ರಶ್ಮಿಕಾ ಮಂದಣ್ಣಗೆ ಐಟಿ ಶಾಕ್​; ವಿರಾಜಪೇಟೆ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

IT Raids On Rashmika Mandanna: ರಶ್ಮಿಕಾ ಮಂದಣ್ಣ ಹುಟ್ಟೂರು ವಿರಾಜಪೇಟೆಯಲ್ಲಿರುವ ಮನೆಗೆ ಬೆಳಿಗಿನ ಜಾವ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತೀಚೆಗೆ ನಟ ಶಿವರಾಜ್​, ಯಶ್​,  ಪುನೀತ್​ ರಾಜ್​ ಕುಮಾರ್​ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ ಮನೆಯ ಮೇಲು ದಾಳಿ ನಡೆಸಿದ್ದಾರೆ.

news18-kannada
Updated:January 16, 2020, 1:38 PM IST
ರಶ್ಮಿಕಾ ಮಂದಣ್ಣಗೆ ಐಟಿ ಶಾಕ್​; ವಿರಾಜಪೇಟೆ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ
ರಶ್ಮಿಕಾ ಮಂದಣ್ಣ
  • Share this:
ಸ್ಯಾಂಡಲ್​ವುಡ್​ ನಟಿ ರಶ್ಮಿಕಾ ಮಂದಣ್ಣ ಕನ್ನಡದ 'ಕಿರಿಕ್​ ಪಾರ್ಟಿ' ಸಿನಿಮಾ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಸ್ಟಾರ್​ ನಟರ ಜೊತೆ ತೆರೆಹಂಚಿಕೊಂಡ ಹೆಚ್ಚುಗಾರಿಕೆ ರಶ್ಮಿಕಾ ಅವರದ್ದು. ಇತ್ತೀಚೆಗೆ ತೆರೆಕಂಡಿದ್ದ ಅವರ ನಟನೆಯ 'ಸರಿಲೇರು ನೀಕೆವ್ವರು ' ಸಿನಿಮಾಗೆ ಭಾರೀ ಮೆಚ್ಚುಗೆ ಕೇಳಿ ಬರುತ್ತಿರುವ ಮಧ್ಯೆಯೇ ರಶ್ಮಿಕಾಗೆ ಐಟಿ ಅಧಿಕಾರಿಗಳು ಶಾಕ್​ ನೀಡಿದ್ದಾರೆ.  ಕೊಡಗು ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರೀಶಿಲನೆ ನಡೆಸಿದ್ದಾರೆ.

ರಶ್ಮಿಕಾ ಮಂದಣ್ಣ ಹುಟ್ಟೂರು ವಿರಾಜಪೇಟೆಯಲ್ಲಿರುವ ಮನೆಗೆ ಬೆಳಗ್ಗೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ದಿಢೀರ್​ ಭೇಟಿ ನಿಡಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾರೆ. 3 ಕಾರಿನಲ್ಲಿ ಬಂದಿರುವ 9 ಅಧಿಕಾರಿಗಳು ರಶ್ಮಿಕಾರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್​ ಭದ್ರತೆಯ ಮೂಲಕ ಐಟಿ ಅಧಿಕಾರಿಗಳು ರಶ್ಮಿಕಾ ಅವರ ಮನೆಯಗೆ ದಾಳಿ ನಡೆಸಿದ್ದಾರೆ. ಈ ವೇಳೆ  ಮನೆಯಲ್ಲಿರುವವರ ಫೋನ್ ವಶಕ್ಕೆ ಪಡೆದಿಸಿದ್ದಾರೆ ಎನ್ನಲಾಗಿದೆ. ಎಲ್ಲಾ ದಾಖಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಐಟಿ ದಾಳಿ ವೇಳೆ ರಶ್ಮಿಕಾರ ಮನೆಯಲ್ಲಿ ಅವರ ತಂದೆ ಮದನ್​ ಮಂದಣ್ಣ ಮಾತ್ರ ಇದ್ದರು. ಎಲ್ಲಾ ಆಸ್ತಿಗಳು ಕೂಡ ಮದನ್​ಮಂದಣ್ಣ ಅವರ ಹೆಸರಿನಲ್ಲಿದೆ. ವಿರಾಜಪೇಟೆಯಲ್ಲಿ ಸಿರಿನಿಟಿ ಹಾಲ್, ಅದರಲ್ಲೇ ಇರುವ ವಾಣಿಜ್ಯ ಸಂಕೀರ್ಣ, ವಿರಾಜಪೇಟೆ ಸುತ್ತಮುತ್ತ 50 ಎಕರೆ ಕಾಫಿ ತೋಟವನ್ನು ಮದನ್​ ಮಂದಣ್ಣ ಹೊಂದಿದ್ದಾರೆ. ಇವೆಲ್ಲವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ರಶ್ಮಿಕಾ ಮಂದಣ್ಣ ಸಿನಿಮಾಗಳಿಗೆ ಸಹಿ ಹಾಕಿರುವ ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಎರಡು ತಂಡಗಳಾಗಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೊದಲಿಗೆ ಸೆರಿನಿಟಿ ಹಾಲ್​ನಲ್ಲಿ  ಪರಿಶೀಲನೆ ನಡೆಸಿದರು. ನಂತರ ಹಾಲ್​ ಮ್ಯಾನೇಜರ್​ ವಿಕ್ಲಿ ಚಂಗಪ್ಪ ಅವರನ್ನು ಮನೆಗೆ ಕರೆತಂದು  ತನಿಖೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಶೂಟಿಂಗ್‌ಗಾಗಿ ಹೊರ ಹೋಗಿರುವ ಕಾರಣ ಸದ್ಯ ರಶ್ಮಿಕಾ ಮನೆಯಲ್ಲಿಲ್ಲ. ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ರಶ್ಮಿಕಾ ಮಂದಣ್ಣ ಟಾಲಿವುಡ್​ಗೆ ಕಾಲಿಟ್ಟ ನಂತರದಲ್ಲಿ ಅವರ ಸಂಭಾವನೆಯಲ್ಲಿ ಭಾರೀ ಏರಿಕೆ ಕಂಡಿತ್ತು.

ಇತ್ತೀಚೆಗೆ ನಟ ಶಿವರಾಜ್​, ಯಶ್​,  ಪುನೀತ್​ ರಾಜ್​ ಕುಮಾರ್​ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ ಮನೆಯ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಕಿರಿಕ್​ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿದ ರಶ್ಮಿಕಾ ಮಂದಣ್ಣ, ನಂತರ ಟಾಲಿವುಡ್​ನಲ್ಲಿ ಬಣ್ಣ ಹಚ್ಚಿದ್ದ ಹೆಚ್ಚು. ಇತ್ತೀಚೆಗೆ ಮಹೇಶ್​ ಬಾಬು ನಾಯಕನಾಗಿ ಮಿಂಚಿದ್ದ ‘ಸರಿಲೇರು ನಿಕೆವ್ವರು‘ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ  ಅಭಿನಯಿಸಿದ್ದರು. ಟಾಲಿವುಡ್​ನಲ್ಲಿ ಹೆಚ್ಚು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ, ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ. 
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ