ಕಳೆದೆರೆಡು ದಿನಗಳಿಂದ ಇಡೀ ವಿಶ್ವದ ಜನರ ಬಾಯಲ್ಲೂ ಒಂದೇ ಪದ.. ಕೆಜಿಎಫ್ 2(KGF 2). ಹೌದು, ಇಡೀ ವಿಶ್ವ(World)ವನ್ನೇ ರಾಕಿ ಭಾಯ್ ಅಲ್ಲಾಡಿಸಿಬಿಟ್ಟಿದ್ದಾರೆ. ಬಾಕ್ಸಾ ಆಫೀಸ್(Box Office) ಲೂಟಿ ಮಾಡಿಬಿಟ್ಟಿದ್ದಾರೆ ರಾಕಿಂಗ್ ಸ್ಟಾರ್(Rocking Star). ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ ‘ಕೆಜಿಎಫ್ ಚಾಪಕ್ಟರ್ 2’(KGF Chapter 2) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಕೆಜಿಎಫ್ 2’ ಬಹುಭಾಷೆಯಲ್ಲಿ ತೆರೆಗೆ ಬಂದಿದೆ. ಕನ್ನಡ(Kannada), ಹಿಂದಿ(Hindi), ತೆಲುಗು(Telugu), ತಮಿಳು(Tamil) ಮತ್ತು ಮಲಯಾಳಂ(Malayalam)ನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸದ್ಯ ಬಾಕ್ಸಾಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ ರಾಕಿಂಗ್ ಸ್ಟಾರ್ ಯಶ್(Rocking Star Yash) ಸಿನಿಮಾ. ಇದು ಕನ್ನಡಿಗರ ಹೆಮ್ಮೆ.ಕೆಜಿಎಫ್ 3 ಬರುವುದು ಪಾರ್ಟ್ 2ನಲ್ಲೇ ಸುಳಿವು ನೀಡಲಾಗಿದೆ. ಇದೀಗ ಚಾಪ್ಟರ್ 3 ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಅಪ್ಡೇಟ್ ಕೇಳಿ ಅಭಿಮಾನಿಗಳು ಸುಸ್ತಾಗಿ ಹೋಗಿದ್ದಾರೆ.
ಕೆಜಿಎಫ್ 3 ಅಂದ್ರೆ ಸಲಾರ್ ಸಿನಿಮಾನಾ?
ಹೌದು, ಇಂಥದ್ದೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಹಾಲಿವುಡ್ನ ಮಾರ್ವೆಲ್ಸ್ ರೀತಿಯಲ್ಲಿ, ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹಾಲಿವುಡ್ ಮಾರ್ವೆಲ್ಸ್ ಸಿನಿಮಾಗಳಲ್ಲಿ ಒಂದು ಸಿನಿಮಾದಲ್ಲಿ ಮತ್ತೊಂದು ಸಿನಿಮಾದ ಲಿಂಕ್ ಇರಲಿದೆ. ಇದನ್ನೇ ಇಲ್ಲಿ ಕನ್ದನಡದಲ್ಲಿ ಪ್ರಶಾಂತ್ ನೀಲ್ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಇದೀಗ ಕೆಜಿಎಫ್ ಚಾಪ್ಟರ್ 3 ಅಂದ್ರೆ ಪ್ರಭಾಸ್ ನಟನೆಯ ಸಲಾರ್ ಸಿನಿಮಾನಾ ಅನ್ನೋ ಅನುಮಾನ ಶುರುವಾಗಿದೆ. ಅದಕ್ಕೆ ಹಲವು ಕಾರಣಗಳಿದೆ. ಅದೇನು ಅಂತೀರಾ? ಮುಂದೆ ನೋಡಿ.
'ಅಧೀರ'ನಿಗೆ ಅವಾಜ್ ಹಾಕಿದ ಹುಡುಗನೇ ಪ್ರಭಾಸ್ ಆಗಿ ಬರ್ತಾನಾ?
ಕೆಜಿಎಫ್ 2 ಸಿನಿಮಾದಲ್ಲಿ ಅಧೀರನ ಎಂಟ್ರಿ ಸೀನ್ನಲ್ಲಿ ಒಂದು ಹುಡುಗ ಹೆಚ್ಚು ಕಾಟ ಕೊಡುತ್ತಾನೆ. ಅಷ್ಟೇ ಅಲ್ಲದೆ ರಾಕಿ ಭಾಯ್ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾನೆ. ಆಗ ಅಧೀರನ ಪಡೆ ಆತನನ್ನು ಕೊಲ್ಲುವ ಹಾಗೇ ತೋರಿಸಲಾಗಿದೆ. ಆದರೆ, ಆ ಹುಡುಗನೇ ಸಲಾರ್ ಸಿನಿಮಾದ ಪ್ರಭಾಸ್ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಆ ಹುಡಗ ಸತ್ತ ಎಂದಷ್ಟೇ ತೋರಿಸಲಾಗಿದೆ. ಆದರೆ, ಆತನ ಮೃತದೇಹವನ್ನು ನೋಡಲು ಅವರ ತಾಯಿಗೂ ಬಿಡುವುದಿಲ್ಲ. ಹೀಗಾಗಿ ಆ ಹುಡುಗನೇ ದೊಡ್ವನಾಗಿ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಆಗಿ ಬರ್ತಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪ್ರಶಾಂತ್ ನೀಲ್ ಸಿನಿಮಾ ಪಾಠ ಕಲಿತದ್ದು ಈ ಹೋಟೆಲ್ನಲ್ಲಿ!
ಸಲಾರ್ ಸಿನಿಮಾದಲ್ಲೂ ಇದ್ಧಾರೆ ಈಶ್ವರಿ ರಾವ್!
ಕೆಜಿಎಫ್ 2 ಸಿನಿಮಾದಲ್ಲಿ ತಮಿಳು ನಟ ಶರನ್ ನಟಿಸಿದ್ದಾರೆ. ಈ ಪಾತ್ರದ ತಾಯಿ ಪಾತ್ರದಲ್ಲಿ ಈಶ್ವರಿ ರಾವ್ ನಟಿಸಿದ್ದಾರೆ. ಹೀಗಾಗಿ ಇದೇ ಹುಡುಗನ ಕಥೆಯೆ ಸಲಾರ್ ಎಂದು ಹೇಳಲಾಗುತ್ತಿದೆ. ಜೊತೆಗೆ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ತಾಯಿ ಪಾತ್ರದಲ್ಲಿ ಈಶ್ವರಿ ರಾವ್ ನಟಿಸುತ್ತಿದ್ದಾರೆ. ಹೀಗಾಗಿ ಈ ಅನುಮಾನ ಹೆಚ್ಚಾಗಿದೆ. ಪ್ರಶಾಂತ್ ನೀಲ್ಗೆ ಈ ತಾಕತ್ತು ಇದೆ. ಹೀಗಾಗಿ ಕೆಜಿಎಫ್ 3ಗೂ ಸಲಾರ್ಗೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಸೀರೆಯಲ್ಲಿ ಕಂಗೊಳಿಸಿದ ಶ್ರೀನಿಧಿ ಶೆಟ್ಟಿ, ಇವ್ರ ಮುಂದಿನ ಸಿನಿಮಾ ಈ ಸೂಪರ್ ಸ್ಟಾರ್ ಜೊತೆ!
ಆ ಹುಡಗ ಧರಿಸಿದ್ದ ಡಾಲರ್ನಲ್ಲಿ ಪ್ರಭಾಸ್!
ಮತ್ತೊಂದು ಅನುಮಾನ ಏನಂದರೆ, ಕೆಜಿಎಫ್ 2 ಸಿನಿಮಾದಲ್ಲಿ ಶರನ್ ಕತ್ತಿಗೆ ಒಂದು ಡಾಲರ್ ಹಾಕಿಕೊಂಡಿದ್ದಾರೆ. ಅದೇ ರೀತಿಯ ಡಾಲರ್ ಅನ್ನೇ ಪ್ರಭಾಸ್ ಸಲಾರ್ ಸಿನಿಮಾದಲ್ಲಿ ಧರಿಸಿದ್ದಾರೆ. ಇದನ್ನು ಸಲಾರ್ ಪೋಸ್ಟರ್ನಲ್ಲಿ ಗಮನಿಸಬಹುದು. ಹೀಗಾಗಿ ಕೆಜಿಎಫ್ ಹಾಗೂ ಸಲಾರ್ ಸಿನಿಮಾಗೆ ಲಿಂಕ್ ಇರುವುದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ