ಅನಂತು V/S​ ನುಸ್ರತ್​ ಚಿತ್ರಕ್ಕೂ ತಟ್ಟಿದ ಐಟಿ​ ದಾಳಿಯ ಬಿಸಿ

ಐಟಿ ದಾಳಿಯ ಬಿಸಿ ಈಗ ಕನ್ನಡ ಸಿನಿಮಾಗಳಿಗೂ ತಟ್ಟಿದೆ. ಕಳೆದ ಶುಕ್ರವಾರಷ್ಟೆ ತೆರೆಕಂಡಿದ್ದ ಅಂನಂತು V/S ನುಸ್ರತ್​ ಸಿನಿಮಾಗೂ ಐಟಿ ದಾಳಿಯ ಬಿಸಿ ತಟ್ಟಿದ್ದು, ಈ ಚಿತ್ರ ಇನ್ನೂ ಕೆಲ ದಿನಗಳು ಕೇವಲ ನಗರದ ಚಿತ್ರಮಂದಿರಗಳಿಗೆ ಮಾತ್ರ ಮೀಸಲಾಗಿರಲಿದೆ.

Anitha E | news18
Updated:January 4, 2019, 6:04 PM IST
ಅನಂತು V/S​ ನುಸ್ರತ್​ ಚಿತ್ರಕ್ಕೂ ತಟ್ಟಿದ ಐಟಿ​ ದಾಳಿಯ ಬಿಸಿ
ಅನಂತುV/Sನುಸ್ರತ್​ ಸಿನಿಮಾದಲ್ಲಿ ವಿನಯ್​ ರಾಜ್​ಕುಂಆರ್​-ಲತಾ ಹೆಗಡೆ
  • News18
  • Last Updated: January 4, 2019, 6:04 PM IST
  • Share this:
ದೊಡ್ಮನೆ ಹುಡುಗ ವಿನಯ್​ ರಾಜ್​ಕುಮಾರ್​ ಹಾಗೂ ನಾಯಕಿ ಲತಾ ಹೆಗಡೆ ಅಭಿನಯದ  'ಅನಂತು V/S ನುಸ್ರುತ್​' ಕಳೆದ ಶುಕ್ರವಾರವಷ್ಟೆ ತೆರೆಕಂಡಿದೆ. ಈ ಸಿನಿಮಾಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗ ಐಟಿ ದಾಳಿಯ ಬಿಸಿಯೂ ತಟ್ಟಿದೆ.

ಜಯಣ್ಣ ಕಂಬೈನ್ಸ್​ ಅಡಿಯಲ್ಲಿ ಜಯಣ್ಣ ಈ ಸಿನಿಮಾದ ವಿತರಣಾ ಹಕ್ಕುಗಳನ್ನು ಪಡೆದಿದ್ದರು. ಎರಡನೇ ವಾರ ಅರ್ಥಾತ್​ ಇಂದಿನಿಂದ ಬಿ ಮತ್ತು ಸಿ ಸೆಂಟರ್​ಗಳಲ್ಲಿ ಈ ಚಿತ್ರ ರಿಲೀಸ್​ ಆಗಬೇಕಿತ್ತು.

ಇದನ್ನೂ ಓದಿ: ಪ್ರಿನ್ಸ್​ ಮಹೇಶ್​ಬಾಬುಗೆ ಜತೆಯಾಗಲಿರುವ 'ಮಲ್ಲೀಶ್ವರಿ': 13 ವರ್ಷಗಳ ನಂತರ ಟಾಲಿವುಡ್​ಗೆ ಕತ್ರಿನಾ ಕೈಫ್​ ಮರು ಪ್ರವೇಶ ..!

ತುಮಕೂರು, ಹುಬ್ಬಳ್ಳಿ, ಕಾರ್ಕಳ ಸೇರಿದಂತೆ ಇನ್ನೂ ಹಲವೆಡೆ ಹೆಚ್ಚುವರಿ 25 ಚಿತ್ರಮಂದಿರಗಳಲ್ಲಿ 'ಅನಂತು V/S ನುಸ್ರುತ್​' ತೆರೆ ಕಾಣಬೇಕಿತ್ತು. ಆದರೆ ಆದಾಯ ತೆರೆಗೆ ಅಧಿಖಾರಿಗಳು ನಿನ್ನೆ ಬೆಳಿಗ್ಗೆ ಇದ್ದಕ್ಕಿದ್ದಂತೆ ಚಂದನವನದ ಮೇಲೆ ಐಟಿ ದಾಳಿ ಆರಂಭಿಸಿದ ಕಾರಣದಿಂದ ಈ ಸಿನಿಮಾ ಈಗ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದೆ.

ಇದನ್ನೂ ಓದಿ: ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?

ಈ ಸಿನಿಮಾದ ವಿರತಕ ಜಯಣ್ಣ ಅವರ ಮನೆಯಲ್ಲೂ ಐಟಿ ದಾಳಿ ನಡೆದಿದ್ದು, ಚಿತ್ರಮಂದಿರಗಳ ಮಾಲೀಕರೊಂದಿಗೆ ಜಯಣ್ಣ ಅವರ ಮಾತುಕತೆ ಆಗಿಲ್ಲ. ಇದರಿಂದಾಗಿ  ಆ ಥಿಯೇಟರ್​ಗಳಲ್ಲಿ ಬೇರೆ ಚಿತ್ರಗಳನ್ನೇ ಪ್ರದರ್ಶಿಸಲಾಗುತ್ತಿದೆ.

First published: January 4, 2019, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading