Seema.RSeema.R
|
news18-kannada Updated:February 5, 2020, 6:19 PM IST
ನಟ ವಿಜಯ್
ಕಾಲಿವುಡ್ನ ಹೆಸರಾಂತ ನಟ ವಿಜಯ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಪ್ರಕರಣದಲ್ಲಿ ಈ ದಾಳಿ ನಡೆದಿದ್ದು, ದಾಖಲೆ ಪರಿಶೀಲನೆ ನಡೆಸಲಾಗಿದೆ.
ಇನ್ನು ಇದೇ ವೇಳೆ ಎಜಿಎಸ್ ಸಿನಿಮಾ ಪ್ರಾಪರ್ಟಿ ಮೇಲೂ ಕೂಡ ದಾಳಿ ನಡೆಸಲಾಗಿದೆ, ಈ ಎಜಿಎಸ್ ಸಿನಿಮಾ ಕಳೆದ ವರ್ಷ ವಿಜಯ್ ನಟನೆಯ '
ಬಿಗಿಲ್' ಸಿನಿಮಾಗೆ ಹೂಡಿಕೆ ಮಾಡಿದ್ದರು. ಎಜಿಎಸ್ನ ಗ್ರೂಪ್ಗೆ ಸಂಬಂಧಿಸಿದ 20 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಇನ್ನು ಈ ದಾಳಿ ವೇಳೆ ನಟ ವಿಜಯ್ ನೈವೇಲಿಯಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ವಿಜಯ್ ನಟನೆಯ ಬಿಗಿಲ್ ಸಿನಿಮಾ ಸೂಪರ್ ಹಿಟ್ ಆಗಿದ್ದು, ಕೋಟಿ ಕೋಟಿ ಗಳಿಕೆ ಮಾಡಿತ್ತು. ಈ ಸಂಬಂಧ ಲಾಭಾದ ವಿವರಣೆ ಪಡೆಯಲು ಐಟಿ ಇಲಾಖೆ ಈ ಹಿಂದೆ ಸಮನ್ಸ್ ಜಾರಿ ಮಾಡಿತ್ತು.
ಇನ್ನು ಈ ಕುರಿತು ಸ್ಪಷ್ಟನೆ ನೀಡಿರುವ ನಟ
ವಿಜಯ್, ಐಟಿ ಅಧಿಕಾರಿಗಳು, ಕಳೆದ ವಾರ ಕೂಡ ನನ್ನ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅವರ ಶೋಧ ಕಾರ್ಯಕ್ಕೆ ನನ್ನ ಕುಟುಂಬ ಮತ್ತು ಸಿಬ್ಬಂದಿಗಳು ಸಹಕಾರ ನೀಡಿದ್ದರು. ಅಲ್ಲದೇ ತೆರಿಗೆ ವಿವರಣೆಯ ದಾಖಲೆಯನ್ನು ನೀಡಲಾಗಿದೆ ಎಂದರು.
ವಿಜಯ್ ನಟನೆಯ 'ಮರ್ಸೆಲ್' ಚಿತ್ರದಲ್ಲಿ ಕೇಂದ್ರ ಸರ್ಕಾರದ ಜಿಎಸ್ಟಿ ಹಾಗೂ ನೋಟು ಅಮಾನ್ಯೀಕರಣ ಕುರಿತ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ತಮಿಳುನಾಡು ಬಿಜೆಪಿ ಘಟಕ ವಿರೋಧ ವ್ಯಕ್ತಪಡಿಸಿದ್ದು, ಈ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಒತ್ತಾಯಿಸಿದ್ದರು.
ಈ ಹಿಂದೆ 2015ರಲ್ಲಿ ಕೂಡ ನಟ ವಿಜಯ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನು ಓದಿ: ರಶ್ಮಿಕಾ ಮಂದಣ್ಣಗೆ ಐಟಿ ಶಾಕ್; ವಿರಾಜಪೇಟೆ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಇನ್ನು ಇತ್ತೀಚೆಗಷ್ಟೆ ದಕ್ಷಿಣ ಭಾರತದ ಬಹುಬೇಡಿಕೆ ನಟಿ , ಕನ್ನಡತಿ
ರಶ್ಮಿಕಾ ಮನೆ ಮೇಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸಿನಿಮಾದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದ ಅವರು, ಸಂಭಾವನೆ ದುಪ್ಪಟ್ಟು ಮಾಡಿದ್ದು, ಈ ಕುರಿತು ಅಧಿಕಾರಿಗಳು ಮಾಹಿತಿ ಪಡೆದಿದ್ದರು.
First published:
February 5, 2020, 6:19 PM IST