ಸೈನಾ ನೆಹ್ವಾಲ್​ ಜೀವನಾಧಾರಿತ ಚಿತ್ರದಲ್ಲಿ ಶ್ರದ್ಧಾ ಕಪೂರ್​ ಬದಲಾಗಿ ಪರಿಣಿತಿ ಚೋಪ್ರಾ..!

ಸಿನಿಮಾಗಾಗಿ ಹಲವಾರು ತಿಂಗಳು ಬ್ಯಾಡ್ಮಿಂಟನ್​ ಅಭ್ಯಾಸ ಮಾಡಿದ ನಂತರವೂ ಶ್ರದ್ಧಾ ಕಪೂರ್​ ಸೈನಾ ನೆಹ್ವಾಲ್​ ಸಿನಿಮಾದಿಂದ ಹೊರ ಬಂದಿದ್ದಾರೆ. ಈಗ ಅವರ ಸ್ಥಾನಕ್ಕೆ ಪರಿಣಿತಿ ಚೋಪ್ರಾ ಆಯ್ಕೆಯಾಗಿದ್ದಾರೆ.

Anitha E | news18
Updated:March 16, 2019, 1:47 PM IST
ಸೈನಾ ನೆಹ್ವಾಲ್​ ಜೀವನಾಧಾರಿತ ಚಿತ್ರದಲ್ಲಿ ಶ್ರದ್ಧಾ ಕಪೂರ್​ ಬದಲಾಗಿ ಪರಿಣಿತಿ ಚೋಪ್ರಾ..!
ಸೈನಾ ನೆಹ್ವಾಲ್​ ಪಾತ್ರದಲ್ಲಿ ಪರಿಣಿತಿ ಚೋಪ್ರಾ
Anitha E | news18
Updated: March 16, 2019, 1:47 PM IST
ಬಾಲಿವುಡ್​ನಲ್ಲಿ ಸೈನಾ ನೆಹ್ವಾಲ್​ ಜೀವನಾಧಾರಿತ ಸಿನಿಮಾ ಸೆಟ್ಟೇರಲಿದ್ದು, ಅದರಲ್ಲಿ ಶ್ರದ್ಧಾ ಕಪೂರ್​ ಅಭಿನಯಿಸಲಿದ್ದಾರೆ ಅನ್ನೋದು ಸುದ್ದಿಯಾಗಿತ್ತು. ಅದಕ್ಕಾಗಿ ಶ್ರದ್ಧಾ ಕಪೂರ್​ ಸೈನಾರನ್ನು ಭೇಟಿಯಾಗಿ ದ್ದರು.

 
 View this post on Instagram
 

#SAINA


A post shared by Shraddha (@shraddhakapoor) on


ಅಷ್ಟೇಅಲ್ಲ ಶ್ರದ್ಧಾ ಹಲವು ತಿಂಗಳುಗಳ ಕಾಲ ಬ್ಯಾಡ್ಮಿಂಟನ್​ ಅಭ್ಯಾಸವನ್ನೂ ಮಾಡಿದ್ದರು. ಆದರೆ ಅವರು ಈ ಸಿನಿಮಾದಲ್ಲಿ ಅಭಿನಯಿಸಲು ಡೇಟ್ಸ್​ ಸಮಸ್ಯೆಯಾಗಿದ್ದರಿಂದ ಈ ಸಿನಿಮಾದಿಂದ ಹೊರ ಬಂದಿದ್ದಾರೆ. ಈ ಬಗ್ಗೆ ವ್ಯಾಪಾರಿ ವಿಶ್ಲೇಷಕ ತರನ್​ ಆದರ್ಶ್​ ಸಹ ಟ್ವೀಟ್​ ಮಾಡಿದ್ದಾರೆ.ಸದ್ಯ ಶ್ರದ್ದಾ ಕಪೂರ್​ ಲಂಡನ್​ನಲ್ಲಿ ವರುಣ್​ ಧವನ್​ ಜತೆ 'ಸ್ಟ್ರೀಟ್ ಡಾನ್ಸರ್​ 3D' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದಾಗಿ ಈಗ ಶ್ರದ್ಧಾ ಜಾಗಕ್ಕೆ ಪರಿಣಿತಿ ಚೋಪ್ರಾ ಬಂದಿದ್ದಾರೆ. ಇದಕ್ಕಾಗಿ ಅವರೂ ಈಗ ಬ್ಯಾಡ್ಮಿಂಟನ್​ ತರಬೇತಿ ಪಡೆಯುತ್ತಿದ್ದಾರೆ.

ಈ ಹಿಂದೆ ಶ್ರದ್ಧಾ ಡೆಂಗೆ ಜ್ವರದಿಂದಾಗಿ ತುಂಬಾ ದಿನ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದಾಗಿ ಅವರ ಶೆಡ್ಯುಲ್ ಸದ್ಯ ತುಂಬಾ ಟೈಟ್​ ಆಗಿದೆ. ಅಲ್ಲದೆ ಶ್ರದ್ಧಾ ಪ್ರಭಾಸ್​ ಜತೆ 'ಸಾಹೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅದರ ಪ್ರಚಾರದಲ್ಲೂ ಬ್ಯುಸಿಯಾಗಿದ್ದಾರೆ. ಅಲ್ಲದೆ ಟೈಗರ್ ಶ್ರಾಫ್​ ಜತೆ ಮತ್ತೊಂದು ಸಿನಿಮಾ ಸೆಟ್ಟೇರಲಿದೆ.

ಈ ಎಲ್ಲ ಕಾರಣಗಳಿಂದಾಗಿ ಭೂಷನ್​ಕುಮಾರ್ ಪ್ರೊಡಕ್ಷನ್ಸ್​ ಶ್ರದ್ಧಾ ಜಾಗಕ್ಕೆ ಪರಿಣಿತಿಯನ್ನು ತೆಗೆದುಕೊಂಡಿದೆ. ಈಗಷ್ಟೆ ಅಕ್ಷಯ್​ ಕುಮಾರ್​ ಜತೆ 'ಕೇಸರಿ' ಸಿನಿಮಾದ ಚಿತ್ರೀರಕಣ ಮುಗಿಸಿರು ಪರಿಣಿತಿ ಇದರ ಪ್ರಚಾರ ಮುಗಿಯುತ್ತಿದ್ದಂತೆ ಏಪ್ರಿಲ್​ನಲ್ಲಿ ಸೈನಾ ಜೀವನಾಧಾರಿತ ಸಿನಿಮಾ ತಂಡದ ಸೇರಲಿದ್ದಾರೆ.

PHOTOS: ನಟಿ ರಾಧಿಕಾ ಪಂಡಿತ್​ರ ಹೊಸ ಲುಕ್​​: ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರಾ ಯಶ್​ ಮಡದಿ..!

First published:March 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ