• Home
  • »
  • News
  • »
  • entertainment
  • »
  • Kantara: ಕಾಂತಾರಕ್ಕೆ ತಪ್ಪದ ಕಂಟಕ! ಸಿನಿಮಾ ಪ್ರದರ್ಶಿಸದಂತೆ ದಲಿತ ಸಂಘಟನೆಗಳ ಆಗ್ರಹ

Kantara: ಕಾಂತಾರಕ್ಕೆ ತಪ್ಪದ ಕಂಟಕ! ಸಿನಿಮಾ ಪ್ರದರ್ಶಿಸದಂತೆ ದಲಿತ ಸಂಘಟನೆಗಳ ಆಗ್ರಹ

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ

ಈಗಾಗಲೇ “ವರಾಹ ರೂಪಂ” ಹಾಡಿನಿಂದ ಕಾನೂನು ತೊಡಕು ಎದುರಿಸುತ್ತಿರುವ 'ಕಾಂತಾರ' ಸಿನಿಮಾದ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. “ಸಿನಿಮಾದಲ್ಲಿ ದಲಿತ ಸಮುದಾಯಗಳನ್ನು ಅಪಮಾನಿಸಲಾಗಿದೆ” ಅಂತ ದಕ್ಷಿಣ ಕನ್ನಡದ ದಲಿತ ಸಂಘಟನೆಗಳು ಆರೋಪಿಸಿವೆ.

  • News18 Kannada
  • Last Updated :
  • Mangalore, India
  • Share this:

ಮಂಗಳೂರು: ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶಿರುವ, ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ‘ಕಾಂತಾರ’ (Kantara) ಸಿನಿಮಾದ ಅಬ್ಬರ ಮುಂದುವರೆದಿದೆ. ಬಾಕ್ಸ್ ಆಫೀಸ್‌ನಲ್ಲಿ (Box Office) ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳಲ್ಲಿ ಒಂದು ಎಂಬ ಹೆಚ್ಚುಗಾರಿಕೆ ಈ ಸಿನಿಮಾಕ್ಕಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಉತ್ತಮ ಪ್ರದರ್ಶನ ಕಂಡಿದೆ. ಹೀಗೆ ಹಲವು ಖ್ಯಾತಿ ಜೊತೆಗೆ ವಿವಾದಗಳೂ (Controversy) ಕಾಂತಾರ ಸಿನಿಮಾದ ಬೆನ್ನು ಬಿದ್ದಿದೆ. ಈಗಾಗಲೇ “ವರಾಹ ರೂಪಂ” ಹಾಡಿನಿಂದ (Varaha Roopam Song) ಕಾನೂನು ತೊಡಕು ಎದುರಿಸುತ್ತಿರುವ ಕಾಂತಾರ ಸಿನಿಮಾದ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. “ಸಿನಿಮಾದಲ್ಲಿ ದಲಿತ ಸಮುದಾಯಗಳನ್ನು (Dalit Community) ಅಪಮಾನಿಸಲಾಗಿದೆ” ಅಂತ ದಕ್ಷಿಣ ಕನ್ನಡದ (Dakshina Kannada) ದಲಿತ ಸಂಘಟನೆಗಳು ಆರೋಪಿಸಿವೆ. “ಈ ಕೂಡಲೇ ಕಾಂತಾರ ಸಿನಿಮಾ ಪ್ರದರ್ಶನ (Show) ನಿಲ್ಲಿಸಬೇಕು” ಅಂತ ಸಂಘಟನೆ ಪ್ರಮುಖರು ಮಂಗಳೂರಿನಲ್ಲಿ (Mangaluru) ಜಿಲ್ಲಾಧಿಕಾರಿಗೆ (DC) ಮನವಿ ಸಲ್ಲಿಸಿದ್ದಾರೆ.


“ಕೆಳ ಸಮುದಾಯದ ಯುವಕರ ಅವಹೇಳನ”


ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಕೆಳ ಸಮುದಾಯದ ಯುವಕರನ್ನು ಪೋಲಿ ಹುಡುಗರ ರೀತಿ ಚಿತ್ರಿಸಲಾಗಿದೆ ಅಂತ ಸಂಘಟನೆ ಆರೋಪಿಸಿದೆ. ಹಣ ಹೆಂಡ ಕೊಟ್ಟರೆ ಏನು ಬೇಕಾದರೂ ಮಾಡುತ್ತಾರೆ ಎಂದು ಸಿನಿಮಾದಲ್ಲಿ ಚಿತ್ರಿಸಲಾಗಿದೆ ಅಂತ ಆರೋಪಿಸಲಾಗಿದೆ.


“ದೈವ ನರ್ತಕರಿಗೂ ಅಪಮಾನ”


ದೈವ ನರ್ತಕರು ಕೂಡ ನಮ್ಮ ಜೊತೆ ನೋವು ತೋಡಿಕೊಂಡಿದ್ದಾರೆ ಅಂತ ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಎಂಬುವರು ಆರೋಪಿಸಿದ್ದಾರೆ. ಸಿನಿಮಾದಲ್ಲಿ ದಲಿತರಷ್ಟೇ ಅಲ್ಲ ದೈವ ನರ್ತಕರ ಕುಟುಂಬಗಳನ್ನೂ ಅವಹೇಳನ ಮಾಡಲಾಗಿದೆ. ಅಪಮಾನದ ಬಗ್ಗೆ ಸಮಾಜದ ಮುಂದೆ ಹೇಳಿದರೆ ಉದ್ಯೋಗ ನಷ್ಟವಾಗುವ ಭೀತಿ ವ್ಯಕ್ತಪಡಿಸಿದ್ದಾರೆ. ಸೆನ್ಸಾರ್​ ಮಂಡಳಿ ಮತ್ತೆ ಕಾಂತಾರ ಚಿತ್ರವನ್ನು ಪರಿಶೀಲನೆ ಮಾಡಬೇಕು ಎಂದು ಲೋಲಾಕ್ಷ ಅವರು ಆಗ್ರಹಿಸಿದ್ದಾರೆ.


ದಲಿತ ಸಂಘಟನೆಗಳಿಂದ ಗಂಭೀರ ಆರೋಪ


ಸಿನಿಮಾದ ಕುರಿತಂತೆ ದಲಿತ ಸಂಘಟನೆಗಳು ಹಲವು ಆರೋಪ ಮಾಡಿವೆ. ಸಿನಿಮಾದಲ್ಲಿ ದೈವ ನರ್ತಕನ ತಾಯಿಯ ಬಾಯಿಯಲ್ಲಿ ಅಸಂವಿಧಾನಿಕ ಪದವನ್ನು ಬಳಸಲಾಗಿದೆ, ಊರಿನ ಯಜಮಾನ ಗಂಡ ಸತ್ತವರಿಗೆ ನಾನೇ ಇದ್ದೇನೆ ಅಂತಾ ಹೇಳೋದು ದುಃಖ ತಂದಿದೆ ಎಂದಿದ್ದಾರೆ. ಧಣಿ ಬಡ ಹೆಣ್ಣು ಮಗಳ ಮನೆಗೆ ಹೋಗುವಾಗ ಹೀರೋ ಕಾವಲು ಕಾಯುವುದು, ಅದನ್ನು ವಿಜೃಂಭಣೆ ಮಾಡುವ ನಾವು ಇಂತಹ ಕೀಳು ಮಟ್ಟಕ್ಕೆ ಹೋಗಿದ್ದೇವೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ದೈವಾರಾಧನೆಯಲ್ಲಿ ಹಿಂಸೆಗೆ ಪ್ರಚೋದನೆ”


ಹೊರದೇಶದಲ್ಲಿ ಇದನ್ನು ಭಾರತದ ಸಂಸ್ಕೃತಿ ಅಂತಾ ಹೇಳುವುದು ದುರಂತ ಎಂದಿರುವ ಸಂಘಟನೆ ಪ್ರಮುಖರು, ಗುಳಿಗ ಕಾಂತಾರ ಚಿತ್ರದಲ್ಲಿ ಇರುವ ರೀತಿಯೇ ಬೇಕು ಎನ್ನುವ ಬೇಡಿಕೆಯೂ ಬರುತ್ತಿದೆ. ಸಿನಿಮಾದಲ್ಲಿ ದೈವಗಳ ಆರಾಧಾನಾ ಕ್ರಮವನ್ನು ವಿಕೃತಿಗೊಳಿಸಲಾಗಿದೆ. ಚಿತ್ರದಲ್ಲಿ ದೈವಾರಾಧನೆಯಲ್ಲಿ ಹಿಂಸೆಗೆ ಪ್ರಚೋದನೆ ನೀಡಲಾಗಿದೆ ಅಂತ ಆರೋಪಿಸಿದ್ದಾರೆ.


ಇದನ್ನೂ ಓದಿ: Kantara: ಕಲೆಕ್ಷನ್‌ನಲ್ಲಿ ಪುಷ್ಪ ಮೀರಿಸಿದ ಕಾಂತಾರ! ಹೆಚ್ಚು ಗಳಿಕೆಯ ಟಾಪ್-10 ಸಿನಿಮಾಗಳಲ್ಲಿ ಎಷ್ಟನೇ ಸ್ಥಾನ ಗೊತ್ತಾ?


ಕಾಂತಾರ ಪ್ರದರ್ಶನ ನಿಲ್ಲಿಸುವಂತೆ ಮನವಿ


ದಕ್ಷಿಣ ಕನ್ನಡದ ದಲಿತ ಸಂಘಟನೆಗಳು ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕಾಂತಾರ ಸಿನಿಮಾದ ಆಕ್ಷೇಪಾರ್ಹ ಸೀಸ್​ಗೆ ಕತ್ತರಿ ಹಾಕಬೇಕು, ಅಲ್ಲಿವರೆಗೆ ಸಿನಿಮಾ ಪ್ರದರ್ಶನ ನಿಲ್ಲಿಸಬೇಕು ಅಂತ ಮನವಿ ಮಾಡಲಾಗಿದೆ. ಇನ್ನು ಕಾನೂನಿನ ಚೌಕಟ್ಟಿನಲ್ಲಿ ಸಿನಿಮಾವನ್ನು ಸೆನ್ಸಾರ್ ಮಂಡಳಿ ಪರಿಶೀಲನೆ ಮಾಡಬೇಕು ಎಂದು ದಲಿತ ಸಂಘಟನೆಗಳು ಜಿಲ್ಲಾಡಳಿತಕ್ಕೆ ಒತ್ತಾಯಿಸಿವೆ.

Published by:Annappa Achari
First published: