• Home
  • »
  • News
  • »
  • entertainment
  • »
  • RRR Movie: ನಾಟು ನಾಟು ಹಾಡು ಬರೆಯೋದಕ್ಕೆ ಬೇಕಾಯ್ತಂತೆ ಒಂದೂವರೆ ವರ್ಷ! ಟ್ರಾಫಿಕ್​ನಲ್ಲಿ ಬರೆದ ಸಾಂಗ್​ಗೆ​ ಈಗ ವಿಶ್ವ ಮನ್ನಣೆ

RRR Movie: ನಾಟು ನಾಟು ಹಾಡು ಬರೆಯೋದಕ್ಕೆ ಬೇಕಾಯ್ತಂತೆ ಒಂದೂವರೆ ವರ್ಷ! ಟ್ರಾಫಿಕ್​ನಲ್ಲಿ ಬರೆದ ಸಾಂಗ್​ಗೆ​ ಈಗ ವಿಶ್ವ ಮನ್ನಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

RRR Movie: 2022 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ (S. S. Rajamouli) ಅವರ ಆರ್‌ಆರ್‌ಆರ್ (RRR) ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದ್ದು ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ದುಡ್ಡು ಮಾಡಿದ್ದ ವಿಚಾರ ನಮಗೆಲ್ಲಾ ಗೊತ್ತೇ ಇತ್ತು. 

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

2022 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ (S. S. Rajamouli) ಅವರ ಆರ್‌ಆರ್‌ಆರ್ (RRR) ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದ್ದು ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ದುಡ್ಡು ಮಾಡಿದ್ದ ವಿಚಾರ ನಮಗೆಲ್ಲಾ ಗೊತ್ತೇ ಇತ್ತು. ಆದರೆ ಈಗ ಎಲ್ಲೇ ನೋಡಿದರೂ ಆ ಚಿತ್ರದ ಒಂದು ಹಾಡಿನ ಬಗ್ಗೆಯೇ ಸುದ್ದಿಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಸುದ್ದಿಗಳು ಕೇಳಿ ಬರಬೇಕಲ್ಲವೇ? ಏಕೆಂದರೆ RRR ಚಿತ್ರದ 'ನಾಟು ನಾಟು' (Naatu Naatu) ಹಾಡಿಗೆ ಗೋಲ್ಡನ್ ಗ್ಲೋಬ್ 2023 ರಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಲಭಿಸಿದೆ ಹಾಗೂ ಇದು ಭಾರತಕ್ಕೆ ಸಂದ ಮೊಟ್ಟ ಮೊದಲ ಆ ಪ್ರಶಸ್ತಿಯಾಗಿದೆ.


ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಪಡೆದ ‘ನಾಟು ನಾಟು’: 


ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಧಾನವಾಗಿ ಮಾತನಾಡುವ ತೆಲುಗು ಭಾಷೆಯ ಶೈಲಿಯನ್ನು ಸೇರಿಸಿಕೊಂಡು ಈ "ನಾಟು ನಾಟು” ಎಂಬ ಶೀರ್ಷಿಕೆಯಿರುವ ಹಾಡು ಸುಮಾರು ನಾಲ್ಕೂವರೆ ನಿಮಿಷದ ಹಾಡಾಗಿದ್ದೂ, ಇದು ಟೇಲರ್ ಸ್ವಿಫ್ಟ್ ಅವರ "ಕ್ಯಾರೊಲಿನಾ", ಲೇಡಿ ಗಾಗಾ ಮತ್ತು ಬ್ಲಡ್ಪಾಪ್ ಅವರ "ಟಾಪ್ ಗನ್: ಮೇವರಿಕ್" ಚಿತ್ರದ "ಹೋಲ್ಡ್ ಮೈ ಹ್ಯಾಂಡ್" ಮತ್ತು ರಿಹಾನ್ನಾ ಅವರ "ಬ್ಲ್ಯಾಕ್ ಪ್ಯಾಂಥರ್: ವಾಕಂಡಾ ಫಾರೆವರ್" ನಿಂದ "ಲಿಫ್ಟ್ ಮಿ ಅಪ್" ಅನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.


ಈ ಕೆಟಗರಿಯಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಹಾಡು ಎಂಬ ಹೆಗ್ಗಳಿಕೆಗೂ ಸಹ ಈ ಹಾಡು ಪಾತ್ರವಾಗಿದೆ. ಈ ಗೀತೆಯನ್ನು ಆರ್‌ಆರ್‌ಆರ್ ಚಿತ್ರದಲ್ಲಿನ ಗಾರ್ಡನ್ ಪಾರ್ಟಿಯಲ್ಲಿ ಚಿತ್ರೀಕರಿಸಲಾಗಿದ್ದು, ಇದರಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡನ್ನು ಬರೆದಿರುವವರು ಯಾರು ಅಂತ ಅನೇಕರಿಗೆ ಈಗಾಗಲೇ ಗೊತ್ತಿರುತ್ತದೆ.


ಈ ಹಾಡು ಬರೆಯಲು 17 ತಿಂಗಳು ಬೇಕಾಯಿತ್ತಂತೆ:


'ನಾಟು ನಾಟು' ಹಾಡಿನ ಗೀತರಚನೆಕಾರ ಚಂದ್ರಬೋಸ್ ಅವರು “ಆರ್‌ಆರ್‌ಆರ್ ಚಿತ್ರದ ಗೋಲ್ಡನ್ ಗ್ಲೋಬ್ ವಿಜೇತ ಹಾಡಿನ ಶೇಕಡಾ 90ರಷ್ಟು ಭಾಗವನ್ನು ಬರೆಯಲು ಒಂದೇ ಒಂದು ಸಿಟ್ಟಿಂಗ್ ಬೇಕಾಯಿತು, ಆದರೆ ಉಳಿದದ್ದನ್ನು ಬರೆಯಲು ಸುಮಾರು 17 ತಿಂಗಳು ಬೇಕಾಯಿತು” ಎಂದು ಹೇಳಿದ್ದಾರೆ.


ಇದನ್ನೂ ಓದಿ: Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!


"ಚಿತ್ರದ ಒಂದು ನಿರ್ದಿಷ್ಟ ದೃಶ್ಯಕ್ಕಾಗಿ ಒಂದು ಹಾಡನ್ನು ಬರೆಯುವಂತೆ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ನನ್ನನ್ನು ಕೇಳಿದರು. ನಾನು ಮೂರು ಹಾಡುಗಳನ್ನು ಬರೆದು ಅವರಿಗೆ ಪ್ರಸ್ತುತ ಪಡಿಸಿದೆ. ಅವರು ‘ನಾಟು ನಾಟು’ ಹಾಡನ್ನು ಎಲ್ಲದಕ್ಕಿಂತಲೂ ಹೆಚ್ಚು ಇಷ್ಟಪಟ್ಟರು" ಎಂದು ಚಂದ್ರಬೋಸ್ ಮಾಧ್ಯಮವೊಂದಕ್ಕೆ ತಿಳಿಸಿದರು.


ಟ್ರಾಫಿಕ್ ಜಂಕ್ಷನ್ ನಲ್ಲಿದ್ದಾಗ ಮಾಡಿದ್ದೆ:


ಟ್ರಾಫಿಕ್ ಜಂಕ್ಷನ್ ನಲ್ಲಿದ್ದಾಗ ಅವರು ಈ ಹಾಡಿನ ನಾಲ್ಕೈದು ಸಾಲುಗಳನ್ನು ಬರೆದರು. ಆದಾಗ್ಯೂ, ಹಾಡನ್ನು ಪೂರ್ಣಗೊಳಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ಅದನ್ನು ನಿರ್ದೇಶಕರು ಹೇಳಿದ ಕೆಲವು ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಬರೆಯುವುದಕ್ಕೆ ದೀರ್ಘ ಸಮಯ ಬೇಕಾಯಿತು” ಎಂದು ಬೋಸ್ ಹೇಳಿದರು.


"ನಾನು ಈ ಹಾಡಿನ 90 ರಷ್ಟು ಸಾಹಿತ್ಯವನ್ನು ಅರ್ಧ ದಿನದಲ್ಲಿಯೇ ಬರೆದಿದ್ದೆ ಮತ್ತು ಅದನ್ನು ಮೊದಲ ಸಿಟ್ಟಿಂಗ್ ನಲ್ಲಿಯೇ ನಿರ್ದೇಶಕರು ಇಷ್ಟಪಟ್ಟಿದ್ದರು. ಉಳಿದ 10 ಪ್ರತಿಶತದಷ್ಟು ಹಾಡನ್ನು ಬರೆಯಲು ಒಂದು ವರ್ಷ ಮತ್ತು 7 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು" ಎಂದು ಅವರು ಹೇಳಿದ್ದಾರೆ. ಈ ಹಾಡು ಗ್ರಾಮೀಣ ಜೀವನ, ಆಹಾರ ಮತ್ತು ಕೃಷಿಯ ವಿಷಯಗಳನ್ನು ಒಳಗೊಂಡಿದೆ.


ಜಾಗತಿಕವಾಗಿ 1,200 ಕೋಟಿಗೂ ಹೆಚ್ಚು ಹಣ ಗಳಿಸಿದ ಆರ್‌ಆರ್‌ಆರ್ ಚಿತ್ರವು ಈಗಾಗಲೇ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಗಳಲ್ಲಿ ರಾಜಮೌಳಿ ಅವರಿಗೆ ಅತ್ಯುತ್ತಮ ನಿರ್ದೇಶಕ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದೆ.

Published by:shrikrishna bhat
First published: