Jacqueline Fernandez: 'ಕಾನ್‌ಮ್ಯಾನ್' ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾದ ಜಾಕ್ಲಿನ್

ಜಾಕ್ವೆಲಿನ್ ಫರ್ನಾಂಡಿಸ್ ಅವರು ಈ ಹಿಂದೆ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಲಿಂಕ್ ಹೊಂದಿರುವ ಬಗ್ಗೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆ ಹಾಗೂ ತಮ್ಮ ಹೇಳಿಕೆ ದಾಖಲಿಸ ನಿಮಿತ್ತ ಕಳೆದ ಸೋಮವಾರದಂದು ಜಾಕ್ವೆಲಿನ್ ಅವರು ಮತ್ತೆ ಇಡಿ ಅಧಿಕಾರಿಗಳ ಎದುರು ಹಾಜರಾಗಿದ್ದರು.

ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಫರ್ನಾಂಡಿಸ್

  • Share this:
ಈಗಾಗಲೇ ಬಾಲಿವುಡ್ (Bollywood) ಅಂಗಳದಲ್ಲಿ ಸಾಕಷ್ಟು ಹೆಸರು ಮಾಡಿರುವ ಹಾಗೂ ಮುಂಬರುತ್ತಿರುವ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿರುವ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರು ಈ ಹಿಂದೆ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekar) ಜೊತೆ ಲಿಂಕ್ ಹೊಂದಿರುವ ಬಗ್ಗೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆ ಹಾಗೂ ತಮ್ಮ ಹೇಳಿಕೆ ದಾಖಲಿಸ ನಿಮಿತ್ತ ಕಳೆದ ಸೋಮವಾರದಂದು ಜಾಕ್ವೆಲಿನ್ ಅವರು ಮತ್ತೆ ಇಡಿ (ED) ಅಧಿಕಾರಿಗಳ ಎದುರು ಹಾಜರಾಗಿದ್ದರು.

ಮತ್ತೊಂದು ಸುತ್ತಿನ ವಿಚಾರಣೆಗೆಂದು ಇಡಿ ಅಧಿಕಾರಿಗಳ ಎದುರು ಹಾಜರು
ಕಳೆದ ಏಪ್ರಿಲ್ ನಲ್ಲಿ ಬಾಲಿವುಡ್ ನಟಿಯ ಬಳಿ ಇದ್ದ 7.27 ಕೋಟಿ ರೂಪಾಯಿಗಳನ್ನು ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಹಿಡಿದಿಟ್ಟುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನಟಿ ಇಡಿ ಅಧಿಕಾರಿಗಳಿಂದ ಎರಡರಿಂದ ಮೂರು ಬಾರಿ ವಿಚಾರಣೆ ಎದುರಿಸಿಯಾಗಿದೆ. ಕಳೆದ ಸೋಮವಾರದಂದು ನಟಿ ಮತ್ತೊಂದು ಸುತ್ತಿನ ವಿಚಾರಣೆಗೆಂದು ಇಡಿ ಅಧಿಕಾರಿಗಳ ಎದುರು ಹಾಜರಾಗಿದ್ದರು.

ಜಾಕ್ವೆಲಿನ್ ಅವರಿಗೆ ಮತ್ತೊಂದು ಬಾರಿ ಸಮನ್ಸ್ ಜಾರಿಗೊಳಿಸಿ ವಿಚಾರಣೆ
ಸುಕೇಶ್ ಹಾಗೂ ಇತರರ ವಿರುದ್ಧ ದಾಖಲಾಗಿರುವ ಅಕ್ರಮ ಹಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಹಂತಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಾಕ್ವೆಲಿನ್ ಅವರಿಗೆ ಮತ್ತೊಂದು ಬಾರಿ ಸಮನ್ಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಈ ಸಂಬಂಧ ಆಕೆಯ ಬಳಿ ಇದ್ದ 7 ಕೋಟಿ ಮೌಲ್ಯದ ಸ್ಥಿರ ಠೇವಣಿಗಳನ್ನು ಲಗತ್ತಿಸಿದ್ದಕ್ಕಾಗಿ ಆಕೆಯ ವಿರುದ್ಧ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಯಿತು, ಏಕೆಂದರೆ ಪ್ರಾಧಿಕಾರವು ಈಗಾಗಲೇ ಅವರ ಬಳಿ ಇರುವ ಸಂಪತ್ತನ್ನು "ಪ್ರೊಸೀಡ್ಸ್ ಆಫ್ ಕ್ರೈಮ್" (ಅಪರಾಧದ ಆದಾಯ) ಎಂದು ನಂಬಿದೆ.

ನಟಿ ಜಾಕ್ವೆಲಿನ್  ಗೆ  ಬೆಲೆಬಾಳುವ ಉಡುಗೊರೆ ನೀಡುತ್ತಿದ್ದ ಸುಕೇಶ್
ಸುಲಿಗೆ ಸೇರಿದಂತೆ ಹಲವಾರು ವಂಚನೆ ಹಾಗೂ ಅಪರಾಧ ಚಟುವಟಿಕೆಗಳಿಂದ ಗಳಿಸಲಾದ ಆದಾಯದಿಂದಲೇ ಸುಕೇಶ್ ಈ ಬಾಲಿವುಡ್ ನಟಿಗೆ ಐದು ಕೋಟಿಗೂ ಹೆಚ್ಚಿಗೆ ಬೆಲೆ ಬಾಳುವ ವಿವಿಧ ಉಡುಗೊರೆಗಳನ್ನು ನೀಡಿದ್ದ ಎನ್ನಲಾಗಿದೆ. ಉಡುಗೊರೆ ನೀಡುವುದಕ್ಕೆ ಸಂಬಂಧಿಸಿದಂತೆ ಸುಕೇಶ್ ತನ್ನ ದೀರ್ಘಾವಧಿಯ ಪಾಲುದಾರಳಾಗಿದ್ದ ಪಿಂಕಿ ಇರಾನಿ ಅವರನ್ನು ಬಳಸಿಕೊಂಡು ಬಾಲಿವುಡ್ ನಟಿಗೆ ಉಡುಗೊರೆ ತಲುಪಿಸಿದ್ದನೆಂದು ಈ ಹಿಂದೆ ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದನ್ನೂ ಓದಿ: Shenaz Treasury: ವಿಚಿತ್ರ ಕಾಯಿಲೆಗೆ ತುತ್ತಾದ ಬಾಲಿವುಡ್​ ನಟಿ, ಯಾರ ಮುಖವೂ ನೆನಪಿರುವುದಿಲ್ಲವಂತೆ!

ಸುಕೇಶ್ ಕೇವಲ ಜಾಕ್ವೆಲಿನ್ ಗೆ ಮಾತ್ರವಲ್ಲ, ಅವರ ಹತ್ತಿರದ ಕುಟುಂಬದವರಿಗೂ ಬೆಲೆಬಾಳುವ ಉಡುಗೊರೆ ನೀಡಿದ್ದನೆನ್ನಲಾಗಿದೆ. ಸದ್ಯ ಕರೆನ್ಸಿ ಎಕ್ಸ್ಚೆಂಜ್ ರೇಟ್ ಗಳಿಗೆ ಹೋಲಿಸಿದರೆ ಸುಕೇಶ್ ಜಾಕ್ವೆಲಿನ್ ಅವರ ಕುಟುಂಬಕ್ಕೆ 1.3 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವ ಉಡುಗೊರೆ ನೀಡಿದ್ದ. ಈ ಎಲ್ಲ ಸಂಪತ್ತು ಅಪರಾಧಿ ಚಟುವಟಿಕೆಯಿಂದ ಗಳಿಸಲಾಗಿದ್ದು ಈ ಚಟುವಟಿಕೆಗಳಲ್ಲಿ ಹವಾಲಾ ಆಪರೇಟರ್ ಆಗಿರುವ ಅವತಾರ್ ಸಿಂಗ್ ಕೊಚ್ಚಾರ್ ಸಹ ಭಾಗಿಯಾಗಿದ್ದನೆನ್ನಲಾಗಿದೆ.

ಉನ್ನತ ಪ್ರೊಫೈಲ್ ಜನರನ್ನು ವಂಚನೆಯ ಬಲೆಗೆ ಕೆಡವಿ ಅಕ್ರಮ ಆದಾಯ
ತಾವು ಕೈಗೊಂಡ ತನಿಖೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು, ಈ ಮಧ್ಯೆ ಸುಕೇಶ್, ಜಾಕ್ವೆಲಿನ್ ಅವರ ಹೊಸ ವೆಬ್ ಸರಣಿಗೋಸ್ಕರ ಎಂದು ಸ್ಕ್ರಿಪ್ಟ್ ರೈಟರ್ ಒಬ್ಬಾತನಿಗೆ ಹದಿನೈದು ಲಕ್ಷ ರೂಪಾಯಿ ನಗದನ್ನು ಪಾವತಿಸಿದ್ದ ಎಂಬಂಶವು ಕಂಡುಬಂದಿರುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲದೆ, ಸುಕೇಶ್ ಈಗಾಗಲೇ ಹಲವಾರು ಉನ್ನತ ಪ್ರೊಫೈಲ್ ಜನರನ್ನು ವಂಚನೆಯ ಬಲೆಗೆ ಕೆಡವಿ ಅಕ್ರಮ ಆದಾಯಗಳಿಸಿದ್ದಾನೆನ್ನಲಾಗಿದೆ.

ಈ ಹಿಂದೆ ಸುಕೇಶ್ ತಾನೊಬ್ಬ ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಕೇಂದ್ರ ಕಾನೂನು ಕಾರ್ಯದರ್ಶಿ ಎಂದು ಫೋನಿನಲ್ಲಿ ನಂಬಿಸಿ ಫೊರ್ಟಿಸ್ ಹೆಲ್ತ್ ಕೇರ್ ಪ್ರಮೋಟರ್ ಆಗಿರುವ ಶಿವಿಂದರ್ ಮೋಹನ್ ಸಿಂಗ್ ಅವರ ಮಡದಿ ಆದಿತಿ ಸಿಂಗ್ ಅವರನ್ನು ಬಲೆಗೆ ಕೆಡವಿ ವಂಚನೆ ಮಾಡಿದ್ದಾನೆನ್ನಲಾಗಿದೆ.

ಸುಕೇಶ್ ನಿಂದ ಜಾಕ್ವೆಲಿನ್ ಏನೇನು ಗಿಫ್ಟ್ ಪಡೆದಿದ್ದರು
ಇನ್ನು, ಜಾಕ್ವೆಲಿನ್ ಅವರು ಕಳೆದ ಅಗಸ್ಟ್ ನಲ್ಲಿ ಇಡಿ ಮುಂದೆ ಹಾಜರಾಗಿದ್ದ ಸಂದರ್ಭದಲ್ಲಿ ಅವರು ಸುಕೇಶ್ ನಿಂದ ಏನೆಲ್ಲ ಉಡುಗೊರೆಗಳು ಪಡೆದಿರುವೆ ಎಂಬುದರ ಬಗ್ಗೆ ವಿವರಣೆ ನೀಡಿದ್ದರು. ಅವರ ಹೇಳಿಕೆಯ ಪ್ರಕಾರ ಅವರಿಗೆ ಎರಡು ಗುಚ್ಚಿ ಡಿಸೈನರ್ ಬ್ಯಾಗುಗಳು, ಗುಚ್ಚಿ ಜಿಮ್ ವೇರ್, ಲುಯಿಸ್ ವಿಟ್ಟಾನ್ ಶೂಗಳು, ಎರಡು ಜೊತೆ ವಜ್ರದ ಕಿವಿ ಓಲೆಗಳು, ಬ್ರೇಸ್ಲೆಟ್ಟುಗಳು ಸಿಕ್ಕಿದ್ದವು. ಅಲ್ಲದೆ ಅವರಿಗೆ ನೀಡಲಾಗಿದ್ದ ಮಿನಿ ಕೂಪರ್ ಕಾರನ್ನು ಅವರು ಬಳಸದೆ ಹಿಂತಿರುಗಿಸಿದ್ದರು ಎಂದು ಹೇಳಿದ್ದರು.

ಇದನ್ನೂ ಓದಿ: Naga Chaitanya: ನಾಗಚೈತನ್ಯ ಜೊತೆಗಿನ ಸಂಬಂಧದ ಬಗ್ಗೆ ಕ್ಲಾರಿಟಿ ಕೊಟ್ಟ ಶೋಭಿತಾ! ನಿಟ್ಟುಸಿರು ಬಿಟ್ಟ ಸ್ಯಾಮ್​ ಫ್ಯಾನ್ಸ್​

ಸುಕೇಶ್ ಚಂದ್ರಶೇಖರ್ ಜೊತೆಗೆ ಜಾಕ್ವೆಲಿನ್ ಅವರು ಕಳೆದ ಫೆಬ್ರವರಿಯಿಂದ ಆತ ಬಂಧನಕ್ಕೊಳಗಾದ ಆಗಸ್ಟ್ ವರೆಗೆ ಸತತವಾಗಿ ಸಂಪರ್ಕದಲ್ಲಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೇ ಸುಕೇಶ್, ಆತನ ಪತ್ನಿ ಲೀನಾ ಮಾರಿಯಾ ಪೌಲ್, ಇರಾನಿ ಸೇರಿದಂತೆ ಎಂಟು ಜನರನ್ನು ಬಂಧಿಸಿದೆ.
Published by:Ashwini Prabhu
First published: