ಹಸೆಮಣೆ ಏರಲು ಸಿದ್ಧರಾದ ಮಿಲ್ಕಿ ಬ್ಯೂಟಿ ತಮನ್ನಾ; ಹುಡುಗ ಯಾರು ಗೊತ್ತಾ?

ಕಳೆದ ವರ್ಷದಿಂದ ಬಾಹುಬಲಿ ಬೆಡಗಿ ತಮನ್ನಾಳ ಮದುವೆ ಸುದ್ದಿ ಸಖತ್​ ಸದ್ದು ಮಾಡಿತ್ತು. ಇನ್ನೊಂಡೆದೆ ಅಮೆರಿಕಾ ಮೂಲದ ವೈದ್ಯರೊಬ್ಬರೊಂದಿಗೆ ಮಿಲ್ಕಿ ಬ್ಯೂಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

news18
Updated:August 7, 2019, 9:51 PM IST
ಹಸೆಮಣೆ ಏರಲು ಸಿದ್ಧರಾದ ಮಿಲ್ಕಿ ಬ್ಯೂಟಿ ತಮನ್ನಾ; ಹುಡುಗ ಯಾರು ಗೊತ್ತಾ?
ತಮನ್ನಾ
  • News18
  • Last Updated: August 7, 2019, 9:51 PM IST
  • Share this:
ಮಿಲ್ಕಿ​ ಬ್ಯೂಟಿ ತಮನ್ನಾ ಭಾಟಿಯಾ ಮದುವೆಯಾಗಲು ಸಜ್ಜಾಗುತ್ತಿದ್ದಾರಂತೆ. ಬಾಹುಬಲಿ ಚಿತ್ರದ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಹೆಚ್ಚಿಸಿಕೊಂಡ ತಮನ್ನಾ ಹಸೆಮಣೆ ಏರಲು ಸಿದ್ಧರಾಗಿದ್ದು, ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ.

ಕಳೆದ ವರ್ಷದಿಂದ ಬಾಹುಬಲಿ ಬೆಡಗಿ ತಮನ್ನಾಳ ಮದುವೆ ಸುದ್ದಿ ಸಖತ್​ ಸದ್ದು ಮಾಡಿತ್ತು. ಇನ್ನೊಂಡೆದೆ ಅಮೆರಿಕಾ ಮೂಲದ ವೈದ್ಯರೊಬ್ಬರೊಂದಿಗೆ ಮಿಲ್ಕಿ ಬ್ಯೂಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಲವ್ -ವಿಥ್​-​ ಅರೇಂಜ್​ ಮ್ಯಾರೇಜ್​ ಆಗಲಿದ್ದಾರೆ ಎಂಬ ಗಾಸಿಪ್​ ಹರಿದಾಡಿತ್ತು. ಇದರಿಂದ ಕೋಪಗೊಂಡ ತಮನ್ನಾ ಮೊದಲು ಆ್ಯಕ್ಟರ್​, ಮತ್ತೊಮ್ಮೆ ಕ್ರಿಕೆಟರ್​, ಇದೀಗ ಡಾಕ್ಟರ್​ ಎಂಬ ರೂಮರ್​ನಿಂದ ತಲೆ ಕೆಟ್ಟು ಹೋಗಿದೆ ಎಂದು ಹೇಳಿದ್ದರು. ಇದೆಲ್ಲ ಶುದ್ಧ ಸುಳ್ಳು ಎಂದು ಉತ್ತರಿಸಿದ್ದರು. ಇದೀಗ ಸ್ವತಃ ತಾವೇ ಮದುವೆ ಗುಟ್ಟು ರಟ್ಟು ಮಾಡಿದ್ದಾರೆ.

ಇದನ್ನೂ ಓದಿ: ಆಂಧ್ರ ರಾಜಕಾರಣದಲ್ಲಿ ಪವನ್​​​​ ಸಕ್ರಿಯ ಓಡಾಟ​​; ಮುಂದಿನ ಚುನಾವಣೆ ಗೆಲ್ಲಲು ಈಗಿನಿಂದಲೇ ಕಸರತ್ತು

ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿರುವ ತಮನ್ನಾ, ನನ್ನ ಮದುವೆಗೆ ಮನೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಹುಡುಗನನ್ನು ಹುಡುಕುವ ಜವಾಬ್ದಾರಿಯನ್ನು ಮನೆಯವರಿಗೆ ನೀಡಿದ್ದೇನೆ ಎಂದಿದ್ದಾರೆ. ಸದ್ಯ ತಮನ್ನಾ ತಾಯಿ ರಜನಿ ಭಾಟಿಯ ಹೊಸ ಅಳಿಯನನ್ನು ಹುಡುಕುವ ಬ್ಯುಸಿಯಲ್ಲಿದ್ದಾರೆ.
First published:August 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading