• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Puneeth Rajkumar: ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು; ನಾಳೆ ಸಿಎಂ ಬೊಮ್ಮಾಯಿ ಅವರಿಂದ ಉದ್ಘಾಟನೆ

Puneeth Rajkumar: ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು; ನಾಳೆ ಸಿಎಂ ಬೊಮ್ಮಾಯಿ ಅವರಿಂದ ಉದ್ಘಾಟನೆ

ಪುನೀತ್​ ರಾಜ್​ ಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ

ಪುನೀತ್​ ರಾಜ್​ ಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ

ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡಲು ನಿರ್ಧರಿಸಿದ್ದು, ಫೆಬ್ರವರಿ 7ರಂದು ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

  • Share this:

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ನಿಧನರಾಗಿ ವರ್ಷಗಳೇ  ಕಳೆದು ಹೋಗಿದೆ. ಅಪ್ಪುವನ್ನು ಅಭಿಮಾನಿಗಳು ಮನದಲ್ಲಿಟ್ಟು ಪೂಜೆ ಮಾಡ್ತಿದ್ದಾರೆ. ಪುನೀತ್ ರಾಜ್​ಕುಮಾರ್​ ಅವರನ್ನು ಹಲವು ರೀತಿಗಳನ್ನು ನೆನಪು ಮಾಡಿಕೊಳ್ತಿದ್ದಾರೆ.  ರಸ್ತೆ, ಸರ್ಕಲ್​ ಹಾಗೂ ಪಾರ್ಕ್​ಗಳಿಗೂ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವ ಪ್ರಸ್ತಾವನೆಗೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಾಳೆ (ಫೆಬ್ರವರಿ7) ಈ ರಸ್ತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಉದ್ಘಾಟನೆ ಮಾಡಲಿದ್ದಾರೆ ಎಂದು ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಸಚಿವ ಆರ್​. ಅಶೋಕ್ (R Ashok) ಹೇಳಿದ್ದಾರೆ.


ರಸ್ತೆ ಉದ್ಘಾಟಿಸಲಿದ್ದಾರೆ ಸಿಎಂ ಬೊಮ್ಮಾಯಿ


ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡಲು ನಿರ್ಧರಿಸಿದ್ದು, ಫೆಬ್ರವರಿ 7ರಂದು ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ.


puneeth rajkumar lesson for bengaluru university students


ಕಾರ್ಯಕ್ರಮದಲ್ಲಿ ರಾಜ್​ ಕುಟುಂಸ್ಥರು ಭಾಗಿ


ಪುನೀತ್ ರಾಜ್​ಕುಮಾರ್​ ಸಾಮಾಜಿಕ ಕೆಲಸ ಮಾಡಿದ ಹೃದಯವಂತ ಎಂದು ಸಚಿವ ಆರ್​ ಅಶೋಕ್ ಹೇಳಿದ್ರು. ಇನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಸೇರಿದಂತೆ ಅನೇಕರು ಭಾಗಿ ಆಗಲಿದ್ದಾರೆ. ಪುನೀತ್ ​ಪತ್ನಿ ಅಶ್ವಿನಿ ಅವರು ಕೂಡ ಪಾಲ್ಗೊಳ್ಳುತ್ತಾರೆ ಎಂದು ಕಂದಾಯ ಸಚಿವ ಆರ್​.ಅಶೋಕ್ ಹೇಳಿದ್ದಾರೆ.


ನಂದಿನಿ ಜಾಹೀರಾತಿಗೆ ಫ್ರೀ ಆಗಿ ರಾಯಬಾರಿ ಆಗಿದ್ರು ಅಪ್ಪು


ಪುನೀತ್​ ಯಾರಿಗೂ ತಿಳಿಯದಂತೆ ಸಾಮಾಜಿಕ ಸೇವೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕೆಲಸ ಹಾಗೂ ಅಭಿಮಾನಿಗಳ ಪ್ರೀತಿ ಬಗ್ಗೆ ಮಾತಾಡಿದ ಆರ್​ ಅಶೋಕ್​,  ಪುನೀತ್ ಅವರನ್ನು ಕೆಲವರು ದೇವರು ಅಂತ ಕರೀತಾರೆ. ಜಾಹೀರಾತಿಗೆ ಸ್ಟಾರ್​​ಗಳು ಕೋಟ್ಯಾಂತರ ರೂಪಾಯಿ ತೆಗೆದುಕೊಳ್ಳುತ್ತಾರೆ. ಆದರೆ, ನಮ್ಮ ನಂದಿನಿ ಜಾಹೀರಾತಿಗೆ ಅವರು ಒಂದು ನಯಾಪೈಸಾ ತೆಗೆದುಕೊಂಡಿಲ್ಲ ಎಂದು ಹೇಳಿದ್ರು.


ಪುನೀತ್ ನಂದಿಗೆ ಬ್ರ್ಯಾಂಡ್​ಗೆ ಫ್ರೀ ಆಗಿ ರಾಯಬಾರಿ ಆಗಿದ್ರು. ರೈತರು ದೇಶದ  ಬೆನ್ನೆಲುಬಾಗಿದ್ದಾರೆ ಅವ್ರಿಗಾಗಿ ನಾನು ಉಚಿತವಾಗಿ ಮಾಡ್ತೀನಿ ಅಂದಿದ್ರು. ಅವರ ನೆನಪು ಸದಾ ನಮ್ಮೊಂದಿಗೆ ಇರಬೇಕು ಎನ್ನುವ ಕಾರಣಕ್ಕೆ ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು ಇಡುತ್ತಿದ್ದೇವೆ’ ಎಂದು ಆರ್. ಅಶೋಕ್ ಹೇಳಿದ್ರು.


ರೇಸ್​ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು?


ರೇಸ್​ಕೋರ್ಸ್ ರಸ್ತೆಗೆ ಅಂಬರೀಷ್ ಅವರ ಹೆಸರು ಇಡಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಮಾತನಾಡಿರುವ ಅಶೋಕ್ ಅವರು, ‘ಅಂಬರೀಷ್ ಅವರಿಗೂ ರೇಸ್​ಕೋರ್ಸ್​ ರಸ್ತೆಗೂ ಅವಿನಾಭಾವ ಸಂಬಂಧ ಇದೆ. ಈ ರಸ್ತೆಗೆ ಅಂಬರೀಷ್ ಹೆಸರು ಇಡಬೇಕು ಎಂಬ ಕೋರಿಕೆ ಬಂದಿದೆ. ಅದನ್ನು ಸಿಎಂಗೆ ತಲುಪಿಸುತ್ತೇನೆ. ಮೇನಲ್ಲಿ ನಾವೇ ಇರ್ತೀವಿ. ಆಗ ನೋಡೋಣ’ ಎಂದು ಆರ್​ ಅಶೋಕ್​ ಹೇಳಿದ್ದಾರೆ.




ಇದನ್ನೂ ಓದಿ: Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?


ಜಯನಗರ ಉದ್ಯಾನವನಕ್ಕೆ ಗಂಧದಗುಡಿ ಹೆಸರು


ಜಯನಗರದ (Jayanagar) ಈ ಉದ್ಯಾನವನಕ್ಕೆ ಅಪ್ಪು ನೆನಪಿಗಾಗಿ ಗಂಧದಗುಡಿ (Gandhada Gudi ) ಉದ್ಯಾನವನ ಅಂತ ಮರುನಾಮಕರಣ ಮಾಡಲಾಗಿದೆ. ಅಪ್ಪು ಅಭಿನಯದ (Appu) ಕೊನೆಯ ಚಿತ್ರ ಗಂಧದಗುಡಿ 100 ದಿನ ಪೂರೈಸಿದ ಹಿನ್ನೆಲೆ ಗಂಧದಗುಡಿ ಹಬ್ಬ ಆಚರಣೆ ಮಾಡಲಾಯಿತು. ಕನ್ನಡಿಗರ ಹೆಮ್ಮೆಯ ಅರಸು, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಮ್ಮನ್ನೆಲ್ಲ ಅಗಲಿ ವರ್ಷವೇ ಉರುಳಿದರೂ ಅವರ ನೆನಪುಗಳು ಮಾತ್ರ ಇಂದಿಗೂ ಮಾಸಿಲ್ಲ. ಗಂಧದಗುಡಿ ಚಿತ್ರದ ಮೂಲಕ ಹಸಿರೇ ಉಸಿರು ಅಂತಾ ಸಂದೇಶ ಸಾರಿ ಮರೆಯಾದ ಬೆಟ್ಟದ ಹೂವಿಗೆ ವಿಶೇಷ ನಮನ ಸಂದಿದೆ. ಪರಿಸರ ಪ್ರೀತಿಯ ಸಂದೇಶ ಸಾರಿದ ಅಪ್ಪು ಹೆಸರಲ್ಲಿ ಗಂಧದಗುಡಿ ಹಬ್ಬ ಆಚರಿಸಿ ಪರಿಸರದ ಪಾಠ ಪಸರಿಸಲಾಯ್ತು.

Published by:ಪಾವನ ಎಚ್ ಎಸ್
First published: