Shilpa Shetty: 17 ವರ್ಷದ ನಂತರ ಸ್ಯಾಂಡಲ್​ವುಡ್​ಗೆ ಬರ್ತಿದ್ದಾರೆ ಶಿಲ್ಪಾ ಶೆಟ್ಟಿ

ಕನ್ನಡಕ್ಕೆ ಶಿಲ್ಪಾ ಶೆಟ್ಟಿ ಬರೋದು ಗ್ಯಾರಂಟಿನಾ?

ಕನ್ನಡಕ್ಕೆ ಶಿಲ್ಪಾ ಶೆಟ್ಟಿ ಬರೋದು ಗ್ಯಾರಂಟಿನಾ?

ಕ್ರೇಜಿ ಸ್ಟಾರ್ ರವಿಚಂದ್ರನ್ ಪಾತ್ರಕ್ಕೆ ಜೋಡಿಯಾಗಿ ಶಿಲ್ಪಾ ಶೆಟ್ಟಿ ಬರ್ತಾರಾ ಅನ್ನುವ ಕುತೂಹಲ ಕೂಡ ಇದೆ. ಈ ಹಿಂದೇನೇ ಈ ಜೋಡಿ ಕನ್ನಡದಲ್ಲಿ ಧಮಾಕಾ ಮಾಡಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್​​ನಲ್ಲಿ ಸದ್ಯ (Action Prince Dhruva Movie) ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಅಬ್ಬರ ಜೋರಾಗಿದೆ. ಮೊನ್ನೆ ಮೊನ್ನೆ ರಿಲೀಸ್ ಆದ ಮಾರ್ಟಿನ್ (Martin Movie) ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲಿಯೇ ಕೆಡಿ ಚಿತ್ರದ (KD Movie Viral News) ಹವಾ ಕೂಡ ಸಣ್ಣಗೆ ಶುರು ಆಗಿದೆ. ಸಿನಿಮಾ ಚಿತ್ರೀಕರಣ ಇತ್ತೀಚಿಗಷ್ಟೆ ಶುರು ಆಗಿದೆ. ಆದರೆ ಈ ಚಿತ್ರದ ಸುದ್ದಿ ಜೋರಾಗಿಯೇ ಇವೆ. ಒಂದಲ್ಲ ಒಂದು ನ್ಯೂಸ್ ವೈರಲ್ ಆಗುತ್ತದೆ. ಶೂಟಿಂಗ್​ನ (Shilpa Shetty Re-Entry) ಮಾಹಿತಿ ಕೂಡ ಭರ್ಜರಿಯಾಗಿಯೇ ಗಮನ ಸೆಳೆಯುತ್ತಿದೆ. ಸಂಜಯ್ ದತ್ ಈ ಚಿತ್ರಕ್ಕೆ ಬರುವ ಮುನ್ನ ಮತ್ತು ಬಂದ್ಮೇಲಿನ ಸುದ್ದಿ ಸಿಕ್ಕಾಪಟ್ಟೆ ಗಮನ ಸೆಳೆದಿವೆ.


ಇದರ ಮಧ್ಯೆ ಕೆಡಿ ಚಿತ್ರದ ಸುತ್ತ ಈಗ ಇನ್ನೂ ಒಂದ ಸುದ್ದಿ ಇದೆ. ಈ ಸುದ್ದಿ ಕೂಡ ಬಾಲಿವುಡ್​​ನಿಂದಲೇ ಬಂದಿದೆ. ಆ ಸುದ್ದಿ ಏನೂ ಅನ್ನೋದರ ಅಂದಾಜು ಕೂಡ ಈಗಾಗಲೇ ಸಿಕ್ಕಿರಬೇಕು ಅಲ್ವೇ?


Kannada KD movie Latest Speculation Now got Viral
KD ಚಿತ್ರದಲ್ಲಿ ಕ್ರೇಜಿ-ಶಿಲ್ಪಾ ಜೋಡಿ ಮೋಡಿ ಇರುತ್ತಾ?


KD ಚಿತ್ರಕ್ಕೆ ಬರ್ತಿರೋ ಆ ಬಾಲಿವುಡ್​ ನಟಿ ಯಾರು?
ಕನ್ನಡದ ಈ ಚಿತ್ರದಲ್ಲಿ ಬಾಲಿವುಡ್​​ನಿಂದ ಮತ್ತೊಬ್ಬ ಸ್ಟಾರ್ ಬರ್ತಿದ್ದಾರೆ. ಹೌದು, ಈ ಸುದ್ದಿ ಬಹಳ ದಿನಗಳಿಂದಲೂ ಇದೆ. ಈ ಮೂಲಕ ಸುಮಾರು 18 ವರ್ಷದ ಬಳಿಕ ಕನ್ನಡಕ್ಕೆ ಆ ಕಲಾವಿದರು ಬರ್ತಿದ್ದಾರೆ ಅನ್ನುವ ಸುದ್ದಿ ಕೂಡ ಇದೆ.




ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಪ್ರೀತ್ಸೋದ ತಪ್ಪಾ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಕನ್ನಡಕ್ಕೆ ಬಂದಿದ್ದರು. 1998 ರಲ್ಲಿ ಈ ಸಿನಿಮಾ ರಿಲೀಸ್ ಆಗಿ ಹೊಸ ಅಲೆ ಎಬ್ಬಿಸಿತ್ತು.


ಕ್ರೇಜಿ ಸ್ಟಾರ್ ಜೊತೆಗೆ ಮೋಡಿ ಮಾಡಿದ ಶಿಲ್ಪಾ ಶೆಟ್ಟಿ
ಇದಾದ್ಮೇಲೆ 2003 ರಲ್ಲಿ ಒಂದಾಗೋಣ ಬಾ ಅನ್ನುವ ಸಿನಿಮಾ ಬಂತು. ಇಲ್ಲೂ ಕ್ರೇಜಿ ಸ್ಟಾರ್​ ರವಿಚಂದ್ರನ್ ಅವರಿಗೆ ಶಿಲ್ಪಾ ಶೆಟ್ಟಿ ಜೋಡಿ ಆಗಿದ್ದರು. ಈ ಚಿತ್ರ ಆದ್ಮೇಲೆ ಶಿಲ್ಪಾ ಶೆಟ್ಟಿ 2005 ರಲ್ಲಿ ಕನ್ನಡಕ್ಕೆ ಮತ್ತೆ ಬಂದರು.


ನಿಜ, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಆಟೋ ಶಂಕರ್ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿಯನ್ನ ಕರೆತರಲಾಗಿತ್ತು. ಈ ಚಿತ್ರ ಆದ್ಮೇಲೆ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬರಲೇ ಇಲ್ಲ.


ಕನ್ನಡಕ್ಕೆ ಶಿಲ್ಪಾ ಶೆಟ್ಟಿ ಬರೋದು ಗ್ಯಾರಂಟಿನಾ?
ಆದರೆ ಈಗ ಈ ನಾಯಕಿಯನ್ನ ಕನ್ನಡಕ್ಕೆ ಕರೆತರುವ ಕೆಲಸ ಆಗುತ್ತಿದೆ. ಈ ಬಗ್ಗೆ ಎಲ್ಲೆಡೆ ಸುದ್ದಿ ಇದ್ದೇ ಇದೆ. ನಿಜ, ಶಿಲ್ಪಾ ಶೆಟ್ಟಿ ಅವರನ್ನ ಕನ್ನಡದ ಕೆಡಿ ಚಿತ್ರಕ್ಕೆ ಕರೆತರುವ ಸಾಧ್ಯತೆ ಇದೆ.


ಚಿತ್ರದಲ್ಲಿ ಈಗಾಗಲೇ ಬಾಲಿವುಡ್​ ನಟ ಸಂಜಯ್ ದತ್ತ್ ಬಂದಾಗಿದೆ. ಶಿಲ್ಪಾ ಶೆಟ್ಟಿ ಕೂಡ ಬರ್ತಾರೆ ಅನ್ನುವ ಮಾಹಿತಿ ಬಲವಾಗಿಯೇ ಇದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನ ಇನ್ನೂ ಯಾರೂ ಕೊಟ್ಟಿಲ್ಲ ಅಂತ ಹೇಳಬಹುದು.


KD ಚಿತ್ರದಲ್ಲಿ ಕ್ರೇಜಿ-ಶಿಲ್ಪಾ ಜೋಡಿ ಮೋಡಿ ಇರುತ್ತಾ?
ಕೆಡಿ ಚಿತ್ರದಲ್ಲಿ ಇನ್ನೂ ವಿಶೇಷವೆಂದ್ರೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಪ್ರಮುಖ ಪಾತ್ರವನ್ನ ಮಾಡಿದ್ದಾರೆ. ಆ ಬಗ್ಗೆ ಈಗಾಗಲೇ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಕ್ರೇಜಿ ಸ್ಟಾರ್ ಪಾತ್ರದ ಲುಕ್ ಕೂಡ ರಿವೀಲ್ ಆಗಿದೆ.


Kannada KD movie Latest Speculation Now got Viral
KD ಚಿತ್ರಕ್ಕೆ ಬರ್ತಿರೋ ಆ ಬಾಲಿವುಡ್​ ನಟಿ ಯಾರು?


ಕ್ರೇಜಿ ಸ್ಟಾರ್ ರವಿಚಂದ್ರನ್ ಪಾತ್ರಕ್ಕೇನೆ ಜೋಡಿಯಾಗಿ ಶಿಲ್ಪಾ ಶೆಟ್ಟಿ ಬರ್ತಾರಾ ಅನ್ನುವ ಕುತೂಹಲ ಕೂಡ ಇದೆ. ಈ ಹಿಂದೇನೆ ಈ ಜೋಡಿ ಕನ್ನಡದಲ್ಲಿ ಧಮಾಕಾ ಮಾಡಿದೆ.


ಇದನ್ನೂ ಓದಿ:  Janumada Jodi: ಕನ್ನಡವೇ ಬರದ ಶಿಲ್ಪಾ ಜನುಮದ ಜೋಡಿಯಲ್ಲಿ ಹೀರೋಯಿನ್ ಆಗಿದ್ದೇಗೆ?


ಹಾಗಾಗಿಯೇ ಕೆಡಿ ಚಿತ್ರದಲ್ಲೂ ಈ ಜೋಡಿ ಮೋಡಿ ಮಾಡುತ್ತದೆಯೇ ಅನ್ನುವ ಕುತೂಹಲ ಕೂಡ ಇದೆ. ಸದ್ಯಕ್ಕೆ ಯಾವುದು ಕನ್ಫರ್ಮ್ ಆಗಿಲ್ಲ. ಆದರೆ ಶಿಲ್ಪಾ ಶೆಟ್ಟಿ ಕನ್ನಡಕ್ಕೆ ಮತ್ತೆ ಬರ್ತಿರೋ ಸುದ್ದಿ ಮಾತ್ರ ತುಂಬಾ ವೈರಲ್ ಆಗುತ್ತಿದೆ. ಅಷ್ಟೇ ಕ್ಯೂರಿಯೋಸಿಟಿಯನ್ನೂ ಹುಟ್ಟುಹಾಕಿದೆ.

First published: