• Home
  • »
  • News
  • »
  • entertainment
  • »
  • Bollywood Gossip: ನವ್ಯಾ ಜೊತೆ ಡೇಟಿಂಗ್ ವಿಚಾರ ಒಪ್ಪಿಕೊಂಡ್ರಾ ಸಿದ್ಧಾಂತ್? ಬಿಗ್ ಬಿ ಮೊಮ್ಮಗಳ ಲವ್ ಸ್ಟೋರಿ

Bollywood Gossip: ನವ್ಯಾ ಜೊತೆ ಡೇಟಿಂಗ್ ವಿಚಾರ ಒಪ್ಪಿಕೊಂಡ್ರಾ ಸಿದ್ಧಾಂತ್? ಬಿಗ್ ಬಿ ಮೊಮ್ಮಗಳ ಲವ್ ಸ್ಟೋರಿ

ಸಿದ್ಧಾಂತ್

ಸಿದ್ಧಾಂತ್

Siddhant Chaturvedi and Navya Naveli Nanda: ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ಸಿದ್ಧಾಂತ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

  • Share this:

ಇತ್ತೀಚೆಗೆ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda)  ಅವರು ತುಂಬಾನೇ ಸುದ್ದಿಯಲ್ಲಿರುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನವ್ಯಾ ಇತ್ತೀಚೆಗೆ ತಮ್ಮದೇ ಆದ ಪಾಡ್ಕಾಸ್ಟ್ ‘ವಾಟ್ ದಿ ಹೆಲ್ ನವ್ಯಾ’ ಅನ್ನು ಪ್ರಾರಂಭಿಸಿದ್ದಾರೆ. ಈ ಪಾಡ್ಕಾಸ್ಟ್ ನಲ್ಲಿ ನವ್ಯಾ ಅವರು ಅನೇಕ ವಿಷಯಗಳ ಬಗ್ಗೆ ತಮ್ಮ ತಾಯಿ ಶ್ವೇತಾ ಬಚ್ಚನ್ ಮತ್ತು ಅವರ ಅಜ್ಜಿ ಜಯಾ ಬಚ್ಚನ್ (Jaya Bachchan)  ಅವರೊಂದಿಗೆ ವಿವಿಧ ಚರ್ಚೆಗಳನ್ನು ನಡೆಸಿದ್ದಾರೆ. ಇದರಲ್ಲಿ ಇತ್ತೀಚೆಗೆ ಅಮಿತಾಭ್ ಅವರು ಜಯಾ ಬಚ್ಚನ್ ಅವರಿಗೆ ಹೇಗೆ ಮೊದಲು ಪ್ರಪೋಸ್ ಮಾಡಿದ್ದರು ಮತ್ತು ಅವರಿಬ್ಬರ ಮದುವೆ (Wedding) ಹೇಗೆ ನಡೆಯಿತು ಅಂತೆಲ್ಲಾ ಜಯಾ ಮನಬಿಚ್ಚಿ ಹೇಳಿಕೊಂಡಿದ್ದರು.


ಹೀಗೆ ಜಯಾ ಸಹ ತಮ್ಮ ಮೊಮ್ಮಗಳು ಮದುವೆಯಾಗದೆ ಮಗುವನ್ನ ಮಾಡಿಕೊಂಡರೂ ತಮಗೆ ಓಕೆ ಅಂತ ಹೇಳಿ ದೊಡ್ಡ ಸುದ್ದಿ ಮಾಡಿದ್ದರು. ಈಗ ಮತ್ತೊಮ್ಮೆ ನವ್ಯಾ ಅವರು ಸುದ್ದಿಯಲ್ಲಿದ್ದಾರೆ ನೋಡಿ, ಆದರೆ ಈ ಬಾರಿ ಅವರು ತಮ್ಮ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿರುವುದು ಎಲ್ಲರ ಕಣ್ಣಿನ ಹುಬ್ಬುಗಳನ್ನು ಏರಿಸುವಂತೆ ಮಾಡಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಬಿಗ್ ಬಿ ಮೊಮ್ಮಗಳನ್ನ ಈ ನಟ ಡೇಟ್ ಮಾಡುತ್ತಿದ್ದಾರಾ?


ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕಾಗಿ ಅನೇಕ ಬಾರಿ ಸುದ್ದಿಯಲ್ಲಿದ್ದ ನಟ ಅಂತಾನೆ ಹೇಳಬಹುದು. ಈಗ ಇವರು ಸುದ್ದಿಯಲ್ಲಿರುವುದು ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯಿಂದ ಅಂತ ಹೇಳಬಹುದು.


ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಇಶಾನ್ ಖಟ್ಟರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಫೋನ್ ಭೂತ್’ ಚಿತ್ರದಲ್ಲಿ ಸಿದ್ದಾಂತ್ ನಟಿಸಿದ್ದು, ಪ್ರಚಾರದ ಭರಾಟೆಯಲ್ಲಿ ನಟ  ಒಂದು ಕಾರ್ಯಕ್ರಮದಲ್ಲಿ, ಸಿದ್ಧಾಂತ್ ಮತ್ತು ಇಶಾನ್ ಅವರಿಗೆ ಕೆಲ ಪ್ರಶ್ನೆಯನ್ನು ಕೇಳಲಾಯಿತು. ಅವರ ಬಗ್ಗೆ ಕೇಳಿದ ಯಾವ ಒಂದು ವದಂತಿ ನಿಜವಾಗಬೇಕು ಎಂದು ಬಯಸುತ್ತೀರಾ ಎಂದು ಕೇಳಿದ್ದಾಗ, ಅವರು ನೀಡಿದ ಉತ್ತರ ಎತ್ತರ ಕಣ್ಣು ಅರಳಿಸಿದೆ.


ಇದನ್ನೂ ಓದಿ:ಆರ್ಯವರ್ಧನ್ ಪಲ್ಲಿ ಗುಟ್ಟು ಕೇಳಿ ಸುದೀಪ್ ಸುಸ್ತು, ಬಿದ್ದು ಬಿದ್ದು ನಕ್ಕ ಕಿಚ್ಚ!


ನವ್ಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಅಂತ ಒಪ್ಪಿಕೊಂಡ್ರ ನಟ?


ಇದಕ್ಕೆ, ಸಿದ್ಧಾಂತ್ ಪರೋಕ್ಷವಾಗಿ ನವ್ಯಾ ಅವರೊಂದಿಗೆ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ಮಾತನಾಡಿದ್ದಾರೆ. ಅವರು "ನಾನು ಡೇಟಿಂಗ್ ಮಾಡುತ್ತಿದ್ದೇನೆ, ಅದು ನಿಜವಾಗಿರಬೇಕು ಎಂದು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.


ಸಿದ್ಧಾಂತ್ ಮತ್ತು ನವ್ಯಾ ನವೇಲಿ ಸ್ವಲ್ಪ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಬಿ ಟೌನ್​ನಲ್ಲಿ ಕೇಳಿ ಬಂದಿದೆ. ಕೆಲವು ದಿನಗಳ ಹಿಂದೆ, ಅವರು ಮನೀಶ್ ಮಲ್ಹೋತ್ರಾ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಪ್ರತ್ಯೇಕವಾಗಿ ಪಾರ್ಟಿ ನಡೆಯುವ ಸ್ಥಳಕ್ಕೆ ಆಗಮಿಸಿದರೂ, ಅಲ್ಲಿರುವ ಪಾಪರಾಜಿಗಳು ಇವರಿಬ್ಬರ ಹೆಸರುಗಳನ್ನು ಒಟ್ಟಿಗೆ ಕೂಗುವ ಮೂಲಕ ಅವರನ್ನು ಗೇಲಿ ಮಾಡಿದ್ದಾರೆ.


ದೀಪಾವಳಿ ಸಂಭ್ರಮದಲ್ಲಿ ವೈರಲ್ ಆದ ಕ್ಲಿಪ್ ನಲ್ಲಿ ಏನಿತ್ತು?


ದೀಪಾವಳಿ ಸಂಭ್ರಮದಿಂದ ವೈರಲ್ ಆದ ಒಂದು ಸಣ್ಣ ಕ್ಲಿಪ್ ನಲ್ಲಿ ಸಿದ್ಧಾಂತ್ ಕ್ಯಾಮೆರಾ ಮುಂದೆ ‘ಫ್ಲೈಯಿಂಗ್ ಕಿಸ್’ ನೀಡುತ್ತಾರೆ ಮತ್ತು ಅಲ್ಲಿರುವ ಮಾಧ್ಯಮ ಸಿಬ್ಬಂದಿಗೆ ನಮಸ್ತೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ, ಅವರಲ್ಲಿ ಒಬ್ಬರು "ನವ್ಯಾ ಅವರು ಬರುತ್ತಿದ್ದಾರೆ” ಎಂದು ಹೇಳಿದಾಗ, ಪಾಪ್ಸ್ ಅವರ ಹೆಸರನ್ನು ಕೂಗುವುದನ್ನು ಕೇಳಬಹುದು.


ಇದನ್ನೂ ಓದಿ: ಮುಗಿಯದ ನಟಿ ಚಾರು ಸಂಸಾರದ ಜಗಳ, ನಟ ಕರಣ್ ಮೆಹ್ರಾ ಜೊತೆ ಹೆಂಡತಿಗೆ ಸಂಬಂಧ ಎಂದ ರಾಜೀವ್ ಸೇನ್


ಬಾಲಿವುಡ್ ನಟ ಈ ಕಾಮೆಂಟ್ ನಿಂದ ಶಾಕ್​ ಆಗಿ,  ಕ್ಯಾಮೆರಾದ ಕಡೆಗೆ ತಿರುಗಿದರು. ಹೇಗೆ ಪ್ರತಿಕ್ರಿಯಿಸಬೇಕು ಅಂತ ಅರ್ಥವಾಗದೆ ಅವರು ಒಳಗೆ ಹೋಗುವ ಮೊದಲು ಎರಡು ಬಾರಿ ಮುಗುಳ್ನಕ್ಕಿದ್ದಾರೆ. ಆದರೆ, ನವ್ಯಾ ಮತ್ತು ಸಿದ್ಧಾಂತ್ ಇಬ್ಬರೂ ತಮ್ಮ ಸಂಬಂಧವನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

Published by:Sandhya M
First published: