ಬಾಲಿವುಡ್ನ (Bollywood) ಹಿರಿಯ ನಟ ಜಾಕಿ ಶ್ರಾಫ್ (Jackie Shroff) ಎಂದರೆ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಅವರು ಇತ್ತೀಚಿನ ವಿಡಿಯೋ ಮೂಲಕ ವೈರಲ್ ಆಗಿದ್ದಾರೆ. ಆ ವೀಡಿಯೋದಲ್ಲಿ ಥಿಯೇಟರ್ಗಳಲ್ಲಿ ಪಾಪ್ಕಾರ್ನ್ ಬೆಲೆಯನ್ನು ಕಡಿಮೆ ಮಾಡುವಂತೆ ಜಾಕಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸಿದ್ದರು. ಈ ನಟನ ಕಾಳಜಿಗೆ ಸಿನಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಲ್ಲದೆ ಮನಸಾರೆ ನಕ್ಕಿದ್ದರು.
ಸಿನೆಮಾ ಮಂದಿರಗಳಲ್ಲಿ ಪಾಪ್ಕಾರ್ನ್ ಬೆಲೆ ಕಡಿಮೆ ಮಾಡಿ ಅಂತ ವಿನಂತಿಸಿಕೊಂಡ ಜಾಕಿ
ವೀಡಿಯೋದಲ್ಲಿ, ಜಾಕಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸ್ವಾಗತಿಸುವುದನ್ನು ಕಾಣಬಹುದು. ನಂತರ ಅವರು ಯೋಗಿ ಆದಿತ್ಯನಾಥ್ ಅವರಿಗೆ ತಮ್ಮ ವಿನಂತಿಯನ್ನು ಸಹ ತಿಳಿಸಿದರು. ಈ ಚಿತ್ರಮಂದಿರದಲ್ಲಿ ಪಾಪ್ಕಾರ್ನ್ ಬೆಲೆಯನ್ನು ಕಡಿಮೆ ಮಾಡಲು ಮತ್ತು ಅದರ ಪ್ರಮಾಣವನ್ನು ಕಡಿಮೆ ಮಾಡಲು ಕೇಳಿಕೊಂಡಿದ್ದಾರೆ. ಏಕೆಂದರೆ ಯಾವ ವ್ಯಕ್ತಿಯೂ ಅಷ್ಟು ತಿನ್ನಲು ಪಾಪ್ಕಾರ್ನ್ ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಕೇಳಿದ ಅಲ್ಲಿದ್ದ ಜನರು ನಗಲು ಶುರು ಮಾಡಿದರು. ಸಿನಿಮಾ ನೋಡುವ ಅನುಭವವು ಜನರಿಗೆ ಕೈಗೆಟುಕುವ ದರದಲ್ಲಿರಬೇಕು ಎಂದು ನಟ ಮತ್ತೊಮ್ಮೆ ಸಿಎಂ ಯೋಗಿ ಅವರಿಗೆ ಹೇಳಿದರು.
ಸರಿಗಮಪ ದಲ್ಲಿ ಚಿಕ್ಕ ಹುಡುಗನ ಗಾಯನ ಕೇಳಿ ತುಂಬಾನೇ ಖುಷಿ ಪಟ್ಟ ಜಾಕಿ
ಈಗ ಮತ್ತೊಂದು ವಿಷಯಕ್ಕೆ ಜಾಕಿ ಶ್ರಾಫ್ ಅವರು ಸುದ್ದಿಯಲ್ಲಿದ್ದಾರೆ. ನಟ ಜಾಕಿ ಶ್ರಾಫ್ ಇತ್ತೀಚೆಗೆ ಸರಿಗಮಪ ಲಿಟಲ್ ಚಾಂಪ್ಸ್ ಗ್ರ್ಯಾಂಡ್ ಫಿನಾಲೆಗೆ ಹೋಗಿದ್ದರು.
ಈ ಹಿರಿಯ ನಟ 9 ವರ್ಷದ ಸ್ಪರ್ಧಿ ಹರ್ಷ್ ಸಿಕಂದರ್ ಅವರ ಗಾಯನಕ್ಕೆ ಫಿದಾ ಆದರು. ಆದರೆ ಪುಟ್ಟ ಬಾಲಕನ ಜೀವನ ಕಥೆಯನ್ನು ತಿಳಿದಾಗ ಅವರು ನಿಜವಾಗಿಯೂ ಭಾವುಕರಾದರು.
ತನ್ನ ತಂದೆಯ ಸಾವಿನ ನಂತರ, ಹರ್ಷ್ ಕೇವಲ 9 ವರ್ಷ ವಯಸ್ಸಿನವನಾಗಿದ್ದರೂ ತನ್ನ ಕುಟುಂಬದ ಏಕೈಕ ಆದಾಯ ಗಳಿಸುವವ ವ್ಯಕ್ತಿಯಾಗಿ ಬದಲಾದನು ಎಂದು ನಟ ತಿಳಿದುಕೊಂಡರು.
ಅವನು ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ನೋಡಿಕೊಳ್ಳುವ ಸಲುವಾಗಿ ಹಾಡುವ ಮತ್ತು ಪ್ರದರ್ಶನ ನೀಡುವ ಮೂಲಕ ಹಣವನ್ನು ಗಳಿಸುತ್ತಿದ್ದಾರೆ ಅಂತ ಶೋ ನಲ್ಲಿ ತಿಳಿಸಲಾಯಿತು.
ಯುವ ಗಾಯಕನಿಗೆ ಸಹಾಯ ಮಾಡಲು ನಿರ್ಧರಿಸಿದ ನಟ
ಇದು ನಟ ಜಾಕಿ ಶ್ರಾಫ್ ಅವರನ್ನು ತುಂಬಾನೇ ಭಾವುಕರನ್ನಾಗಿ ಮಾಡಿತು. ಅವರು ಹರ್ಷ್ ಗೆ ಕೈಲಾದಷ್ಟು ಸಹಾಯ ಮಾಡಲು ಮುಂದೆ ಬಂದರು. ನಿಮ್ಮ ಧ್ವನಿ ಎಷ್ಟು ಪರಿಶುದ್ಧವಾಗಿದೆ ಎಂದರೆ, ಅದು ಎಲ್ಲರ ಆತ್ಮವನ್ನು ಸ್ಪರ್ಶಿಸುತ್ತದೆ. ನೀವು ಅದನ್ನು ಪೋಷಿಸುವ ಮತ್ತು ನಿಮ್ಮ ಕೌಶಲ್ಯಗಳನ್ನು ಗೌರವಿಸುವತ್ತ ಗಮನ ಹರಿಸಬೇಕೆಂದು ನಾನು ಬಯಸುತ್ತೇನೆ ಎಂದರು.
ಅದಕ್ಕಾಗಿಯೇ ನಾನು ನಿಮಗೆ ಒಂದು ವರ್ಷದ ಇಂಟರ್ನೆಟ್ ಮತ್ತು ವಿದ್ಯುತ್ ಬಿಲ್ ಗಳನ್ನು ಪಾವತಿಸುತ್ತೇನೆ. ಇಷ್ಟೇ ಅಲ್ಲದೆ ಉಚಿತ ಶಿಕ್ಷಣ ಮತ್ತು ಲ್ಯಾಪ್ಟಾಪ್ ಸೇವಾ ಕೇಂದ್ರದಲ್ಲಿ ಅಡ್ಮಿಷನ್ ಮಾಡಿಸುತ್ತೇನೆ ಎಂದಿದ್ದಾರೆ.
ಇದರಿಂದ ನೀವು ನಿಮ್ಮ ಮನೆಯಿಂದಲೇ ಕ್ಲಾಸ್ ಅಟೆಂಡ್ ಮಾಡಬಹುದು. ಬೇರೆಯವರಿಗೂ ತರಗತಿಗಳನ್ನು ನೀಡಬಹುದು. ನೀವು ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾ ಇರಿ. ಯಶಸ್ಸನ್ನು ಸಾಧಿಸುತ್ತೀರಿ ಎಂದು ನಾನು ಹಾರೈಸುತ್ತೇನೆ ಅಂತ ಜಾಕಿ ಹೇಳಿದರು.
ಇದನ್ನು ನೋಡಿದ ಪ್ರೇಕ್ಷಕರು ಸಹ ತುಂಬಾನೇ ಭಾವುಕರಾದರು. ಶ್ರಾಫ್ ಕೊನೆಯ ಬಾರಿಗೆ ಅನಂತ್ ಮಹಾದೇವನ್ ಅವರ ‘ಲೈಫ್ ಈಸ್ ಗುಡ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಡಿಸೆಂಬರ್ 2022 ರಲ್ಲಿ ಬಿಡುಗಡೆಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ