ಚಿತ್ರರಂಗದಲ್ಲಿ ಇಂದು ನಡೆದ ಐಟಿ ದಾಳಿಗೂ, ರಾಜಕೀಯ ವಲಯದಲ್ಲಿ ಎದ್ದ ಚರ್ಚೆಗೂ ಏನು ಸಂಬಂಧ?

ಶಿವರಾಜ್​ಕುಮಾರ್​ ಸೇರಿಂದತೆ ಇಂದು ಐಟಿ ರೇಡ್​ ಆದ ನಟರು ಹಾಗೂ ನಿರ್ಮಾಪಕರಿಗೆ ರಾಜಕೀಯ ನಂಟಿದೆ. ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ಹಾಗೂ ಕಾಂಗ್ರೆಸ್​ ಶಾಸಕ ಮುನಿರತ್ನ ಬೀಗರು. ತುಂಬಾ ಆಪ್ತರೂ ಹೌದು.

Rajesh Duggumane | news18
Updated:January 3, 2019, 2:13 PM IST
ಚಿತ್ರರಂಗದಲ್ಲಿ ಇಂದು ನಡೆದ ಐಟಿ ದಾಳಿಗೂ, ರಾಜಕೀಯ ವಲಯದಲ್ಲಿ ಎದ್ದ ಚರ್ಚೆಗೂ ಏನು ಸಂಬಂಧ?
ಸಾಂದರ್ಭಿಕ ಚಿತ್ರ
  • News18
  • Last Updated: January 3, 2019, 2:13 PM IST
  • Share this:
ಬೆಂಗಳೂರು (ಜ.03): ಚಿತ್ರರಂಗದ ನಟರು ಹಾಗೂ ನಿರ್ಮಾಪಕರ ಮನೆ ಮೇಲೆ ಆದಾಯ ತೆರೆಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವಿಚಾರ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ದಾಳಿ ನಡೆಸಿದ ಹಿಂದಿನ ಉದ್ದೇಶದ ಬಗ್ಗೆ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೊಳ್ಳದಿದ್ದರೂ, ತೆರಿಗೆ ವಂಚನೆಗೆ ಸಂಬಂಧಿಸಿದ ಈ ದಾಳಿ​ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಐಟಿ ದಾಳಿ ನಡೆದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಕೂಡ ಭಾರಿ ಚರ್ಚೆ ಹುಟ್ಟಿಕೊಂಡಿದೆ. ಚಿತ್ರರಂಗದ ಮೇಲೆ ಐಟಿ ದಾಳಿ ನಡೆದರೆ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದ್ದೇಕೆ? ಅದಕ್ಕೂ ಒಂದು ಕಾರಣವಿದೆ. ಆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

ಶಿವರಾಜ್​ಕುಮಾರ್​ ಸೇರಿದಂತೆ ಇಂದು ಐಟಿ ರೇಡ್​ ಆದ ನಟರು ಹಾಗೂ ನಿರ್ಮಾಪಕರಿಗೆ ರಾಜಕೀಯ ನಂಟಿದೆ. ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ಹಾಗೂ ಕಾಂಗ್ರೆಸ್​ ಶಾಸಕ ಮುನಿರತ್ನ ಬೀಗರು. ಸಂಬಂಧಿಕರಾಗುವ ಮೊದಲಿನಿಂದಲೂ ತುಂಬಾ ಆಪ್ತರೂ ಆಗಿದ್ದವರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ನಟ ಹಾಗೂ ನಿರ್ಮಾಪಕರ ಮೇಲೆ ರೇಡ್​ ನಡೆಸಲು ಐಟಿ ಸಿದ್ಧತೆ ಹೇಗಿತ್ತು ಗೊತ್ತಾ?

ಜೆಡಿಎಸ್​ ನಾಯಕ ಮಧು ಬಂಗಾರಪ್ಪನವರ ಸಹೋದರಿಯನ್ನೇ ಶಿವರಾಜ್​ ಕುಮಾರ್​ ಮದುವೆಯಾಗಿದ್ದರಿಂದ ಅವರಿಬ್ಬರ ನಡುವೆ ಭಾವ-ಭಾಮೈದ ಸಂಬಂಧವೂ ಇದೆ. ಶಿವರಾಜ್​ ಕುಮಾರ್​ ಅವರ ಪತ್ನಿ ಗೀತಾ ಜೆಡಿಎಸ್​ನಿಂದ ಈ ಮೊದಲು ಸ್ಪರ್ಧೆ ಮಾಡಿದ್ದರು. ನಿರ್ಮಾಪಕ ಸಿ.ಆರ್.​ ಮನೋಹರ್​ ಜೆಡಿಎಎಸ್​ನ ವಿಧಾನಪರಿಷತ್​ ಸದಸ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇನ್ನು, ‘ಕೆಜಿಎಫ್​’ ನಿರ್ಮಾಪಕ ವಿಜಯ್​ ಕಿರಗಂದೂರು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರ ಸಂಬಂಧಿ. ಪುನೀತ್​ ಯಾವುದೇ ಪಕ್ಷಗಳ ಜೊತೆ ಗುರುತಿಸಿಕೊಳ್ಳದಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದಾರೆ ಎನ್ನುವ ಮಾತಿದೆ. ಸುದೀಪ್​ ಕೂಡ ಎಲ್ಲ ಪಕ್ಷಗಳ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ.

‘ಕೆಜಿಎಫ್​’ ನಾಯಕ ಯಶ್​ ಈ ಮೊದಲು ಕೆರೆಗಳ ಜೀರ್ಣೋದ್ಧಾರದಲ್ಲಿ ತೊಡಗಿಕೊಂಡಿದ್ದರು. ಈ ನಿರ್ಧಾರಕ್ಕೆ ಕೈಜೋಡಿಸಿದ ಎಲ್ಲ ನಾಯಕರ ಬೆಂಬಲಕ್ಕೆ ಯಶ್​ ನಿಂತಿದ್ದರು. ಅನೇಕ ರಾಜಕೀಯ ನಾಯಕರ ಜೊತೆಗೆ ಚುನಾವಣಾ ಪ್ರಚಾರದಲ್ಲೂ ಪಾಲ್ಗೊಂಡು ಮತ ಯಾಚನೆ ಮಾಡಿದ್ದರು. ಹೀಗಾಗಿ,  ಐಟಿ ದಾಳಿಗೆ ಒಳಗಾದ ಪ್ರತಿ ನಾಯಕರಿಗೂ ಒಂದಲ್ಲಾ ಒಂದು ರೀತಿಯಿಂದ ರಾಜಕೀಯ ನಂಟಿದೆ ಎಂಬ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ. ಈ ಕಾರಣದಿಂದ ಸಹಜವಾಗಿಯೇ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಐಟಿ ಶಾಕ್​; 'ಕೆಜಿಎಫ್​' ಸ್ಟಾರ್​ ಯಶ್​ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!

First published: January 3, 2019, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading