Rashmika Mandanna: ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ರೇಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್

ರಶ್ಮಿಕಾ ಮಂದಣ್ಣ ಹುಟ್ಟೂರು ವಿರಾಜಪೇಟೆಯಲ್ಲಿರುವ ಮನೆಗೆ ಗರುವಾರ ಬೆಳಗ್ಗೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ದಿಢೀರ್​ ಭೇಟಿ ನಿಡಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದರು. ಈಗ ಈ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.

news18-kannada
Updated:January 18, 2020, 9:22 AM IST
Rashmika Mandanna: ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ರೇಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್
ರಶ್ಮಿಕಾ ಮಂದಣ್ಣ
  • Share this:
ರಶ್ಮಿಕಾ ಮಂದಣ್ಣ ನಟನೆಯ 'ಸರಿಲೇರು ನೀಕೆವ್ವರು ' ಸಿನಿಮಾಗೆ ಭಾರೀ ಮೆಚ್ಚುಗೆ ಕೇಳಿ ಬರುತ್ತಿರುವ ಮಧ್ಯೆಯೇ ಐಟಿ ಅಧಿಕಾರಿಗಳು ಅವರಿಗೆ ಶಾಕ್​ ನೀಡಿದ್ದಾರೆ.  ಕೊಡಗು ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರೀಶಿಲನೆ ನಡೆಸಿದ್ದರು. ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಹುಟ್ಟೂರು ವಿರಾಜಪೇಟೆಯಲ್ಲಿರುವ ಮನೆಗೆ ಗರುವಾರ ಬೆಳಗ್ಗೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ದಿಢೀರ್​ ಭೇಟಿ ನಿಡಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದರು. 3 ಕಾರಿನಲ್ಲಿ ಬಂದಿದ್ದ 9 ಅಧಿಕಾರಿಗಳು ರಶ್ಮಿಕಾ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಶುಕ್ರವಾರ ಕೂಡ ಶೋಧ ಮುಂದುವರಿದಿತ್ತು. ಅಚ್ಚರಿ ಎಂದರೆ, ಈ ದಾಳಿಗೂ ರಶ್ಮಿಕಾಗೂ ಯಾವುದೆ ಸಂಬಂಧವಿಲ್ಲವಂತೆ.

‘ಕಿರಿಕ್​ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿದ ರಶ್ಮಿಕಾ ಮಂದಣ್ಣ, ನಂತರ ಟಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡರು. ಆಫರ್​ಗಳು ಹೆಚ್ಚಿದಂತೆ ಅವರ ಸಂಭಾವನೆಯೂ ಹೆಚ್ಚಿದೆ. ಈ ಕಾರಣಕ್ಕೆ ಐಟಿ ದಾಳಿ ನಡೆದಿದೆ ಎನ್ನಲಾಗಿತ್ತು. ಆದರೆ, ರಶ್ಮಿಕಾಗೂ ಈ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲವಂತೆ. ಈ ರೇಡ್​ ನಡೆದಿದ್ದು, ರಶ್ಮಿಕಾ ಪಾಲಕರಿಗೆ ಸಂಬಂಧಿಸಿದ ಆಸ್ತಿಗಳಿಗೆ ಮಾತ್ರವಂತೆ. ಈ ಬಗ್ಗೆ ಅವರ ಮ್ಯಾನೇಜರ್​ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಐಟಿ ಶಾಕ್​; ವಿರಾಜಪೇಟೆ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಐಟಿ ದಾಳಿ ವೇಳೆ ರಶ್ಮಿಕಾರ ಮನೆಯಲ್ಲಿ ಅವರ ತಂದೆ ಮದನ್​ ಮಂದಣ್ಣ ಮಾತ್ರ ಇದ್ದರು. ಎಲ್ಲಾ ಆಸ್ತಿಗಳು ಕೂಡ ಮದನ್​ಮಂದಣ್ಣ ಅವರ ಹೆಸರಿನಲ್ಲಿದೆ. ವಿರಾಜಪೇಟೆಯಲ್ಲಿ ಸಿರಿನಿಟಿ ಹಾಲ್, ಅದರಲ್ಲೇ ಇರುವ ವಾಣಿಜ್ಯ ಸಂಕೀರ್ಣ, ವಿರಾಜಪೇಟೆ ಸುತ್ತಮುತ್ತ 50 ಎಕರೆ ಕಾಫಿ ತೋಟವನ್ನು ಮದನ್​ ಮಂದಣ್ಣ ಹೊಂದಿದ್ದಾರೆ. ಇವೆಲ್ಲವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ