ಶ್ರೀಲಂಕಾ(Sri Lanka) ಮೂಲದ ಬೆಡಗಿ ಜಾಕಲಿನ್ ಫರ್ನಾಂಡಿಸ್(Jacqueline Fernandes) ಬಾಲಿವುಡ್(Bollywood)ನಲ್ಲಿ ಸಖತ್ ಸೌಂಡ್ ಮಾಡಿದರವು. ತಮ್ಮ ನಟನೆ ಮೂಲಕ ಅಷ್ಟು ಫೇಮಸ್ ಆಗದಿದ್ದರೂ, ತಮ್ಮ ಬಳುಕುವ ಸೊಂಟದೊಂದಿಗೆ ಬಾಲಿವುಡ್ ಸಿನಿರಸಿಕರನ್ನು ತನ್ನತ್ತ ಸೆಳೆದರು. ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಆದರೆ, ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕಲಿನ್ ಫರ್ನಾಂಡಿಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣದ ಕಿಂಗ್ಪಿನ್ ಸುಕೇಶ್ ಚಂದ್ರಶೇಖರ್(Sukesh Chandrashekar) ಜತೆ ಜಾಕಲಿನ್ ಲಿಂಕ್(Link) ಹೊಂದಿದ್ದರು ಎನ್ನಲಾಗಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಸುಕೇಶ್ ಹಾಗೂ ಈ ನಟಿಯ ಕಿಸ್ಸಿಂಗ್ ಫೋಟೋಗಳು ಲೀಕ್(Leak) ಆಗಿತ್ತು. ಇದರಿಂದ ಈ ಪ್ರಕರಣ ಮತ್ತಷ್ಟು ಬಿಗಿಯಾಗಿದೆ. ಇನ್ನು ಜಾಕಲಿನ್ ಅವರಿಗೆ ಚಂದ್ರಶೇಖರ್ ₹ 10 ಕೋಟಿ ಮೌಲ್ಯದ ವಸ್ತುಗಳನ್ನು ಉಡುಗೊರೆ(Gift)ಯಾಗಿ ನೀಡಿರುವುದು ಬಯಲಾಗಿದೆ. ಇದರಲ್ಲಿ ₹ 52 ಲಕ್ಷ ಮೌಲ್ಯದ ಕುದುರೆ ಮತ್ತು ₹ 9 ಲಕ್ಷ ಮೌಲ್ಯದ ಪರ್ಷಿಯನ್ ಬೆಕ್ಕು(Persian cat) ಸೇರಿವೆ ಎಂದು ಇಡಿ ತನ್ನ ಚಾರ್ಜ್ಶೀಟ್ನಲ್ಲಿ ತಿಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ವಿಚಾರದಿಂದ ಈಗ ಬಾಲಿವುಡ್ ಕೂಡ ನಟಿ ಜಾಕ್ವಲಿನ್ ಫರ್ನಾಂಡಿಸ್ ಅವರನ್ನು ದೂರ ಇಡಲು ಮುಂದಾಗಿದೆ. ಯಾವ ನಟ, ನಟಿಯರು ಕೂಡ ಜಾಕಲಿನ್ ಅವರ ಜೊತೆ ಸರಿಯಾಗಿ ಮಾತಾಡುತ್ತಿಲ್ಲ ಎಂದು ವರದಿಯಾಗಿದೆ.
ಜಾಕಲಿನ್ ಜೊತೆ ಸಲ್ಮಾನ್ ಖಾನ್ ಫ್ರೆಂಡ್ಶಿಪ್ ಕಟ್!
ಡಿಸೆಂಬರ್ 10ಕ್ಕೆ ರಿಯಾದ್ನಲ್ಲಿ Da-bangg ಎಂಬ ಕಾರ್ಯಕ್ರಮ ಇದೆ. ಇದಕ್ಕೆ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಒಟ್ಟಾಗಿ ತೆರಳಬೇಕಿತ್ತು. ಆದರೆ, ಜಾಕ್ವೆಲಿನ್ ಮಾಡಿಕೊಂಡ ಎಡವಟ್ಟಿನಿಂದ ಅವರಿಗೆ ವಿದೇಶಕ್ಕೆ ತೆರಳೋಕೆ ಆಗುತ್ತಿಲ್ಲ. ಹೀಗಾಗಿ, ಅವರನ್ನು ದೂರ ಇಡಲು ಸಲ್ಲು ನಿರ್ಧರಿಸಿದ್ದಾರೆ. ಈ ಮಧ್ಯೆ ಜಾಕ್ವೆಲಿನ್ 5 ದುಬೈಗೆ ಹಾರುವ ಪ್ರಯತ್ನ ಮಾಡಿದ್ದರು. ಈ ವೇಳೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಅವರನ್ನು ಅಧಿಕಾರಿಗಳು ತಡೆದಿದ್ದರು. ವಿಚಾರಣೆಗಾಗಿ ಅವರನ್ನು ದೆಹಲಿಗೆ ಕರೆತರಲಾಗಿದೆ ಎಂದು ಇಡಿ(ED) ಮೂಲಗಳು ತಿಳಿಸಿವೆ.
ಇದನ್ನು ಓದಿ: ವಂಚಕನಿಂದ 36 ಲಕ್ಷ ಮೌಲ್ಯದ ಬೆಕ್ಕು ಉಡುಗೊರೆ ಪಡೆದಿದ್ದ ಜಾಕ್ವೆಲಿನ್..!
ಸಲ್ಮಾನ್ ಜೊತೆ ಒಳ್ಳೆ ಬಾಂಧವ್ಯ ಹೊಂದಿದ್ದ ಜಾಕಲಿನ್!
ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಹಲವು ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಜೋಡಿ ಅನೇಕ ಕಡೆಗಳಿಗೆ ಒಟ್ಟಾಗಿ ತೆರಳಿದ್ದಿದೆ. ಇಬ್ಬರ ನಡುವೆ ಒಳ್ಳೆಯ ಗೆಳೆತನ ಬೆಳೆದಿದೆ. ಆದರೆ, ಈಗ ಜಾಕ್ವೆಲಿನ್ ಅವರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಸಲ್ಮಾನ್ ಖಾನ್ ಬಂದಿದ್ದಾರೆ. ಸ್ವತಃ ಜಾಕಲಿನ್ ಮಾಡಿಕೊಂಡ ಎಡವಟ್ಟಿನಿಂದ ದೂರ ಇರಲು ಭಜರಂಗಿ ಭಾಯ್ಜಾನ್ ನಿರ್ಧರಿಸಿದ್ದಾರಂತೆ. ಕೇವಲ ಸಲ್ಮಾನ್ ಖಾನ್ ಅಲ್ಲ ಇಡೀ ಬಾಲಿವುಡ್ ಮಂದಿ ಈಕೆಯಿಂದ ಅಂತರ ಕಾಯ್ತುಕೊಳ್ಳುತ್ತಿದ್ದಾರಂತೆ.
ಇದನ್ನು ಓದಿ : ದೇಶ ತೊರೆಯುತ್ತಿದ್ದ ನಟಿ ಜಾಕ್ವೆಲಿನ್ಗೆ ತಡೆ: ಏರ್ಪೋರ್ಟ್ನಲ್ಲೇ ವಶಕ್ಕೆ ಪಡೆದ ಅಧಿಕಾರಿಗಳು
ಜಾಕಲಿನ್ಗೆ 36 ಲಕ್ಷ ಬೆಲೆಯ ಬೆಕ್ಕು ಉಡುಗೊರೆ
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಂಚಕ ಸುಕೇಶ್ ವಿಚಾರಣೆ ಮಾಡುತ್ತಿದ್ದು ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ವಿಚಾರಣೆ ವೇಳೆ ಸುಕೇಶ್ ಚಂದ್ರಶೇಖರ್ ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಅಚ್ಚರಿ ಎಂದರೆ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ 52 ಲಕ್ಷ ರೂ. ಮೌಲ್ಯದ ಕುದುರೆ ಮತ್ತು 36 ಲಕ್ಷ ರೂ. ಬೆಲೆಯ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸುಕೇಶ್ ಮಾಹಿತಿ ನೀಡಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ