸಲಾರರು ಎಂಬುದಕ್ಕೆ ವಿರುದ್ಧವಾಗಿ ಅದನ್ನು ಯಾರು ಭರಿಸಬಲ್ಲರು ಎಂಬುದೇ ವಿಷಯವಾಗುತ್ತದೆ. ಅದು ನಿಜವಾದ ಸೌಂದರ್ಯ ಸ್ಪರ್ಧೆ ಅಲ್ಲʼ ಎಂಬುದಾಗಿ ಜಾಕ್ಲಿನ್ ಫರ್ನಾಂಡಿಸ್‌ ಹೇಳಿದ್ದರು.


ಜಾಕ್ವೆಲಿನ್‌ ಹೇಳಿಕೆಯ ಈ ವಿಡಿಯೋವನ್ನು ಅವರ ಫ್ಯಾನ್‌ ಪೇಜ್‌ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಆ ವಿಡಿಯೋ ಇದೀಗ ವೈರಲ್‌ ಆಗಿದ್ದು, ಅನೇಕರು ಇದನ್ನು ಬೂಟಾಟಿಕೆ ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: Jacqueline Fernandez-Nora Fatehi: ಬಾಲಿವುಡ್ ಬ್ಯೂಟೀಸ್ ಫೈಟ್! ರಕ್ಕಮ್ಮನ ವಿರುದ್ಧ ಸಿಟ್ಟಾಗಿದ್ದೇಕೆ ದಿಲ್​ಬರ್ ಚೆಲುವೆ?


ಜೊತೆಗೆ ಅವರು ಇಲ್ಲಿಯವರೆಗೆ ಎಷ್ಟು ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ? ಎಂದು ಕೇಳಿದ್ದಾರೆ. ಇನ್ನೂ ಕೆಲವರು "ಕೊನೆಗೆ... ಅವರು ಸಂಪೂರ್ಣ ಹೊಸ ಮುಖ ಹೊಂದಿದರು" ಎಂದಿದ್ದಾರೆ. ಇನ್ನು ʼಸಿನಿಮಾಗಳಿಗೆ ಸೇರಿದಾಗ ಅಭಿಪ್ರಾಯ ಬದಲಾವಣೆ' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.


ಈ ಮಧ್ಯೆ ಸುಕೇಶ್ ಚಂದ್ರಶೇಖರ್-200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ಲಿನ್ ಫರ್ನಾಂಡಿಸ್‌ ನ್ಯಾಯಾಲಯದ ವಿಚಾರಣೆಗೆ ಎದುರಿಸುತ್ತಿದ್ದಾರೆ. ಈ ಪ್ರಕರಣವನ್ನು ಇಡಿ ವಿಚಾರಣೆ ನಡೆಸುತ್ತಿದ್ದು ಈಗಾಗಲೇ ಹಲವು ಬಾರಿ ನಟಿಯನ್ನು ವಿಚಾರಣೆ ನಡೆಸಿದೆ.


ಅಂದಹಾಗೆ 37 ವರ್ಷ ವಯಸ್ಸಿನ ಜಾಕ್ಲಿನ್ ಕಳೆದ ಹತ್ತು ವರ್ಷಗಳಿಂದ ಬಾಲಿವುಡ್‌ ನಲ್ಲಿ ಬ್ಯುಸಿ ನಟಿ. 2009 ರಲ್ಲಿ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟಿ ಇವತ್ತಿಗೂ ತನ್ನ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.


ಸದ್ಯ ಇದೇ ತಿಂಗಳು ಬಿಡುಗಡೆಯಾಗಲಿರುವ ಹಿಂದಿಯ ಸರ್ಕಸ್‌ ಚಿತ್ರದಲ್ಲಿ ಜಾಕಿ ನಟಿಸಿದ್ದಾರೆ. ರೋಹಿತ್‌ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ನಟ ರಣವೀರ್‌ ಸಿಂಗ್‌ ಹಾಗೂ ಪೂಜಾ ಹೆಗ್ಡೆ ನಟಿಸಿದ್ದಾರೆ. ಇನ್ನು ಇದರ ಜೊತೆಗೆ ತೆಲುಗಿನ ಹರಿ ಹರ ವೀರ ಮಲ್ಲು ಚಿತ್ರದಲ್ಲೂ ಜಾಕ್ಲಿನ್ ಫರ್ನಾಂಡಿಸ್‌ ಕಾಣಿಸಿಕೊಂಡಿದ್ದಾರೆ. ಕ್ರಿಶ್‌ ಜಗರ್ಲಮುಡಿ ನಿರ್ದೇಶನದ ಈ ಚಿತ್ರದಲ್ಲಿ ನಟ ಪವನ್‌ ಕಲ್ಯಾಣ್‌, ನಿಧಿ ಅಗರ್‌ ವಾಲ್‌ ನಟಿಸಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು