ಬಾಲಿವುಡ್ ಚಿತ್ರಗಳನ್ನು ಬಾಯ್ಕಾಟ್ (Boycott) ಭೂತ ಬೆನ್ನುಬಿಡದೆ ಕಾಡ್ತಿದೆ. ಕಳೆದ ವರ್ಷ ಬಾಲಿವುಡ್ ಯಾವ ಸಿನಿಮಾ (Bollywood Movie) ಕೂಡ ನಿರೀಕ್ಷಿತ ಗಳಿಗೆ ಮಾಡಿಲ್ಲ. ಅನೇಕ ಟಾಪ್ ಹೀರೋಗಳ (Top Hero) ಸಿನಿಮಾಗಳು ಮಕಾಡೆ ಮಲಗಿದವು. ದಕ್ಷಿಣ ಭಾರತದ ಸಿನಿಮಾಗಳೇ ಬಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿತು. ಹೀಗಾಗಿ ಬಾಲಿವುಡ್ನ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿಲ್ಲ, ಅನೇಕ ನಟ-ನಟಿಯರು ಸೌತ್ ಸಿನಿಮಾಗಳತ್ತ (South Movies) ಮುಖ ಮಾಡ್ತಿದ್ದಾರೆ. ಬಾಯ್ಕಾಟ್ ಅಭಿಯಾನದಿಂದ ಪಾರು ಮಾಡುವಂತೆ ನಟ ಸುನೀಲ್ ಶೆಟ್ಟಿ (Suniel Shetty ), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಮೊರೆ ಹೋಗಿದ್ದಾರೆ. ಇದೇ ವೇಳೆ ಮಾತಾಡಿದ ಜಾಕಿ ಶ್ರಾಫ್ ಸಿನಿಮಾ ಥಿಯೇಟರ್ಗಳಲ್ಲಿ ಪಾಪ್ ಕಾನ್ ರೇಟ್ ಕಡಿಮೆ ಮಾಡುವಂತೆ ಸಿಎಂ ಯೋಗಿ ಬಳಿ ಮನವಿ ಮಾಡಿದ್ದಾರೆ.
ಸಿನಿಮಾ ಹಾಲ್ನಲ್ಲಿ ಪಾಪ್ ಕಾನ್ ಬೆಲೆ ಕಡಿಮೆ ಮಾಡಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬೈ ಪ್ರವಾಸದಲ್ಲಿದ್ದಾರೆ. ಈ ವೇಳೆ ಬಾಲಿವುಡ್ ನಟ ಸುನೀಲ್ ಶೆಟ್ಟಿ. ಮನೋಜ್ ಜೋಶಿ, ಕೈಲಾಶ್ ಖೇರ್, ಸೋನು ನಿಗಮ್, ಬೋನಿ ಕಪೂರ್ ಮತ್ತು ಜಾಕಿ ಶ್ರಾಫ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿಯಾದರು. ಸಭೆಯಲ್ಲಿ ಜಾಕಿ ಶ್ರಾಫ್ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ತಮ್ಮದೇ ಶೈಲಿಯಲ್ಲಿ ಸ್ವಾಗತಿಸಿದ್ದಾರೆ. ಬಳಿಕ ಮಾತಾಡಿದ ಜಾಕಿ ಶ್ರಾಫ್ ಸಿನಿಮಾ ಹಾಲ್ಗಳಲ್ಲಿ ಪಾಪ್ಕಾರ್ನ್ ಬೆಲೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು.
View this post on Instagram
ಜಾಕಿ ಅವರು ತಮ್ಮ ಚೇರ್ನಿಂದ ಎದ್ದು ನಿಂತು ಸಿಎಂ ಯೋಗಿಯನ್ನು ಸ್ವಾಗತಿಸಿದ್ದಾರೆ. ಮುಂಬೈಗೆ ಸುಸ್ವಾಗತ, ಕಭಿ ಭಿ ಘರ್ ಕಾ ಖಾನಾ ಚೈಯೇ ತೋ ಹುಕುಂ ಕರ್ನಾ, ಮಿಲ್ ಜಾಯೇಗಾ (ನಿಮಗೆ ಮನೆಯಲ್ಲಿ ಅಡುಗೆ ಮಾಡುವ ಆಹಾರ ಬೇಕಾದರೆ ನನಗೆ ಹೇಳಿ ನಾನು ಹೇಳಿಕಳುಹಿಸುತ್ತೇನೆ) ಎಂದು ಹೇಳಿದ್ದಾರೆ. ನಂತರ ಮಾತಾಡಿದ ಹಿರಿಯ ನಟ ಪಾಪ್ ಕಾರ್ನ್ ಬೆಲೆಯನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದಾರೆ.
ಸಿನಿಮಾ ಹಾಲ್ಗಳಲ್ಲಿ ಪಾಪ್ ಕಾರ್ನ್ಗೆ 500ರೂ
ಥಿಯೇಟರ್ ಹಾಲ್ನಲ್ಲಿ ಪಾಪ್ ಕಾರ್ನ್ ಬೆಲೆ ಕಡಿಮೆ ಮಾಡಿ ಸರ್ ಎಂದಿದ್ರು. ಥಿಯೇಟರ್ನಲ್ಲಿ ಪಾಪ್ ಕಾರ್ನ್ 500 ರೂ. ಇದೆ ಸಿನಿಮಾ ಟಿಕೆಟ್ಗಿಂತ ಪಾಪ್ ಕಾರ್ನ್ ಬೆಲೆ ಜಾಸ್ತಿ ಇದೆ. ಜನರು ಸಿನಿಮಾ ನೋಡಲು ಯಾರೂ ಬರದಿದ್ದರೆ ನಾವು ಸಿನಿಮಾ ಮಾಡಿ ಏನು ಪ್ರಯೋಜನ ಎಂದು ಹೇಳಿದ್ದಾರೆ.
View this post on Instagram
ಜಾಕಿ ಶ್ರಾಫ್ ಅವರು ಈವೆಂಟ್ನ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಸಿನಿಮಾ ರೂಲ್ಸ್ ಹಾಗೂ ಫಿಲ್ಮ್ ಸಿಟಿ ಬಗ್ಗೆ ತಿಳಿದು ಸಂತೋಷವಾಯ್ತು ಎಂದು ತಮ್ಮ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ