ಐಟಿ ದಾಳಿ ವೇಳೆ ರಶ್ಮಿಕಾ ಮಂದಣ್ಣ ಎಲ್ಲಿದ್ರು ಗೊತ್ತಾ?

ಐಡಿ ದಾಳಿಯ ವೇಳೆ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್​ನಲ್ಲಿದ್ದಾರೆ. ಭೀಷ್ಮ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಈ ಸಿನಿಮಾದ ಡಬ್ಬಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.

news18-kannada
Updated:January 16, 2020, 1:40 PM IST
ಐಟಿ ದಾಳಿ ವೇಳೆ ರಶ್ಮಿಕಾ ಮಂದಣ್ಣ ಎಲ್ಲಿದ್ರು ಗೊತ್ತಾ?
ರಶ್ಮಿಕಾ ಮಂದಣ್ಣ
  • Share this:
ಸ್ಯಾಂಡಲ್​ವುಡ್​ ನಟಿ ರಶ್ಮಿಕಾ ಮಂದಣ್ಣ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಇಂದು ಬೆಳಗಿನ ಜಾವ ಮಡಿಕೇರಿ ವಿರಾಜಪೇಟೆಯಲ್ಲಿನ ಮನೆಯ ಮೇಲೆ ಐಟಿ ದಾಳಿಯಾಗಿದೆ. 3 ಕಾರಿನಲ್ಲಿ ಬಂದ ಐಟಿ 9 ಅಧಿಕಾರಿಗಳು  ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಐಟಿ ರೇಡ್​ ವೇಳೆ ರಶ್ಮಿಕಾ ಮನೆಯಲ್ಲಿರಲಿಲ್ಲ. ಅವರ ತಂದೆ ಮದನ್​ ಮಂದಣ್ಣ ಮನೆಯಲ್ಲಿದ್ದರು. 3 ಕಾರಿನಲ್ಲಿ ಬಂದಿರುವ 9 ಅಧಿಕಾರಿಗಳು ರಶ್ಮಿಕಾರ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್​ ಭದ್ರತೆಯ ಮೂಲಕ ರೇಡ್​ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಮನೆಯಲ್ಲಿರುವವರ ಫೋನ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಎರಡು ತಂಡಗಳಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೊದಲಿಗೆ ಮದನ್​ ಮಂದಣ್ಣ ಅವರಿಗೆ ಸೇರಿದ ಸೆರಿನಿಟಿ ಹಾಲ್​ನಲ್ಲಿ  ಪರಿಶೀಲನೆ ನಡೆಸಿದರು. ನಂತರ ಹಾಲ್​ ಮ್ಯಾನೇಜರ್​ ವಿಕ್ಲಿ ಚಂಗಪ್ಪ ಅವರನ್ನು ಮನೆಗೆ ಕರೆತಂದು  ತನಿಖೆ ಮಾಡಿದ್ದಾರೆ ಎನ್ನಲಾಗಿದೆ.

ಐಟಿ ರೇಡ್​ ಬಗ್ಗೆ ರಶ್ಮಿಕಾಗೆ ತಿಳಿದಿಲ್ಲ!

ಐಡಿ ದಾಳಿಯ ವೇಳೆ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್​ನಲ್ಲಿದ್ದಾರೆ. ಭೀಷ್ಮ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಈ ಸಿನಿಮಾದ ಡಬ್ಬಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಐಟಿ ದಾಳಿ ಬಗ್ಗೆ  ರಶ್ಮಿಕಾ ಮಂದಣ್ಣ ಇನ್ನು ತಿಳಿದಿಲ್ಲ. ನಿನ್ನೆ ತಡರಾತ್ರಿಯವರೆಗೆ ಡಬ್ಬಿಂಗ್​ ಇದ್ದ ಕಾರಣ ರಶ್ಮಿಕಾ ಮಲಗಿದ್ದಾರೆ.  ಅವರು ಎದ್ದ ಬಳಿಕ ವಿಷಯ ತಿಳಿಸುತ್ತೇನೆ  ಎಂದು ನಟಿ ರಶ್ಮಿಕಾರ ಮ್ಯಾನೆಜರ್​ ಕಿರಣ್​ ಅವರು ನ್ಯೂಸ್​ 18 ತಿಳಿಸಿದ್ದಾರೆ.
 

 
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading