'ಆಶಿಕ್​ ಬನಾಯಾ...' ಹಾಡಿನಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ತನುಶ್ರೀ ಇವರೇನಾ ನೋಡಿ?

news18
Updated:July 25, 2018, 3:43 PM IST
'ಆಶಿಕ್​ ಬನಾಯಾ...' ಹಾಡಿನಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ತನುಶ್ರೀ ಇವರೇನಾ ನೋಡಿ?
news18
Updated: July 25, 2018, 3:43 PM IST
ನ್ಯೂಸ್​ 18 ಕನ್ನಡ 

ಬಿ-ಟೌನ್​ನ ಕಿಸ್ಸಿಂಗ್​ ಕಿಂಗ್​ ಇಮ್ರಾನ್​ ಹಶ್ಮಿ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಿದ್ದ ತನುಶ್ರೀ ದತ್ತ ಯಾರಿಗೆ ಗೊತ್ತಿಲ್ಲ ಹೇಳಿ. ಬಳಕುವ ಬಳ್ಳಿಯಂತಿದ್ದ ಈಕೆ 'ಆಶಿಕ್​ ಬನಾಯಾ ಆಪ್​ನೆ' ಸಿನಿಮಾದ ಆಶಿಕ್​ ಬನಾಯಾ ಆಪನೆ ಹಾಡಿನಿಂದಾಗಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು.

ಕೇವಲ ಬೆರೆಳೆಣಿಕೆ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಈಕೆ ಇದ್ದಕ್ಕಿದ್ದಂತೆಯೇ ಬಿ-ಟೌನ್​ನಿಂದ ಮಾಯವಾಗಿದ್ದರು. ತನುಶ್ರೀ ಏನಾದರು, ಎಲ್ಲಿಗೆ ಹೋದರು ಅನ್ನೋ ವಿಷಯ ಯಾರಿಗೂ ಗೊತ್ತಾಗಲಿಲ್ಲ. ಆದರೆ ಅವರ ಕುರಿತಾದ ವಿಷಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು ತನುಶ್ರೀ ಇತ್ತೀಚೆಗೆ ಮುಂಬೈ ವಿಮಾನನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ನೋಡಿದ ಕೂಡಲೇ ಇವರೇನಾ ಆ ಬಳಕುವ ಬಳ್ಳಿಯಂತಿದ್ದ ತನು ಎಂದು ಒಮ್ಮೆ ಹುಬ್ಬೇರಿಸುವಂತಾಗಿತ್ತು. ಅವರನ್ನು ಈಗ ಯಾರೇ ನೋಡಿದರೂ ಗುರುತಿಸಲಾಗಷ್ಟು ಬದಲಾಗಿದ್ದಾರೆ ತನು.

ನೀಲಿ ಬಣ್ಣದ ಟಾಪ್​ ಹಾಗೂ ಕಪ್ಪು ಬಣ್ಣದ ಕುರ್ತಾ ತೊಟ್ಟಿರುವ ತನು ಮುಂಬೈ ಏರ್​ಪೋರ್ಟ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟಿರುವುದು ಹೀಗೆ...

 

Loading...




ನಟಿ ತನುಶ್ರೀ 'ಚಾಕೊಲೆಟ್​', 'ಗುಡ್​ ಬಾಯ್​ ಬ್ಯಾಡ್​ ಬಾಯ್​', 'ಡೋಲ್​' ಹಾಗೂ ಕಡೆಯದಾಗಿ 2010ರಲ್ಲಿ 'ಅಪಾರ್ಟ್​ಮೆಂಟ್​' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.




ತನು ಮುಂಬೈಗೆ ಬರುವ ಮುನ್ನ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. 'ಎರಡು ವರ್ಷಗಳ ನಂತರ ಮುಂಬೈಗೆ ಬರಲಿದ್ದೇನೆ... ಉತ್ಸುಕತೆ ಜತೆಗೆ ಆತಂಕವೂ ಇದೆ' ಎಂದು ಬರೆದುಕೊಂಡಿದ್ದಾರೆ ತನುಶ್ರೀ.



Flight to Mumbai!! Coming back to India after 2 years..nervous and excited!!


A post shared by Tanushree Dutta (@iamtanushreeduttaofficial) on








Will miss USA...be back soooon!!!


A post shared by Tanushree Dutta (@iamtanushreeduttaofficial) on




First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ