Jackie Chan: ಕೊರೋನಾ ಸೋಂಕು ತಗುಲಿರುವ ಸುದ್ದಿ ಕುರಿತಾಗಿ ಸ್ಪಷ್ಟನೆ ಕೊಟ್ಟ ನಟ ಜಾಕಿ ಚಾನ್
Corona-Jackie Chan: ಹಾಲಿವುಡ್ನ ಆ್ಯಕ್ಷನ್ ಕಿಂಗ್ ಜಾಕಿ ಚಾನ್ ಅವರಿಗೂ ಈ ಕೊರೋನಾ ಸೋಂಕು ತಗುಲಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಕುರಿತಾಗಿ ನಟ ಜಾಕಿ ಚಾನ್ ಪ್ರತಿಕ್ರಿಯಿಸಿದ್ದಾರೆ.
ವಿಶ್ವದೆಲ್ಲೆಡೆ ಈಗ ಕೊರೋನಾ ವೈರಸ್ನದ್ದೇ ಸದ್ದು. ಎಲ್ಲಿ ನೋಡಿದರೂ ಜನರು ಆತಂಕದ ಜೊತೆಗೆ ಕೊರೋನಾ ವೈರಸ್ನಿಂದ ಸೋಂಕು ತಾಗದಂತೆ ಮುನ್ನೆಚ್ಚರಿಕೆ ವಹಿಸುವತ್ತಲೇ ಗಮನ ಹರಿಸುತ್ತಿದ್ದಾರೆ.
ಹಾಲಿವುಡ್ನ ಆ್ಯಕ್ಷನ್ ಕಿಂಗ್ ಜಾಕಿ ಚಾನ್ ಅವರಿಗೂ ಈ ಕೊರೋನಾ ಸೋಂಕು ತಗುಲಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಕುರಿತಾಗಿ ನಟ ಜಾಕಿ ಚಾನ್ ಪ್ರತಿಕ್ರಿಯಿಸಿದ್ದಾರೆ.
ನಟ ಜಾಕಿ ಚಾನ್
'ನೀವುಗಳು ತೋರಿದ ಕಾಳಜಿಗೆ ನಾನು ಋಣಿ. ನಾನು ಆರೋಗ್ಯವಾಗಿ ಹಾಗೂ ಸುರಕ್ಷಿತವಾಗಿದ್ದೇನೆ. ಎಲ್ಲರೂ ಸುರಕ್ಷಿತ ಹಾಗೂ ಆರೋಗ್ಯದಿಂದಿರಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.