ಸ್ಯಾಂಡಲ್​ವುಡ್​ಗೆ ಐಟಿ ಶಾಕ್​; ಕೆಜಿಎಫ್​ ಸ್ಟಾರ್​ ಯಶ್​ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!

ಮಹಾಲಕ್ಷ್ಮೀ ಲೇಔಟ್​ ಬಳಿ ಇರುವ ರಾಕ್​ಲೈನ್​ ವೇಂಟಕೇಶ್​ ಮನೆ ಮೇಲೆ 8 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸದ್ಯ ಅಧಿಕಾರಿಗಳು ಮನೆ ಪರಿಶೀಲನೆ ನಡೆಸಿ, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

Rajesh Duggumane | news18
Updated:January 3, 2019, 12:59 PM IST
ಸ್ಯಾಂಡಲ್​ವುಡ್​ಗೆ ಐಟಿ ಶಾಕ್​; ಕೆಜಿಎಫ್​ ಸ್ಟಾರ್​ ಯಶ್​ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!
ಸಾಂದರ್ಭಿಕ ಚಿತ್ರ
  • News18
  • Last Updated: January 3, 2019, 12:59 PM IST
  • Share this:
ಬೆಂಗಳೂರು(ಜ.3): ಸ್ಯಾಂಡಲ್​ವುಡ್​ ಕಲಾವಿದರು ಹಾಗೂ ನಿರ್ಮಾಪಕರಿಗೆ ಇಂದು ಮುಂಜಾನೆ ಆದಾಯ ತೆರಿಗೆ ಇಲಾಖೆ (ಐಟಿ) ಶಾಕ್​ ನೀಡಿದೆ. ಬೆಂಗಳೂರಿನಲ್ಲಿ ಸುಮಾರು 200 ಅಧಿಕಾರಿಗಳು ರೇಡ್​ ನಡೆಸಿದ್ದು, ಚಂದನವನದ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಸದಾಶಿವ ನಗರದಲ್ಲಿರುವ 'ಪವರ್​ ಸ್ಟಾರ್​' ಪುನೀತ್​ ರಾಜ್​ಕುಮಾರ್​ ಮನೆ, 'ಕಿಚ್ಚ' ಸುದೀಪ್​, ಮಾನ್ಯತಾ ಟೆಕ್​ ಪಾರ್ಕ್​ನಲ್ಲಿರುವ 'ಹ್ಯಾಟ್ರಿಕ್​ ಹೀರೋ' ಶಿವರಾಜ್​ಕುಮಾರ್​ ಮನೆ ಹಾಗೂ ಕತ್ತರಿಗುಪ್ಪೆಯಲ್ಲಿರುವ 'ರಾಕಿಂಗ್​ ಸ್ಟಾರ್​' ಯಶ್​ ಮೆನೆಯ ಮೇಲೆ ದಾಳಿ ನಡೆದಿದೆ. ಈಗಾಗಲೇ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಖ್ಯಾತ ನಿರ್ಮಾಪಕರ ಮೆನಯ ಮೇಲೂ ದಾಳಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್​ ಬಳಿ ಇರುವ ರಾಕ್​ಲೈನ್​ ವೇಂಟಕೇಶ್​ ಮನೆ ಮೇಲೆ 8 ಅಧಿಕಾರಿಗಳ ತಂಡ ದಾಳಿ ನಡೆಸಿದೆ. 'ಕೆಜಿಎಫ್' ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ 'ವಿಲನ್' ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ಮನೆ ಮೇಲೂ ಐಟಿ ರೇಡ್​ ನಡೆದಿದೆ.

ರಾಕ್​ಲೈನ್​ ವೆಂಕಟೇಶ್​ ಮನೆಯಲ್ಲಿ ಎರಡು ಕೆ.ಜಿ. ಚಿನ್ನ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನು ಬೇರೆ ಬೇರೆ ಕಡೆ ಅವರು ಹೊಂದಿರುವ ಆಸ್ತಿ ವಿವರಗಳ ಬಗ್ಗೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ತೆರಿಗೆ ಪಾವತಿಯಲ್ಲಿ‌ ಭಾರೀ ಗೋಲ್‌ಮಾಲ್‌ ಮಾಡಿರುವ ಶಂಕೆ ಮೂಡಿದೆ. ಕನ್ನಡ ಚಿತ್ರಗಳ ಸಂಖ್ಯೆ ಹಾಗೂ ಬಜೆಟ್ ಜಾಸ್ತಿಯಾಗಿದೆ. ಆದಾಗ್ಯೂ ಆದರೆ ತೆರಿಗೆ ಸಂದಾಯ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಆಗಿಲ್ಲ. ಈ ಹಿನ್ನಲೆ ಐಟಿ ದಾಳಿ ನಡೆದಿದೆ ಎನ್ನಲಾಗಿದೆ. ಒಂದೊಮ್ಮೆ ತೆರಿಗೆ ಪಾವತಿ ಬಗ್ಗೆ ಸೂಕ್ತ ದಾಖಲೆಗಳು ಲಭ್ಯವಾಗದೇ ಇದ್ದರೆ ವಿಚಾರಣೆಗೆ ಹಾಜರಾಗುವಂತೆ ನಟ, ನಿರ್ಮಾಪಕರಿಗೆ ನೊಟೀಸ್ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ಗೆದ್ದು ಬೀಗಿದ ‘ಸಿಂಬಾ’; ರಣವೀರ್ ಸಿಂಗ್​ ಅಭಿಮಾನಿಗಳಿಗೆ ಡಬಲ್ ಧಮಾಕ!

First published: January 3, 2019, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading