ಬೆಂಗಳೂರು: ಖ್ಯಾತ ನಟ, ಸಾಹಸಸಿಂಹ ವಿಷ್ಣುವರ್ಧನ್ (Sahasasimha Vishnuvardhan) ಅವರ ಅಳಿಯ, ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯ ‘ಆರ್ಯವರ್ಧನ್’ (Aryavardhan) ಖ್ಯಾತಿಯ ನಟ ಅನಿರುದ್ಧ್ (Anirudh) ಇದೀಗ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಜೀ ಕನ್ನಡದ (Zee Kannada) ಜನಪ್ರಿಯ ಜೊತೆ ಜೊತೆಯಲಿ ಧಾರಾವಾಹಿಯಿಂದ ಖ್ಯಾತಿ ಪಡೆದಿದ್ದ ಅನಿರುದ್ಧ್, ಬಳಿಕ ಅದೇ ಧಾರಾವಾಹಿಯಿಂದ ಹೊರಬರುವಂತಾಗಿತ್ತು. ಅನಿರುದ್ಧ್ರನ್ನು ಕಿರುತೆರೆಯಿಂದಲೇ (TV Serials) ಬ್ಯಾನ್ (Ban) ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಈ ಹೊತ್ತಲ್ಲೇ ಖ್ಯಾತ ನಿರ್ದೇಶಕ ಎಸ್. ನಾರಾಯಣ್ (S. Narayan) ಅವರು ಅನಿರುದ್ಧ್ರನ್ನು ಇಟ್ಟುಕೊಂಡು ಉದಯ ಟಿವಿಗಾಗಿ (Udaya TV) ‘ಸೂರ್ಯವಂಶ’ ಎಂಬ ಧಾರಾವಾಹಿ ನಿರ್ಮಿಸೋದಾಗಿ ಘೋಷಿಸಿದ್ದರು. ಆ ಬಳಿಕ ಬ್ಯಾನ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಇದೀಗ ಅನಿರುದ್ಧ್ ಬ್ಯಾನ್ ತೂಗಗತ್ತಿಯಿಂದ ಪಾರಾಗಿದ್ದಾರೆ.
ಅನಿರುದ್ಧ್ರನ್ನು ಬ್ಯಾನ್ ಮಾಡದಂತೆ ನಿರ್ಧಾರ
ಧಾರಾವಾಹಿಯಿಂದ ನಟ ಅನಿರುದ್ದ್ ಅವರನ್ನು ಬ್ಯಾನ್ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ಇಂದೂ ಕೂಡ ನಡೆಯಿತು. ಈ ಸಭೆಯಲ್ಲಿ ಟೆಲಿವಿಷನ್ ಅಸೋಸಿಯೇಷನ್ ಹಾಗೂ ಕಿರುತೆರೆ ನಿರ್ಮಾಪಕರು ಭಾಗಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಅನಿರುದ್ಧ್ರನ್ನು ಬ್ಯಾನ್ ಮಾಡುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.
“ಅನಿರುದ್ಧ್ ಧಾರಾವಾಹಿಯಲ್ಲಿ ನಟಿಸುತ್ತಾರೆ”
ಇನ್ನು ಕಿರುತೆರೆ ಪರವಾಗಿ ಮಾತನಾಡಿದ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ, ನಾವೆಲ್ಲ ಒಮ್ಮತದಿಂದ ಒಂದು ನಿರ್ಧಾರಕ್ಕೆ ಬಂದಿದ್ದೀವಿ ಎಂದರು. ಇಂಡಸ್ಟ್ರಿಯಲ್ಲಿ ಯಾರು ಯಾರನ್ನು ಬ್ಯಾನ್ ಮಾಡೊಕೆ ಆಗಲ್ಲ ಎಂದರು. ಅನಿರುದ್ಧ್ ಕುರಿತಾದ ಎಲ್ಲಾ ವಿವಾದ ಇತ್ಯರ್ಥ ಆಗಿದೆ. ಹೀಗಾಗಿ ಅವರನ್ನು ಬ್ಯಾನ್ ಮಾಡುವ ನಿರ್ಧಾರ ಕೈಬಿಡಲಾಗಿದೆ. ಇನ್ನು ಮುಂದೆ ಅನಿರುದ್ದ್ ಹೊಸ ಧಾರಾವಾಹಿಯಲ್ಲಿ ನಟಿಸ್ತಾರೆ ಅಂತ ಶೇಷಾದ್ರಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: Hero Anirudh: 2022 ನಟ ಅನಿರುದ್ಧ್ ಅವರಿಗೆ ಅನ್ ಲಕ್ ಇಯರ್ ಆಯ್ತಾ?
ಆರೂರು ಜಗದೀಶ್ ಹೆಗಲ ಮೇಲೆ ಅನಿರುದ್ಧ್ ಕೈ!
ಇನ್ನು ಅನಿರುದ್ದ್ ಕಿರುತೆರೆಯಿಂದ ಬ್ಯಾನ್ ವಿಚಾರ ಹಗ್ಗ ಜಗ್ಗಾಟ ಕೊನೆಗೂ ಸುಖಾಂತ್ಯವಾಗಿದೆ. ಈ ನಡುವೆ ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಹೆಗಲ ಮೇಲೆ ಕೈ ಹಾಕಿ ಅನಿರುದ್ಧ್ ಭಾವುಕರಾದ ಪ್ರಸಂಗ ಕೂಡ ನಡೆಯಿತು.
ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಅನಿರುದ್ಧ್
ಜೊತೆ ಜೊತೆಯಲ್ಲಿ ಧಾರಾವಾಹಿಯ ಈ ಘಟನೆಯಿಂದ ಅಭಿಮಾನಿಗಳಿಗೆ ರಸಭಂಗ ಆಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳ್ತೇನೆ ಅಂತ ಅನಿರುದ್ಧ್ ಹೇಳಿದ್ರು. ಇಂತ ಘಟನೆ ನಡೆಯಬಾರದಿತ್ತು, ಅದಕ್ಕಾಗಿ ನನಗೆ ವಿಷಾದವಿದೆ ಅಂತ ಅನಿರುದ್ಧ್ ನುಡಿದ್ರು.
ಸೂರ್ಯವಂಶಕ್ಕಿದ್ದ ವಿಘ್ನ ನಿವಾರಣೆ
ಸೂರ್ಯವಂಶ ಧಾರಾವಾಹಿಗೆ ಪ್ರಾರಂಭಕ್ಕೂ ಮುನ್ನವೇ ವಿಘ್ನ ಎದುರಾಗಿತ್ತು. ಈ ಧಾರಾವಾಹಿಯನ್ನು ತಡೆಯಬೇಕು ಎಂದು ಕನ್ನಡ ಕಿರುತೆರೆ ನಿರ್ಮಾಪಕರು ಆಗ್ರಹಿಸಿದ್ದರು. ಅನಿರುದ್ಧ ಮೇಲೆ ಎರಡು ವರ್ಷಗಳ ಕಾಲ ಅಲಿಖಿತ ನಿಷೇಧ ಹೇರಿದ್ದರಿಂದ ಅವರಿಗಾಗಿ ಸೀರಿಯಲ್ ಮಾಡದಂತೆ ನಾರಾಯಣ್ ಅವರಿಗೂ ಮನವಿ ಮಾಡಿದ್ದರು.
ಇದನ್ನೂ ಓದಿ: Aniruddha Jatkar: ಕನ್ನಡದ ಕಿರುತೆರೆಗೆ ವಾಪಾಸ್ ಆದ ಜೊತೆ ಜೊತೆಯಲಿ ಆರ್ಯವರ್ಧನ್!
ಬೇಸರ ವ್ಯಕ್ತಪಡಿಸಿದ್ದ ಅನಿರುದ್ದ್
ಇನ್ನು ತಮ್ಮ ಮೇಲಿನ ಆರೋಪದ ಕುರಿತಂತೆ ನಟ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದರು. 'ನಾನು ಸಾಕಷ್ಟು ಲೇಖನ ಬರಿತೀನಿ ನಿಮ್ಗೆಲ್ಲಾ ಗೊತ್ತಿದೆ, ಹಲವು ಲೇಖನದಲ್ಲಿ ವಸುದೈವ ಕುಟುಂಬ ಅಂತ ಪದ ಬಳಸಿದ್ದೇನೆ. ಹಾಗಂದರೆ ನನ್ನ ಕುಟುಂಬ ಅಂತ ಅರ್ಥ, ಜೊತೆ ಜೊತೆಯಲಿ ಧಾರಾವಾಹಿ ಕೂಡ ನನ್ನ ಕುಟುಂಬ, ಮನೆಯಲ್ಲಿ ಸಮಸ್ಯೆ ಬರೋದು ಸಹಜ. ಅದನ್ನ ಕುಟುಂಬ ಸದಸ್ಯರು ಬಗೆ ಹರಿಸಿಕೊಳ್ಳೋದು ಒಳ್ಳೆಯದು. ಆದರೆ ಅವರು ನನ್ನನ್ನ ಕರೆದಿಲ್ಲ. ನಾನೇ ಹೋಗಿ ಮಾತಾಡೋಕೆ ಪ್ರಯತ್ನ ಪಟ್ಟೆ, ಫೋನ್ ಕಾಲ್ ಮಾಡಿದೆ. ಆದರೆ ಅದಕ್ಕೂ ಅವರು ರೆಸ್ಪಾನ್ಸ್ ಮಾಡಿಲ್ಲ' ಅಂತ ಅನಿರುದ್ಧ್ ಈ ಹಿಂದೆ ಆರೋಪಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ