HOME » NEWS » Entertainment » ITS AN ORIGINAL SCRIPT AND SOMETHING MY TEAM N I ARE EXCITED SAYS KICCHA SUDEEP ZP

Kiccha Sudeep: ನಟನೆಗೆ ಸೈ, ಆ್ಯಕ್ಷನ್ ಕಟ್​ಗೆ ಜೈ: ಅಭಿನಯ ಚಕ್ರವರ್ತಿ ಕಿಚ್ಚನ ಮುಂದಿನ ಸಿನಿಮಾ ಪಕ್ಕಾ ಒರಿಜಿನಲ್

Kiccha Sudeep: ಇದಕ್ಕೆ ಒಂದು ಕಾರಣ ತೆಲುಗಿನ ಸೂಪರ್ ಡೂಪರ್ ಹಿಟ್ ಭರತ್ ಅನೆ ನೇನು ಚಿತ್ರದ ರಿಮೇಕ್ ರೈಟ್ಸ್ ಅಭಿನಯ ಚಕ್ರವರ್ತಿಯ ಪಾಲಾಗಿದೆ ಎಂಬ ಸುದ್ದಿ. ಹೀಗಾಗಿ ಸುದೀಪ್ ನಿರ್ದೇಶಿಸಲಿರುವುದು ರಿಮೇಕ್ ಸಿನಿಮಾ ಎಂದೇ ಹೇಳಲಾಗಿತ್ತು. ಆದರೀಗ ಈ ಬಗ್ಗೆ ಅಭಿಮಾನಿಗಳ ಮಾಣಿಕ್ಯ ಸ್ಪಷ್ಟನೆ ನೀಡಿದ್ದಾರೆ.

zahir | news18-kannada
Updated:November 18, 2019, 4:31 PM IST
Kiccha Sudeep: ನಟನೆಗೆ ಸೈ, ಆ್ಯಕ್ಷನ್ ಕಟ್​ಗೆ ಜೈ: ಅಭಿನಯ ಚಕ್ರವರ್ತಿ ಕಿಚ್ಚನ ಮುಂದಿನ ಸಿನಿಮಾ ಪಕ್ಕಾ ಒರಿಜಿನಲ್
ಕಿಚ್ಚ ಸುದೀಪ್​
  • Share this:
ಸ್ಯಾಂಡಲ್​ವುಡ್ ಬಾದ್​ಷಾ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಅದು ಯಾವ ಸಿನಿಮಾ, ರಿಮೇಕಾ ಇಲ್ಲ ಸ್ವಮೇಕಾ ಎಂಬ ಪ್ರಶ್ನೆಗಳು ಸಹ ಅಭಿನಯ ಚಕ್ರವರ್ತಿ ಅಭಿಮಾನಿಗಳಲ್ಲಿತ್ತು.ಈ ಕುತೂಹಲಕಾರಿ ಪ್ರಶ್ನೆಗೆ ಖುದ್ದು ಕಿಚ್ಚ ಸುದೀಪ್ ಅವರೇ ಉತ್ತರಿಸಿದ್ದಾರೆ.

'ಮೈ ಆಟೋಗ್ರಾಫ್' ಸಿನಿಮಾ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದ ಸುದೀಪ್ ನಟನೆಗೆ ಮಾತ್ರವಲ್ಲ ಆ್ಯಕ್ಷನ್ ಕಟ್​ಗೂ ಸೈ ಎಂದು ಮೊದಲ ಚಿತ್ರದಲ್ಲೇ ನಿರೂಪಿಸಿದ್ದರು. ಆ ಬಳಿಕ ನೋವು ನಲಿವಿನ ಕಥೆ ಹೇಳಿದ್ದ '73 ಶಾಂತಿ ನಿವಾಸ', ಮಾಸ್ ಪ್ರೇಕ್ಷಕರಿಗಾಗಿ 'ವೀರ ಮದಕರಿ', ಕೆಂಪೇಗೌಡ, ಯುವಪ್ರೇಮಿಗಳಿಗಾಗಿ ಜಸ್ಟ್ ಮಾತ್ ಮಾತಲ್ಲಿ' ಚಿತ್ರ ನಿರ್ದೇಶಿಸಿ ಸುದೀಪ್ ಮೋಡಿ ಮಾಡಿದ್ದರು.

ಅದರಲ್ಲೂ 2014ರಲ್ಲಿ 'ಮಾಣಿಕ್ಯ' ಚಿತ್ರವನ್ನು ನಟನೆಯೊಂದಿಗೆ ನಿರ್ದೇಶಿಸಿ ಬಾಕ್ಸಾಫೀಸ್​ನ್ನು ಕೊಳ್ಳೆ ಹೊಡೆದಿದ್ದರು. ಇದೀಗ ಐದು ವರ್ಷಗಳ ಬಳಿಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲು 'ಪೈಲ್ವಾನ್' ರೆಡಿಯಾಗುತ್ತಿದ್ದಾರೆ. ಇದರ ನಡುವೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಕಿಚ್ಚ ಸುದೀಪ್ ಈ ಬಾರಿ ಕೂಡ ರಿಮೇಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಗುಲ್ಲೆದ್ದಿತ್ತು.

ಇದಕ್ಕೆ ಒಂದು ಕಾರಣ ತೆಲುಗಿನ ಸೂಪರ್ ಡೂಪರ್ ಹಿಟ್ ಭರತ್ ಅನೆ ನೇನು ಚಿತ್ರದ ರಿಮೇಕ್ ರೈಟ್ಸ್ ಅಭಿನಯ ಚಕ್ರವರ್ತಿಯ ಪಾಲಾಗಿದೆ ಎಂಬ ಸುದ್ದಿ. ಹೀಗಾಗಿ ಸುದೀಪ್ ನಿರ್ದೇಶಿಸಲಿರುವುದು ರಿಮೇಕ್ ಸಿನಿಮಾ ಎಂದೇ ಹೇಳಲಾಗಿತ್ತು. ಆದರೀಗ ಈ ಬಗ್ಗೆ ಅಭಿಮಾನಿಗಳ 'ಮಾಣಿಕ್ಯ' ಸ್ಪಷ್ಟನೆ ನೀಡಿದ್ದಾರೆ.

'ನಾನು ನಿರ್ದೇಶಿಸುತ್ತಿರುವುದು ಒರಿಜಿನಲ್ ಸ್ಕ್ರಿಪ್ಟ್​. ಈ ಚಿತ್ರದ ಕಥೆಗಾಗಿ ನಮ್ಮ ತಂಡದ ಸದಸ್ಯರು ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಆ ಕಥೆಯ ಬಗ್ಗೆ ನಾನು ಕೂಡ ಉತ್ಸುಕನಾಗಿದ್ದೇನೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ' ಎಂದು ಸ್ಯಾಂಡಲ್​ವುಡ್ ಬಿಗ್ ಬಾಸ್ ಸುದೀಪ್ ತಿಳಿಸಿದ್ದಾರೆ.ಅಲ್ಲಿಗೆ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದ್ದ ರಿಮೇಕಾ, ಸ್ವಮೇಕಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.


ಸದ್ಯ ಕಿಚ್ಚ 'ಕೋಟಿಗೊಬ್ಬ 3' ಚಿತ್ರದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದು, ಈ ಚಿತ್ರದ ಬಳಿಕ 'ಫ್ಯಾಂಟಮ್' ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಇದಾದ ಬಳಿಕವಷ್ಟೇ ಅಭಿನಯ ಚಕ್ರವರ್ತಿಯ ಕ್ಯಾಮೆರಾ ಹಿಂದಿನ ಕಮಾಲ್ ಪ್ರಾರಂಭವಾಗಲಿದೆ. ಇನ್ನು ಸುದೀಪ್-ಸಲ್ಮಾನ್ ಅಭಿನಯದ 'ದಬಾಂಗ್-3' ಚಿತ್ರವು ಡಿ.20ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಈ ಬಾಲಿವುಡ್​ ಸಿನಿಮಾ ಕನ್ನಡದಲ್ಲೂ ಡಬ್​ ಆಗಿ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

First published: November 18, 2019, 4:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories