ಬಾಲಿವುಡ್ (Bollywood) ಬಾದಷಾ ಶಾರುಖ್ ಖಾನ್ (Shah Rukh Khan) ಒಂದು ಚಿಕ್ಕ ಕೆಲ್ಸ ಮಾಡಿದ್ರೂ ಅದು ದೇಶದೆಲ್ಲೆಡೆ ಭಾರೀ ಸುದ್ದಿ ಆಗುತ್ತೆ ಅಂತ ಎಲ್ರಿಗೂ ತಿಳಿದಿರೋ ವಿಷಯ. ಇನ್ನು ಅವರು ಮುಂಬೈನ ಸಮುದ್ರ ತೀರದಲ್ಲಿ ದೊಡ್ಡ ಬಂಗಲೆ ತಗೊಂಡಿರೋ ವಿಷಯ ಅಂತ್ರೂ ಕೇಳಲೇ ಬೇಡಿ. ಶಾರುಖ್ ಅವರ ಆ ಬಿಗ್ ಬಂಗಲೆ ಈಗ ಮುಂಬೈನ (Mumbai) ಪ್ರಮುಖ ಆಕರ್ಷಣೀಯ ಪ್ರವಾಸಿ ತಾಣವಾಗಿದೆ.
ಶಾರುಖ್ ಖಾನ್ ಅವರ ಆ ಬಿಗ್ ಬಂಗಲೆ ಹೆಸರೇನು ಗೊತ್ತಾ?
ಶಾರುಖ್ ಖಾನ್ ಅವರ ಆ ಬಿಗ್ ಬಂಗಲೆ ಹೆಸರು 'ಮನ್ನತ್' ಆಗಿದೆ. ಆ ಬಂಗಲೆಯನ್ನು ಖರೀದಿಸುವಾಗ ಶಾರುಖ್ ಖಾನ್ ಅವರಿಗೆ ಅಷ್ಟೊಂದು ಆರ್ಥಿಕ ಸಾಮರ್ಥ್ಯವಿರಲಿಲ್ಲ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ. "ನನ್ನ ಸಾಮರ್ಥ್ಯಕ್ಕೆ ಮೀರಿ ಆ ಸುಂದರ ಬಂಗಲೆಯನ್ನು ಖರೀದಿಸಿದೆ. ಆ ಬಂಗಲೆಯನ್ನು ಖರೀದಿಸಿದ ನಂತರ ಆ ಮನೆಯನ್ನು ಮರುನಿರ್ಮಾಣ ಮಾಡಿ ಮತ್ತಷ್ಟು ವ್ಯವಸ್ಥಿತವಾಗಿ ಆ ಮನೆಯನ್ನು ಸಜ್ಜುಗೊಳಿಸಬೇಕು ಎಂದುಕೊಂಡಿದ್ದೆ" ಎಂದು ಶಾರುಖ್ ಖಾನ್ ನೆನಪಿಸಿಕೊಂಡರು.
ಶಾರುಖ್ ಖಾನ್ ಅವರು ತಮ್ಮ ಪತ್ನಿ ಗೌರಿ ಮತ್ತು ಅವರ ಮೂವರು ಮಕ್ಕಳೊಂದಿಗೆ ಮನ್ನತ್‌ನಲ್ಲಿ ವಾಸಿಸುತ್ತಿದ್ದಾರೆ, ಇದು ಮುಂಬೈನ ಸಮುದ್ರಕ್ಕೆ ಎದುರಾಗಿರುವ ಬೃಹತ್ ಬಂಗಲೆಯಾಗಿದೆ. ಈ ಮನೆಯು ಈಗ ಮುಂಬೈನಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಶಾರುಖ್ ಖಾನ್ ಅಭಿಮಾನಿಗಳು ಮನ್ನತ್ ಬಂಗಲೆ ಹೊರಗೆ ಪೋಟೋಗಳನ್ನು ತೆಗೆದುಕೊಳ್ಳಲು ಬ್ಯಾಂಡ್‌ಸ್ಟ್ಯಾಂಡ್‌ಗೆ ಹೋಗುತ್ತಾರೆ.
ಇದನ್ನೂ ಓದಿ: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!
ಅವರ ಅದೃಷ್ಟ ಚೆನ್ನಾಗಿದ್ರೆ, ಆ ಬಂಗಲೆಯಲ್ಲಿ ವಾಸ ಮಾಡುತ್ತಿರುವ ಶಾರುಖ್ ಖಾನ್ ಮತ್ತು ಆ ಬಂಗಲೆಗೆ ಆಗಮಿಸಿದ ಸ್ಟಾರ್ ಗಳ ಜೊತೆ ಕೂಡ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಬಹುದು.
ಶಾರುಖ್ ಅವರ ಪತ್ನಿ ಗೌರಿಯವರ ಹೊಸ ಪುಸ್ತಕ ಬಿಡುಗಡೆ ಸಮಾರಂಭ
ಶಾರುಖ್ ಖಾನ್ ಪತ್ನಿ ಗೌರಿ ಅವರು ತಮ್ಮದೇ ವಿಶಿಷ್ಟ ವ್ಯಕ್ತಿತ್ವದಿಂದ ಮನೆ ಮಾತಾಗಿರುವ ಸ್ಟಾರ್ ಪತ್ನಿ ಆಗಿದ್ದಾರೆ. ಗೌರಿ ಅವರ ಹೊಸ ಕಾಫಿ ಟೇಬಲ್ ಪುಸ್ತಕ 'ಮೈ ಲೈಫ್ ಇನ್ ಡಿಸೈನ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಾರುಖ್ ಅವರು ಬೃಹತ್ ಬಂಗಲೆಯಾದ ಮನ್ನತ್ ಅನ್ನು ಯಾವಾಗ ಖರೀದಿಸಿದರು ಮತ್ತು ಎಷ್ಟು ಶ್ರಮದಿಂದ ಅದನ್ನು ಮನೆಯನ್ನಾಗಿ ಪರಿವರ್ತಿಸಿದ್ದಾರೆ ಎಂಬುದರ ಕುರಿತು ಮಾತನಾಡಿದರು.
“ದೆಹಲಿಯಿಂದ ಬಂದವರು ಬಂಗಲೆಗಳಲ್ಲಿ ವಾಸಿಸುತ್ತಿದ್ದರು. ಮುಂಬೈ ತನ್ನದೇ ವಿಶಿಷ್ಟ ವ್ಯವಸ್ಥೆಯನ್ನು ಹೊಂದಿದೆ. ಮುಂಬೈನಲ್ಲಿ ಅಪಾರ್ಟ್‌ಮೆಂಟ್‌ಗಳು ಇನ್ನೂ ಹೆಚ್ಚು ದುಬಾರಿಯಾಗಿದೆ. ಆದ್ದರಿಂದ ನಾನು ಈ ಮನ್ನತ್ ಬಂಗಲೆಯನ್ನು ಅತ್ಯಂತ ಸುಂದರ ಬಂಗಲೆಯಾಗಿ ಪರಿವರ್ತಿಸಿದ್ದೇನೆ. ನಮ್ಮ ಮೊದಲ ಮನೆಗೂ ಈ ಮನ್ನತ್ ಬಂಗಲೆಗೂ ತುಂಬಾ ದೂರದಲ್ಲಿಲ್ಲ. ಆ ಮನೆಯನ್ನು ನನಗೆ ನಿರ್ದೇಶಕರೊಬ್ಬರು ಗಿಫ್ಟ್ ಕೊಟ್ಟಿದ್ದಾರೆ" ಎಂದು ಶಾರುಖ್ ಹೇಳಿದರು.
ಶಾರುಖ್ ಖಾನ್ ತಮ್ಮ ಮಾತನ್ನು ಮುಂದುವರಿಸುತ್ತಾ “ಈ ಬಂಗಲೆ ಖರೀದಿಸುವಾಗ ನಮ್ಮಲ್ಲಿ ಹೆಚ್ಚು ಹಣವಿರಲಿಲ್ಲ. ಆದರೂ ಸಹ ಇದ್ದ ಹಣದಲ್ಲಿಯೇ ಹೇಗೋ ಈ ಬಂಗಲೆಯನ್ನು ಖರೀದಿಸಲು ನಿರ್ಧರಿಸಿದೆವು.
ಆದರೆ ಅದು ನಮ್ಮ ಮಿತಿಯನ್ನು ಮೀರಿತ್ತು. ಆ ಬಂಗಲೆಯನ್ನು ಖರೀದಿಸಿದ ನಂತರ ಅದನ್ನು ಮತ್ತೊಮ್ಮೆ ಮರುನಿರ್ಮಾಣ ಮಾಡಬೇಕಾಗಿತ್ತು. ಏಕೆಂದರೆ ಅದು ಸಾಕಷ್ಟು ಶಿಥಿಲವಾಗಿತ್ತು. ಆದರೆ ಅದನ್ನು ಮಾಡಲು ಸಹ ನಮಲ್ಲಿ ಹಣವಿರಲಿಲ್ಲ. ಆದರೂ ಸಹ ನಾವು ಮನೆಯ ಡಿಸೈನರ್ ಅನ್ನು ಕರೆಯಬೇಕೆಂದುಕೊಂಡೆವು. ಅವರು ನಮಗೆ ಊಟ ಬಡಿಸುತ್ತಾ, ಮನೆಯನ್ನು ಹೇಗೆ ಡಿಸೈನ್ ಮಾಡಬೇಕೆಂದು ಹೇಳಿದರು.
ಅವರು ಹೇಳಿದ ಡಿಸೈನ್ ಗೆ ತಗಲುವ ವೆಚ್ಚವು ನಾನು ಒಂದು ತಿಂಗಳಲ್ಲಿ ಗಳಿಸುವ ಸಂಬಳಕ್ಕಿಂತ ಹೆಚ್ಚಿನದಾಗಿತ್ತು" ಎಂದು ಶಾರುಖ್ ಖಾನ್ ನೆನಪಿಸಿಕೊಂಡರು. ಮನ್ನತ್ ಬಂಗಲೆಯನ್ನು ತುಂಬಾ ವಿಶಿಷ್ಟವಾಗಿ ವ್ಯವಸ್ಥಿತಗೊಳಿಸಬೇಕು ಎಂಬುದು ಗೌರಿಯ ಕನಸಾಗಿತ್ತು. ಮನೆಯಲ್ಲಿ ತಮ್ಮ ನೆಚ್ಚಿನ ಕೋಣೆ ಗ್ರಂಥಾಲಯವಾಗಿದೆ.
ನಾನು ನನ್ನ ಹೆಚ್ಚಿನ ಸಮಯವನ್ನು ಸ್ನಾನಗೃಹದಲ್ಲಿ ಕಳೆಯುತ್ತೇನೆ ಎಂಬುದು ಎಲ್ಲ ಸುಳ್ಳು. ಏಕೆಂದರೆ ನಾನು ನನ್ನ ಗ್ರಂಥಾಲಯವನ್ನು ಹೆಚ್ಚು ಇಷ್ಟಪಡುತ್ತೇನೆ. ಇದು ನನ್ನ ಕಚೇರಿಯ ಮತ್ತೊಂದು ವಿಭಾಗವಾಗಿದೆ. ಈ ಕೋಣೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ಸ್ ಗ್ಯಾಜೇಟ್ ಗಳೂ ಇಲ್ಲ. ಇಲ್ಲಿ ಕುಳಿತು ಓದಲು ನಾನು ಹೆಚ್ಚು ಇಷ್ಟ ಪಡುತ್ತೇನೆ. ಆದರೆ ಬಹಳ ದಿನಗಳಿಂದ ನನಗೆ ಯಾವುದೇ ಪುಸ್ತಕ ಓದಲು ಆಗಿಲ್ಲ ಎಂದು ಹೇಳಿದರು.
ಗೌರಿಯವರ ಪುಸ್ತಕವು 'ಮನ್ನತ್' ಬಂಗಲೆಯ ಸ್ಪೆಷಲ್ ಪೋಟೋಗಳನ್ನು ಒಳಗೊಂಡಿದೆ. ಅದರ ಜೊತೆಗೆ ಶಾರುಖ್ ಮನೆಯವರು ಹೇಗಿದ್ದಾರೆ ಎಂಬುದರ ಬಗ್ಗೆಯೂ ಸಹ ಬರೆದಿದ್ದಾರೆ. “ನಾವು ದಿನಾಲು ಮನೆಯಲ್ಲಿ ಊಟವನ್ನು ಜೊತೆಯಲ್ಲಿಯೇ ಮಾಡುತ್ತೇವೆ. ಆಗ ನಾವು ಈ ದಿನ ಹೇಗಿತ್ತು? ಎಂದು ಕೇಳುತ್ತೇವೆ. ಕೆಲಸ ಹೇಗಿತ್ತು? ಅಂತಾನೂ ಕೇಳುತ್ತೇವೆ. ಆಗ ಈ ದಿನ ತೃಪ್ತಿಕರವಾಗಿತ್ತು ಎಂದರೆ ಗೌರಿ ಸಂತಸವಾಗುತ್ತಾಳೆ" ಎನ್ನುತ್ತಾರೆ ಶಾರುಖ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ