ಸಿನಿಮಾ ಜತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಕೆ.ಜಿ.ಎಫ್​ ನಿರ್ಮಾಪಕರ ಕರಾಮತ್ತು..!

ಕೆ.ಜಿ.ಎಫ್ ನಿರ್ಮಾಪಕ​ ವಿಜಯ ಕಿರಂಗದೂರು ಅವರಿಗೆ ಸಂಬಂಧಿಸಿದಂತೆ 25 ಕಡೆ ದಾಳಿ ನಡೆದಿದ್ದು, ನೂರಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ. ವಿಜಯ್​ ಕೇವಲ ಸಿನಿಮಾಗಳಲ್ಲಿ ಹೂಡಿಕೆಯಲ್ಲ,ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಗಳಿಸಿದ ಹಣದ ಮೂಲಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. 

Anitha E | news18
Updated:January 3, 2019, 4:56 PM IST
ಸಿನಿಮಾ ಜತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಕೆ.ಜಿ.ಎಫ್​ ನಿರ್ಮಾಪಕರ ಕರಾಮತ್ತು..!
ಕೆ.ಜಿ.ಎಫ್ ನಿರ್ಮಾಪಕ​ ವಿಜಯ ಕಿರಂಗದೂರು ಅವರಿಗೆ ಸಂಬಂಧಿಸಿದಂತೆ 25 ಕಡೆ ದಾಳಿ ನಡೆದಿದ್ದು, ನೂರಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ. ವಿಜಯ್​ ಕೇವಲ ಸಿನಿಮಾಗಳಲ್ಲಿ ಹೂಡಿಕೆಯಲ್ಲ,ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಗಳಿಸಿದ ಹಣದ ಮೂಲಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. 
  • News18
  • Last Updated: January 3, 2019, 4:56 PM IST
  • Share this:
'ಕೆ.ಜಿ.ಎಫ್​' ಸಿನಿಮಾದಿಂದಾಗಿ ಕಳೆದ ಕೆಲ ತಿಂಗಳಿನಿಂದ ನಿರ್ಮಾಪಕ ವಿಜಯ್​ ಕಿರಗಂದೂರು ಅವರ ಹೆಸರು ದೇಶದೆಲ್ಲೆಡೆ ಚಾಲ್ತಿಯಲ್ಲಿದೆ. ಅಂದಾಜು 80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಿನಿಮಾ ಐದು ಭಾಷೆಗಳಲ್ಲೂ ಸದ್ದು ಮಾಡುತ್ತಿದ್ದು, ಬಾಕ್ಸಾಫಿಸ್​ನಲ್ಲೂ ಗಳಿಕೆ ಜೋರಾಗಿದೆ.

ಆದರೆ 2018ರ ವರ್ಷಾಂತ್ಯ ಈ ಸಿನಿಮಾದ ನಿರ್ಮಾಪಕ ವಿಕಯ್​ ಕಿರಗಂದೂರು ಅವರಿಗೆ ಹರ್ಷವನ್ನು ತಂದುಕೊಟ್ಟರೂ ಹೊಸ ವರ್ಷ ಮಾತ್ರ ಶಾಕ್​ ನೀಡಿದೆ. ಇಂದು ನಗರದಲ್ಲಿ ಸ್ಯಾಂಡಲ್​ವುಡ್​ ಮಂದಿಯ ಮನೆಗಳ ಮೇಲೆ ನಡೆಯುತ್ತಿರುವ ಐಟಿ ದಾಳಿ ನಿರ್ಮಾಪಕ ವಿಜಯ್​ ಕಿರಂಗದೂರು ಅವರನ್ನೂ ಬಿಟ್ಟಿಲ್ಲ.

ಇದನ್ನೂ ಓದಿ: ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?

ವಿಜಯ ಕಿರಂಗದೂರು ಅವರಿಗೆ ಸಂಬಂಧಿಸಿದಂತೆ 25 ಕಡೆ ದಾಳಿ ನಡೆದಿದ್ದು, ನೂರಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ. ವಿಜಯ್​ ಕೇವಲ ಸಿನಿಮಾಗಳಲ್ಲಿ ಹೂಡಿಕೆಯಲ್ಲ,ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಗಳಿಸಿದ ಹಣದ ಮೂಲಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

ವಿಜಯ್​ ಅವರು ಸಾಕಷ್ಟು ಬಿಲ್ಡರ್​ಗಳು ಹಾಗೂ ರಾಜಕೀಯ ವ್ಯಕ್ತಿಗಳೊಂದಿಗೆ ವ್ಯವಹಾರ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದ್ದು, ಆ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲೇ ಇರುವ ಶಾಸಕರೊಬ್ಬರ ಜತೆ ಹತ್ತಾರು ಕೋಟಿ ಮೌಲ್ಯದ ಕಟ್ಟಡ ನಿರ್ಮಾಣದಲ್ಲಿ ವಿಜಯ್​ ಪಾಲುದಾರಿಕೆ ಹೊಂದಿದ್ದಾರಂತೆ.

ಇದನ್ನೂ ಓದಿ: ಐಟಿ ದಾಳಿ ಹಿಂದಿದೆಯಾ ರಾಜಕೀಯ ಹುನ್ನಾರ: ಅಲ್ಲಾಡಲಿದೆಯಾ ರಾಕ್​ಲೈನ್​ ಕೋಟೆಯ ಬುನಾದಿ..?

ಉಳಿದಂತೆ ಬಿಡಿಎ ವ್ಯಾಪ್ತಿಯಲ್ಲಿನ ವಸತಿ ಸಮುಚ್ಛಯದ ಗುತ್ತಿಗೆ ಕೆಲಸದ ಜವಾಬ್ದಾರಿಯನ್ನೂ ಸಹ ಹೊಂಬಾಳೆ ಕನ್​ಸ್ಟಕ್ಷನ್​ ಹೊಂದಿದೆ. ಈ ಹಿನ್ನಲೆಯಲ್ಲಿ ನಿರ್ಮಾಪಕ ವಿಜಯ್​ ಯಾರೊಂದಿಗೆಲ್ಲ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂದು ಐ ಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
First published: January 3, 2019, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading