Vijay Deverekonda - Rashmika Mandanna ಬ್ರೇಕಪ್ ಆಗಿ 2 ವರ್ಷಗಳೇ ಆಗಿದ್ಯಂತೆ!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ

ಮತ್ತೊಮ್ಮೆ ನಟ ವಿಜಯ್ ದೇವರಕೊಂಡ ಅವರು ಸುದ್ದಿಯಲ್ಲಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಬಾರಿ ನಟ ವಿಜಯ್ ಮಾತ್ರ ಸುದ್ದಿಯಲ್ಲಿಲ್ಲ, ಅವರ ಜೊತೆಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸಹ ಆ ಸುದ್ದಿಯಲ್ಲಿ ಇದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏನದು ವಿಷಯ ಇಲ್ಲಿದೆ ನೋಡಿ

ಮುಂದೆ ಓದಿ ...
  • Share this:

ಮೊನ್ನೆ ತಾನೇ ತೆಲುಗು ಚಿತ್ರರಂಗದ ಅರ್ಜುನ್ ರೆಡ್ಡಿ ಎಂದರೆ ವಿಜಯ್ ದೇವರಕೊಂಡ (Vijay Deverakonda) ಅವರು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ (Karan Johar) ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರ ಒಂದು ಎಪಿಸೋಡ್ ನಲ್ಲಿ ಅತಿಥಿಯಾಗಿ (Guest) ಬಂದು ತಮ್ಮ ಸೆಕ್ಸ್ ಲೈಫ್ ಬಗ್ಗೆ ತುಂಬಾನೇ ಓಪನ್ ಆಗಿ ಮಾತಾಡಿದ್ದರ ಬಗ್ಗೆ ಸುದ್ದಿಯನ್ನು ಓದಿದ್ದೆವು. ಈಗ ಮತ್ತೊಮ್ಮೆ ನಟ ವಿಜಯ್ ದೇವರಕೊಂಡ ಅವರು ಸುದ್ದಿಯಲ್ಲಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಬಾರಿ ನಟ ವಿಜಯ್ ಮಾತ್ರ ಸುದ್ದಿಯಲ್ಲಿಲ್ಲ, ಅವರ ಜೊತೆಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಹ ಆ ಸುದ್ದಿಯಲ್ಲಿ ಇದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಇವರಿಬ್ಬರು ಕೆಲವು ತೆಲುಗು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದು, ಪರಸ್ಪರರು ಜೊತೆಯಾಗಿ ಅಡ್ಡಾಡಿದ್ದು, ಅನೇಕ ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಜೊತೆಯಲ್ಲಿ ಸುತ್ತಾಡುವುದನ್ನು ನೋಡಿದ ಅಭಿಮಾನಿಗಳು ಇವರಿಬ್ಬರ ಮಧ್ಯೆ ಏನೋ ನಡೀತಾ ಇದೆ ಅಂತ ಅನೇಕ ಬಾರಿ ಊಹೆ ಮಾಡಿದ್ದರು.


ನಟಿ ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ಅವರ ನಡುವೆ ಏನು ನಡೀತಾ ಇದೆ ?
ಇವರಿಬ್ಬರ ಮಧ್ಯೆ ಇರುವ ಕೆಮಿಸ್ಟ್ರಿಯನ್ನು ಸಹ ಸಿನಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ತುಂಬಾನೇ ಇಷ್ಟ ಪಟ್ಟಿದ್ದರು ಅಂತ ಹೇಳಬಹುದು. ಇಷ್ಟೇ ಅಲ್ಲದೆ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂದು ಮಾಧ್ಯಮಗಳು ಊಹಿಸಲು ಪ್ರಾರಂಭಿಸಿದ್ದವು. ಆದರೆ ಇವರ ಮಧ್ಯೆ ಕಥೆ ಬೇರೆನೆ ಇದೆ ನೋಡಿ. ನಟಿ ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ಅವರ ನಡುವೆ ಏನು ನಡೀತಾ ಇದೆ ಅಂತ ತಿಳಿಸುತ್ತೆ ಈ  ಸುದ್ದಿ.


ಇದನ್ನೂ ಓದಿ: Naga Chaitanya-Samantha: ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಏನಂದ್ರು ನಾಗ ಚೈತನ್ಯ


ಹೌದು.. 2017 ರಲ್ಲಿ ನಟಿ ರಶ್ಮಿಕಾ ಕನ್ನಡ ಚಿತ್ರರಂಗದ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡು ನಂತರ ಅದನ್ನು ರದ್ದುಗೊಳಿಸಿದ್ದರು. ಇದಾದ ಸ್ವಲ್ಪ ಸಮಯದ ನಂತರ ವಿಜಯ್ ಮತ್ತು ರಶ್ಮಿಕಾ ಇಬ್ಬರು ಪರಸ್ಪರ ಡೇಟಿಂಗ್ ಮಾಡಲು ಶುರು ಮಾಡಿದ್ದರು ಎಂದು ವರದಿಯೊಂದು ಹೇಳುತ್ತಿದೆ. ಆ ಡೇಟಿಂಗ್ ಮಾಡುವ ಸಮಯದಲ್ಲಿ, ಅವರು 'ಗೀತ ಗೋವಿಂದಂ' (2018), 'ಡಿಯರ್ ಕಾಮ್ರೇಡ್' (2019) ಎಂಬ ಒಂದೆರಡು ಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದವು. ಈ ಚಿತ್ರಗಳಲ್ಲಿ ಜೊತೆಯಾಗಿ ನಟಿಸುವುದರಿಂದ ಹೆಚ್ಚು ಸಮಯ ಕಳೆಯುವಂತೆ ಆಗಿ, ಇದು ಇಬ್ಬರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ತುಂಬಾನೇ ಸಹಾಯಕವಾಯಿತು ಎಂದು ವರದಿ ಹೇಳುತ್ತದೆ.


ವಿಜಯ್ ಮತ್ತು ರಶ್ಮಿಕಾ ಇಬ್ಬರ ನಡುವೆ ಬ್ರೇಕಪ್ ಆಗಿದ್ದೇಕೆ?
ತದ ನಂತರ ಏನಾಯ್ತು ಅಂತ ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ. ನಂತರ, ವಿಜಯ್ ಮತ್ತು ರಶ್ಮಿಕಾ ಇಬ್ಬರ ನಡುವೆ ಬ್ರೇಕಪ್ ಆಯಿತು. ಈ ಬ್ರೇಕಪ್ ನಿನ್ನೆ ಮೊನ್ನೆ ನಡೆದುದಲ್ಲ, ಸುಮಾರು ಎರಡು ವರ್ಷಗಳ ಹಿಂದೆ ನಡೆಯಿತು. ಈ ಸಂಬಂಧವು ಇನ್ನೂ ಮೊದಲಿನಂತೆ ಉಳಿದಿಲ್ಲ ಎನ್ನುವುದಂತೂ ನಿಜ ಎಂದು ವರದಿಯಲ್ಲಿ ಹೇಳಿದೆ.


ಬ್ರೇಕಪ್ ಬಳಿಕ ಸಿಂಗಲ್ ಆಗಿದ್ದಾರೆ ರಶ್ಮಿಕಾ?
ವಿಜಯ್ ಜೊತೆಗೆ ಬ್ರೇಕಪ್ ಆದ ನಂತರ ನಟಿ ರಶ್ಮಿಕಾ ಯಾರ ಜೊತೆಗೂ ಮಿಂಗಲ್ ಆಗದೆ ಸಿಂಗಲ್ ಆಗಿಯೇ ಉಳಿದಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಪ್ರಸ್ತುತ ಒಬ್ಬರನ್ನೊಬ್ಬರು ಪ್ರೀತಿಸುತ್ತಿಲ್ಲ, ಆದರೆ ಅವರಿಬ್ಬರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದಾರೆ. ಅವರಿಬ್ಬರು ಹಿಂದೆ ಪ್ರೀತಿಯಲ್ಲಿದ್ದರು, ಆದರೆ ಅದು ಗತಕಾಲದ ವಿಷಯವಾಗಿದೆ. ಆದ್ದರಿಂದ ಮಾಧ್ಯಮಗಳು ಇನ್ನೂ ಯಾವುದೇ ಊಹಾಪೋಹಗಳನ್ನು ಮಾಡುತ್ತಿದ್ದರೂ, ಅವರಿಬ್ಬರು ಯಾವುದರ ಬಗ್ಗೆಯೂ ಸ್ವಲ್ಪವೂ ತಲೆ ಕೆಡೆಸಿಕೊಳ್ಳುತ್ತಿಲ್ಲ.


ಇದನ್ನೂ ಓದಿ: Sita Ramam: ರಶ್ಮಿಕಾ ಮಂದಣ್ಣ ಸಿನಿಮಾ ಬ್ಯಾನ್, ಸೀತಾ ರಾಮಂ ಚಿತ್ರತಂಡಕ್ಕೆ ಎದುರಾಯಿತು ಸಂಕಷ್ಟ


ಇತ್ತೀಚಿನ ಒಂದು ಸಂದರ್ಶನದಲ್ಲಿ ವಿಜಯ್ 'ರಶ್ಮಿಕಾ ಡಾರ್ಲಿಂಗ್' ಎಂದು ಹೇಳಿದ್ದರು. ಸರಿ, ಡಾರ್ಲಿಂಗ್ ನಂತಹ ಪದಗಳನ್ನು ಇಂದಿನ ಜಗತ್ತಿನಲ್ಲಿ ವಿಶೇಷವಾಗಿ ಗ್ಲಾಮರ್ ಉದ್ಯಮದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ ಅಲ್ಲವೇ? ಅದೆಲ್ಲಾ ಏಕೆ ಬಿಡಿ, ಒಂದು ದಿನದ ಹಿಂದೆಯೇ ವಿಜಯ್ ಅವಳನ್ನು 'ಸುಂದರಿ' ಎಂದು ಕರೆದರು, ಇದು ಕೇವಲ ವದಂತಿಗಳಿಗೆ ಗಾಳಿ ತುಂಬುತ್ತಿರುವ ಕೆಲಸ ಅಷ್ಟೇ ಅಂತ ವರದಿ ಹೇಳಿದೆ.

First published: