Allu Arjun: ಪುಷ್ಪಾ 2 ಚಿತ್ರಕ್ಕೆ ಅಲ್ಲು ಅರ್ಜುನ್ ಮಾಡಿರೋ ಡಿಮ್ಯಾಂಡ್ ಕೇಳಿ ನಿರ್ಮಾಪಕರು ಸುಸ್ತು! ಎಷ್ಟು ಕೋಟಿ ಹೇಳಿ ನೋಡೋಣ

ಚಿತ್ರ ತಯಾರಕರು ಈಗಾಗಲೇ ಪುಷ್ಪಾ 2 ಚಿತ್ರದ ಚಿತ್ರೀಕರಣವನ್ನು ಆಗಸ್ಟ್ ನಿಂದ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಬಹುತೇಕರಿಗೆ ತಿಳಿದಿರುವಂತೆ, ನಟ ಅಲ್ಲು ಅರ್ಜುನ್ ಮತ್ತು ಚಲನಚಿತ್ರ ನಿರ್ದೇಶಕ ಸುಕುಮಾರ್ ಇಬ್ಬರೂ ಭಾರಿ ಶುಲ್ಕವನ್ನು ಜೇಬಿಗಿಳಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್

ಅಲ್ಲು ಅರ್ಜುನ್

  • Share this:
ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್ (Allu Arjun) ಅವರ ಅಭಿನಯದ ಪುಷ್ಪಾ: ದಿ ರೈಸ್ (Pushpa The Rise) ಚಿತ್ರವು ಭಾರತದಲ್ಲಷ್ಟೆ ಅಲ್ಲದೆ ಬೇರೆ ಬೇರೆ ದೇಶಗಳಲ್ಲಿಯೂ ಸಹ ಸೂಪರ್ ಹಿಟ್ ಆಗಿ, ಸಿನೆಮಾ ಗಲ್ಲಾ ಪೆಟ್ಟಿಗೆಯಲ್ಲಿ (Box Office) ದೊಡ್ಡ ಮೊತ್ತವನ್ನೇ ಕಲೆಹಾಕಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ದೊಡ್ಡ ಬಜೆಟ್ ನ ಚಿತ್ರವಾದ ಪುಷ್ಪಾ: ದಿ ರೈಸ್ ಚಿತ್ರವು ವಿಶ್ವದಾದ್ಯಂತ ಸುಮಾರು 355 ರಿಂದ 365 ಕೋಟಿ ರೂಪಾಯಿವರೆಗೆ ಗಳಿಕೆ (Earning) ಮಾಡಿತು. ಇದು ಒಟ್ಟಿನಲ್ಲಿ ಚಿತ್ರ ತಯಾರಕರಿಗೆ, ನಟನಿಗೆ ಮತ್ತು ಎಲ್ಲಾ ಮಧ್ಯಸ್ಥಗಾರರಿಗೂ ಸಹ ಒಂದು ದೊಡ್ಡ ಮಟ್ಟದ ಯಶಸ್ಸಿನ ಚಲನಚಿತ್ರವಾಗಿದ್ದಂತೂ (Movie) ನಿಜ.

ಇವರು ತೆಗೆದುಕೊಳ್ಳುತ್ತಿದ್ದ ಹಣವೆಷ್ಟು ನೋಡಿ
ಇಷ್ಟೇ ಅಲ್ಲದೆ ಚಿತ್ರ ತಯಾರಕರು ಈಗಾಗಲೇ ಪುಷ್ಪಾ 2 ಚಿತ್ರದ ಚಿತ್ರೀಕರಣವನ್ನು ಆಗಸ್ಟ್ ನಿಂದ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಬಹುತೇಕರಿಗೆ ತಿಳಿದಿರುವಂತೆ, ನಟ ಅಲ್ಲು ಅರ್ಜುನ್ ಮತ್ತು ಚಲನಚಿತ್ರ ನಿರ್ದೇಶಕ ಸುಕುಮಾರ್ ಇಬ್ಬರೂ ಭಾರಿ ಶುಲ್ಕವನ್ನು ಜೇಬಿಗಿಳಿಸಿಕೊಂಡಿದ್ದಾರೆ. ತೆಲುಗು ಮಾಧ್ಯಮದ ಒಂದು ವರದಿಯ ಪ್ರಕಾರ, ಪುಷ್ಪಾ 2 ಚಿತ್ರದ ಸಂಪೂರ್ಣ ಆರ್ಥಿಕ ವಿಘಟನೆಯು ಅಲ್ಲು ಅರ್ಜುನ್ ಕಡೆಗೆ ಹೆಚ್ಚು ವಾಲಿಕೊಂಡಿದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ತಯಾರಕರಾದ ಮೈತ್ರಿ ಮೂವಿ ಮೇಕರ್ಸ್ ಎರಡನೇ ಭಾಗವು ಹಿಟ್ ಆದರೂ ಸಹ ಅವರಿಗೆ ಅಷ್ಟೇನೂ ದೊಡ್ಡ ಮೊತ್ತವೇನೂ ಉಳಿಯುವುದಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Prabhas: ಪ್ರಭಾಸ್ ಧರಿಸಿದ್ದ ಟೀ ಶರ್ಟ್ ವಿಶೇಷತೆ ಏನು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ!

ತೆಲುಗು ಮಾಧ್ಯಮದ ವರದಿಗಳ ಪ್ರಕಾರ ನಟ ಅಲ್ಲು ಅರ್ಜುನ್ ಪುಷ್ಪಾ: ದಿ ರೂಲ್ ಚಿತ್ರಕ್ಕಾಗಿ 175 ಕೋಟಿ ರೂಪಾಯಿ ಮತ್ತು ಚಲನಚಿತ್ರ ನಿರ್ದೇಶಕ ಸುಕುಮಾರ್ ಆಕ್ಷನ್ ಚಿತ್ರದ ಎರಡನೇ ಕಂತಿಗೆ 75 ಕೋಟಿ ರೂಪಾಯಿ ಫೀಸ್ ಅನ್ನು ಡಿಮ್ಯಾಂಡ್ ಮಾಡಿದ್ದಾರಂತೆ ಎಂದು ಹೇಳಲಾಗುತ್ತಿದೆ. ಇದರರ್ಥ ನಟ ಮತ್ತು ನಿರ್ದೇಶಕರ ಶುಲ್ಕವೇ 200 ಕೋಟಿ ರೂಪಾಯಿ ದಾಟಲಿದೆ. ಮೊದಲ ಚಿತ್ರವು ಬ್ಲಾಕ್ ಬಸ್ಟರ್ ಆಗಿದ್ದರಿಂದ ಪ್ರೊಡಕ್ಷನ್ ಹೌಸ್ ಗೆ ಚಿತ್ರ ಹಿಟ್ ಆಗಿರುವುದನ್ನು ಬಿಟ್ಟು ಬೇರೆ ಯಾವುದೇ ಸಂತೋಷ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ.

ಎರಡನೇ ಭಾಗವನ್ನು ಬೇಗನೆ ಚಿತ್ರೀಕರಣ ಮಾಡಿ ಮುಗಿಸುವ ಅಂದಾಜು 
ಚಿತ್ರದ ಮತ್ತೊಂದು ವಿಭಾಗದ ಒಟ್ಟು ವೆಚ್ಚವು ಸುಮಾರು 150 ಕೋಟಿ ರೂಪಾಯಿಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪುಷ್ಪಾ: ದಿ ರೂಲ್ ಚಿತ್ರದ ಒಟ್ಟಾರೆ ಬಜೆಟ್ ಒಂದು ಅಂದಾಜಿನ ಪ್ರಕಾರ 350 ಕೋಟಿ ರೂಪಾಯಿಗಿಂತ ಹೆಚ್ಚಾಗಿರುತ್ತದೆ. ಸುಕುಮಾರ್ ಅವರು ಈಗ ಎರಡನೇ ಭಾಗವನ್ನು ಬೇಗನೆ ಚಿತ್ರೀಕರಣ ಮಾಡಿ ಮುಗಿಸುವ ತರಾತುರಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಇನ್ನೂ ಹೆಚ್ಚು ಸಮಯ ವ್ಯರ್ಥ ಮಾಡಿದರೆ, ಇನ್ನೂ ಮಿತಿ ಮೀರಿದ ವೆಚ್ಚಗಳು ಹೆಚ್ಚಾಗುತ್ತವೆ ಅಂತ ಅವರಿಗೆ ತಿಳಿದಿದೆ. ಇನ್ನೂ ಚಿತ್ರಮಂದಿರಗಳ ಜೊತೆ ಆದ ಯಾವುದೇ ಒಪ್ಪಂದಗಳನ್ನು ಬಹಿರಂಗಪಡಿಸದಂತೆ ಮೈತ್ರಿ ಮೂವಿ ಮೇಕರ್ಸ್ ಗೆ ನಿರ್ದೇಶಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ಬಿಡುಗಡೆಗೆ ಮೊದಲು ಓಟಿಟಿ ಒಪ್ಪಂದಗಳನ್ನು ಅಂತಿಮಗೊಳಿಸುತ್ತಾರೆ ಎಂದು ತೋರುತ್ತದೆ. ಅಲ್ಲು ಅರ್ಜುನ್ ಮತ್ತು ಸುಕುಮಾರ್ ಇಬ್ಬರು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ, ಮುಂಬರುವ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆದರೆ ಚಿತ್ರದ ಲಾಭದಲ್ಲಿ 40 ಪ್ರತಿಶತವನ್ನು ಅವರು ಪಡೆಯುತ್ತಾರೆ ಎಂದು ವರದಿ ಹೇಳಿದೆ. ಇದರರ್ಥ ಮೈತ್ರಿ ಮೂವಿ ಮೇಕರ್ಸ್ ಚಿತ್ರವು ಯಶಸ್ವಿಯಾದರೆ ಶೇಕಡಾ 20 ರ ವ್ಯಾಪ್ತಿಯಲ್ಲಿ ಏನನ್ನಾದರೂ ಪಡೆಯಬಹುದು ಅಷ್ಟೇ ಅಂತ ಹೇಳಲಾಗುತ್ತಿದೆ. ಈ ಚಿತ್ರವನ್ನು ಸೀಮಿತ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಇವರು ‘ಆರ್‌ಆರ್‌ಆರ್’ ನಂತೆ ಗಲ್ಲಾ ಪೆಟ್ಟಿಗೆಯಲ್ಲಿ ಹಣ ಗಳಿಸುತ್ತದೆ ಎಂದು ಯಾರು ನಿರೀಕ್ಷಿಸುತ್ತಿಲ್ಲ ಎಂದು ವರದಿ ಹೇಳಿದೆ.

ಇದನ್ನೂ ಓದಿ: Bollywood: ಒಟ್ಟಿಗೆ ಕಾಣಿಸಿಕೊಂಡ ರಿತೇಶ್​ ಹಾಗೂ ಶಾಹಿದ್​ ದಂಪತಿಗಳು, ಪಾಪರಾಜಿಗಳ ಫೋಟೋಗೆ ಪೋಸ್​ ಕೊಟ್ಟ ಸ್ಟಾರ್ಸ್

ಒಂದು ವೇಳೆ ಈ ಚಿತ್ರವು ಫ್ಲಾಪ್ ಆದರೆ, ಪ್ರೊಡಕ್ಷನ್ ಹೌಸ್ ಒತ್ತಡಕ್ಕೆ ಒಳಗಾಗುವುದು ಮಾತ್ರ ಗ್ಯಾರೆಂಟಿ. ಈ ಚಿತ್ರವನ್ನು 2023 ರ ಬೇಸಿಗೆ ಸಮಯದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ.
Published by:Ashwini Prabhu
First published: