ಈ ಬಾಲಿವುಡ್ ನಟಿಯ ಹೊಸ ಮನೆಯ ಬೆಲೆ 175 ಕೋಟಿ: ಬಾಯ್‌ಫ್ರೆಂಡ್ ಜತೆ ಹೊಸ ಬಂಗಲೆಗೆ ಜಾಕ್ವೆಲಿನ್ ಶಿಫ್ಟ್? 

ಜಾಕ್ವೆಲಿನ್ ಹೆಸರು ಪ್ರಾರಂಭದಲ್ಲಿ ಸಲ್ಮಾನ್ ಖಾನ್, ಬಹ್ರೇನ್ ಮೂಲದ ಯುವರಾಜ, ನಿರ್ದೇಶಕ ಸಾಜಿದ್ ಖಾನ್ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಕೇಳಿ ಬಂದಿತ್ತು. ಆದರೆ ಈಗ ದಕ್ಷಿಣ ಭಾರತದ ಉದ್ಯಮಿಯೊಬ್ಬರ ಜೊತೆ ಮುಂಬೈನಲ್ಲಿ ಸೆಟಲ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ಮುಂದಾಗಿದ್ದಾರೆ ಎನ್ನಲಾಗಿದೆ

ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್

ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್

  • Share this:
ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್​ ಫರ್ನಾಂಡಿಸ್. 2006ರಲ್ಲಿ ಅಲ್ಲಾದೀನ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮಿಸ್ ಶ್ರೀಲಂಕಾ, ನಂತರ ಹಿಂದಿರುಗಿ ನೋಡಿಲ್ಲ. ಜಾನೆ ಕಹಾ ಸೇ ಆಯೀ ಹೈ, ಮರ್ಡರ್ 2, ಹೌಸ್‌ಫುಲ್ 2, ರೇಸ್ 2, ಕಿಕ್, ರಾಯ್, ಬ್ರದರ್ಸ್, ಹೌಸ್‌ಫುಲ್ 3, ರೇಸ್ 3 ಸೇರಿದಂತೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿ-ಟೌನ್ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಬಾಲಿವುಡ್‌ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ 35 ವರ್ಷದ ಜಾಕ್ವೆಲಿನ್ ಫರ್ನಾಂಡೀಸ್.

ಇಂತಹ ಜಾಕ್ವೆಲಿನ್ ಹೆಸರು ಪ್ರಾರಂಭದಲ್ಲಿ ಸಲ್ಮಾನ್ ಖಾನ್, ಬಹ್ರೇನ್ ಮೂಲದ ಯುವರಾಜ, ನಿರ್ದೇಶಕ ಸಾಜಿದ್ ಖಾನ್ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಕೇಳಿ ಬಂದಿತ್ತು. ಆದರೆ ಈಗ ದಕ್ಷಿಣ ಭಾರತದ ಉದ್ಯಮಿಯೊಬ್ಬರ ಜೊತೆ ಮುಂಬೈನಲ್ಲಿ ಸೆಟಲ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ಮುಂದಾಗಿದ್ದಾರೆ ಎನ್ನಲಾಗಿದೆ.

Jacqueline Fernandez, actress topless photo, akshay kumar, ರಾಮ ಸೇತು, ಅಕ್ಷಯ್​ ಕುಮಾರ್​, ಜಾಕ್ವೆಲಿನ್​ ಫರ್ನಾಂಡಿಸ್​, RamSetu. Jacqueline Fernandez topless photo, Jacqueline Fernandez 46 million followers, social media, viral news, viral photos, bollywood,, Jacqueline Fernandez, Jacqueline Fernandez latest photoshoot, Jacqueline Fernandez latest photos, Jacqueline Fernandez new movies, Jacqueline Fernandez hot photos, Jacqueline Fernandez Instagram, Bollywood, ಜಾಕ್ವೆಲಿನ್​ ಫರ್ನಾಂಡಿಸ್​, ಜಾಕ್ವೆಲಿನ್​ ಇನ್​ಸ್ಟಾಗ್ರಾಂ, ಜಾಕ್ವೆಲಿನ್​ ಹೊಸ ಫೋಟೋಶೂಟ್​, ಜಾಕ್ವೆಲಿನ್​ ಫರ್ನಾಂಡಿಸ್​, ಟಾಪ್​ಲೆಸ್​ ಫೋಟೋ ಹಂಚಿಕೊಂಡ ಜಾಕ್ವೆಲಿನ್​, ಬಾಲಿವುಡ್​ ನಟಿ ಜಾಕ್ವೆಲಿನ್​
ಜಾಕ್ವೆಲಿನ್ ಫರ್ನಾಂಡಿಸ್


ಮೂಲಗಳ ಪ್ರಕಾರ ಕಳೆದ ಕೆಲ ವರ್ಷಗಳಿಂದ ಜಾಕ್ವೆಲಿನ್ ದಕ್ಷಿಣ ಭಾರತದ ಈ ಉದ್ಯಮಿಯ ಜೊತೆ ಡೇಟಿಂಗ್‌ ಮಾಡುತ್ತಿದ್ದಾರಂತೆ. ಸದ್ಯ ಇಬ್ಬರೂ ಸೇರಿ ಲಾಕ್‌ಡೌನ್‌ನಲ್ಲಿಯೇ ಮುಂಬೈನ ಜುಹುವಿನ ಪ್ರತಿಷ್ಠಿತ ಏರಿಯಾದಲ್ಲಿ ಸೀ ಫೇಸಿಂಗ್ ಬಂಗಲೆಯೊಂದನ್ನು ಖರೀದಿಸಲು ಲಾಕ್ ಮಾಡಿಕೊಂಡಿದ್ದಾರಂತೆ. ಆ ಐಷಾರಾಮಿ ಬಂಗಲೆಯ ಬೆಲೆ ಬರೋಬ್ಬರಿ 175 ಕೋಟಿ ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ: ಕೆಜಿಎಫ್​ ಚಾಪ್ಟರ್​ 2 ತಂಡದ ಕಡೆಯಿಂದ ಸಿಕ್ತು ಹೊಸ ಅಪ್ಡೇಟ್..!​

ಫ್ರಾನ್ಸ್​ನಿಂದ ಹೆಸರಾಂತ ಇಂಟೀರಿಯರ್ ಡಿಸೈನರ್ ‌ಅನ್ನು ಭಾರತಕ್ಕೆ ಕರೆಸಿ, ತಮ್ಮ ಈ ಬಂಗಲೆಯ ಇಂಟೀರಿಯರ್ ಡಿಸೈನ್‌ ಅನ್ನು ಮಾಡಿಸುವ ಪ್ಲಾನ್​ ಕೂಡ ಮಾಡಿಕೊಂಡಿದ್ದಾರಂತೆ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅವರ ಬಾಯ್‌ಫ್ರೆಂಡ್. ಇನ್ನು ಜಾಕ್ವೆಲಿನ್ ಫರ್ನಾಂಡಿಸ್‌ರ ಉದ್ಯಮಿ ಬಾಯ್‌ಫ್ರೆಂಡ್ ಮುಂಬೈಗೆ ತಮ್ಮ ಗರ್ಲ್​ಫ್ರೆಂಡ್​ ಜೊತೆ ಶಿಫ್ಟ್ ಆಗಲಿದ್ದಾರಂತೆ. ಇಷ್ಟು ದಿನ ದಕ್ಷಿಣ ಭಾರತದಲ್ಲಿದ್ದ ತಮ್ಮ ವ್ಯವಹಾರಗಳನ್ನೂ ಹಾಗೂ ಕಚೇರಿಯನ್ನೂ ಮುಂಬೈಗೆ ಶಿಫ್ಟ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ಲಾಕ್‌ಡೌನ್ ಸಂಪೂರ್ಣವಾಗಿ ಅನ್‌ಲಾಕ್ ಆಗುತ್ತಲೇ ಇಂಟೀರಿಯರ್ ಡಿಸೈನ್ ಪೂರ್ಣಗೊಳಿಸಿ ಈ ಜೋಡಿ ಹೊಸ ಗೂಡು ಸೇರಲಿದೆಯಂತೆ.

ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಳಿ ಸದ್ಯ ಐದು ಸಿನಿಮಾಗಳಿವೆ. ಕಳೆದ ವರ್ಷ ಮಿಸಸ್ ಸೀರಿಯಲ್ ಕಿಲ್ಲರ್ ಎಂಬ ಓಟಿಟಿ ಚಿತ್ರದಲ್ಲಿ ನಟಿಸಿದ್ದ ಅವರು ಬಳಿಕ ಈ ವರ್ಷ ಫ್ಲಾಪ್ ಆದ ಸಲ್ಮಾನ್ ಖಾನ್ ನಾಯಕನಾಗಿದ್ದ ರಾಧೆ ಚಿತ್ರದ ಸ್ಪೆಷಲ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Ananya Panday: ಕಡಲ ತೀರದಲ್ಲಿ ತಂಗಿ-ಮುದ್ದಿನ ನಾಯಿ ಜೊತೆ ಕಾಲ ಕಳೆದ ಅನನ್ಯಾ ಪಾಂಡೆ..!

ಈಗ ಜಾನ್ ಅಬ್ರಹಾಂ ಹಾಗೂ ರಾಕುಲ್ ಪ್ರೀತ್ ಸಿಂಗ್ ಜೊತೆಗೆ ಅಟ್ಯಾಕ್, ಸೈಫ್ ಅಲಿ ಖಾನ್, ಅರ್ಜುನ್ ಕಪೂರ್, ಯಾಮಿ ಗೌತಮ್ ಜೊತೆ ಭೂತ್ ಪೊಲೀಸ್, ರಣವೀರ್ ಸಿಂಗ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಸರ್ಕಸ್ ಚಿತ್ರದಲ್ಲಿ ಪೂಜಾ ಹೆಗ್ಡೆ ಜೊತೆ ಮತ್ತೊಬ್ಬ ನಾಯಕಿಯಾಗಿ ಜಾಕ್ವೆಲಿನ್ ಕಾಣಿಸಿಕೊಳ್ಳಲಿದ್ದಾರೆ. ನಂತರ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಜತೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ಜಾಕ್ವೆಲಿನ್ ಬ್ಯುಸಿಯಾಗಿದ್ದಾರೆ. ಬಚ್ಚನ್ ಪಾಂಡೆ ಹಾಗೂ ರಾಮ್ ಸೇತು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್‌ಗೆ ಜಾಕ್ವೆಲಿನ್ ಜೋಡಿಯಾಗಿದ್ದಾರೆ.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: