Jacqueline Fernandez: ಯಪ್ಪೋ.. ಜಾಕಲಿನ್​ ಮತ್ತೊಂದು ಕಿಸ್ಸಿಂಗ್​ ಫೋಟೋ ವೈರಲ್: ಏನವ್ವಾ ಇದು.. ಈ ಪಾಟಿ ರೋಮ್ಯಾನ್ಸ್​!

ಜಾಕಲಿನ್ ಹಾಗೂ ಸುಕೇಶ್ ಇಬ್ಬರ ಈ ಫೋಟೊ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಮತ್ತೆ ಚರ್ಚೆಯ ವಿಷಯವಾಗಿದ್ದು ಈಗ ಹಳೆ ವಿಚಾರ. ಹೊಸ ವಿಚಾರ ಅಂದರೆ, ಇವರಿಬ್ಬರ ರಾಸಲೀಲೆಯ ಮತ್ತೊಂದು ಫೋಟೋ ವೈರಲ್ ಆಗಿದೆ. ಸುಕೇಶ್​ ಚಂದ್ರಶೇಖರ್​ ಜಾಕಲಿನ್​ ಫರ್ನಾಂಡಿಸ್​ ಮೇಲೆ ಮಲಗಿ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಸುಕೇಶ್​, ಜಾಕಲಿನ್​ ಕಿಸ್ಸಿಂಗ್​ ಫೋಟೋ

ಸುಕೇಶ್​, ಜಾಕಲಿನ್​ ಕಿಸ್ಸಿಂಗ್​ ಫೋಟೋ

  • Share this:
ರಾಜಕಾರಣಿಯ(Politician) ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ(Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು(Bengaluru) ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekar) ಜತೆ ಶ್ರೀಲಂಕಾ(Sri Lanka) ಮೂಲದ ಬಾಲಿವುಡ್‌(Bollywood) ನಟಿ ಜಾಕಲಿನ್​ ಫರ್ನಾಂಡಿಸ್‌ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲು ಮಾಡಿತ್ತು.. ಆ ಫೋಟೋದಲ್ಲಿ ಜಾಕಲಿನ್ ಫರ್ನಾಂಡೀಸ್(Jacqueline Fernandez) ಕನ್ನಡಿ ಮುಂದೆ ವಂಚಕ ಸುಕೇಶ್ ಚಂದ್ರಶೇಖರ್ ಕೆನ್ನೆಗೆ ಕಿಸ್(Kiss) ಮಾಡಿದ್ದಾಳೆ. ಅಲ್ಲದೆ ಆ ಫೋಟೋವನ್ನ ಕಳ್ಳ ಸುಕೇಶ್ ಮಿರರ್ ಮುಂದೆ ತನ್ನದೇ ಮೊಬೈಲ್‌ನಲ್ಲಿ ಸೆಲ್ಫಿ ಹಿಡಿದಿದ್ದ. ಜಾಕಲಿನ್ ಹಾಗೂ ಸುಕೇಶ್ ಇಬ್ಬರ ಈ ಫೋಟೊ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಮತ್ತೆ ಚರ್ಚೆಯ ವಿಷಯವಾಗಿದ್ದು ಈಗ ಹಳೆ ವಿಚಾರ. ಹೊಸ ವಿಚಾರ ಅಂದರೆ, ಇವರಿಬ್ಬರ ರಾಸಲೀಲೆಯ ಮತ್ತೊಂದು ಫೋಟೋ ವೈರಲ್ ಆಗಿದೆ. ಸುಕೇಶ್​ ಚಂದ್ರಶೇಖರ್​ ಜಾಕಲಿನ್​ ಫರ್ನಾಂಡಿಸ್​ ಮೇಲೆ ಮಲಗಿ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.ಹಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಸುಕೇಶ್ ಚಂದ್ರಶೇಖರ್, ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ. ಅಲ್ಲದೇ ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ.

ಯಪ್ಪಾ..ಜಾಕಲಿನ್​ ಲವ್​ ಬೈಟ್​ ಫೋಟೋ ವೈರಲ್​!

ಮೊದಲಿಗೆ ಜಾಕ್ವೆಲಿನ್ ಫರ್ನಾಂಡೀಸ್ ಸುಕೇಶ್ ಜೊತೆ ಡೇಟಿಂಗ್ ಮಾಡುವುದನ್ನು ನಿರಾಕರಿಸಿದ್ದರು. ಆಗ ಆರೋಪಿ ಜೈಲಿನೊಳಗಿದ್ದುಕೊಂಡೇ ಜಾಕ್ವೆಲಿನ್‍ಗೆ ಕರೆ ಮಾಡಿ ಐಷಾರಾಮಿ ಉಡುಗೊರೆಗಳನ್ನು ಕಳುಹಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ, ಸುಕೇಶ್ ಜಾಕ್ವೆಲಿನ್‍ನಿಂದ ತನ್ನ ನೈಜ ಗುರುತನ್ನು ಮರೆಮಾಚಿದ್ದು, ಜಾಕ್ವೆಲಿನ್ ಜೊತೆ ಮಾತನಾಡುವಾಗ ದೊಡ್ಡ ವ್ಯಕ್ತಿತ್ವ ಹೊಂದಿರುವವನಂತೆ ಗುರುತಿಸಿಕೊಂಡಿದ್ದ ಎಂದು ಹೇಳಲಾಗಿತ್ತು. ಇದರ ಮಧ್ಯೆಯೆ ಈಗ ಈ ಫೋಟೋ ಸಖತ್​ ವೈರಲ್​ ಆಗುತ್ತಿದೆ. ಜಾಕಲಿನ್​ ಫರ್ನಾಂಡಿಸ್​ ಕತ್ತಿನ ಮೇಲೆ ಕಚ್ಚಿರುವ ಗುರುತು ಕೂಡ ಇದೆ. ಇದು ಲವ್​ ಬೈಟ್​ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.



ಇದನ್ನು ಓದಿ: ಕೊಡಗಿನ ಕುವರಿಗೆ ಕನ್ನಡದಲ್ಲೇ ಕವನ ಹೇಳಿದ ಬಾಲಯ್ಯ: ವ್ಹಾವ್​.. ಎಷ್ಟು ಚೆಂದ ನಂದಮೂರಿ ಬಾಲಕೃಷ್ಣ!

ಜಾಕಲಿನ್​ ಜೊತೆ ಅಫೇರ್​ ಇದ್ದಿದ್ದು ನಿಜ ಎಂದ ಸುಕೇಶ್​!
ಇನ್ನೂ ಈ ಹಿಂದೆಯೆ ಜಾಕಲಿನ್​ ಜೊತೆ ಸಂಬಂಧ ಇರುವುದಾಗಿ ಸುಕೇಶ್​ ಹೇಳಿದ್ದ. ಈ ಬಗ್ಗೆ ಜಾಕಲಿನ್​ ಮಾತ್ರ ತುಟಿ ಬಿಚ್ಚಿರಲಿಲ್ಲ. ಆತ ನನಗೆ ಪರಿಚಯ ಅಷ್ಟೆ. ನಮ್ಮ ನಡುವೆ ಯಾವುದೇ ಅಫೇರ್​ ಇರಲಿಲ್ಲ. ಇದರಿಂದ ಆತ ವಂಚಕ ಎಂದು ನನಗೆ ಗೊತ್ತಾಗಿದೆ. ಆತನ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಮತ್ತೆ ಸುಕೇಶ್​ ಆಕೆ ನನ್ನ ಜೊತೆ ಸಂಬಂಧ ಹೊಂದಿದ್ದಳು. ಈಗ ಸುಳ್ಳು ಹೇಳುತ್ತಿದ್ದಾಳೆ. ನಾನು ಕಳ್ಳ ಅಲ್ಲ. ನನ್ನನ್ನು ನಂಬಿ ಎಂದು ಹೇಳಿದ್ದಾನಂತೆ. ಇತ್ತೀಚೆಗೆ ಜಾಕಲಿನ್​ಗೆ ಈತ ಕೊಟ್ಟಿದ್ದ ಗಿಫ್ಟ್​ ಬಗ್ಗೆಯೂ ಸುಕೇಶ್​ ಚಂದ್ರಶೇಖರ್​ ಮಾಹಿತಿ ನೀಡಿದ್ದ.






‘ಲಿಯೋನಾರ್ಡೋ  ಜೊತೆ ನಟಿಸುವ ಚಾನ್ಸ್​ ಕೊಡಿಸ್ತೀನಿ’

ನಿಜ ಜಾಕಲಿನ್​ ಫರ್ನಾಂಡಿಸ್‌ಗೆ ಹಾಲಿವುಡ್ ಚಿತ್ರದಲ್ಲಿ ನಟಿಸುವ ಆಫರ್ ಕೊಡಿಸುವೆ ಎಂದು ಆರೋಪಿ ಸುಖೇಶ್ ಚಂದ್ರಶೇಖರ್ ಪ್ರಾಮಿಸ್ ಮಾಡಿದ್ದರು. ‘’ನನಗೆ ಹಾಲಿವುಡ್ ತಾರೆಯರ ಜೊತೆಗೆ ನಂಟಿದೆ. ಹೀಗಾಗಿ ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೊಡಿಸುತ್ತೇನೆ. ಅದರಲ್ಲೂ ಜನಪ್ರಿಯ ನಟ ಲಿಯೋನಾರ್ಡೋ ಡಿಕ್ಯಾಪ್ರಿಯೋ(Leonardo DiCaprio) ಜೊತೆ ನಟಿಸುವ ಚಾನ್ಸ್ ಕೊಡಿಸುವೆ’’ ಅಂತ ಜಾಕಲಿನ್ ಫರ್ನಾಂಡಿಸ್‌ಗೆ ಸುಖೇಶ್ ಚಂದ್ರಶೇಖರ್ ಆಶ್ವಾಸನೆ ನೀಡಿದ್ರಂತೆ.

Published by:Vasudeva M
First published: