2002 ಏಪ್ರಿಲ್ 26 ಅಪ್ಪು ಅಭಿಮಾನಿಗಳು (Appu Fans) ಎಂದೂ ಮರೆಯದ ದಿನ. ಏಕಂದ್ರೆ ಇದೇ ದಿನ ಪುನೀತ್ ರಾಜ್ಕುಮಾರ್ (Puneeth Rajkumar) ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ದಿನವಾಗಿದೆ. ಅಲ್ಲಿಯವರೆಗೂ ಕನ್ನಡಿಗರು ಅಪ್ಪುವನ್ನ ಬಾಲ ನಟನಾಗಿ ನೋಡಿದ್ರು..ಆ ತುಂಟತನ ಆ ಮುಗ್ಧತೆಯನ್ನ ನೋಡಿ ತೆರೆ ಮೇಲೆ ಖುಷಿ ಪಟ್ಟಿದ್ರು. ಅಬ್ಬಾ ಈ ವಯಸ್ಸಿಗೆ ಅದೆಂಥಾ ನಟನೆ ಅಂತ ಬೆರಗಾಗಿದ್ರು.. ಹಾಗೆ ನಟನೆಯಷ್ಟೇ ಅಲ್ಲದೆ ಗಾಯನದಲ್ಲೂ ಪುಟಾಣಿ ಪುನೀತ್ ಸೈ ಎನಿಸಿಕೊಂಡಿದ್ರು. ಆದ್ರೆ ಒಂದಷ್ಟು ವರುಷಗಳ ಕಾಲ ಅಣ್ಣಾವ್ರ ಕಿರಿಯಮಗ ಚಿತ್ರರಂಗದಿಂದ ದೂರ ಇದ್ರು. ಅಪ್ಪು ಸಿನಿಮಾ (Appu Movie) ಮೂಲಕ ರೀ ಎಂಟ್ರಿಕೊಟ್ಟ ಅಣ್ಣಾವ್ರ ಮಗ ಮೊದಲ ಸಿನಿಮಾದಲ್ಲಿಯೇ ಮೋಡಿ ಮಾಡಿದ್ರು.
ಅಪ್ಪು ಡ್ಯಾನ್ಸ್ಗೆ ಫ್ಯಾನ್ಸ್ ಫಿದಾ
ಅಪ್ಪು ಸಿನಿಮಾದಲ್ಲಿ ಪುನೀತ್ ತಾಲಿಬಾನ್ ಅಲ್ವೇ ಅಲ್ಲ ಅಂತ ಪುನೀತ್ ತೆರೆಯ ಮೇಲೆ ಕುಣಿದು ಕುಪ್ಪಳಿಸಿದ್ರು. ಇಡೀ ಥಿಯೇಟರ್ನಲ್ಲಿ ಅಭಿಮಾನಿಗಳನ್ನು ಕುಣಿಸಿದ್ರು. ಅಲ್ಲಿಯವರೆಗೂ ಡ್ಯಾನ್ಸ್ ಅಂದ್ರೆ ಚಿರಂಜೀವಿ, ಪ್ರಭುದೇವ ಅಂತಿದ್ದೋರು ಸಹ ನಮ್ಮ ಅಪ್ಪುನ ಡ್ಯಾನ್ಸ್ ನೋಡಿ ಫಿದಾ ಆಗಿದ್ರು.
ಅಪ್ಪು ಕ್ರಿಯೇಟ್ ಮಾಡಿದ್ರು ಇತಿಹಾಸ
ಇನ್ನು ಸಿನಿಮಾದಲ್ಲಿ ಪುನೀರ್ ಫೈಟ್ಸ್ ಬಗ್ಗೆ ಹೇಳಲೇಬೇಕಿಲ್ಲ. ಬ್ಯಾಕ್ ಫ್ಲಿಪ್ ಇರಬಹುದು,ಅಥವಾ ತಮ್ಮದೇ ಆದ ಸ್ಟೈಲ್ ನ ಪಂಚ್ ಇರಬಹುದು.. ಎಲ್ಲದರಲ್ಲೂ ಪುನೀತ್ ಸಿಗ್ನೇಚರ್ ಕ್ರಿಯೇಟ್ ಮಾಡಿದ್ರು ಅಣ್ಣಾವ್ರ ಮಗ ಅನ್ನೋ ಬ್ರ್ಯಾಂಡ್ ನಲ್ಲಿ ಥಿಯೇಟರ್ಗೆ ಬಂದ ಪುನೀತ್, ಮೊದಲ ಯತ್ನದಲ್ಲಿಯೇ ತಮ್ಮದೇ ಆದ ಚಾರ್ಮ್ ಕ್ರಿಯೇಟ್ ಮಾಡಿಕೊಂಡು ಬಿಟ್ರು.
ರಾಜ್ ಕುಮಾರ್ ಕಿರಿಮಗ ಏನ್ಮಾಡಿದ್ದಾನೆ ನೋಡೋಣ ಅಂತ ಥಿಯೇಟರ್ಗೆ ಬಂದವರು ಥಿಯೇಟರ್ನಿಂದ ಹೊರಗೆ ಬರುವಾಗ ಇದು ಪುನೀತ್ ಸಿನಿಮಾ ಅಂತ ಕೊಂಡಾಡುತ್ತಾ ಬಂದರು.. ಪರಿಣಾಮ ಪುನೀತ್ ನಟನೆಯ ಮೊದಲ ಸಿನಿಮಾ ಬಾಕ್ಸಾಫೀಸ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಯುವ ಪ್ರೇಕ್ಷಕರನ್ನ ಹುಚ್ಚೆಬ್ಬಿಸಿತು
175 ದಿನಗಳ ಕಾಲ ಅಪ್ಪು ಪ್ರದರ್ಶನ
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪುನೀತ್ ನಟನೆಯ ಅಪ್ಪು ಸಿನಿಮಾ ನೋಡಲು ಥಿಯೇಟರ್ ನತ್ತ ಓಡೋಡಿ ಬಂದ್ರು. ಅಪ್ಪು ಸಿನಿಮಾ 175 ದಿನಗಳ ಕಾಲ ನಿರಂತರವಾಗಿ ಪ್ರದರ್ಶನ ಕಂಡಿತು. ಕನ್ನಡ ಚಿತ್ರರಂಗದ ಬಿಗ್ ಹಿಟ್ ಎನಿಸಿಕೊಂಡಿತು.
ಅಪ್ಪು ಕೊಂಡಾಡಿದ ನಟ ರಜನಿಕಾಂತ್
ಇನ್ನು ಈ ಸಿನಿಮಾದ ಶತದಿನೋತ್ಸವ ಕಾರ್ಯಕ್ರಮವನ್ನ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಆಕರ್ಷಣೆಯಾಗಿದ್ರು. ಈ ವೇಳೆ ಮಾತನಾಡಿದ ತಲೈವಾ ರಜನಿ ಹುಲಿ ಹೊಟ್ಟೇಲಿ ಹುಲಿನೇ ಹುಟ್ಟೋದು. ನಾವೆಲ್ಲಾ ನೂರು ಸಿನಿಮಾಗಳನ್ನ ಮಾಡಿದ್ಮೇಲೆ ಅಭಿನಯದಲ್ಲಿ ಪಕ್ವವಾಗಿದ್ವಿ, ಆದ್ರೆ ಪುನೀತ್ ಮೊದಲ ಸಿನಿಮಾದಲ್ಲಿಯೇ ತಾನು ಎಂಥಾ ನಟ ಅಂತ ಪ್ರೂ ಮಾಡಿದ್ದಾನೆ ಅಂತ ರಜನಿಕಾಂತ್ ಮನಸಾರೆ ಕೊಂಡಾಡಿದ್ರು.
ಬಾಕ್ಸಾಫೀಸ್ನ ಅಣ್ಣಾಬಾಂಡ್ ಆಗಿ ಮಿಂಚಿದ್ರು
ಅಂದು ರಜನಿ ಹೇಳಿದಂತೆಯೇ ಅಣ್ಣಾವ್ರ ಮಗ, ದೊಡ್ಮನೆ ಕಿರಿಮಗ ಪುನೀತ್ 2 ದಶಕಗಳ ಕಾಲ ನಂಬರ್ ಒನ್ ಆಗಿ ಮಿಂಚಿದ್ರು. ತಾವಿರೋವರೆಗೂ ತಾವೇ ಕನ್ನಡ ಚಿತ್ರರಂಗದ ಅಧಿಪತಿಯಾಗಿದ್ರು. ಬಾಕ್ಸಾಫೀಸ್ ನ ಅಣ್ಣಾಬಾಂಡ್ ರೆಕಾರ್ಡ್ ಗಳ ಪಾಲಿನ ಪರಮಾತ್ಮ ಈಗ ನಮ್ಮ ನಡುವೆ ಇಲ್ಲ. ಅವ್ರಿಲ್ಲದ ಈ ಸಮಯದಲ್ಲಿ ಅಪ್ಪು ಬಿಡುಗಡೆಯಾಗಿ 22 ವರ್ಷಗಳಾದ ನೆನಪನ್ನು ಅಭಿಮಾನಿಗಳು ಮೆಲುಕು ಹಾಕ್ತಿದ್ದಾರೆ. ಅಪ್ಪು ಸಿನಿಮಾದ ಪೋಸ್ಟರ್ ಶೇರ್ ಮಾಡಿ ಸಂಭ್ರಮಿಸ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ